
ಕನ್ನಡ ಚಿತ್ರರಂಗದ ಮುತ್ತುರತ್ನ, ಪವರ್ ಸ್ಟಾರ್ ಡಾಕ್ಟರ್ ಪುನೀತ್ ರಾಜ್‌ಕುಮಾರ್ ನಟನೆ ಅಪ್ಪು ಸಿನಿಮಾ ಮತ್ತೆ ರಿಲೀಸ್ ಮಾಡಲು ಪತ್ನಿ ಅಶ್ವಿನಿ ನಿರ್ಧರಿಸಿದ್ದಾರೆ. ಈ ವರ್ಷ ಪುನೀತ್ ಬರ್ತಡೇ ಡಬಲ್ ಸ್ಪೆಷಲ್ ಮಾಡಲು ಅಶ್ವಿನಿ ಮಾತ್ರವಲ್ಲದೆ ಕರ್ನಾಟಕದ ಅಭಿಮಾನಿಗಳು ವಿಶೇಷ ಪ್ಲ್ಯಾನ್‌ಗಳನ್ನು ಮಾಡುತ್ತಿದ್ದಾರೆ. ಯಾಕೆ ಅಪ್ಪು ಸಿನಿಮಾ ಆಯ್ಕೆ ಮಾಡಿದ್ದು? ಅಪ್ಪು ಸಿನಿಮಾದ ಸ್ಪೆಷಲ್ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ.
ಮಾರ್ಚ್ 17ರಂದು ಪುನೀತ್ ರಾಜ್‌ಕುಮಾರ್ 50ನೇ ವಸಂತಕ್ಕೆ ಕಾಲಿಡುತ್ತಿದ್ದರು. ನಮ್ಮೆಲ್ಲರ ಪ್ರೀತಿಯ ಮುತ್ತು ನಮ್ಮೊಟ್ಟಿಗೆ ಇಲ್ಲವಾದರೂ ಅವರ ಸಿನಿಮಾ ಮತ್ತು ಸಮಾಜ ಸೇವೆ ಕಣ್ಣು ಮುಂದೆ ಇದೆ. ಅಪ್ಪು ಆಸೆ ಕನಸುಗಳನ್ನು ಪತ್ನಿ ಅಶ್ವಿನಿ ಈಡೇರಿಸುತ್ತಿದ್ದಾರೆ. ಹಾಗೆಯೇ ಚಿತ್ರರಂಗಕ್ಕೆ ನಾಯಕನಾಗಿ ಕಾಲಿಡಲು ಬಿಗ್ ಸಪೋರ್ಟ್ ಬಿಗ್ ಸಕ್ಸಸ್ ಕೊಟ್ಟ ಅಪ್ಪು ಸಿನಿಮಾ ಮತ್ತೆ ರಿಲೀಸ್ ಮಾಡುವ ಪ್ಲ್ಯಾನ್ ಮಾಡುತ್ತಿದ್ದಾರೆ. 'Misunderstanding ಬೇಡ! ಮತ್ತೆ ತೆರೆ ಮೇಲೆ ಮ್ಯಾಜಿಕ್ ನೋಡಲು ರೆಡಿಯಾಗಿ. ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬದ ಪ್ರಯುಕ್ತ ಅಪ್ಪು ಸಿನಿಮಾ ಮತ್ತೆ ರಿಲೀಸ್ ಮಾಡಲಾಗುತ್ತಿದೆ. ಮಾರ್ಚ್ 14ರಂದು ಸಿನಿಮಾ ರಿಲೀಸ್ ಮಾಡಲಾಗುತ್ತಿದೆ' ಎಂದು ಅಶ್ವಿನಿ ಬರೆದುಕೊಂಡಿದ್ದಾರೆ.
ಅಸಲಿ ಗಂಡನ ಹುಟ್ಟುಹಬ್ಬ ಆಚರಿಸಿದ 'ಲಕ್ಷ್ಮಿ ನಿವಾಸ' ಭಾವನಾ; ಇವರೇ ಕ್ಯೂಟ್ ಅಂತಿದ್ದಾರೆ ಫ್ಯಾನ್ಸ್
2002ರಲ್ಲಿ ಅಪ್ಪು ಚಿತ್ರದ ಮೂಲಕ ಪುನೀತ್ ರಾಜ್‌ಕುಮಾರ್ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಪುನೀತ್‌ಗೆ ಜೋಡಿಯಾಗಿ ಅಭಿನಯಿಸಿದ್ದು ರಕ್ಷಿತಾ ಪ್ರೇಮ್. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಪೂರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ದಾರೆ. ಅವಿನಾಶ್, ಶ್ರೀನಿವಾಸ್ ಮೂರ್ತಿ, ಸುಮಿತ್ರ ಸೇರಿದಂತೆ ದೊಡ್ಡ ತಾರ ಬಳಗವಿತ್ತು. ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರುವುದು ಗುರು ಕಿರಣ್. ಅಪ್ಪು ಸಿನಿಮಾ ಯಶಸ್ವಿಯಾಗಿ 200 ದಿನಗಳ ಪ್ರದರ್ಶನ ಪೂರೈಸಿದೆ ಹಾಗೂ ಬಾಕ್ಸ್ ಆಫ್ ಕಲೆಕ್ಷನ್ ರೆಕಾರ್ಡ್ ಬ್ರೇಕ್ ಮಾಡಿತ್ತು. ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು ಪ್ರತಿಯೊಂದು ಸೂಪರ್ ಹಿಟ್ ಆಗಿದೆ. ಹೀಗಾಗಿ ಮತ್ತೆ ಅಪ್ಪು ರೀ-ರಿಲೀಸ್ ಮಾಡಿದೆ ಮತ್ತೊಂದು ದಾಖಲೆ ಸೃಷ್ಟಿ ಮಾಡಲಿದೆ.
2ನೇ ಮಗುವಿನೆ ನಿರೀಕ್ಷೆಯಲ್ಲಿ ವರುಣ್ ಆರಾಧ್ಯ ಸಹೋದರಿ; ಅಗಲಿರುವ ಗೆಳೆಯ ಮತ್ತೆ ಹುಟ್ಟಿ ಬರಲಿ ಎಂದು ವಿಶ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.