ಕಷ್ಟದಲ್ಲಿದ್ದಾಗ ಸಹಾಯ ಮಾಡಿದ ದರ್ಶನ್‌ನ ನೆನೆದ ರಾಜವರ್ಧನ್. ಮೈಸೂರಿನ ಫಾರಂ ಹೌಸ್‌ನಲ್ಲಿ ಫಿಸಿಯೋ ಥೆರಪಿ ಮಾಡಿಸಿದ್ದಾರೆ........
ಕನ್ನಡದ ನಟ ದರ್ಶನ್ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಜೈಲಯ ಸೇರಿರುವ ದರ್ಶನ್‌ರನ್ನು ನೋಡಲು ಸಿನಿಮಾ ಸೆಲೆಬ್ರಿಟಿಗಳು ವಾರಕ್ಕೊಮ್ಮೆ ಬರುತ್ತಿದ್ದಾರೆ. ಕನ್ನಡ ಚಿತ್ರರಂಗದ ಅದ್ಭುತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ ಕೂಡ ದರ್ಶನ್‌ನ ಭೇಟಿ ಮಾಡಿದ್ದರು.
'ದರ್ಶನ್ ಅರೆಸ್ಟ್ ಆಗಿದ್ದಾರೆ ಎನ್ನುವ ಸುದ್ದಿ ಕೇಳಿ ನನಗೆ ಸಡನ್ ಆಗಿ ಶಾಕ್ ಆಯ್ತು. ಈಗಲೂ ನಾನು ಶಾಕ್‌ನಲ್ಲೇ ಇದ್ದೇನೆ. ತುಂಬಾ ಸಪೋರ್ಟಿವ್ ಅಗಿದ್ರು ಅಣ್ಣನ ತರ ಪ್ರತಿಯೊಂದು ವಿಚಾರಕ್ಕೆ ಬೆಂಬಲ ನೀಡುತ್ತಿದ್ದರು. ಜೊತೆಯಲ್ಲಿ ಹುಟ್ಟದಿದ್ದರೂ ಅಣ್ಣನಂತೆ ಸಪೋರ್ಟಿವ್ ಆಗಿದ್ದರು. ಅಣ್ಣನಿಗೆ ಈ ತರ ಆಗಿರೋದು ಮನಸ್ಸಿಗೆ ಬೇಸರ ಆಗುತ್ತಿದೆ. ಅವರಿಗೆ ನ್ಯಾಯ ಸಿಗಬೇಕು ವಾಸಪ್ ಬರ್ತಾರೆ ಅನ್ನೋ ನಂಬಿಕೆ ನನಗಿದೆ. ಕಾನೂನು ತುಂಬಾ ಸ್ಟ್ರಾಂಗ್ ಅಗಿದೆ' ಎಂದು ರಾಜವರ್ಧನ್ ಮಾತನಾಡಿದ್ದರು.
undefined
ಗ್ಯಾರೇಜ್‌ನಲ್ಲಿ ಕೆಲಸ ಮಾಡಿ ಅಕ್ಕನನ್ನು ಓಡಿಸುತ್ತಿರುವ ಸಂಜು; ಡಿಕೆಡಿ ವೇದಿಕೆಯಲ್ಲಿ ಎಮೋಷನಲ್ ಕ್ಷಣ!
ದರ್ಶನ್ ಜೊತೆಗಿನ ಒಡನಾಟ:
'ನನಗೆ ಕಾಲು ಸರ್ಜರಿ ಆಗಿತ್ತು. ಒಂದು ದಿನ ಫೋನ್ ಮಾಡಿ ಎಲ್ಲಿದ್ಯಾ? ಏನು ಕೆಲಸ ಮಾಡುತ್ತಿರುವೆ ಎಂದು ಕೇಳುತ್ತಾರೆ ಆಗ ನಾನು ಏನೂ ಇಲ್ಲ ಅಣ್ಣ ನನ್ನ ಕಾಲಿಗೆ ಏಟಾಗಿದೆ ಎಂದು ಹೇಳುತ್ತೀನಿ. ಸರಿ ಒಂದು ಕೆಲಸ ಮಾಡು ಕೆಳಗೆ ಬಾ ಅಂತ ಕರೆದರು. ಕೆಳಗೆ ಬಾ ಅಂದ್ರೆ ಅವ್ರು ಬರ್ತಿದ್ದಾರೆ ಇಲ್ಲ ನಾನು ಎಲ್ಲಾದರೂ ಹೋಗಬೇಕಾ ಏನೂ ಗೊತ್ತಿರಲಿಲ್ಲ. ಕೆಳಗಡೆ ನಿಂತಿದ್ದೆ....ನಡಿ ಹೋಗೋಣ ಅಂದ್ರು ಅಷ್ಟೇ. ಮೈಸೂರಿನ ತೋಟದಲ್ಲಿ ಮನೆಯಲ್ಲಿ ಅವರ ಜೊತೆ ನನ್ನನ್ನು ಇಟ್ಟುಕೊಂಡರು...ಆ ಸಮಯದಲ್ಲಿ ದರ್ಶನ್ ಕೈ ಕೂಡ ಪೆಟ್ಟಾಗಿತ್ತು ಹೀಗಾಗಿ ಅವರ ಕೈಗೆ ಫಿಸಿಯೋ ಥೆರಪಿ ಮಾಡಿಸಿ ಆಮೇಲೆ ನನ್ನ ಕಾಲಿಗೂ ಫಿಸಿಯೋ ಥೆರಪಿ ಮಾಡಿಸಿದ್ದರು' ಎಂದು ಹಿಂದಿನ ಘಟನೆಯನ್ನು ರಾಜವರ್ಧನ್ ನೆನಪಿಸಿಕೊಂಡಿದ್ದಾರೆ.
ನಡುರಸ್ತೆಯಲ್ಲಿ ಕಾರಿನಿಂದ ಇಳಿಸಿದ ಅಂಬರೀಶ್; ಸೇಡು ತೀರಿಸಿಕೊಳ್ಳಲು 1000 ಅಡಿ ಎತ್ತರದಿಂದ ಬೀಳಿಸಿದ ಜೈ ಜಗದೀಶ್!
'ಬಣ್ಣದ ಜರ್ನಿ ಮತ್ತು ಜೀವನದಲ್ಲಿ ನಾನು ತುಂಬಾ ನೋಡಿದ್ದೀನಿ...ನೀವು ನೋಡಿರುವುದು ಕೇಲವ 0.5% ಅಷ್ಟೇ. ಒಂದು ಸಿನಿಮಾ ಮಾಡಿ ನಿನಗೆ ಇಷ್ಟು ಅನುಭವಿ ಇದೆ ಅಂದ್ರೆ ನಾನು ಎಷ್ಟು ಸಿನಿಮಾ ಮಾಡಿದ್ದೀನಿ ನನಗೆ ಎಷ್ಟು ಅನುಭವ ಇರಬೇಕು ಹೇಳು? ಕುಗ್ಗಿರುವ ಸಮಯದಲ್ಲಿ ಯಾರೋ ಬಂದು 10 ಲಕ್ಷ ಹಣ ಕೊಟ್ಟರೆ ಖುಷಿ ಕೊಡುವುದಿಲ್ಲ. ಒಂದು ಮಾರಲ್ ಸಪೋರ್ಟ್ ಬೇಕಾಗುತ್ತದೆ, ನಿನ್ನ ಪಕ್ಕದಲ್ಲಿ ನಾನು ಇದ್ದೀನಿ ಅಂತ ಹೇಳೋಕೆ ಒಬ್ರು ಬೇಕು ಅದು ನಮಗೆ ತುಂಬಾ ಪ್ಲಸ್ ಆಗುತ್ತದೆ. ಸುಮಾರು 6 -7 ತಿಂಗಳು ಒಟ್ಟಿಗೆ ಇದ್ದ ಸಮಯದಲ್ಲಿ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ' ಎಂದು ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.