ರಶ್ಮಿಕಾ ಮಂದಣ್ಣ ಕನ್ನಡದ ಬಗ್ಗೆ ಅಸಡ್ಡೆ ತೋರುವುದು ಪದೇ ಪದೇ ಪುನಾರಾವರ್ತನೆಯಾಗುತ್ತಲೇ ಇದೆ. ಕನ್ನಡ ಗೊತ್ತಿಲ್ಲ ಎಂದು ಇತ್ತೀಚಿಗೆ ಟ್ರೋಲ್ ಆಗಿದ್ದರು. ಈಗ ಕನ್ನಡದ ಹೆಮ್ಮೆ ಸಾಲು ಮರದ ತಿಮ್ಮಕ್ಕ ಬಗ್ಗೆ ತಮಿಳು ವೇದಿಕೆಯಲ್ಲಿ ಮಾತನಾಡುವಾಗ ತಡಬಡಾಯಿಸಿ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ.
ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಮರಗಳನ್ನೇ ತಮ್ಮ ಮಕ್ಕಳೆಂದು ಭಾವಿಸಿ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸಿದ ಮಹಾನ್ ಪರಿಸರವಾದಿ. ಈ ತಾಯಿಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡುವ ಮಹಾನ್ ಸಾಧಕಿ.
ತಮಿಳಿನ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಸಾಲು ಮರದ ತಿಮ್ಮಕ್ಕ ಹೋಗುತ್ತಾರೆ. ಅಲ್ಲಿ ತಿಮ್ಮಕ್ಕ ಕನ್ನಡದಲ್ಲಿ ಮಾತು ಶುರು ಮಾಡುತ್ತಾರೆ. ಅಲ್ಲಿದ್ದವರಿಗೆ ಕನ್ನಡ ಅರ್ಥವಾಗುವುದಿಲ್ಲ. ನಟಿ ರಶ್ಮಿಕಾ ಮಂದಣ್ಣ ಅಲ್ಲಿರುತ್ತಾರೆ. ಆಗ ನಿರೂಪಕಿ ಕನ್ನಡದವರೇ ಆದ ರಶ್ಮಿಕಾ ಮಂದಣ್ಣ ಇಲ್ಲಿದ್ದಾರೆ. ದಯವಿಟ್ಟು ವೇದಿಕೆಗೆ ಬಂದು ತಿಮ್ಮಕ್ಕನವರ ಮಾತುಗಳನ್ನು ಅನುವಾದ ಮಾಡಿ ಎಂದು ಕೇಳುತ್ತಾರೆ.
BB7: ಸ್ಕ್ರಿಪ್ಟೆಡ್? ಮನೆಯೊಳಗಿನ ಗುಟ್ಟು ರವಿ ಬೆಳಗೆರೆ ಬಾಯಲ್ಲಿ ರಟ್ಟು!
ರಶ್ಮಿಕಾ ವೇದಿಕೆಗೆ ಬರುತ್ತಾರೆ. ತಿಮ್ಮಕ್ಕನವರ ಮಾತುಗಳನ್ನು ಒಂದೆರಡು ವಾಕ್ಯಗಳಲ್ಲಿ ಇಂಗ್ಲೀಷ್ ನಲ್ಲಿ ಹೇಳಿ ತಡಬಡಿಸುತ್ತಾರೆ. ವೇದಿಕೆ ಮೇಲಿದ್ದ ತಮಿಳು ನಟ ವಿವೇಕ್ ತುಂಬಾ ಚೆನ್ನಾಗಿ ಮಾತನಾಡುತ್ತಾರೆ.
'ಸಾಲು ಮರದ ತಿಮ್ಮಕ್ಕರವರಿಗೆ ಮಕ್ಕಳಿರುವುದಿಲ್ಲ. ಮರಗಳನ್ನೇ ಇವರ ಮಕ್ಕಳೆಂದು ಭಾವಿಸಿಕೊಂಡಿದ್ದಾರೆ. ಇವರು ಹಾಗೂ ಇವರ ಪತಿ ಕೀಲೋಮೀಟರ್ ಗಟ್ಟಲೇ ನಡೆದು ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ. ತಿಮ್ಮಕ್ಕರಿಗೆ 108 ವರ್ಷ ವಯಸ್ಸಾದರೂ ಇವರ ಉತ್ಸಾಹ ಮಾತ್ರ ಸ್ವಲ್ಪವೂ ಬತ್ತಿಲ್ಲ. ಇದರ ಹಿಂದಿರುವ ಶಕ್ತಿಯೇ ಇವರು ಬೆಳೆಸಿರುವ ಮರಗಳು. ಇದುವರೆಗೂ 2018 ಆಲದ ಮರಗಳನ್ನು ಬೆಳೆಸಿದ್ದಾರೆ. ಇವರ ಸಾಧನೆ ನೋಡಿ ಪದ್ಮಶ್ರೀ ಪ್ರಶಸ್ತಿ ಬಂದಿದೆ. ಬಿಬಿಸಿಯ 100 ಜನ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಇವರೂ ಕೂಡಾ ಒಬ್ಬರು. ಇವರು ಬರೀ ಭಾರತ ಮಾತ್ರವಲ್ಲ, ಬೇರೆ ದೇಶಗಳಲ್ಲೂ ಫೇಮಸ್. ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಇವರು ನಮ್ಮ ದೇಶದ ಹೆಮ್ಮೆ ' ಎಂದು ಹೇಳುತ್ತಾರೆ.
ಅರೆರೇ.. ಏನಾಯ್ತು ಶ್ರದ್ಧಾಗೆ? ಈಗ ಹೇಗಾಗಿದ್ದಾರೆ ನೋಡಿ!
ನಮ್ಮ ರಾಜ್ಯದವರೇ ಆದ ರಶ್ಮಿಕಾಗೆ ಸಾಲು ಮರದ ತಿಮ್ಮಕ್ಕ ಬಗ್ಗೆ ಗೊತ್ತಿಲ್ಲದೇ ಇರುವುದು ವಿಪರ್ಯಾಸ. ಇದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. ಸಾಧನೆಯನ್ನು ಮೆಚ್ಚಿಕೊಳ್ಳುವುದಕ್ಕೆ, ಹೊಗಳುವುದಕ್ಕೆ ಭಾಷೆ ರಾಜ್ಯದ ಹಂಗಿರುವುದಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ!
ಅಕ್ಟೋಬರ್ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ