ಗುರು-ಪ್ರಜ್ವಲ್ ಕಾಂಬಿನೇಷನ್‌ ಕರಾವಳಿಗೆ ಪ್ರೇಮಿಗಳ ದಿನದಂದು ಬಲಗಾಲಿಟ್ಟು ಬಂದ ಸಂಪದಾ!

Published : Feb 14, 2024, 08:04 PM ISTUpdated : Feb 14, 2024, 08:06 PM IST
ಗುರು-ಪ್ರಜ್ವಲ್ ಕಾಂಬಿನೇಷನ್‌ ಕರಾವಳಿಗೆ ಪ್ರೇಮಿಗಳ ದಿನದಂದು ಬಲಗಾಲಿಟ್ಟು ಬಂದ ಸಂಪದಾ!

ಸಾರಾಂಶ

ಇಂದು ಪ್ರೇಮಿಗಳ ದಿನದ ವಿಶೇಷವಾಗಿ ಕರಾವಳಿ ಸಿನಿಮತಂಡ ನಾಯಕಿ ಯಾರೆಂದು ರಿವೀಲ್ ಮಾಡಿದೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ನಟಿ ಕೆಂಪು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ  ಟೈಟಲ್ ಹೇಳುವ ಹಾಗೆ ಇದು ಪಕ್ಕಾ ಕರಾವಳಿ ಭಾಗದ  ಸಿನಿಮಾ. 

ಸ್ಯಾಂಡಲ್‌ವುಡ್ ಸಿನಿಮಾ 'ಕರಾವಳಿ', ಫಸ್ಟ್ ಲುಕ್ ಮತ್ತು ಟೀಸರ್ ಮೂಲಕ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ. ಗುರುದತ್ ಗಾಣಿಗ ನಿರ್ದೇಶದ ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ 'ಕರಾವಳಿ' ಸಿನಿಮಾದ ಅಪ್‌ಡೇಟ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಸಿನಿಮಾದಿಂದ ನಾಯಕಿ ಯಾರು ಎನ್ನುವ ಮಾಹಿತಿ ಬಹಿರಂಗವಾಗಿದೆ. ಕರಾವಳಿಗೆ ನಾಯಕಿ ಯಾರಾಗಲಿದ್ದಾರೆ? ಕನ್ನಡದವರಾ ಅಥವಾ ಪರಭಾಷೆಯ ನಟಿನಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಆದರೀಗ ಆ ಕುತೂಹಲಕ್ಕೆ ತೆರೆ ಎಳೆದಿದೆ ಸಿನಿಮಾತಂಡ. 

ನಟಿ ಸಂಪದಾ (Sampada)ಕರಾವಳಿ ಸಿನಿಮಾಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆಯಲ್ಲಿ ಮಿಂಚಿದ್ದ ಸಂಪದಾ ಇದೀಗ ಪ್ಜಜ್ವಲ್‌ಗೆ ನಾಯಕಿಯಾಗುವ ಮೂಲಕ ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಕಿರುತೆರೆ ಬಳಿಕ ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳದ ಸಂಪದಾ ಇದೀಗ ಬಹುನಿರೀಕ್ಷೆಯ ಸಿನಿಮಾಗೆ ನಾಯಕಿಯಾಗಿ ಪದಾರ್ಪಣೆ ಮಾಡಿದ್ದಾರೆ. ಅಂದಹಾಗೆ ಸಂಪದಾಗೆ ಇದು  ಮೊದಲ ಸಿನಿಮಾವಲ್ಲ. ಈಗಾಗಲೇ ನಿಖಿಲ್ ಕುಮಾರ್ ನಟನೆಯ ರೈಡರ್ (Raider) ಸಿನಿಮಾದಲ್ಲಿ ಸಂಪದಾ ನಟಿಸಿದ್ದರು. ಇದೀಗ ಕರಾವಳಿ ಕಥೆ ಕೇಳಿ ಇಂಪ್ರೆಸ್ ಆದ ಸಂಪದಾ ಪ್ರಜ್ವಲ್ ಜೊತೆ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. 

ಭಾರತಿಯನ್ನು ಹೆಸರು ಹೇಳಿ ಕರೆಯುತ್ತಿರಲಿಲ್ಲ ವಿಷ್ಣುವರ್ಧನ್; ಮಾಹಿ ಅಂತ ಯಾಕೆ ಕರೀತಿದ್ರು?

ಇಂದು ಪ್ರೇಮಿಗಳ ದಿನದ ವಿಶೇಷವಾಗಿ ಕರಾವಳಿ ಸಿನಿಮತಂಡ ನಾಯಕಿ ಯಾರೆಂದು ರಿವೀಲ್ ಮಾಡಿದೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಸಂಪದಾ ಕೆಂಪು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ  ಟೈಟಲ್ ಹೇಳುವ ಹಾಗೆ ಇದು ಪಕ್ಕಾ ಕರಾವಳಿ ಭಾಗದ  ಸಿನಿಮಾ. ಸಂಪೂರ್ಣ ಬ್ಯಾಕ್ ಡ್ರಾಪ್ ಕರಾವಳಿ ಭಾಗದ್ದೆ ಆಗಿರಲಿದೆ. ಸಂಪದಾ ಕೂಡ ಕರಾವಳಿ ಹುಡುಗಿಯಾಗಿ ಮಿಂಚಲಿದ್ದಾರೆ. 

ಏನಿಲ್ಲ, ನಮ್ಮ ನಡುವೆ ಏನೇನೂ ಇಲ್ಲ; ಡಾ ರಾಜ್-ಡಾ ವಿ‍ಷ್ಣು ಮಧ್ಯೆ ಸ್ಟಾರ್ ವಾರ್ ಸೃಷ್ಟಿಸಿದ್ದು ಯಾರು?

ಕರಾವಳಿ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯೂ ಸದಾನಂದನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಪ್ರಜ್ವಲ್ ನಟನೆಯ 40ನೇ ಸಿನಿಮಾ ಇದಾಗಿದೆ. ಡೈನಾಮಿಕ್ ಪ್ರಿನ್ಸ್ ಈ ಸಿನಿಮಾದಲ್ಲಿ ಇದುವರೆಗೂ ಕಾಣಿಸಿಕೊಳ್ಳದೆ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಸದ್ಯ ಫಸ್ಟ್ ಲುಕ್ ಮತ್ತು ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ  ಕರಾವಳಿ ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭ ಮಾಡಲಿದೆ. ಸಂಪೂರ್ಣ ಚಿತ್ರೀಕಣ ಮಂಗಳೂರು ಸುತ್ತಮುತ್ತ ನಡೆಯಲಿದೆ.

ಸಿದ್ದಾರ್ಥ್ ಮಲ್ಹೋತ್ರಾ ಜತೆಗೇ ಕಿಯಾರಾ ಅಡ್ವಾನಿ ಮದುವೆಯಾಗಿದ್ದು ಯಾಕೆ; ಸೀಕ್ರೆಟ್ ರಿವೀಲ್ ಆಯ್ತು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!