ನಟ ವಿಷ್ಣುವರ್ಧನ್ ಅವರು ತಮ್ಮ ಹೆಂಡತಿ ಭಾರತಿಯವರನ್ನು ಒಮ್ಮೆ ಕೂಡ ಹೆಸರಿಟ್ಟು ಕರೆದಿಲ್ಲವಂತೆ. ಮನೆಯಲ್ಲಿ ಕೂಡ ಅವರನ್ನು ಏಕವಚನದಲ್ಲಿ ಸಂಭೋದಿಸುತ್ತಿರಲಿಲ್ಲವಂತೆ. ಭಾರತಿಯವರನ್ನು 'ಮಾಹಿ' ಎಂದೇ ವಿಷ್ಣವರ್ಧನ್ ಕರೆಯುತ್ತಿದ್ದರು ಎನ್ನಲಾಗಿದೆ.
ಸ್ಯಾಂಡಲ್‌ವುಡ್ ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ (Vishnuvardhan) ಹಾಗು ನಟಿ ಭಾರತಿಯವರದು (Bharathi) ಆದರ್ಶ ದಾಂಪತ್ಯ ಎಂಬುದು ಹೆಚ್ಚಿನವರಿಗೆ ಗೊತ್ತಿದೆ. 18 ಸೆಪ್ಟೆಂಬರ್ 1950ರಂದು ಮೈಸೂರಿನಲ್ಲಿ ಜನಿಸಿದ್ದ ಸಂಪತ್ ಕುಮಾರ್ ಸಿನಿಮಾ ನಟನೆಗೆ ಬಂದ ಮೇಲೆ ವಿಷ್ಣುವರ್ಧನ್ ಎಂಬ ಹೆಸರಿನಿಂದ ಪ್ರಸಿದ್ಧರಾದರು. ಪುಟ್ಟಣ್ಣ ಕಣಗಾಲ್ ನಿರ್ದೇಶನ ಹಾಗು ವಿಷ್ಣುವರ್ಧನ್ ನಾಯಕತ್ವದಲ್ಲಿ 'ನಾಗರಹಾವು' ಚಿತ್ರವು (Nagarahavu Movie) 29 December 1972ರಂದು ಬಿಡುಗಡೆಯಾಯಿತು. ಈ ಚಿತ್ರವು ಸೂಪರ್ ಹಿಟ್ ಆಗುವ ಮೂಲಕ ಕನ್ನಡ ಸಿನಿಮಾರಂಗಕ್ಕೆ ಮೇರು ನಟರೊಬ್ಬರ ಆಗಮನವಾಯಿತು.
ನಟ ವಿಷ್ಣುವರ್ಧವ್ ಅವರು ನಟಿ ಭಾರತಿಯವರನ್ನು 17 ಫೆಬ್ರವರಿ 1975ರಂದು ವಿವಾಹವಾದರು. ಆ ಸಮಯದಲ್ಲಿ ಭಾರತಿ ದಕ್ಷಿಣ ಭಾರತದ ಖ್ಯಾತ ಸ್ಟಾರ್ ನಟಿಯಾಗಿದ್ದರು. ಅಷ್ಟರಲ್ಲಾಗಲೇ ಅವರು 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಮದುವೆ ಬಳಿಕ ನಟಿ ಭಾರತಿಯವರು ಸಂಸಾರದ ಕಡೆ ಹೆಚ್ಚಿನ ಗಮನ ನೀಡಿದರು. ನಟ ವಿಷ್ಣುವರ್ಧನ್ ಸಿನಿಮಾ ನಟರಾಗಿ ಉತ್ತುಂಗಕ್ಕೆ ಏರುತ್ತ ಹೋಗಿ ಕನ್ನಡದ ಜನಪ್ರಿಯ ಸ್ಟಾರ್ ನಟರಾಗಿ ಮೆರೆಯತೊಡಗಿದ್ದರು. ಭಾರತಿ-ವಿಷ್ಣುವರ್ಧನ್ ಆದರ್ಶ ದಾಂಪತ್ಯ ಎಲ್ಲರಿಗೂ ತಿಳಿದಿತ್ತು.
ನಟ ವಿಷ್ಣುವರ್ಧನ್ ಅವರು ತಮ್ಮ ಹೆಂಡತಿ ಭಾರತಿಯವರನ್ನು ಒಮ್ಮೆ ಕೂಡ ಹೆಸರಿಟ್ಟು ಕರೆದಿಲ್ಲವಂತೆ. ಮನೆಯಲ್ಲಿ ಕೂಡ ಅವರನ್ನು ಏಕವಚನದಲ್ಲಿ ಸಂಭೋದಿಸುತ್ತಿರಲಿಲ್ಲವಂತೆ. ಭಾರತಿಯವರನ್ನು 'ಮಾಹಿ' ಎಂದೇ ವಿಷ್ಣವರ್ಧನ್ ಕರೆಯುತ್ತಿದ್ದರು ಎನ್ನಲಾಗಿದೆ. ಸಾಯುವವರೆಗೂ ಅವರು ತಮ್ಮ ಪತ್ನಿಯ ಹೆಸರು ಹೇಳದೇ ಮಾಹಿ ಎಂದು ಕರೆಯುತ್ತಿದ್ದರು ಎಂಬುದು ನಿಜವಾಗಿಯೂ ಗಮನಿಸಬೇಕಾದ ಸಂಗತಿ. ಮಾಹಿ ಎಂದರೆ ಭೂಮಿದೇವತೆ, ಭೂಮಿ ತಾಯಿ ಎಂದರ್ಥ.
ಹೊಂದಿಕೆ ಇಲ್ಲ ಅಂದರೆ ಬದುಕಬಹುದು, ಹೊಂದಾಣಿಕೆ ಇಲ್ಲ ಅಂದ್ರೆ ಕಷ್ಟ; For REGNಗೆ ರೆಡಿಯಾಗ್ರಿ!
ವಿಷ್ಣುವರ್ಧನ್-ಭಾರತಿ ದಾಂಪತ್ಯದ ಇನ್ನೋ ಒಂದು ಸಂಗತಿ ತಿಳಿದರೆ ಅಚ್ಚರಿಯಾಗುವುದು ಖಂಡಿತ. ಮದುವೆ ಸಮಯದಲ್ಲಿ ವಿಷ್ಣುವರ್ಧನ್ ಅವರು ಭಾರತಿಗೆ 75 ರೂಪಾಯಿಯ ಒಂದು ಸೀರೆ ಕೊಡಿಸಿದ್ದರಂತೆ. ಅದನ್ನು ಭಾರತಿಯವರು ವಿಷ್ಣುವರ್ಧನ್ ಸಾಯುವವರೆಗೂ ಜೋಪಾನವಾಗಿ ಇಟ್ಟುಕೊಂಡಿದ್ದರಂತೆ. ಅದು ವಿಷ್ಣುವರ್ಧನ್ ಅವರಿಗೂ ತಿಳಿದಿದ್ದು, ಆ ಬಗ್ಗೆ ಅವರಿಗೂ ಅಚ್ಚರಿ ಹಾಗೂ ಹೆಮ್ಮೆ ಉಂಟಾಗಿತ್ತು ಎನ್ನಲಾಗಿದೆ. ಅಂದಿನ ಕಾಲದ 75 ರೂಪಾಯಿ ಸೀರೆ ಎಂದರೆ ಇಂದಿನ ಬೆಲೆಯಲ್ಲಿ ಅದು 10 ಸಾವಿರ ಮೀರುವುದು ಖಂಡಿತ.
ಏನಿಲ್ಲ ಏನಿಲ್ಲ, ರಾಜ್-ವಿಷ್ಣು ಮಧ್ಯೆ ಏನೇನೂ ಇರಲಿಲ್ಲ; ಆದ್ರೂ ಯಾಕೆ ಸ್ಟಾರ್ ವಾರ್ ಸೃಷ್ಟಿಸಲಾಯ್ತು!
ನಟ ವಿಷ್ಣುವರ್ಧನ್ ಅವರು 30 ಡಿಸೆಂಬರ್ 2009 ರಂದು (30 December 2009) ತಮ್ಮ 59ನೇ ವಯಸ್ಸಿನಲ್ಲಿ ತಮ್ಮ ಹುಟ್ಟೂರಾದ ಮೈಸೂರಿನಲ್ಲೇ ನಿಧನರಾದರು. ವಿಷ್ಣುವರ್ಧನ್-ಭಾರತಿ ದಂಪತಿಗಳು ಚಂದನಾ ಹಾಗು ಕೀರ್ತಿ ಎಂಬ ಇಬ್ಬರು ಹೆಣ್ಣುಮಕ್ಕಳನ್ನು ದತ್ತು ತೆಗೆದುಕೊಂಡು ಸಾಕಿ ಅವರಿಗೆ ಮದುವೆಯನ್ನೂ ಮಾಡಿದ್ದಾರೆ. ಕೀರ್ತಿ ಅವರು ನಟ ಅನುರುಧ್ ಜತ್ಕರ್ ಅವರನ್ನು ಮದುವೆಯಾಗಿದ್ದಾರೆ. ಭಾರತಿ ವಿಷ್ಣುವರ್ಧನ್ ಅವರು ಗಂಡ ವಿಷ್ಣುವರ್ಧನ್ ಸವಿನೆನಪಿನಲ್ಲಿ ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಳ್ಳುತ್ತ ಬದುಕು ನಡಸುತ್ತಿದ್ದಾರೆ.
ಸಿದ್ದಾರ್ಥ್ ಮಲ್ಹೋತ್ರಾ ಜತೆಗೇ ಕಿಯಾರಾ ಅಡ್ವಾನಿ ಮದುವೆಯಾಗಿದ್ದು ಯಾಕೆ; ಸೀಕ್ರೆಟ್ ರಿವೀಲ್ ಆಯ್ತು