ಧನಂಜಯ್‌ನನ್ನ 'ಡಾಲಿ'ಯಾಗಿ ಬದಲಾಯಿಸಿದ ಇಬ್ಬರು ಪುಣ್ಯಾತ್ಮರ ಕಥೆ!

Published : Feb 26, 2025, 03:24 PM ISTUpdated : Feb 26, 2025, 03:50 PM IST
ಧನಂಜಯ್‌ನನ್ನ 'ಡಾಲಿ'ಯಾಗಿ ಬದಲಾಯಿಸಿದ ಇಬ್ಬರು ಪುಣ್ಯಾತ್ಮರ ಕಥೆ!

ಸಾರಾಂಶ

ನಟ ಧನಂಜಯ್‌ಗೆ 'ಡಾಲಿ' ಎಂಬ ಗುರುತು ನೀಡಿದ ಟಗರು ಸಿನಿಮಾ ಮತ್ತು ಆ ಪಾತ್ರಕ್ಕೆ ಬೇಕಾದ ಲುಕ್ ಸೃಷ್ಟಿಸಲು ಸಹಾಯ ಮಾಡಿದ ಇಬ್ಬರು ವ್ಯಕ್ತಿಗಳ ಬಗ್ಗೆ ಇಲ್ಲಿ ಹೇಳಲಾಗಿದೆ. ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಧನಂಜಯ್ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರು: 2018ರಲ್ಲಿ ಬಿಡುಗಡೆಯಾದ ಟಗರು ಸಿನಿಮಾ ಚಂದನವನದ ಸೂಪರ್ ಬ್ಲಾಕ್ ಬಾಸ್ಟರ್ ಚಿತ್ರವಾಗಿದೆ.  ಶಿವರಾಜ್‌ಕುಮಾರ್, ಧನಂಜಯ್, ಭಾವನಾ, ಮಾನ್ವಿತಾ ಕಾಮತ್,  ವಸಿಷ್ಠ ಸಿಂಹ ಮತ್ತು ದೇವರಾಜ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಆಕ್ಷನ್ ಕ್ರೈಮ್ ಕಥೆ ಬರೆದು ದುನಿಯಾ ಸೂರಿ ಅವರೇ ಟಗರು ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಚರಣ್ ರಾಜ್ ಸಂಗೀತ ಟಗರು ಚಿತ್ರವನ್ನು ಯಶಸ್ಸಿನ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿತ್ತು. ಈ ಸಿನಿಮಾದ ನಂತರ ಧನಂಜಯ್ ಹೆಸರಿನ ಜೊತೆ ಡಾಲಿ ಸೇರ್ಪಡೆಯಾಯ್ತು. ಮಾನ್ವಿತಾ ಕಾಮತ್ ಟಗರು ಪುಟ್ಟಿಯಾಗಿ ಜನಪ್ರಿಯರಾದರು. ಚಿತ್ರದ ಇನ್ನುಳಿದ ಪಾತ್ರಗಳಾದ ಚಿಟ್ಟೆ, ಕಾಕ್ರೋಚ್, ಡಾನ್ ಅಂಕಲ್, ಕಾನ್ಸ್‌ಟೇಬಲ್ ಸರೋಜಾ ಫೇಮಸ್ ಆಗಿದ್ದವು. 

ನಟ ಧನಂಜಯ್‌ಗೆ ದೊಡ್ಡಮಟ್ಟದ ಜನಪ್ರಿಯತೆ ತಂದಕೊಟ್ಟ ಮೊದಲ ಚಿತ್ರವೇ ಟಗರು. ಡಾಲಿಯಾಗಿ ಪ್ರೇಕ್ಷಕರ ಮುಂದೆ ಬಂದಿದ್ದ ಧನಂಜಯ್‌ ಅವರನ್ನು ಕನ್ನಡಿಗರು ಅಪ್ಪಿ ಮುದ್ದಾಡಿಕೊಂಡಿದ್ದರು.  ಅಂಕಲ್ ಹೊಡಿತೀನಿ ಸುಬ್ಬಿ, ವಿಶೇಷ ಮತ್ತು ವಿಭಿನ್ನ ಮ್ಯಾನರಿಸಂ ಹೊಂದಿರುವ ಡಾಲಿ ಪಾತ್ರದಲ್ಲಿ ಧನಂಜಯ್ ಜೀವಿಸಿದ್ದರು. ಡಾಲಿಯಾಗಿ ಬದಲಾಗಲು ಧನಂಜಯ್‌ಗೆ ಸಹಾಯ ಮಾಡಿದ ಪುಣ್ಯಾತ್ಮರ ಬಗ್ಗೆ ನಟ ಹೇಳಿಕೊಂಡಿದ್ದರು. ವೀಕೆಂಡ್ ವಿಥ್ ರಮೇಶ್ ಶೋನಲ್ಲಿ ಅತಿಥಿಯಾಗಿ ಆಗಮಿಸಿದ್ದ ಡಾಲಿ ಧನಂಜಯ್ ಟಗರು ಸಿನಿಮಾದ ಅನುಭವಗಳನ್ನು ಹಂಚಿಕೊಂಡಿರುವ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಫೋನ್ ಮಾಡಿ ದುನಿಯಾ ಸೂರಿ ಸರ್‌ಗೆ ವಿಲನ್ ಬೇಕು ಅಂತ ಹೇಳಿದ್ದೀರಿ, ರೆಡಿ ಇದ್ದೇನೆ ಎಂದು ಹೇಳಿದೆ. ನೀನು ಸಿನಿಮಾದಲ್ಲಿದ್ದೀಯಾ ರೆಡಿಯಾಗು ಅಂತ ದುನಿಯಾ ಸೂರಿ ಸರ್ ಹೇಳಿದರು. ಚಿತ್ರದ ಲುಕ್‌ಗಾಗಿ ಕೂದಲು ಸ್ವಲ್ಪ ಕಟ್ ಮಾಡಿಸು. ಗಡ್ಡ ನಿನಗೆ ಹೇಗೆ ಬೇಕೋ ಹಾಗೆ ಟ್ರಿಮ್ ಮಾಡಿಸಿಕೊ. ಈ ಸಿನಿಮಾದಲ್ಲಿ ನೀನು ಬೇರೆ ರೀತಿಯಲ್ಲಿಯೇ ಕಾಣಬೇಕು ಎಂದು ಸೂರಿ ಸರ್ ಹೇಳಿದ್ದರು. 

ಆ ಸಮಯಕ್ಕೆ ನಮ್ಮ ಕವಿ ಪ್ರತಿಭಾನಂದ್ ಕುಮಾರ್ ಮತ್ತು ಡಿಸೈನರ್ ಕೃಷ್ಣ ಎಂಬವರು ಯಾವುದೋ ವಿಷಯಕ್ಕಾಗಿ ನಮ್ಮ ಬಳಿಯಲ್ಲಿ ಬಂದಿದ್ದರು. ಆಗ ಅವರೇ ನನ್ನನ್ನ ಫ್ರೆಂಚ್ ಹೇರ್ ಕಟ್ ಮಾಡೋರ ಬಳಿ ಕರೆದುಕೊಂಡು ಹೋದರು.  ಡಿಸೈನರ್ ಕೃಷ್ಣ ಅವರೇ ಕಟಿಂಗ್ ಹೇಗೆ ಮಾಡಬೇಕು ಅಂತ ಹೇಳಿದರು. ಆ ಹೇರ್‌ ಕಟರ್, ಕತ್ತರಿ ಹಿಡಿದು ಟಕ.. ಟಕಾ ಅಂತ ಕೂದಲಿಗೆ ಕತ್ತರಿ ಹಾಕಿದರು. ಎಲ್ಲಾ ಕೂದಲು ಸಣ್ಣಗೆ ಮಾಡ್ತಿರೋದರಿಂದ ನನಗೆ ಭಯ ಶುರುವಾಯ್ತು. ಆಗ ಅವರು ಡೋಂಟ್ ವರಿ, ಐ ವಿಲ್ ಮೇಕ್ ಯು ಲುಕ್ ವೆರಿ ಗುಡ್ ಅಂತ ಹೇಳಿ  ಕಟಿಂಗ್ ಮಾಡಿ ಡಾಲಿಯ ಲುಕ್ ರೆಡಿ ಮಾಡಿದರು. ಇದಾದ್ಮೇಲೆ ಮತ್ತೊಂದು ಕಡೆ ಕರೆದುಕೊಂಡು ಹೋಗಿ ಪಾತ್ರಕ್ಕಾಗಿ ಲೆನ್ಸ್ ಸೆಲೆಕ್ಟ್ ಮಾಡಿದರು. ಆವಾಗ ಮತ್ತೊಂದು ಫೋಟೋ ಕ್ಲಿಕ್ ಮಾಡಿ ಕಳುಹಿಸಿದೆ. ಆ ಕಡೆಯಿಂದ ಸೂರಿ ಸರ್ ಸೂಪರ್ ಅಂದ್ರು. ಅಬ್ಬಾ ನಾನು ಸೇವ್ ಆದೆ ಅಂತ ನಿಟ್ಟುಸಿರು ಬಿಟ್ಟೆ. 

ಇದನ್ನೂ ಓದಿ: ಧನಂಜಯ್ ಓಲ್ಡ್ ವಿಡಿಯೋ ಈಗ್ಯಾಕೆ ಓಡಾಡ್ತಿದೆ? ಅದೂ ಬ್ಲಾಕ್ & ವೈಟ್‌ ಆಗಿ...ಕನೆಕ್ಷನ್ ಸಿಕ್ತಾ!?

ಈ ರೀತಿಯಾಗಿ ಕೃಷ್ಣ ಅನ್ನೋರು ಆ ಲುಕ್ ಡಿಸೈನ್ ಮಾಡಿ ಹೊರಟು ಹೋದರು. ಫ್ರೆಂಚ್ ಹೇರ್ ಕಟ್ ಮಾಡಿ ಲುಕ್‌ ಕೊಟ್ಟರು. ಮತ್ತೆ ನಾನು ಹೇರ್ ಕಟ್ ಮಾಡಿಸೋಕೆ ಹೋದಾಗ ಆ ಫ್ರೆಂಚ್ ಹೇರ್ ಕಟ್ಟರ್ ಕೆಮ್ಮುತ್ತಿದ್ದರು. ನಾನೇ ಸ್ಟ್ರೆಪಿಲ್ಸ್ ಕೊಟ್ಟು ಕಟಿಂಗ್ ಮಾಡಿಸಿಕೊಂಡು ಬಂದೆ. ಆನಂತರ ಅವರು ಎಲ್ಲಿ ಹೋದರು ಅಂತ ಗೊತ್ತಿಲ್ಲ. ಈ ಇಬ್ಬರು ಪುಣ್ಯಾತ್ಮರಿಂದ ಆ ಲುಕ್ ಬಂದು. ಆ ಲುಕ್‌ಗೆ ಸೂರಿ ಸರ್ ಡಾಲಿ ಎಂದು ಹೆಸರಿಟ್ಟರು ಎಂದು ಧನಂಜಯ್ ಟಗರು ಸಿನಿಮಾದ ನೆನಪುಗಳನ್ನು ವೀಕೆಂಡ್ ವಿಥ್ ರಮೇಶ್‌ ಶೋನಲ್ಲಿ ಹಂಚಿಕೊಂಡಿದ್ದರು. 

ಇದನ್ನೂ ಓದಿ: ಡಾಲಿ ಧನಂಜಯ್‌ ಬಾತ್‌ರೂಮ್‌ಗೆ ಹೋದಾಗ ಪಕ್ಕದಲ್ಲಿದ್ದ ಪುನೀತ್‌ ರಾಜ್‌ಕುಮಾರ್ ಕೇಳಿದ್ದು ಈ ಒಂದೇ ಪ್ರಶ್ನೆ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜನವರಿ 22ರಂದು ಪುನೀತ್ ರಾಜ್‌ಕುಮಾರ್ ದೇಗುಲ, ಕಂಚಿನ ಪ್ರತಿಮೆ ಲೋಕಾರ್ಪಣೆ
Karunya Ram Sister Case: ಒಡಹುಟ್ಟಿದ ತಂಗಿ ವಿರುದ್ಧವೇ ಪೊಲೀಸ್‌ ಠಾಣೆ ಮೆಟ್ಟಿಲೇರಿದ ನಟಿ ಕಾರುಣ್ಯಾ ರಾಮ್