
ರಾಜ್ ಬಿ ಶೆಟ್ಟಿ ಹಾಗೂ ಸಿರಿ ರವಿಕುಮಾರ್ ನಟನೆಯ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಟ್ರೇಲರ್ ಬಿಡುಗಡೆ ಇತ್ತೀಚೆಗೆ ನಡೆಯಿತು. ಆ್ಯಪಲ್ ಬಾಕ್ಸ್ ಸ್ಟುಡಿಯೋ ಮೂಲಕ ನಟಿ ರಮ್ಯಾ ನಿರ್ಮಾಣದ ಮೊದಲ ಚಿತ್ರವಿದು.
ನಟನೆ ಜತೆಗೆ ನಿರ್ದೇಶನ ಮಾಡಿರುವ ರಾಜ್ ಬಿ ಶೆಟ್ಟಿ, ‘ಬದುಕುವ ಅವಕಾಶಗಳನ್ನು ಕಳೆದುಕೊಂಡು ಸಾವಿಗೆ ಎದುರು ನೋಡುತ್ತಿದ್ದವರ ಸುತ್ತಾ ಸಾಗುವ ಕತೆ ಇದು. ಕೊನೆಯ ದಿನಗಳನ್ನು ತುಂಬಾ ನೆಮ್ಮದಿಯಾಗಿ ಕಳೆಯಬೇಕು ಎನ್ನುವ ಆಶಯ ಹೊತ್ತ ಈ ಕತೆ ತೆರೆ ಮೇಲೆ ಹೇಳಬೇಕು ಅನಿಸಿತು. ಇಡೀ ತಂಡದ ಪರಿಶ್ರಮದಿಂದ ಈ ಸಿನಿಮಾ ನಾವು ಅಂದುಕೊಂಡಂತೆ ಮೂಡಿ ಬಂದಿದೆ’ ಎಂದು ಹೇಳಿದರು.
ಕೌನ್ಸಿಲರ್ ಪಾತ್ರದಲ್ಲಿ ಸಿರಿ ರವಿಕುಮಾರ್ ನಟಿಸಿದರೆ, ರಾಜ್ ಬಿ ಶೆಟ್ಟಿ ಆ ಕೌನ್ಸಿಲಿಂಗ್ ಕೇಂದ್ರಕ್ಕೆ ಸೇರುವ ಪೇಷೆಂಟ್ ಪಾತ್ರಧಾರಿ. ‘ಈ ಚಿತ್ರದಲ್ಲಿನ ಪಾತ್ರ ಮತ್ತು ಕತೆ ತುಂಬಾ ಚೆನ್ನಾಗಿದೆ. ತುಂಬಾ ಆಪ್ತವಾದ ಮತ್ತು ಎಲ್ಲರು ನೋಡಲೇಬೇಕಾದ ಕತೆಯನ್ನು ಈ ಚಿತ್ರದ ಮೂಲಕ ಹೇಳಿದ್ದಾರೆ’ ಎಂಬುದು ಸಿರಿ ರವಿಕುಮಾರ್ ಮಾತು. ಬಾಲಾಜಿ ಮನೋಹರ್, ಸಂಗೀತ ನಿರ್ದೇಶಕ ಮಿಧುನ್ ಮುಕುಂದನ್ ಇದ್ದರು. ಕಾರ್ಯಕ್ರಮಕ್ಕೆ ನಿರ್ಮಾಪಕಿ ರಮ್ಯಾ ಅವರೇ ಬಂದಿರಲಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.