ದರ್ಶನ್ ಫ್ಯಾನ್ಸ್ಗೆ ನಮ್ ಬಾಸ್ ಹೊರಗೆ ಬಂದ್ರೆ ಸಾಕು ಅನ್ನೋ ಹಾಗಾಗಿದೆ. ಹೀಗಾಗೆ ದರ್ಶನ್ ಬಿಡುಗಡೆ ಮಾಡುವಂತೆ ಅಭಿಮಾನಿ ರವಿಕುಮಾರ್ ಎಂಬಾತ ಪರಪ್ಪನ ಅಗ್ರಹಾರ ಜೈಲು ಬಳಿ ಉರುಳು ಸೇವೆ ಮಾಡಲು ಮುಂದಾಗಿದ್ದ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಕಾಡುತ್ತಿದ್ದ ಒಂದೇ ಒಂದು ಪ್ರಶ್ನೆ, ನಮ್ ಬಾಸ್ನ ನೋಡೋಕೆ ಡಿಂಪಲ್ ಕ್ವೀನ್ ರಚಿತಾ ಜೈಲಿಗೆ ಹೋಗಿಲ್ಲ ಯಾಕೆ ಅನ್ನೋದು.? ಈಗ ರಚ್ಚು ಜೈಲಲ್ಲಿ ದಚ್ಚುನ ಮೀಟ್ ಮಾಡಿದ್ದಾರೆ. ಹಾಗಾದ್ರೆ ಇಬ್ಬರ ಮಧ್ಯೆ ಏನೆಲ್ಲಾ ಮಾತುಕತೆ ಆಗಿದೆ.? ರೇಣುಕಾಸ್ವಾಮಿ ಕೊಲೆ ಕೇಸ್ ದರ್ಶನ್ಗೆ ಮತ್ತಷ್ಟು ಕಂಗಟ್ಟಾಯ್ತಾ.? ಈ ಕೇಸ್ನಲ್ಲಿ ಎ1 ಆರೋಪಿ ದರ್ಶನ್ ಅಂತೆ ನಿಜಾನಾ..? ನೋಡೋಣ ಬನ್ನಿ ದರ್ಶನ್ರ ಈ ಜೈಲು ಕಹಾನಿಯಲ್ಲಿ. ರಚಿತಾ ರಾಮ್, ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್. ದರ್ಶನ್ ಅಭಿಮಾನಿಗಳಿಗೆ ಇವರೇ ಬುಲ್ ಬುಲ್. ದರ್ಶನ್ನ ಹೋಮ್ ಬ್ಯಾನರ್ನಲ್ಲಿ ಬಂದ ದರ್ಶನ್ ಹೀರೊ ಆಗಿ ನಟಿಸಿದ್ದ ಬುಲ್ಬುಲ್ ಸಿನಿಮಾದಿಂದ ರಚಿತಾ ರಾಮ್ ಸ್ಯಾಂಡಲ್ವುಡ್ಗೆ ಪರಿಚಿತರಾದ್ರು.
ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ನನ್ನ ಜೀವನದ ಟರ್ನಿಂಗ್ ಪಾಯಿಂಟ್ ಬುಲ್ಬುಲ್ ಸಿನಿಮಾ ಮತ್ತು ದರ್ಶನ್ ಅಂತ ರಚಿತಾ ಹತ್ತಾರು ಭಾರಿ ವೇಧಿಕೆ ಮೇಲೆ ಹೇಳಿದ್ದಾರೆ. ಅಷ್ಟೆ ಅಲ್ಲ ದರ್ಶನ್ ಕಾಲಿಗೆ ಬಿದ್ದು, ಇವರೇ ನನ್ನ ಗುರುಗಳು ಎಂದಿದ್ರು. ದರ್ಶನ್ ಜೈಲು ಸೇರಿದ ಮೇಲೆ ಊರೆಲ್ಲಾ ದರ್ಶನ್ರನ್ನ ಜೈಲಲ್ಲಿ ಭೇಟಿ ಮಾಡಿ ಬಂದ್ರೂ ರಚಿತಾ ರಾಮ್ ಮಾತ್ರ ಜೈಲ್ ಕಡೆ ಕಾಲ್ ಹಾಕಿರಲಿಲ್ಲ. ಈಗ ರಚಿತಾ ರಾಮ್ ಬೆಂಗಳೂರಿನ ರಾಘವೇಂದ್ರ ಸ್ವಾಮಿ ಮಠದಲ್ಲಿ ಪೂಜೆ ಮಾಡಿ ಪರಪ್ಪನ ಅಗ್ರಹಾರದಲ್ಲಿ ದಚ್ಚುನ ರಚ್ಚು ಭೇಟಿ ಮಾಡಿ ಪ್ರಸಾದ ಕೊಟ್ಟಿದ್ದಾರೆ. ಅಷ್ಟೆ ಅಲ್ಲ ಜೈಲಲ್ಲಿ ದರ್ಶನ್ ಡಿಂಪಲ್ ಕ್ವೀನ್ ರಹಸ್ಯ ಮಾತುಕತೆಯೂ ನಡೆದಿದೆ.
ಕೊಲೆ ಆರೋಪ ಹೊತ್ತು ದರ್ಶನ್ ಜೈಲು ಸೇರಿದ ಮೇಲೆ ನೊಂದು ಬೆಂದು ಪೋಸ್ಟ್ ಹಾಕಿದ್ದ ರಚಿತಾ ನ್ಯಾಯಕ್ಕೆ ಗೆಲುವಾಗ್ಲಿ ಅಂತ ಬರೆದುಕೊಂಡಿದ್ರು. ಈಗ ಈ ನ್ಯಾಯದ ಕಜ್ಜಾಯ ದರ್ಶನ್ ಬಾಯಿಗೆ ಬೀಳೋ ಹಾಗಾಗ್ತಿದೆ. ಯಾಕಂದ್ರೆ ದರ್ಶನ್ ಈ ಕೇಸ್ನಲ್ಲಿ ಏ1 ಆರೋಪಿ ಆಗ್ತಾರಾ ಅನ್ನೋ ಗುಮಾನಿ ಹುಟ್ಟಿದೆ. ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ದರ್ಶನ್ ಜೈಲು ಸೇರಿ 62 ದಿನಗಳ ಮೇಲಾಗಿದೆ. ಇನ್ನೂ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಆ ಕಡೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿಲ್ಲ. ಈ ಕೇಸ್ನಲ್ಲಿ ಎ1 ಆರೋಪಿ ಆಗಿದ್ದ ಪವಿತ್ರಾ ಗೌಡ ಜಾಮೀನು ಕೋರಿ ಅರ್ಜಿ ಹಾಕಿದ್ರು. ಪವಿತ್ರಾ ಜಾಮೀನು ಅರ್ಜಿ ವಿಚಾರಣೆ ಇದೇ ತಿಂಗಳ 27ಕ್ಕೆ ಮುಂದೂಡಲಾಗಿದೆ. ಆದ್ರೆ ದರ್ಶನ್ಗೆ ಹೊಸ ಟೆನ್ಷನ್ ಹುಟ್ಟಿದೆ.
ಜಾಮೀನಿಗಾಗಿ ಪವಿತ್ರಾ ಗೌಡ ಅರ್ಜಿ ಸಲ್ಲಿಕೆ: ದರ್ಶನ್ ಅರ್ಜಿ ಯಾವಾಗ?
ಈ ಕೇಸ್ನಲ್ಲಿ ದಚ್ಚು ಎ1 ಆರೋಪಿ ಪಟ್ಟಕ್ಕೆ ಏರುತ್ತಾರಾ ಅನ್ನೋ ಅನುಮಾನ ಕಾಡುತ್ತಿದೆ. ಯಾಕಂದ್ರೆ ಪೊಲೀಸರು ಜಾರ್ಜ್ಶೀಟ್ನಲ್ಲಿ ದರ್ಶನ್ರನ್ನು ಆರೋಪಿ ನಂ 1 ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ದರ್ಶನ್ ಸ್ಯಾಂಡಲ್ವುಡ್ನಲ್ಲಿ ನಂಬರ್ ಒನ್. ಕನ್ನಡದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡೋದ್ರಿಂದ ಹಿಡಿದು ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರೋರಲ್ಲಿ ದರ್ಶನ್ ನಂಬರ್ 1. ಈಗ ಕೊಲೆ ಕೇಸ್ನಲ್ಲೂ ಎ1 ಆಗುತ್ತಾರಾ ಅನ್ನೋ ಹೊಸ ಟೆನ್ಷನ್ ದಚ್ಚು ಫ್ಯಾನ್ಸ್ಗೆ ಕಾಡೋಕೆ ಶುರುವಾಗಿದೆ.
ದರ್ಶನ್ ಅಂಡ್ ಗ್ಯಾಂಗ್ ನಿಂದ ರೇಣುಕಾಸ್ಚಾಮಿ ಕೊಲೆ ಅದ್ಮೇಲೆ ಈ ಕೇಸ್ನಿಂದ ದರ್ಶನ್ ಆಚೆ ಬರಬೇಕಾದ್ರೆ ಮೊದ್ಲು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಬೇಕು. ಅದಕ್ಕಾಗೆ ದರ್ಶನ್ ಕಾಯುತ್ತಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆ ಆಗ್ತಿದ್ದಂತೆ ಬೇಲ್ಗೆ ಅರ್ಜಿ ಹಾಕೋ ಐಡಿಯಾ ದರ್ಶನ್ರದ್ದು, ಅದಕ್ಕೀಗ ಸಮಯ ಕೂಡಿ ಬಂದಂತೆ ಕಾಣುತ್ತಿದೆ. ಕಾಮಾಕ್ಷಿಪಾಳ್ಯ ಪೊಲೀಸರು ಬರೊಬ್ಬರಿ 4 ಸಾವಿರ ಪುಟಗಳ ಚಾರ್ಜ್ ಶೀಟ್ ಸಿದ್ದ ಪಡಿಸಿದ್ದಾರೆ. ಇಲ್ಲಿ ದರ್ಶನ್ ಅಂಡ್ ಗ್ಯಾಂಗ್ ನ ಕರಾಳಾ ಮುಖ ಅನಾವರಣ ಮಾಡಿದ್ದು, 200ಕ್ಕು ಅಧಿಕ ಸಾಕ್ಷ್ಯಗಳು ಚಾರ್ಜ್ ಶೀಟ್ ನಲ್ಲಿವೆಂತೆ.
ಇದು ಕೊಲೆ ಆರೋಪಿ ದರ್ಶನ್ ಕೈ ಕಡಗದ ರಹಸ್ಯ: ನಾಲ್ಕು ದಶಕದಿಂದ ಕೈಯಿಂದ ಕಳಚಿರಲಿಲ್ಲ ಈ ಕಡಗ!
ಸೆಪ್ಟೆಂಬರ್ 9 ಕ್ಕೆ ಪ್ರಕರಣ ದಾಖಲಾಗಿ ಸರಿಯಾಗಿ 90 ದಿನಗಳಾಗುತ್ತೆ. ಹೀಗಾಗಿ ಸೆಪ್ಟೆಂಬರ್ ಮೊದಲ ವಾರದಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸೋ ಸಾಧ್ಯತೆ ಇದೆ ಅಂತ ಪೊಲೀಸ್ ಮೂಲಕಗಳ ಮಾಹಿತಿ ಇದೆ. ದರ್ಶನ್ ಫ್ಯಾನ್ಸ್ಗೆ ನಮ್ ಬಾಸ್ ಹೊರಗೆ ಬಂದ್ರೆ ಸಾಕು ಅನ್ನೋ ಹಾಗಾಗಿದೆ. ಹೀಗಾಗೆ ದರ್ಶನ್ ಬಿಡುಗಡೆ ಮಾಡುವಂತೆ ಅಭಿಮಾನಿ ರವಿಕುಮಾರ್ ಎಂಬಾತ ಪರಪ್ಪನ ಅಗ್ರಹಾರ ಜೈಲು ಬಳಿ ಉರುಳು ಸೇವೆ ಮಾಡಲು ಮುಂದಾಗಿದ್ದ. ಇವನ ಹುಚ್ಚಾಟಕ್ಕೆ ಪೋಲೀಸರು ಬುದ್ಧಿ ಹೇಳಿ, ಬಂಧಿಸಿ ಠಾಣೆಗೆ ಎಳೆದೊಯ್ದಿದ್ದಾರೆ. ಎನಿ ವೇ ಈಗ ಎಲ್ಲರ ಚಿತ್ತ ದರ್ಶನ್ ಜೈಲಿಂದ ಹೊರ ಬರೋದು ಯಾವಾಗ ಅನ್ನೋದರತ್ತ.