ಮಲಯಾಳಂ ವೇದಿಕೆಯಲ್ಲಿ ಕನ್ನಡ ಹಾಡು ಹಾಡಿದ 'ಮೈನಾ'!

Published : Oct 27, 2019, 10:48 AM IST
ಮಲಯಾಳಂ ವೇದಿಕೆಯಲ್ಲಿ  ಕನ್ನಡ ಹಾಡು ಹಾಡಿದ 'ಮೈನಾ'!

ಸಾರಾಂಶ

  'ಮಿಷನ್ ಮಂಗಳ್' ಚಿತ್ರದಲ್ಲಿ ಅಕ್ಷಯ್ ಕುಮಾರ್‌ಗೆ ಜೋಡಿಯಾಗಿ ಮಿಂಚಿದ ನಿತ್ಯಾ ಮೆನನ್ ಕನ್ನಡ ಚಿತ್ರರಂಗವನ್ನು ಎತ್ತರಕ್ಕೆ ಬೆಳೆಸುತ್ತಿದ್ದಾರೆ ಅದಕ್ಕೆ ಈ ಘಟನೆಯೇ ಸಾಕ್ಷಿ!

 

'7 o'clock' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಿತ್ಯಾ ಮೆನನ್ ಈಗ ಮಲ್ಟಿ ಲಿಂಗ್ವೆಲ್ ನಟಿ. ಕಾಲ್‌ ಶೀಟ್‌ ಫ್ರೀ ಇಲ್ಲದಷ್ಟು ಬ್ಯುಸಿ ಇರುವ ನಿತ್ಯಾ ಮಲಯಾಳಂ ಸಂದರ್ಶನವೊಂದರಲ್ಲಿ ಕನ್ನಡವನ್ನು ಎತ್ತಿ ಹಿಡಿದಿದ್ದಾರೆ. ಸಂದರ್ಶನವೊಂದರಲ್ಲಿ ಹಾಡು ಹಾಡಿ ಎಂದು ನಿರೂಪಕಿ ಕೇಳಿದಾಗ ಹಾಡಿದ ಹಾಡು ಯಾವುದು ಗೊತ್ತಾ?

ಆರ್ಯವರ್ಧನ್ ಜೊತೆ ಲವ್ವಲ್ಲಿ ಬಿದ್ದ ಅನು; ಕುತೂಹಲ ಮೂಡಿಸಿದೆ ಪ್ರಪೋಸ್!

 

ಎಷ್ಟೇ ಉತ್ತುಂಗಕ್ಕೆ ಏರಿದರೂ ತಮ್ಮ ಮಾತೃ ಭಾಷೆಯ ಮೇಲಿರುವ ಒಲವು ಮರೆಯದ ನಿತ್ಯಾ ಮೆನನ್ ಆಯ್ಕೆ ಮಾಡಿಕೊಂಡ ಹಾಡು 'ನಿನ್ನಿಂದಲೇ....ನಿನ್ನಿಂದಲೇ ಕನಸೊಂದು ಶುರುವಾಗಿದೆ' ಎಂದು. 'ಹಲವು ಭಾಷೆಗಳಲ್ಲಿ ನಟಿಸಿದ್ದೀರಾ ಎಲ್ಲದರಲ್ಲೂ ಒಂದೊಂದು ಹಾಡು ಹೇಳಿ' ಎಂದು ಕೇಳಿದಾಗ ನಿತ್ಯ ಆರೇಳು ಹಾಡುಗಳನ್ನು ಹಾಡುತ್ತಾರೆ. ಕನ್ನಡ ಭಾಷೆಗೆ ಬಂದಾಗ ಪುನೀತ್ ರಾಜ್‌ಕುಮಾರ್ ಅಭಿನಯದ 'ಮಿಲನ' ಚಿತ್ರದ 'ನಿನ್ನಿಂದಲೇ ನಿನ್ನಿಂದಲೇ' ಎಂದು ಹಾಡಿದ್ದಾರೆ. ಈ ಮೂಲಕ ತಮ್ಮ ಕನ್ನಡ ಭಾಷೆಯ ಮೇಲಿರುವ ಪ್ರೇಮವನ್ನು ತೋರಿದ್ದಾರೆ.

ಪಬ್ಲಿಕ್‌ನಲ್ಲೇ ಪತಿಗೆ ಲಿಪ್ ಲಾಕ್ ಮಾಡಿದ ನಟಿ; ವಿಡಿಯೋ ವೈರಲ್!

ಇನ್ನು ಬಾಲಿವುಡ್ ಸೂಪರ್ ಹಿಟ್ ಚಿತ್ರ 'ಮಿಷನ್ ಮಂಗಳ್'ದಲ್ಲಿ ಅಕ್ಷಯ್ ಕುಮಾರ್‌ಗೆ ಜೋಡಿಯಾಗಿ ಮಿಂಚಿದ ನಿತ್ಯ ಕನ್ನಡದಲ್ಲೇ ಆಟೋಗ್ರಾಫ್ ಹಾಕಿ ಅಲ್ಲಿಯೂ ಕನ್ನಡ ಪ್ರೇಮ ಮೆರೆದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?