ದೀಪಾವಳಿಗೆ ವಿಶ್ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ 'ಒಡೆಯ'!

By Web Desk  |  First Published Oct 27, 2019, 2:32 PM IST

ಬಾಕ್ಸ್ ಆಫೀಸ್ ಸುಲ್ತಾನ್ ಚಿತ್ರ ಅಂದ್ರೆನೇ ಹಾಗೆ ರಿಲೀಸ್‌ಗೂ ಮುನ್ನವೂ ಸೌಂಡು. ರಿಲೀಸ್ ಆದ್ಮೇಲೂ ಸೌಂಡು, ಯಾವ ಚಿತ್ರದ ಬಗ್ಗೆ ಹೇಳ್ತಿದ್ದೀವಿ ಅಂತ ಯೋಚಿಸ್ತಿದೀರಾ? ಇಲ್ಲಿದೆ ನೋಡಿ ಅ ಸೌಂಡ್ ಹೆಚ್ಚಿಸುವಂತ ಸುದ್ದಿ.


ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಒಡೆಯ' ಚಿತ್ರಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಂತೂ ಇಂತೂ ಶೂಟಿಂಗ್ ಮುಗಿತು. ಆದರೆ ಚಿತ್ರತಂಡ ಪೋಸ್ಟರ್ ಬಿಟ್ರೆ ಏನೂ ಸುಳಿವು ನೀಡುತ್ತಿಲ್ವಲ್ಲಾ ಅಂತ ಕಾಯ್ತಾ ಇದ್ದವರಿಗೆ ಸ್ವತಃ ದಾಸನೇ ಗುಡ್‌ ನ್ಯೂಸ್ ನೀಡಿದ್ದಾರೆ.

ಮಾರುಕಟ್ಟೆಯಲ್ಲಿ ದರ್ಶನ್ ಶರ್ಟ್; ಅಭಿಮಾನಿಯಾದ್ರೆ ಇಲ್ಲಿ ಕೊಳ್ಳಿ!

Tap to resize

Latest Videos

undefined

ಪ್ರತಿ ಹಬ್ಬಕ್ಕೂ ದರ್ಶನ್ ಅಭಿಮಾನಿಗಳಿಗೆ ವಿಶ್ ಮಾಡುತ್ತಾರೆ. ಈ ದೀಪಾವಳಿಗೆ ಸ್ವಲ್ಪ ಸ್ಪೆಶಲ್ ಆಗಿ ವಿಶ್ ಮಾಡಿದ್ದಾರೆ. ತನ್ನ ಟ್ಟಿಟರ್ ಖಾತೆಯಲ್ಲಿ 'ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು. ಈ ಹಬ್ಬವು ನಿಮ್ಮ ಬಾಳಿಗೆ ಮತ್ತಷ್ಟು ಹೊಸ ಬೆಳಕನ್ನು ತರಲಿ ಎಂದು ಆಶಿಸುತ್ತೇನೆ. ಒಡೆಯ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದ ಟೀಸರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ ನಿಮ್ಮ ಪ್ರೀತಿಗೆ ಸದಾ ಆಭಾರಿ ' ಎಂದು ಬರೆದುಕೊಂಡಿದ್ದಾರೆ.

ಸ್ವಿಸ್‌ನಲ್ಲಿ ಮಂಜುಗಡ್ಡೆ ನಡುವೆ ಡಿ ಬಾಸ್; ಇಲ್ಲಿವೆ ಫೋಟೋಸ್!

ಈಗ ಟೀಸರ್ ರಿಲೀಸ್ ರಿಲೀಸ್ ದಿನಾಂಕವನ್ನು ರಿವೀಲ್ ಮಾಡಿದ್ದಾರೆ. 'ನಮ್ಮ ‘ಒಡೆಯ’ ಚಿತ್ರದ ಟೀಸರ್ ಇದೇ ನವೆಂಬರ್ 1 ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬೆಳಗ್ಗೆ 9:55 ಕ್ಕೆ ಬಿಡುಗಡೆಯಾಗಲಿದೆ. ನಿಮ್ಮ ಪ್ರೀತಿ-ಪ್ರೋತ್ಸಾಹ- ಆಶೀರ್ವಾದ ಸದಾ ಹೀಗೆ ಇರಲಿ-ನಿಮ್ಮ ದಾಸ ದರ್ಶನ್'. ಎಂದಿದ್ದಾರೆ.

 

ಬೆಳಕಿನ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು. ಈ ಹಬ್ಬವು ನಿಮ್ಮ ಬಾಳಿಗೆ ಮತ್ತಷ್ಟು ಹೊಸ ಬೆಳಕನ್ನು ತರಲಿ ಎಂದು ಆಶಿಸುತ್ತೇನೆ.

ಒಡೆಯ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದ ಟೀಸರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ 😊
ನಿಮ್ಮ ಪ್ರೀತಿಗೆ ಸದಾ ಆಭಾರಿ

- ನಿಮ್ಮ ದಾಸ ದರ್ಶನ್ pic.twitter.com/3xPrjvshkc

— Darshan Thoogudeepa (@dasadarshan)

'ಒಡೆಯ' ಚಿತ್ರದ ಬಗ್ಗೆ ಒಂದೊಂದು ವಿಚಾರ ರಿವೀಲ್ ಮಾಡುವಾಗ ಹೊಸ ಫೋಟೋಗಳನ್ನು ರಿವೀಲ್ ಮಾಡುತ್ತಿದ್ದಾರೆ. ವಿಜಯ ದಶಮಿ ಹಬ್ಬದಂದು ಮಗುವನ್ನು ಎತ್ತಿ ಮುದ್ದಾಡುತ್ತಿರುವ ಫೋಟೋ ರಿವೀಲ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿತ್ತು.

 

ನಮ್ಮ ‘ಒಡೆಯ’ ಚಿತ್ರದ ಟೀಸರ್ ಇದೇ ನವೆಂಬರ್ ೧ ರಂದು ಆಡಿಯೋ ಯೂಟ್ಯೂಬ್ ಚಾನೆಲ್ ಅಲ್ಲಿ ಬೆಳಗ್ಗೆ 9:55ಕ್ಕೆ ಬಿಡುಗಡೆಯಾಗಲಿದೆ.

ನಿಮ್ಮ ಪ್ರೀತಿ-ಪ್ರೋತ್ಸಾಹ- ಆಶೀರ್ವಾದ ಸದಾ ಹೀಗೆ ಇರಲಿ 😊
- ನಿಮ್ಮ ದಾಸ ದರ್ಶನ್ pic.twitter.com/d4r1XIm2vN

— Darshan Thoogudeepa (@dasadarshan)
click me!