ಸ್ಯಾಂಡಲ್‌ವುಡ್‌ನಲ್ಲಿ ಗುಲ್ಲೆಬ್ಬಿಸಲು ಬರುತ್ತಿದೆ 'ಗುಲಾಲ್'!

Published : Dec 02, 2019, 11:46 AM ISTUpdated : Dec 02, 2019, 11:53 AM IST
ಸ್ಯಾಂಡಲ್‌ವುಡ್‌ನಲ್ಲಿ ಗುಲ್ಲೆಬ್ಬಿಸಲು ಬರುತ್ತಿದೆ 'ಗುಲಾಲ್'!

ಸಾರಾಂಶ

ಉತ್ತರ ಕರ್ನಾಟಕ ಭಾಗದಲ್ಲಿ ಹುಟ್ಟಿದಾಗ ಗುಲಾಲ್‌ ಬಣ್ಣ ಹಾರಿಸ್ತಾರೆ, ಸತ್ತಾಗ ಗೌರವ ಸಲ್ಲಿಸಲು ಇದನ್ನೆ ಬಳಸುತ್ತಾರೆ. ಇದನ್ನೇ ಇಟ್ಟುಕೊಂಡು 'ಗುಲಾಲ್.ಕಾಂ' ಎನ್ನುವ ಸಿನಿಮಾವೊಂದು ತೆರೆಗೆ ಬರಲು ಸಿದ್ಧವಾಗಿದೆ. 

ಎರಡ್ಮೂರು ವಾರಗಳ ಹಿಂದೆಯಷ್ಟೆಆಡಿಯೋ ಬಿಡುಗಡೆ ಮಾಡಿಕೊಂಡ ‘ಗುಲಾಲ್‌.ಕಾಂ’ ಚಿತ್ರತಂಡ ಮತ್ತೆ ಮಾಧ್ಯಮಗಳ ಮುಂದೆ ಬಂತು. ಈ ಬಾರಿಗೆ ಹಾಡುಗಳು ಯಶಸ್ಸುಗೊಂಡಿರುವುದನ್ನು ಹೇಳಿಕೊಳ್ಳುವುದಕ್ಕೆ ಚಿತ್ರತಂಡ ಆಗಮಿಸಿತ್ತು.

ಅಂದಹಾಗೆ ಈ ಚಿತ್ರದ ‘ಹುಡುಗಿ ಹುಡುಗಿ’ ಹಾಡು ಸಿಕ್ಕಾಪಟ್ಟೆಹಿಟ್‌ ಆಗಿದೆ ಎಂಬುದು ಚಿತ್ರತಂಡದ ಸಂಭ್ರಮಕ್ಕೆ ಕಾರಣ. ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ ಹದಿನೈದು ದಿನಗಳಲ್ಲೇ ಇದಕ್ಕೆ ಮೂರುವರೆ ಲಕ್ಷ ಹಿಟ್ಸ್‌ ಸಿಕ್ಕಿದೆಯಂತೆ. ಇದು ಚಿತ್ರಕ್ಕೆ ಸಿಕ್ಕ ಮೊದಲ ಗೆಲುವು ಎಂಬುದು ಚಿತ್ರದ ನಿರ್ದೇಶಕ ಶಿವು ಜಮ್ಮುಖಂಡಿ ಮಾತು.

 

ಉತ್ತರ ಕರ್ನಾಟಕ ಭಾಗದಲ್ಲಿ ಹುಟ್ಟಿದಾಗ ಗುಲಾಲ್‌ ಬಣ್ಣ ಹಾರಿಸ್ತಾರೆ, ಸತ್ತಾಗ ಗೌರವ ಸಲ್ಲಿಸಲು ಇದನ್ನೆ ಬಳಸುತ್ತಾರೆ. ಇವೆರಡನ್ನು ಬಿಂಬಿಸುವುದೇ ಚಿತ್ರದ ಕತೆ. ಬೆಂಗಳೂರು, ಬೆಳಗಾಂ, ಕಿತ್ತೂರು ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಆ ಒಂದು ಪಯಣವೇ ಶೀರ್ಷಿಕೆಯಾಗಿದೆ. ದೇವರು ಪ್ರತಿಯೊಬ್ಬರಿಗೂ ಶಕ್ತಿ ಕೊಟ್ಟಿರುತ್ತಾನೆ.

ರಚಿತಾ ರಾಮ್ ಮನೆಯಲ್ಲಿ ನಿಶ್ಚಿತಾರ್ಥದ ಸಂಭ್ರಮ; ಉಂಗುರ ಬದಲಾಯಿಸಿಕೊಂಡ ಜೋಡಿ!

ಅದನ್ನು ಗುರುತಿಸಲು ಗುರು ಅಂತ ಒಬ್ಬರು ಇರಬೇಕು. ಕೋಲಾರ, ಬೆಂಗಳೂರು, ಗುಲ್ಬರ್ಗಾ, ಹುಬ್ಬಳ್ಳಿ ಕಡೆಯ ಐದು ಹುಡುಗರು ಗುರುವನ್ನು ಆದರ್ಶವಾಗಿಟ್ಟುಕೊಂಡು, ಅವರನ್ನು ಮಾತಾಡಿಸುತ್ತಾರೆ. ನಂತರ ಆಲ್ಬಂ ತಯಾರಿಸಿದ ಮೇಲೆ ಅವರ ಜೀವನದಲ್ಲಿ ಏನಾಗುತ್ತದೆ ಎಂಬುದನ್ನು ಚಿತ್ರದಲ್ಲಿ ನೋಡಬೇಕು ಎಂಬುದು ನಿರ್ದೇಶಕರ ಮಾತು.

ಮುಖ್ಯ ಪಾತ್ರದಲ್ಲಿ ಗುರುವಾಗಿ ತಬಲನಾಣಿ, ಬಿಗ್‌ಬಾಸ್‌ ದಿವಾಕರ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸದಾನಂದ ಕಾಲಿ, ಮಲ್ಲೇಶ್‌ ಸೂರ್ಯ, ಶಂಕರ ಅಂಬಿಗೇರಿ, ಜೋಕರ್‌ ಹನುಮಂತ್‌, ನೇತ್ರಗಗನ, ಪೂಜಾ ಮೈಸೂರು, ಸೋನು ಪಾಟೀಲ್‌, ರಾಜೇಶ್ವರಿ, ಅನೀಲ್ ಪಾಟೀಲ್, ಸೂರ್ಯವಂಶಿ ಇದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ಚಿತ್ರ ಜನವರಿಯಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?