ಉಪೇಂದ್ರ ಬಗ್ಗೆ ಶಿವಣ್ಣ 'ಓಂ' ರಿಲೀಸ್‌ಗೂ ಮೊದಲು ಹೇಳಿದ್ದ ಮಾತು ವೈರಲ್, ಸುಮ್ನೇ ಏನಲ್ಲ!

Published : Feb 26, 2025, 02:48 PM ISTUpdated : Feb 26, 2025, 03:06 PM IST
ಉಪೇಂದ್ರ ಬಗ್ಗೆ ಶಿವಣ್ಣ 'ಓಂ' ರಿಲೀಸ್‌ಗೂ ಮೊದಲು ಹೇಳಿದ್ದ ಮಾತು ವೈರಲ್, ಸುಮ್ನೇ ಏನಲ್ಲ!

ಸಾರಾಂಶ

ಓಂ ಚಿತ್ರ ಬಿಡುಗಡೆಗೂ ಮುನ್ನ ಶಿವಣ್ಣ ಈ ಮಾತು ಹೇಳಿದ್ದರು. ಶಿವಣ್ಣ ಆಡಿರುವ ಆ ಮಾತು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾಗಿದ್ರೆ ಶಿವಣ್ಣ ಹೇಳಿದ್ದೇನು? ಉಪ್ಪಿ-ಶಿವಣ್ಣ ನಡುವೆ ಅಂದು ಇದ್ದ ಬಾಂಧವ್ಯವೇನು? ಅವರಿಬ್ಬರ ನಂಬಿಕೆ ಆ ಕಾಲದಲ್ಲಿ...

ಕರುನಾಡು ಚಕ್ರವರ್ತಿ ಖ್ಯಾತಿಯ ನಟ ಶಿವರಾಜ್‌ಕುಮಾರ್ (Shivarajkumar) ಅವರು ನಟ-ನಿರ್ದೇಶಕ ಉಪೇಂದ್ರ (Upendra) ಬಗ್ಗೆ ಹೇಳಿರುವ ಮಾತು ವೈರಲ್ ಆಗುತ್ತಿದೆ. ಅವರಿಬ್ಬರ ಜೋಡಿಯ ಓಂ ಚಿತ್ರ ಬಿಡುಗಡೆಗೂ ಮುನ್ನ ಶಿವಣ್ಣ ಈ ಮಾತು ಹೇಳಿದ್ದರು. ಶಿವಣ್ಣ ಆಡಿರುವ ಆ ಮಾತು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾಗಿದ್ರೆ ಶಿವಣ್ಣ ಹೇಳಿದ್ದೇನು? ಉಪ್ಪಿ-ಶಿವಣ್ಣ ನಡುವೆ ಅಂದು ಇದ್ದ ಬಾಂಧವ್ಯವೇನು? ಅವರಿಬ್ಬರ ನಂಬಿಕೆ ಆ ಕಾಲದಲ್ಲಿ ಹೇಗಿತ್ತು? ಈ ಎಲ್ಲಾ ಸಂಗತಿಗಳು ಇಲ್ಲಿ ರಿವೀಲ್ ಆಗಿವೆ, ನೋಡಿ.. 

ಉಪೇಂದ್ರ ಓಂ ಮಾಡೋವಾಗ್ಲೇ ನಾನು ಹೇಳಿದ್ದೆ, ಅವ್ರು ದೊಡ್ಡ ಡೈರೆಕ್ಟರ್ ಆಗ್ತಾರೆ, ತಾಕತ್ತು ಇದೆ ಅಂತ. ಆಗ ಕೆಲವರು 'ಏನ್ ಗುರುವೇ, ಹೀಂಗ್ ಮಾತಾಡ್ತೀರ, ಭವಿಷ್ಯನಾ ಈಗ್ಲೇ ಏನೇನೋ ಹೇಳ್ತಾ ಇದೀರ' ಅಂತ ಹೇಳಿದ್ದರು. ಆಗ ನಾನು ಹೇಳಿದ್ದೆ, 'ಇಲ್ಲ ತಮಿಳು, ತೆಲುಗು ನಲ್ಲಿ ಇರೋ ತರನೇ ಕನ್ನಡದಲ್ಲೂ ದೊಡ್ಡ ಡೈರೆಕ್ಟರ್ ಇದಾರೆ. ಉಪೇಂದ್ರ ಅವರಿಗೆ ಸಾಮರ್ಥ್ಯ ಇದೆ ಅಂತ ಹೇಳಿದ್ದೆ. ನಿಜ ಹೇಳ್ಬೇಕು ಅಂದ್ರೆ ನಾನು ಆಗ ಹೇಳಿದ್ದು ಭವಿಷ್ಯ ಅಲ್, ಅದು ನಿಜ ಸಂಗತಿ. 

ಲವ್ ಬಗ್ಗೆ ಇನ್ಯಾರೂ ಹೇಳದ ಸೀಕ್ರೆಟ್ ಬಿಚ್ಚಿಟ್ಟ ರವಿಚಂದ್ರನ್, ಕ್ರೇಜಿ ಸ್ಟಾರ್ ಅಂದ್ರೆ ಸುಮ್ನೆ ಅಲ್ಲಾರೀ..!

ಯಾಕೆ ಅಂದ್ರೆ ಅದಾಗ್ಲೇ ಉಪೇಂದ್ರ ಅವರು 'ಶ್..!' ಅಂತ ಒಂದು ಸಿನಿಮಾ ಮಾಡಿದ್ರು. ಅದು ಸೂಪರ್ ಹಿಟ್ ಆಗಿತ್ತು. ಅದ್ರಲ್ಲಿ ಭಯವನ್ನು ಕೇವಲ 'ಶ್..!' ಅನ್ನೊ ಶಬ್ಧದ ಮೂಲಕ ಸಿನಿಮಾದಲ್ಲಿ ಕಟ್ಟಿ ಕೊಟ್ಟಿದ್ದರು. ಇನ್ನು, ಅದಕ್ಕೂ ಮೊದಲು ಬಂದಿರೋ 'ತರ್ಲೇ ನನ್ಮಗ' ಸಿನಿಮಾ ಕೂಡ ತುಂಬಾ ಚೆನ್ನಾಗಿತ್ತು. ಅದನ್ನ ನಾನು 20 ಬಾರಿ ನೋಡಿದ್ದೆ. ಹೀಗಾಗಿ ನಾನು ನನ್ನ ಅನಿಸಿಕೆಯನ್ನು ಪ್ರಾಮಾಣಿಕವಾಗಿ ಹೇಳಿದ್ದೆ, ಅಲ್ಲಿ ಭವಿಷ್ಯ ಅಂತೇಣಿ ಇರ್ಲಿಲ್ಲ' ಎಂದಿದ್ದಾರೆ ನಟ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್. 

ಇದು ಶಿವಣ್ಣ ಅವರು ತಮ್ಮ ಹಾಗೂ ಉಪೇಂದ್ರ ಕಾಂಬಿನೇಷನ್ 'ಓಂ' ಸಿನಿಮಾ (Om) ಬಗ್ಗೆ ಬಿಡುಗಡೆಗೂ ಮೊದಲೇ ಹೇಳಿದ್ದ ಮಾತು. ಆ ಮಾತನ್ನು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಶಿವರಾಜ್‌ಕುಮಾರ್ ಹೇಳಿದ್ದಾರೆ. ನಟ ಉಪೇಂದ್ರ ಅವರು ನಿರ್ದೇಶನ ಮಾಡಿರುವ ಓಂ ಚಿತ್ರದಲ್ಲಿ ಶಿವಣ್ಣ ನಟಿಸಿರುವುದು, ಅದು ಭಾರೀ ಸೂಪರ್ ಹಿಟ್ ಆಗಿರುವುದು ಇದೆಲ್ಲಾ ಈಗ ಇತಿಹಾಸ. ಶಿವಣ್ಣ-ಉಪ್ಪಿ ಜೋಡಿಯ ಓಂ ಚಿತ್ರವನ್ನು 'ವಜ್ರೇಶ್ವರಿ ಕಂಬೈನ್ಸ್' ಬ್ಯಾನರ್‌ನಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಅವರು ನಿರ್ಮಿಸಿದ್ದರು. 

ಪರಭಾಷೆ ಸಿನಿಮಾಗಳ ಕರಾಳ ಸತ್ಯವನ್ನು ಬಿಚ್ಚಿಟ್ಟ ಕ್ರೇಜಿ ಸ್ಟಾರ್ ರವಿಚಂದ್ರನ್, ಹೀಗೂ ಉಂಟೇ..!

ಈಗಲೂ ಕೂಡ ಓಂ ಚಿತ್ರದ ಹಕ್ಕು ಡಾ ರಾಜ್‌ಕುಮಾರ್ ಫ್ಯಾಮಿಲಿ ಬಳಿಯೇ ಇದೆ. ಆಗಾಗ ಈ ಸಿನಿಮಾ ಮರುಬಿಡುಗಡೆ ಆಗುತ್ತಲೇ ಇದೆ. ಅಷ್ಟೇ ಅಲ್ಲ, ಅದೆಷ್ಟು ಬಾರಿ ರೀ-ರಿಲೀಸ್ ಮಾಡಿದಾಗಲೂ ಅದು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ ಉಪೇಂದ್ರ ನಿರ್ದೇಶನ ಹಾಗೂ ಶಿವರಾಜ್‌ಕುಮಾರ್ ನಟನೆಯ ಓಂ ಚಿತ್ರವು ಅಂದು ಇತಿಹಾಸ ಸೃಷ್ಟಿಸಿರುವ ಸಿನಿಮಾ. 

ಈಗಲೂ ಕೂಡ ಆ ಸಿನಿಮಾದ ಕ್ರೇಜ್ ಸ್ವಲ್ಪವೂ ಕಮ್ಮಿ ಆಗಿಲ್ಲ. ಆದರೆ, ಸಿನಿಮಾ ರಿಲೀಸ್‌ಗೂ ಮೊದಲೇ ಶಿವಣ್ಣ ಅವರಿಗೆ ಉಪೇಂದ್ರ ಅವರ ಪ್ರತಿಭೆ ಬಗ್ಗೆ ನಂಬಿಕೆ ಇತ್ತು, ಅದಕ್ಕೇ ಮೊದಲೇ ಹೇಳಿಬಿಟ್ಟಿದ್ದರು. ನಟ ಶಿವರಾಜ್‌ಕುಮಾರ್ ಈ ಮಾತುಗಳು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗ್ತಿದೆ. 

'ರಾಜ್‌ ಲೀಲಾ ವಿನೋದ' ಬಗ್ಗೆ ನೇರವಾಗಿ ಶಿವಣ್ಣಗೇ ಪ್ರಶ್ನೆ: ಸಿಕ್ಕ ಉತ್ತರವೇ ಅಂತಿಮ ಸತ್ಯ, ದೂಸ್ರಾ ಮಾತಿಲ್ಲ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜನವರಿ 22ರಂದು ಪುನೀತ್ ರಾಜ್‌ಕುಮಾರ್ ದೇಗುಲ, ಕಂಚಿನ ಪ್ರತಿಮೆ ಲೋಕಾರ್ಪಣೆ
Karunya Ram Sister Case: ಒಡಹುಟ್ಟಿದ ತಂಗಿ ವಿರುದ್ಧವೇ ಪೊಲೀಸ್‌ ಠಾಣೆ ಮೆಟ್ಟಿಲೇರಿದ ನಟಿ ಕಾರುಣ್ಯಾ ರಾಮ್