ಮತ್ತೆ ಸಂಕಷ್ಟದ ಸುಳಿಯಲ್ಲಿ ನಟ ದರ್ಶನ್: ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಲಾಂಗ್ ಹಿಡಿದು ವಿವಾದ

By BK Ashwin  |  First Published Nov 20, 2023, 11:33 AM IST

ನಟ ದರ್ಶನ್‌ ಮತ್ತೆ ಸಂಕಷ್ಟದ ಸುಳಿಗೆ ಸಿಲುಕಿದ್ದು, ಸಾರ್ವಜನಿಕ ಸ್ಥಳದಲ್ಲಿ ಲಾಂಗ್ ಹಿಡಿದು ವಿವಾದಕ್ಕೆ ಒಳಗಾಗಿದ್ದಾರೆ. 2 ದಿನಗಳ ಹಿಂದೆ ರಾಜ್ಯ ರಾಜಧಾನಿಯ ಜಯನಗರದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. 


ಬೆಂಗಳೂರು (ನವೆಂಬರ್ 20, 2023): ಸ್ಯಾಂಡಲ್‌ವುಡ್‌ ಖ್ಯಾತ ನಟ ದರ್ಶನ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ಇತ್ತೀಚೆಗಷ್ಟೇ ನಟನ ಮನೆಯ ನಾಯಿ ಎದುರುಗಡೆ ಮನೆಯ ಮಹಿಳೆಗೆ ಕಚ್ಚಿದ್ದ ಆರೋಪ ಎದುರಾಗಿದ್ದು, ಈ ಸಂಬಂಧ ಕೇಸ್‌ ದಾಖಲಾಗಿತ್ತು. ಈಗ ಸಾರ್ವಜನಿಕ ಸ್ಥಳದಲ್ಲಿ ಲಾಂಗ್ ಹಿಡಿದು ವಿವಾದಕ್ಕೆ ಒಳಗಾಗಿದ್ದಾರೆ. 

ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಮತ್ತೆ ಸಂಕಷ್ಟದ ಸುಳಿಗೆ ಸಿಲುಕಿದ್ದು, ಸಾರ್ವಜನಿಕ ಸ್ಥಳದಲ್ಲಿ ಲಾಂಗ್ ಹಿಡಿದು ವಿವಾದಕ್ಕೆ ಒಳಗಾಗಿದ್ದಾರೆ. 2 ದಿನಗಳ ಹಿಂದೆ ರಾಜ್ಯ ರಾಜಧಾನಿಯ ಜಯನಗರದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಟ ದರ್ಶನ್‌ ಲಾಂಗ್‌ ಹಿಡಿದಿದ್ದಾರೆ. 

Tap to resize

Latest Videos

ಇದನ್ನು ಓದಿ: ಬ್ಯಾಡ್‌ ಮ್ಯಾನರ್ಸ್‌ ಚಿತ್ರದಲ್ಲಿ ಅಭಿಷೇಕ್ ಮುದ್ದಾಗಿ ಕಾಣುತ್ತಾರೆ: ದರ್ಶನ್

ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್‌ ನಟರಾದ ದರ್ಶನ್ ಹಾಗೂ ಅಭಿಶೇಕ್‌ ಇಬ್ಬರೂ ಅತಿಥಿಗಳಾಗಿ ಹೋಗಿದ್ದರು. ಈ ವೇಳೆ ದರ್ಶನ್ ಮತ್ತು ಅಭಿಗೆ ಅಭಿಮಾನಿಗಳು ಬೆಳ್ಳಿ ಕಿರೀಟ ಮತ್ತು ಲಾಂಗ್ ಉಡುಗೊರೆ ನೀಡಿದ್ದಾರೆ. ಬಳಿಕ ಅಭಿಮಾನಿಗಳು ಕೊಟ್ಟ ಲಾಂಗ್ ಅನ್ನು ದರ್ಶನ್‌ ಹಿಡಿದಿದ್ದು ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ನಟ ಲಾಂಗ್ ಹಿಡಿದಿರುವುದು ಹಾಗೂ ಅಭಿಷೇಕ್‌ ಬೆಳ್ಳಿ ಕಿರೀಟ ಧರಿಸಿರುವುದು ಫೋಟೋದಲ್ಲಿ ಸೆರೆಯಾಗಿದ್ದು ವೈರಲ್‌ ಆಗಿದೆ. 
 
ಇತ್ತೀಚೆಗಷ್ಟೇ ನಟ ದರ್ಶನ್‌ ಮನೆಯ ನಾಯಿ ಮಹಿಳೆಗೆ ಕಚ್ಚಿದ್ದ ವಿವಾದದಲ್ಲಿ ನಟ ಪೊಲೀಸ್‌ ಠಾಣೆಗೆಹಾಜರಾಗಿದ್ದರು. ಈಗ ಮತ್ತೊಮ್ಮೆ ಸಾರ್ವಜನಿಕವಾಗಿ ಲಾಂಗ್ ಹಿಡಿದು ವಿವಾದಕ್ಕೆ ಸಿಲುಕಿದ್ದಾರೆ. 

ಫಿಕ್ಸ್ ಆಯ್ತು ಬ್ಯಾಡ್‌ಮ್ಯಾನರ್ಸ್‌ ರಿಲೀಸ್ ಡೇಟ್! ಬಾಕ್ಸಾಫೀಸ್ ಬೇಟೆಗೆ ಬರ್ತಿದ್ದಾನೆ ಯಂಗ್ ರೆಬೆಲ್!

ಇತ್ತೀಚೆಗಷ್ಟೇ ಅಭಿಷೇಕ್ ಅಂಬರೀಶ್ ಪ್ರಧಾನ ಪಾತ್ರದಲ್ಲಿ ನಟಿಸಿರುವ, ಕೆ.ಎಂ. ಸುಧೀರ್ ನಿರ್ಮಾಣದ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ್ದ ನಟ ದರ್ಶನ್‌ ನಾನು ಪೂರ್ತಿ ಸಿನಿಮಾ ನೋಡಿದ್ದೇನೆ. ನನಗಿಂತ ಎತ್ತರ ಇರುವ ಅಭಿಷೇಕ್ ಸ್ಕ್ರೀನಲ್ಲಿ ಬಹಳ ಮುದ್ದಾಗಿ ಕಾಣಿಸುತ್ತಾರೆ. ಅಷ್ಟೇ ಚೆನ್ನಾಗಿ ಅಭಿನಯಿಸಿದ್ದಾರೆ. ಸೂರಿ ಅವರ ನಿರ್ದೇಶನದಲ್ಲಿ ಬ್ಯಾಡ್‌ ಮ್ಯಾನರ್ಸ್‌ ಚಿತ್ರ ಚೆನ್ನಾಗಿ ಬಂದಿದೆ. ಈಗ ಟ್ರೇಲರ್ ಬಿಡುಗಡೆಯಾಗಿದೆ. ನವೆಂಬರ್ 24ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ ಎಂದಿದ್ದರು ಚಾಲೆಂಜಿಂಗ್ ಸ್ಟಾರ್ ದರ್ಶನ್.

ಅಲ್ಲದೆ, ಸುಮಲತಾ ಅಂಬರೀಶ್, ಸೂರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಂದು ಗೊತ್ತಾದ ಮೇಲೆ ನಾನು ಕಥೆ ಕೇಳಲು ಹೋಗಲಿಲ್ಲ. ಅವರು ಚೆನ್ನಾಗಿ ಕಥೆ ಮಾಡಿಕೊಂಡಿರುತ್ತಾರೆ ಎಂಬ ನಂಬಿಕೆ ನನ್ನದು. ಕನ್ನಡ ಸಿನಿಮಾ ಪ್ರೇಕ್ಷಕರ ಆಶೀರ್ವಾದ ಅಭಿಷೇಕ್ ಮೇಲಿರಲಿ ಎಂದೂ ಹೇಳಿದ್ದರು.

click me!