ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹಾಯ ಬೇಡಿ ಬಂದವರಿಗೆ ಎಂದು 'ನೋ' ಎನ್ನುವವರಲ್ಲ. ಆದರೆ ಇದೇ ಮೊದಲ ಬಾರಿಗೆ ದರ್ಶನ್ ತಾಯಿ ನಿರ್ಮಾಪಕ ಸಂದೇಶ್ ಅವರಿಗೆ ಕರೆ ಮಾಡಿ ಸಹಾಯ ಕೋರಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ಬಹು ನಿರೀಕ್ಷಿತ ಚಿತ್ರ 'ಒಡೆಯ' ತೆರೆ ಕಾಣಲು ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ. ಕೆಲ ದಿನಗಳ ಹಿಂದೆ ಖಾಸಗಿ ಹೋಟೆಲ್‌ನಲ್ಲಿ ಪ್ರೆಸ್ ಮೀಟ್ ಕಾರ್ಯಕ್ರಮ ಮಾಡಲಾಗಿತ್ತು ಈ ವೇಳೆ ಚಿತ್ರತಂಡ ಅನೇಕ ವಿಚಾರಗಳನ್ನು ರಿವೀಲ್ ಮಾಡಿದೆ.
ಒಡೆಯನ ನಾಯಕಿ ಆಗಲು ದರ್ಶನ್ ಅಮ್ಮ ಕಾರಣ: ಸನ ತಿಮ್ಮಯ್ಯ!
ದಿನೇ ದಿನೇ ಕುತೂಹಲ ಹೆಚ್ಚಿಸುತ್ತಿರುವ ಒಡೆಯ ಚಿತ್ರ ತಂಡ ನಾಯಕಿಯನ್ನು ಆಯ್ಕೆ ಮಾಡಲು ತುಂಬಾ ಸುಲಭವಾಯಿತಂತೆ. ದರ್ಶನ್ ತಾಯಿ ಮತ್ತು ನಟಿ ಸನಾ ತಿಮ್ಮಯ್ಯ ಅವರ ತಾಯಿ ಇಬ್ಬರು ಸ್ನೇಹಿತೆಯರು. ತುಂಬಾ ವರ್ಷಗಳಿಂದ ಸನಾ ಪ್ರತಿಭೆಯನ್ನು ಕಂಡ ದರ್ಶನ್ ತಾಯಿ ಆಕೆಗೆ ದರ್ಶನ್ ಜೊತೆ ನಟಿಸುವ ಅವಕಾಶ ನೀಡಲು ನಿರ್ಮಾಪಕ ಸಂದೇಶ್‌ರನ್ನು ಕೇಳಿಕೊಂಡಿದ್ದರಂತೆ. ನಟಿಯ ಬಗ್ಗೆ ಏನೂ ಪ್ರಶ್ನೆ ಮಾಡದೇ ಸಂದೇಶ್ ಒಪ್ಪಿಕೊಂಡರಂತೆ! ಹೀಗಾಗಿ ನಾಯಕಿ ಆಯ್ಕೆ ಸುಲಭವಾಯಿತು.
ಕನ್ನಡ ಪ್ರಭ ಜೊತೆ ಸಂದರ್ಶನಲ್ಲಿ ಮಾತನಾಡಿದ ಸನ್ನಿ ಮರೆಯಲಾಗದ ಘಟನೆಯನ್ನು ಹಂಚಿಕೊಂಡಿದ್ದಾರೆ. ಶೂಟಿಂಗ್ ವೇಳೆ ಕೆಲ ಅಭಿಮಾನಿಗಳು 'ಡಿ ಬಾಸ್ ನಾಯಕಿಗೆ ಜೈ' ಎಂದಾಗ ಪಕ್ಕದಲ್ಲೇ ಇದ್ದ ಅವರ ತಾಯಿ ಎಮೋಷನಲ್ ಆದರಂತೆ!
ಅನ್ನದಾತನ ಧ್ವನಿ ಆದ ದಾಸ ದರ್ಶನ್..!