ನಿರ್ದೇಶನಕ್ಕೆ ಕಾಲಿಡುವ ಮುನ್ನ ಬೆಂಗಳೂರಿನಲ್ಲಿ ಪಬ್‌ಗಳಲ್ಲಿ ಕೆಲಸ ಮಾಡಿದ ವ್ಯಕ್ತಿ....ಬ್ಲ್ಯಾಕ್ ಬ್ಯೂಟಿ ಕೈ ಹಿಡಿಯುವ ಮುನ್ನ ಏನ್ ಮಾಡ್ತಿದ್ರು ಹೇಮಂತ್.....
ಕನ್ನಡ ಚಿತ್ರಂಗದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಜೋಡಿಯಾಗಿ ಅಭಿನಯಿಸಿರುವ ಸಿನಿಮಾ ಇದಾಗಿದ್ದು, ಭಾಗ ಎರಡರಲ್ಲಿ ಚೈತ್ರಾ ಆಚಾರ್ ಎಂಟ್ರಿ ಕೊಟ್ಟಿದ್ದಾರೆ. ಸೈಡ್ A ಮತ್ತು ಸೈಡ್ B ಒಂದು ತಿಂಗಳ ಅಂತರಲ್ಲಿ ರಿಲೀಸ್ ಆದರೂ ದೊಡ್ಡ ಮಟ್ಟದಲ್ಲಿ ಹೆಸರು ಮತ್ತು ಕಲೆಕ್ಷನ್ ಮಾಡಿತ್ತು. ತಮ್ಮ ಮೊದಲ ಚಿತ್ರದ ಮೂಲಕವೇ ಸೂಪರ್ ಹಿಟ್ ನಿರ್ದೇಶನ ಪಟ್ಟ ಗಿಟ್ಟಿಸಿಕೊಂಡ ಹೇಮಂತ್ ರಾವ್ ಈ ಹಿಂದೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು.
ಹೌದು! ನಿರ್ದೇಶಕರ ಟೋಪಿ ಧರಿಸುವ ಮುನ್ನ ಹೇಮಂತ್ ರಾವ್ ಮಾಡುತ್ತಿದ್ದ ಕೆಲಸದ ಬಗ್ಗೆ ಕೇಳಿದ್ದರೆ ಎಲ್ಲರೂ ಶಾಕ್ ಆಗುತ್ತೀರಿ. ಮೈಸೂರಿನ ಹುಡುಗ ಹೇಮಂತ್ ರಾವ್ ಅವರ ತಂದೆ ಜುವಾಲಜಿಸ್ಟ್ ಮತ್ತು ತಾಯಿ ಕನ್ನಡದಲ್ಲಿ ಎಂಇ ಪದವಿಧರೆ ಹೀಗಾಗಿ ಮನೆಯಲ್ಲಿ ಕೊಂಚ ಸಾಹಿತ್ಯದ ವಾತಾವರಣ ಇತ್ತು. ಕಷ್ಟ ಪಟ್ಟ ಇಂಜಿನಿಯರಿಂಗ್ ಮುಗಿಸಿರುವುದರಿಂದ ಅವರಿಗೆ ಇಂಜಿನಿಯರ್ ಆಗಿ ಕೆಲಸ ಸಿಗಲಿಲ್ಲ. ಕೆಲಸ ಸಿಗದ ಕಾರಣ ಸಾಕಷ್ಟು ಕೆಲಸಗಳಲ್ಲಿ ಪ್ರಯತ್ನ ಮಾಡಿದ್ದಾರೆ. ಬೆಂಗಳೂರಿನ ಜನಪ್ರಿಯ ಪಬ್‌ಗಳಲ್ಲಿ ಒಂದಾದ ಪರ್ಪಲ್ ಹೇಜ್‌ನಲ್ಲಿ ಡಿಜೆ ಆಗಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.
ಮಲಯಾಳಂ ಇಂಡಸ್ಟ್ರಿ ಕೊಳೆತು ಹೋಗಿಲ್ಲ ನಾವು ಒಳಗಿನಿಂದ ಚೆನ್ನಾಗಿದ್ದೀವಿ; 'ಮಿಲನಾ' ನಟಿ ಪಾರ್ವತಿ ಹೇಳಿಕೆ
ಡಿಜೆಯಾಗಿ ಸಾಕಷ್ಟು ಹಾಡುಗಳ ಮಿಕ್ಸಿಂಗ್ ಮಾಡುತ್ತಿದ್ದರು, ಪರದೆ ಮೇಲೆ ಪ್ರಸಾರವಾಗುತ್ತಿದ್ದ ವಿಡಿಯೋಗಳನ್ನು ಬದಲಾಯಿಸುತ್ತಿದ್ದರು...ಅಷ್ಟೇ ಯಾಕೆ ಅಲ್ಲಿ ಕುಡಿಯಲು ಬಂದವರು ಬೇಡಿಕೆ ಇಟ್ಟರೆ ಅವರಿಗೆ ಹಾಡುಗಳನ್ನು ಬದಲಾಯಿಸುತ್ತಿದ್ದರಂತೆ. ಇದರ ಜೊತೆ ಜನಪ್ರಿಯ ಪತ್ರಿಕೆಗಳಲ್ಲಿ ಒಂದಾದ ಡೆಕ್ಕನ್ ಹೆರಾಲ್ಡ್‌ನಲ್ಲಿ ಫೀಚರ್ ಆರ್ಟಿಗಳನ್ನು ಬರೆಯುತ್ತಿದ್ದರು. ಸಾಕಷ್ಟು ಭಿನ್ನ ವ್ಯಕ್ತಿಗಳನ್ನು ಭೇಟಿ ಮಾಡಿ ಬರೆಯುತ್ತಿದ್ದ ಕಾರಣ ತಮ್ಮ ವೃತ್ತಿ ಬದುಕಿಗೆ ಸಹಾಯವಾಗಿತ್ತು ಎಂದಿದ್ದಾರೆ. ಇಷ್ಟರ ನಡುವೆ ಇಂಜಿನಿಯರಿಂಗ್ ಕೆಲಸ ಕೂಡ ಸಿಕ್ಕಿದೆ ಆದರೆ ಯಾರಿಗೂ ಹೇಳದೆ ಕೇಳದೆ ಮೂರು ದಿನಕ್ಕೆ ಅಲ್ಲಿಂದ ಪರಾರಿ ಆಗಿದ್ದಾರೆ.
ಮೊದಲು ಆ ಸಂಸ್ಥೆಗೆ ಹಣ ಕೊಟ್ಟು ಕೆಲಸಕ್ಕೆ ಸೇರಿಕೊಳ್ಳಬೇಕು ಆನಂತರ ಎರಡು ವರ್ಷ ಬಿಡದಂತೆ ಕೆಲಸ ಮಾಡಬೇಕು ಎಂದು ಒಪ್ಪಂದ ಬೇಡ ಎಂದು ಓಡಿ ಹೋಗಿದ್ದಾರೆ. ಇಷ್ಟೆನಾ ಅಂದುಕೊಳ್ಳಬೇಡಿ...ಪ್ರೈವೆಟ್ ಡಿಟೆಕ್ಟಿವ್ ಆಗಿಯೂ ಕೆಲಸ ಮಾಡಿದ್ದಾರೆ. ಫ್ರೆಂಚ್ ಸಿನಿಮಾವನ್ನು ನೋಡಿ ತಾನೂ ಕೂಡ ಡಿಟೆಕ್ಟಿವ್ ಆಗಬೇಕೆಂದು ಜಯನಗರದ ಖಾಸಗಿ ಡಿಟೆಕ್ಟಿವ್ ಸಂಸ್ಥೆಯೊಂದಲ್ಲಿ ಕೆಲಸ ಮಾಡಿದ್ದಾರೆ. ಇಲ್ಲಿ ಕದ್ದುಮುಚ್ಚಿ ಕಾರು ಫಾಲೋ ಮಾಡುವುದು, ವಿಡಿಯೋ ರೆಕಾರ್ಡ್ ಮಾಡುತ್ತಿದ್ದಂತೆ...ಕೆಲಸ ಮಜಾ ಕೊಡುತ್ತಿದ್ದರು ತುಂಬಾ ಕಷ್ಟವಿತ್ತು ಎಂದಿದ್ದಾರೆ.
ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಚೆನ್ನಾಗಿ ನಡೆಯುತ್ತಿದ್ದ ಕಾರಣ ಆ ಕೆಲಸ ಕೂಡ ಮಾಡಿದ್ದಾರೆ. ಜಾಹೀರಾತು ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ, ಡಾಕ್ಯೂಮೆಂಟರಿ ನಿರ್ದೇಶಿಸಲು ಪ್ರಯತ್ನ ಪಟ್ಟಿದ್ದಾರೆ. ಹೀಗಾಗೆ ಸಾಕಷ್ಟು ಕೆಲಸಗಳನ್ನು ಮಾಡಿ ಆನಂತರ ನಿರ್ದೇಶನಕ್ಕೆ ಇಲಿದು ಸೈ ಎನಿಸಿಕೊಂಡಿದ್ದಾರೆ.