ಮಿ.ಭೀಮರಾವ್‌ ಟೈಟಲ್‌ ಬಿಡುಗಡೆ ಮಾಡಿದ ನಟ ಚೇತನ್

By Govindaraj S  |  First Published Apr 15, 2022, 12:51 PM IST

ಬಹುತೇಕ ಹೊಸ ಪ್ರತಿಭೆಗಳೇ ಸೇರಿಕೊಂಡು ‘ಮಿ.ಭೀಮರಾವ್‌’ ಹೆಸರಿನಲ್ಲೊಂದು ಸಿನಿಮಾ ಶುರು ಮಾಡಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಟೈಟಲ್‌ ಬಿಡುಗಡೆ ಮಾಡಲಾಯಿತು. ನಟ ಚೇತನ್‌ ಆಗಮಿಸಿ ಟೈಟಲ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. 


ಬಹುತೇಕ ಹೊಸ ಪ್ರತಿಭೆಗಳೇ ಸೇರಿಕೊಂಡು ‘ಮಿ.ಭೀಮರಾವ್‌’ (Mister Bheem Rao) ಹೆಸರಿನಲ್ಲೊಂದು ಸಿನಿಮಾ ಶುರು ಮಾಡಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಟೈಟಲ್‌ (Title) ಬಿಡುಗಡೆ ಮಾಡಲಾಯಿತು. ನಟ ಚೇತನ್‌ (Chetan Kumar) ಆಗಮಿಸಿ ಟೈಟಲ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈಗಾಗಲೇ ‘ಯು ಟರ್ನ್‌ 2’ (U Turn 2) ಹೆಸರಿನ ಸಿನಿಮಾ ನಿರ್ದೇಶಿಸಿರುವ ಚಂದ್ರು ಓಬಯ್ಯ (Chandru Obaiah) ಅವರ ಎರಡನೇ ಸಿನಿಮಾ ಈ ‘ಮಿ.ಭೀಮರಾವ್‌’. ಕನ್ನಡ, ತೆಲುಗು, ತಮಿಳು ಸೇರಿ 4 ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವಿದು. ಹಾಡಿನ ಮೂಲಕ ಟೈಟಲ್‌ ಬಿಡುಗಡೆ ನಡೆಯಿತು. ‘ನನ್ನ ಮೊದಲ ಸಿನಿಮಾ ಬಿಡುಗಡೆಗೆ ರೆಡಿ ಇದೆ. ನಿಲೇಶ್‌ ಕುಮಾರ್‌ ಅವರು ಬಂದು ಅಂಬೇಡ್ಕರ್‌ ಕತೆ ಕೇಳಿದರು. 

ಇದು ಬಾಬಾ ಸಾಹೇಬ್‌ ಅಂಬೇಡ್ಕರ್‌ ಜೀವನ ಕತೆ ಅಲ್ಲ. ಅವರ ತತ್ವ, ಆದರ್ಶಗಳನ್ನು ಚಿತ್ರದಲ್ಲಿ ನೋಡಬಹುದು. ಜೂನ್‌ ತಿಂಗಳಲ್ಲಿ ಶೂಟಿಂಗ್‌ ಆರಂಭವಾಗಲಿದೆ. ಒಂದು ಒಳ್ಳೆಯ ಕಮರ್ಷಿಯಲ್‌ ಮೇಕಿಂಗ್‌ ಸಿನಿಮಾ ಇದಾಗಲಿದೆ ಎನ್ನುವ ನಂಬಿಕೆ ಇದೆ’ ಎಂದರು ಚಂದ್ರು ಓಬಯ್ಯ. ಸಿಂಪಲ್‌ ಸುನಿ ನಿರ್ದೇಶನದ ‘ಗತವೈಭವ’ ಚಿತ್ರದ ನಾಯಕ ದುಶ್ಯಂತ್‌ ಹಾಗೂ ದಲಿತ ಮುಖಂಡ ಮೂರ್ತಿ ಮುಖ್ಯ ಅತಿಥಿಗಳಾಗಿ ಹಾಜರಿದ್ದು, ಚಿತ್ರದ ಕುರಿತು ಮಾತನಾಡಿದರು. ‘20ನೇ ಶತಮಾನದ ಮಹಾಪುರುಷ ಅಂಬೇಡ್ಕರ್‌ ಅವರು. ದಲಿತರ ಪರವಾಗಿ ಹೋರಾಟ ನಡೆಸಿದವರು. ನಿರ್ದೇಶಕ ಚಂದ್ರು ಒಂದಷ್ಟುವಿಷಯಗಳನ್ನು ಈ ಸಿನಿಮಾದಲ್ಲಿ ತರಬೇಕಿದೆ. 

Tap to resize

Latest Videos

undefined

Agnivarsha Movie: ವೃದ್ಧ ಕಿಟ್ಟಯ್ಯನ ಪಾತ್ರಕ್ಕೆ ಬಣ್ಣ ಹಚ್ಚಿದ ರಮೇಶ್‌ ಭಟ್‌

ಕಾರ್ಮಿಕರು, ಮಾಲೀಕರ ನಡುವಿನ ಅಂತರವನ್ನು ತೊಡೆದು ಹಾಕಿದವರು ಸಂವಿಧಾನ ಶಿಲ್ಪಿ ಡಾ ಬಿ ಆರ್‌ ಅಂಬೇಡ್ಕರ್‌ ಅವರು. ಅಂಥವರ ಹೆಸರಿನಲ್ಲಿ ಬರುತ್ತಿರುವ ಈ ಸಿನಿಮಾ ಎಲ್ಲರಿಗೂ ತಲುಪಲಿ’ ಎಂದು ನಟ ಚೇತನ್‌ ಹೇಳಿದರು. ಚಿತ್ರದ ತಾರಾಗಣ ಸದ್ಯದಲ್ಲೇ ಆಯ್ಕೆ ಆಗಲಿದೆ. ಆನಂದ್ ಸಂಪಂಗಿ ಅವರ ನಿರ್ಮಾಣದ 'ಯು ಟರ್ನ್ 2' ಚಿತ್ರದಲ್ಲಿ ನಿರ್ದೇಶಕ ಚಂದ್ರು ಓಬಯ್ಯ ಅವರೇ ನಾಯಕರು. ತಿಥಿ ಖ್ಯಾತಿಯ ಪೂಜಾ, ಸ್ನೇಹ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಹಿರಿಯನಟ, ನಿರ್ಮಾಪಕ ಕರಿಸುಬ್ಬು, ಬಿಗ್‌ಬಾಸ್ ಮಂಜು ಪಾವಗಡ, ರಘು ರಾಮನಕೊಪ್ಪ ಮತ್ತು ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ನಿರ್ಮಾಪಕ ಆನಂದ್ ಸಂಪಂಗಿ ಅವರು ಒಬ್ಬ ರಾಜಕಾರಣಿಯ ಪಾತ್ರ ಮಾಡಿದ್ದಾರೆ.

ತಾಪ್ಸಿ ಪನ್ನು ಚಿತ್ರದಲ್ಲಿ ರಿಷಬ್‌ ಶೆಟ್ಟಿ: ತಾಪ್ಸಿ ಪನ್ನು (Taapsee Pannu) ನಟನೆಯ ‘ಮಿಷನ್‌ ಇಂಪಾಸಿಬಲ್‌’ (Mission Impossible) ತೆಲುಗು ಚಿತ್ರದ ಅತಿಥಿ ಪಾತ್ರದಲ್ಲಿ ರಿಷಬ್‌ ಶೆಟ್ಟಿ (Rishab Shetty) ನಟಿಸಿದ್ದಾರೆ. ಅವರದು ಇಲ್ಲಿ ಡಾನ್‌ ಪಾತ್ರ. ಚಿತ್ರದ ಚಿತ್ರೀಕರಣ ಆಗಿರುವುದು ಬೆಂಗಳೂರಿನಲ್ಲಿ. ಸದ್ಯ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ವೈರಲ್‌ (Viral) ಆಗಿದೆ. ಈ ಕುರಿತು ಮಾತನಾಡಿದ ರಿಷಬ್‌ ಶೆಟ್ಟಿ, ‘ನಿರ್ದೇಶಕ ಸ್ವರೂಪ್‌ ನನ್ನ ಸ್ನೇಹಿತ. ತೆಲುಗಿನವರಾದರೂ ಇದ್ದಿದ್ದು ಬೆಂಗಳೂರಿನಲ್ಲಿ. 

Rishab Shetty: ತುಳುನಾಡ ಸಂಸ್ಕೃತಿಯ 'ಕಾಂತಾರ' ಟೀಸರ್‌ 15 ಲಕ್ಷ ವೀಕ್ಷಣೆ

ಅವರ ಈ ಹಿಂದಿನ ಸಿನಿಮಾ ಏಜೆಂಟ್‌ ಶ್ರೀನಿವಾಸ್‌ ಆತ್ರೇಯ ಚಿತ್ರ ನನಗೆ ತುಂಬಾ ಇಷ್ಟವಾಗಿತ್ತು. ಈಗ ಅವರು ಅತಿಥಿ ಪಾತ್ರದಲ್ಲಿ ನಟಿಸಬೇಕೆಂದು ಕೇಳಿಕೊಂಡರು. ಬೆಂಗಳೂರಿನಲ್ಲೇ ನನ್ನ ಪಾತ್ರದ ಚಿತ್ರೀಕರಣ ಮಾಡಲಾಗಿದೆ. ನಾಲ್ಕು ಜನ ಹುಡುಗರ ಮೇಲೆ ಸಾಗುವ ಕತೆ. ಟ್ರೇಲರ್‌ನಲ್ಲಿ ಕೆಜಿಎಫ್‌ ಚಿತ್ರವನ್ನು ನೆನಪಿಸುವ ಡೈಲಾಗ್‌ ಇರುವುದು ಮನರಂಜನೆಗಾಗಿಯೇ. ಇಡೀ ಸಿನಿಮಾ ತುಂಬಾ ಚೆನ್ನಾಗಿದೆ’ ಎನ್ನುತ್ತಾರೆ. ನಾಲ್ಕು ಜನ ಹುಡುಗರು ದಾವುದ್‌ ಇಬ್ರಾಹಿಂನನ್ನು ಹುಡುಕುವ ಕತೆ ಈ ಚಿತ್ರದಲ್ಲಿದೆ.

click me!