ಸ್ವಾತಿ ಮುತ್ತಿನ ಮಳೆ ಸಿನಿಮಾ ಚಿತ್ರೀಕರಣ ಮುಗಿಸಿ ರಾಜ್ ಬಿ ಶೆಟ್ಟಿ ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ. ಅದೇ ಟೋಬಿ
20-30 ದಿನದಲ್ಲಿ ಆದಷ್ಟುಕಡಿಮೆ ಬಜೆಟಲ್ಲಿ ಚಿತ್ರೀಕರಣ ಮುಗಿಸುವುದು ರಾಜ್ ಬಿ ಶೆಟ್ಟಿಶೈಲಿ. ಅದೇ ಪ್ರಕಾರ ಅವರು ಸ್ವಾತಿ ಮುತ್ತಿನ ಮಳೆ ಸಿನಿಮಾ ಶೂಟಿಂಗ್ ಮುಗಿಸಿದ್ದಲ್ಲದೇ ಸೈಲೆಂಟಾಗಿ ಟೋಬಿ ಸಿನಿಮಾ ಕೆಲಸವನ್ನೂ ಮುಗಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟದಾರಿಯನ್ನು ರಾಜ್ ಕಂಡುಕೊಂಡಂತಿದೆ.
ಬಹುತೇಕರು ಒಂದು ಸಿನಿಮಾ ಮಾಡಬೇಕು ಎಂದು ಯೋಚನೆ ಮಾಡಿ ಮುಗಿಸುವಷ್ಟರಲ್ಲಿ ರಾಜ್ ಬಿ ಶೆಟ್ಟಿಒಂದು ಸಿನಿಮಾ ಮಾಡಿ ಮುಗಿಸುತ್ತಾರೆ ಎಂಬ ಮಾತು ಚಾಲ್ತಿಗೆ ಬರುವ ದಿನಗಳು ದೂರವಿಲ್ಲ. ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಚಿತ್ರೀಕರಣ ಕೆಲಸ ಪೂರ್ತಿ ಮುಗಿಸಿರುವ ರಾಜ್ ಬಿ ಶೆಟ್ಟಿಘೋಷಣೆಯೇ ಮಾಡದೆ ಮತ್ತೊಂದು ಸಿನಿಮಾ ಪೂರ್ತಿಗೊಳಿಸಿದ್ದಾರೆ. ಅದರ ಹೆಸರೇ ‘ಟೋಬಿ’.
ರಾಜ್ ಬಿ ಶೆಟ್ಟಿಗೆ ಜೋಡಿಯಾದ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಅಪರ್ಣಾ; ಯಾವ ಸಿನಿಮಾ, ಏನ್ ಕಥೆ? ಇಲ್ಲಿದೆ ವಿವರ
‘ಗರುಡ ಗಮನ ವೃಷಭ ವಾಹನ’ ತಂಡವನ್ನಿಟ್ಟುಕೊಂಡೇ ಈ ಚಿತ್ರ ಪೂರ್ತಿಗೊಳಿಸಿದ್ದಾರೆ. ನಿರ್ದೇಶನವನ್ನು ರಾಜ್ ಬಿ ಶೆಟ್ಟಿತಂಡದ ಸಹ ನಿರ್ದೇಶಕರೊಬ್ಬರು ಮಾಡಿದ್ದಾರೆ. ಕತೆ, ಚಿತ್ರಕತೆ, ಸಂಭಾಷಣೆಯನ್ನು ರಾಜ್ ಬಿ ಶೆಟ್ಟಿಬರೆದಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿನ ನಾಯಕ ಪಾತ್ರಧಾರಿ ಟೋಬಿ. ಮುಗ್ಧ ಮತ್ತು ಎಡವಟ್ಟು ಮನುಷ್ಯ ಎನ್ನಿಸಿಕೊಂಡ ಪಾತ್ರದ ನಿರ್ವಹಣೆಯನ್ನು ರಾಜ್ ನಿರ್ವಹಿಸಿದ್ದಾರೆ. ಇದೊಂದು ಕಮರ್ಶಿಯಲ್ ಸಿನಿಮಾ ಆಗಿದ್ದು, ಸರಿಯಾದ ಸಮಯಕ್ಕೆ ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ರಾಜ್ ಬಿ ಶೆಟ್ಟಿಯವರ ಲೈಟರ್ ಬುದ್ಧ ಸಂಸ್ಥೆ ಮತ್ತು ರವಿ ರೈ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಚಿತ್ರಕತೆ ಬರೆಯುವವರಿಗೆ ರಾಜ್ ಬಿ ಶೆಟ್ಟಿ ಅವರಿಂದ 7 ಪಾಠಗಳು
ಈ ಎರಡು ಸಿನಿಮಾಗಳನ್ನು ಮುಗಿಸಿಕೊಟ್ಟು ರಾಜ್ ಬಿ ಶೆಟ್ಟಿಸದ್ಯ ಮಲಯಾಳಂ ಚಿತ್ರ ‘ರುಧಿರಂ’ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಅದಲ್ಲದೇ ಇನ್ನೂ ಎರಡು ವರ್ಷ ರಾಜ್ ಬಿ ಶೆಟ್ಟಿಬ್ಯುಸಿಯಾಗಿದ್ದಾರೆ. ಅವರು ಮಾಡಿಟ್ಟುಕೊಂಡಿರುವ ಸ್ಕಿ್ರಪ್‌್ಟಗಳನ್ನು ಒಂದೊಂದಾಗಿಯೇ ಮುಗಿಸುತ್ತಾ ಬರುತ್ತಿದ್ದಾರೆ. ಅವರ ಚಿತ್ರೀಕರಣ ಶೈಲಿ ಕೂಡ ಅನೇಕರು ಹುಬ್ಬೇರಿಸುವ ಥರ ಆಗಿದೆ. ರಾಜ್ ಬಿ ಶೆಟ್ಟರು ತಾವೇ ಒಂದು ಗುಂಪು ಕಟ್ಟಿಕೊಂಡು, ಚಿತ್ರೀಕರಣ ಸ್ಥಳದಲ್ಲಿಯೇ ಅಡುಗೆ ಇತ್ಯಾದಿಗಳನ್ನು ಮಾಡಿಸಿ ಆದಷ್ಟುಕಡಿಮೆ ಖರ್ಚಿನಲ್ಲಿ ಚಿತ್ರೀಕರಣ ಮಾಡುವ ಶೈಲಿ ಹೊಂದಿದ್ದಾರೆ. ಅದರಿಂದಾಗಿಯೇ ದೊಡ್ಡ ಬಜೆಟ್‌ನ ಮಂದಿ ಅವರ ತಂಡವನ್ನು ತಮಾಷೆ ಮಾಡುವುದೂ ಇದೆಯಂತೆ. ಆದರೆ ಅವರು ಮತ್ತು ಅವರ ತಂಡ ಯಾವ ಟೀಕೆಗೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅದರ ಬದಲಿಗೆ 20-30 ದಿನದಲ್ಲಿ ಸಿನಿಮಾ ಚಿತ್ರೀಕರಣ ಪೂರ್ತಿ ಮಾಡುತ್ತಾರೆ. ಹೊಸ ಥರದ ಕತೆಯನ್ನು ಹೇಳುವ ಪ್ರಯತ್ನ ಮಾಡುತ್ತಾರೆ. ಕಡಿಮೆ ಬಜೆಟ್‌ನಲ್ಲಿ ವಿಭಿನ್ನ ಶೈಲಿಯ ಸಿನಿಮಾ ಮಾಡುವ ಅವರ ಶೈಲಿಯಿಂದ ಹೊಸಬರ ಪ್ರೇರಿತರಾದರೆ ಅಚ್ಚರಿಯೂ ಇಲ್ಲ, ತಪ್ಪೂ ಇಲ್ಲ.