ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಎಲ್ಲೆಡೆ ಸೌಂಡ್ ಮಾಡ್ತಿದೆ. ಇನ್ನೊಂದು ಕಡೆ ರಕ್ಷಿತ್ ಶೆಟ್ಟಿ ಮದುವೆ ಡೇಟ್ ಫಿಕ್ಸ್ ಆದ ರೂಮರ್ಸ್ ಅಲ್ಲಲ್ಲಿ ಕೇಳಿ ಬರ್ತಿದೆ. ಸಿಂಪಲ್ ಸ್ಟಾರ್ ಕೈ ಹಿಡಿಯೋ ಹುಡುಗಿ ಯಾರು?
ಸಪ್ತಸಾಗರದಾಚೆ ಎಲ್ಲೋ ಸಿನಿಮಾ ದಕ್ಷಿಣ ಭಾರತದಾದ್ಯಂತ ಭಾರೀ ಸೌಂಡ್ ಮಾಡ್ತಿದೆ. ಎಲ್ಲೆಲ್ಲೂ ಮನು ಪಾತ್ರದ ಬಗ್ಗೆ, ಅದನ್ನು ಸೂಪರಾಗಿ ಪ್ರೆಸೆಂಟ್ ಮಾಡಿದ ರಕ್ಷಿತ್ ಶೆಟ್ಟಿ ಬಗ್ಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಇತ್ಯಾದಿ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿವೆ. ರಕ್ಷಿತ್ ಶೆಟ್ಟಿ ಮತ್ತು ಅವರ ತಂಡ ಈ ಸಿನಿಮಾಕ್ಕೆ ಭರ್ಜರಿ ಪ್ರಚಾರವನ್ನೇ ಕೈಗೊಂಡಿದ್ದರು. ಇಂತಹ ಸಂದರ್ಭದಲ್ಲಿ ಸಿನಿಮಾ ವಿಷಯ ಮಾತ್ರವಲ್ಲದೆ ಇತರೆ ವಿಚಾರಗಳೂ ಪ್ರಸ್ತಾಪಗೊಂಡಿದೆ. ಇತ್ತೀಚಿಗೆ ರಶ್ಮಿಕಾ ಮಂದಣ್ಣರ ಡೀಪ್‌ಫೇಕ್ ಅಶ್ಲೀಲ ವಿಡಿಯೋ ಸಂಚಲನ ಮೂಡಿಸಿತ್ತು. ಈ ಕುರಿತು ಸಪ್ತ ಸಾಗರದಾಚೆ ಎಲ್ಲೋ ತಂಡಕ್ಕೆ ತೆಲುಗು ಯೂಟ್ಯೂಬ್ ಚಾನೆಲ್ ಪ್ರಶ್ನಿಸಿತ್ತು. ರಶ್ಮಿಕಾ ಮಂದಣ್ಣರ ಡೀಪ್‌ಫೇಕ್ ವಿಡಿಯೋ ಕುರಿತು ಅಮಿತಾಬ್ ಬಚ್ಚನ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದರು. ಈ ವಿಷಯದ ಕುರಿತು ರಕ್ಷಿತ್ ಶೆಟ್ಟಿ ಸಹ ಪ್ರತಿಕ್ರಿಯೆ ನೀಡಿದ್ದರು. ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣರ ಮಾಜಿ ಪ್ರೇಮಿ ಕನ್ನಡದ ಪ್ರತಿಭಾನ್ವಿತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ ಸಖತ್ ವೈರಲ್ ಆಗಿತ್ತು.
ಆದರೆ ಈಗ ರಕ್ಷಿತ್ ಶೆಟ್ಟಿ ಮದುವೆಯ ಸುದ್ದಿಗೆ ರೆಕ್ಕೆ ಪುಕ್ಕ ಮೂಡಿದೆ.
ರಕ್ಷಿತ್ ಶೆಟ್ಟಿ ಅವರಿಗೂ ರಶ್ಮಿಕಾಗೂ ನಡುವೆ ಇದ್ದ ಸಂಬಂಧ ಎಲ್ಲರಿಗೂ ತಿಳಿದದ್ದೇ. ಎಂಗೇಜ್‌ಮೆಂಟ್‌ವರೆಗೂ ಬಂದ ಈ ಸಂಬಂಧ ಕೊನೆಗೆ ಬ್ರೇಕಪ್‌ನಲ್ಲಿ ಕೊನೆಯಾಯ್ತು. ಇದಾಗಿ ಸಾಕಷ್ಟು ಸಮಯವಾಗಿದೆ. ಒಂದು ಸಮಯದಲ್ಲಿ ಎಲ್ಲೆಲ್ಲೂ ಬರೀ ಇವರಿಬ್ಬರ ಸಂಬಂಧದ ಬಗ್ಗೆಯೇ ಪ್ರಶ್ನೆ ಕೇಳಿ ಬರುತ್ತಿತ್ತು. ಕ್ರಮೇಣ ಇದೆಲ್ಲ ತೆರೆ ಮರೆಗೆ ಸರಿದಿದೆ. ಇಬ್ಬರೂ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿ ಆಗಿ ಬಿಟ್ಟರು. ತಾವಿಬ್ಬರೂ ಸ್ನೇಹಿತರಾಗಿ ಇರೋದಾಗಿ ರಕ್ಷಿತ್ ಹೇಳಿದ್ದರು. ಸಪ್ತಸಾಗರ ಸೈಡ್ ಬಿ ಬಿಡುಗಡೆ ಸಮಯದಲ್ಲೂ ರಶ್ಮಿಕಾ ಮತ್ತು ರಕ್ಷಿತ್ ರಿಲೇಶನ್‌ಶಿಪ್ ಬಗ್ಗೆ ಪ್ರಶ್ನೆಗಳು ಬಂದಿದ್ದವು. ಇದಕ್ಕೆ ರಕ್ಷಿತ್ ತಾವಿಬ್ಬರೂ ಈಗಲೂ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ.
BBK10: ಬಿಗ್ ಬಾಸ್ ಮನೆಯಲ್ಲೇ ಹೆಂಡ್ತಿ ಹುಟ್ಟಿದಬ್ಬ ಆಚರಿಸಿದ ವಿನಯ್ ಗೌಡ!
ರಕ್ಷಿತ್ ಶೆಟ್ಟಿ ಇದೀಗ ನಟಿಸಿರುವ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾವನ್ನು ಪರ್ಸನಲ್ ಆಗಿ ಅವರಿಗೆ ಕನೆಕ್ಟ್ ಮಾಡುವ ಪ್ರಯತ್ನವನ್ನೂ ಅವರ ಫ್ಯಾನ್ಸ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಹೇಳಿರುವುದು ರಕ್ಷಿತ್ ಅವರ ಕಥೆಯನ್ನೇ ಅಂತ ಬಹಳ ಮಂದಿ ಸಿನಿಮಾ (cinema) ನೋಡಿದವರು ಹೇಳಿದ್ದಾರೆ. ಇದೊಂದು ಭಗ್ನ ಪ್ರೇಮಿಗಳ ಭಗವದ್ಗೀತೆ ಅನ್ನೋ ಮಾತೂ ವ್ಯಕ್ತವಾಗಿದೆ. ಈ ಕಾಲದ ಒಬ್ಬ ಆದರ್ಶ ಪ್ರೇಮಿ (lover) ಹೇಗಿರಬಲ್ಲ ಅನ್ನೋದನ್ನು 'ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ'ಯಲ್ಲಿ ಕಟ್ಟಿಕೊಟ್ಟಿದ್ದಾರೆ ಹೇಮಂತ್ ರಾವ್. ಮನು ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ಯಾವ ಲೆವೆಲ್‌ಗೆ ಇಂಟೆನ್ಸ್ ಆಗಿ ನಟಿಸಿದ್ದಾರೆ ಅಂದರೆ ಜನ ಎಲ್ಲ ಅವರಿಗೆ ಈ ಅನುಭವ ಇರುವ ಕಾರಣವೇ ಅವರು ಅಷ್ಟು ಇಂಟೆನ್ಸ್ ಆಗಿ ನಟಿಸೋಕೆ ಸಾಧ್ಯವಾಯ್ತು ಅಂತಿದ್ದಾರೆ.
ಇದರ ನಡುವೆಯೇ ರಕ್ಷಿತ್ ಶೆಟ್ಟಿ ಮದುವೆ ಆಗ್ತಿದ್ದಾರೆ ಅನ್ನೋ ಸುದ್ದಿ ಓಡಾಡ್ತಿದೆ. ಅವರದು ಅರೇಂಜ್ ಮ್ಯಾರೇಜ್. ಈಗಾಗಲೇ ಪ್ರೇಮದಲ್ಲಿ ಸೋತಿರುವ ಕಾರಣ ಅವರು ಮತ್ತೆ ಲವ್ ಮ್ಯಾರೇಜ್ (love marriage) ಆಗೋ ಸಾಧ್ಯತೆಯನ್ನು ಕೈ ಬಿಟ್ಟಿದ್ದಾರೆ. ಬದಲಾಗಿ ದೊಡ್ಡವರು ನೋಡಿರುವ ಹುಡುಗಿಯನ್ನು ಮದುವೆ (wedding) ಆಗ್ತಿದ್ದಾರೆ ಅನ್ನೋದು ಈಗ ಆಪ್ತ ವಲಯದಲ್ಲಿ ಹರಿದಾಡ್ತಿರೋ ಸುದ್ದಿ. ಹಳೆಯ ನೋವಿಂದ ಹೊರಬಂದು ರಕ್ಷಿತ್ ಮದುವೆ ಆಗ್ತಾರ? ಈಗಾಗಲೇ ನಲವತ್ತು ವರ್ಷ ವಯಸ್ಸಾಗಿರುವ ರಕ್ಷಿತ್ ಇನ್ನೆಷ್ಟು ಕಾಲ ಅವಿವಾಹಿತರಾಗಿರುತ್ತಾರೆ ಅನ್ನೋ ಪ್ರಶ್ನೆ ಫ್ಯಾನ್ಸ್‌ಗಳದ್ದು. ಏನೇ ಆದರೂ ಸಿಂಪಲ್ ಸ್ಟಾರ್‌ಗೆ ಒಂದೊಳ್ಳೆ ಹುಡುಗಿ ಸಿಗಲಿ ಅಂತ ಫ್ಯಾನ್ಸ್ ಹಾರೈಸುತ್ತಿದ್ದಾರೆ.
ಜಗಪ್ಪ ಮದುವೆಯಾಗ್ತಿದ್ದಂತೆ ಮತ್ತೆ ಹೊಕ್ಕಳಿನ ವಂಕಿ ಪ್ರದರ್ಶಿಸಿದ ನಾಟ್ಯರಾಣಿ ಲಾಸ್ಯ!