Agnivarsha Movie: ವೃದ್ಧ ಕಿಟ್ಟಯ್ಯನ ಪಾತ್ರಕ್ಕೆ ಬಣ್ಣ ಹಚ್ಚಿದ ರಮೇಶ್‌ ಭಟ್‌

Published : Apr 15, 2022, 11:33 AM IST
Agnivarsha Movie: ವೃದ್ಧ ಕಿಟ್ಟಯ್ಯನ ಪಾತ್ರಕ್ಕೆ ಬಣ್ಣ ಹಚ್ಚಿದ ರಮೇಶ್‌ ಭಟ್‌

ಸಾರಾಂಶ

ಮಲೆನಾಡಿನಲ್ಲಿ ವಾಸಿಸುವ ವೃದ್ದರ ಬದುಕು, ಭಾವನೆಗಳ ಸಂಘರ್ಷ, ಮಾನವೀಯ ಸಂಬಂಧಗಳು ಹಾಗೂ ಒಂಟಿ ಮಹಿಳೆಯರ ಬದುಕು, ಬವಣೆಯನ್ನು ಕುರಿತ ಕಥೆ ಒಳಗೊಂಡ ನಿಡಸಾಲೆ ಪುಟ್ಟಸ್ವಾಮಯ್ಯ ನಿರ್ಮಾಣದ, ಅವರ ಮಗ ವಿಜಯ್‌ ನಿರ್ದೇಶನದ ‘ಅಗ್ನಿವರ್ಷ’ ಚಿತ್ರದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು.

ಮಲೆನಾಡಿನಲ್ಲಿ ವಾಸಿಸುವ ವೃದ್ದರ ಬದುಕು, ಭಾವನೆಗಳ ಸಂಘರ್ಷ, ಮಾನವೀಯ ಸಂಬಂಧಗಳು ಹಾಗೂ ಒಂಟಿ ಮಹಿಳೆಯರ ಬದುಕು, ಬವಣೆಯನ್ನು ಕುರಿತ ಕಥೆ ಒಳಗೊಂಡ ನಿಡಸಾಲೆ ಪುಟ್ಟಸ್ವಾಮಯ್ಯ (Nidasale Puttaswamaiah) ನಿರ್ಮಾಣದ, ಅವರ ಮಗ ವಿಜಯ್‌ ನಿಡಸಾಲೆ (Vijay Nidasale) ನಿರ್ದೇಶನದ ‘ಅಗ್ನಿವರ್ಷ’ (Agnivarsha) ಚಿತ್ರದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು. ಈ ವೇಳೆ ಮಾತನಾಡಿದ ನಿಡಸಾಲೆ ಪುಟ್ಟಸ್ವಾಮಯ್ಯ, ‘ಚಿತ್ರದಲ್ಲಿ ಹಿರಿಯ ನಟ ಶಿವರಾಮ್‌ (Shivaram) ನಟಿಸಬೇಕಿತ್ತು. ದುರಾದೃಷ್ಟವಶಾತ್‌ ಅದು ಸಾಧ್ಯವಾಗಿಲ್ಲ. ಅವರು ನಿರ್ವಹಿಸಬೇಕಿದ್ದ ವೃದ್ಧ ಕಿಟ್ಟಯ್ಯನ ಪಾತ್ರ ಇದೀಗ ರಮೇಶ್‌ ಭಟ್‌ (Ramesh Bhat) ಮಾಡುತ್ತಿದ್ದಾರೆ’ ಎಂದರು.

ರಮೇಶ್‌ ಭಟ್‌ ಮಾತನಾಡಿ, ‘ನಾನು ಬಹಳ ಕಾಲದಿಂದ ಬಾರ್‌ ನಟನಾಗಿಯೇ ಗುರುತಿಸಿಕೊಂಡಿದ್ದೇನೆ. ಯಾರೋ ಮಾಡಬೇಕಾದ ಪಾತ್ರ ನನಗೆ ಬರುತ್ತದೆ. ನನಗೆ ಹೆಸರು ತಂದುಕೊಟ್ಟಕ್ರೇಜಿ ಕರ್ನಲ್‌ ಪಾತ್ರವೂ ಹಾಗೇ ಬಂದದ್ದು’ ಎಂದರು.  ಈ ಕುರಿತು ಮಾತನಾಡಿದ ನಿರ್ಮಾಪಕ ಪುಟ್ಟಸ್ವಾಮಯ್ಯ ಕಳೆದ ಡಿಸೆಂಬರ್‌ನಲ್ಲೇ ಎಲ್ಲಾ ಸಿದ್ದತೆ ಮಾಡಿಕೊಂಡು ಚಿತ್ರೀಕರಣಕ್ಕೆ ಹೋಗಬೇಕೆಂದು ತೀರ್ಮಾನಿಸಿದ್ದೆವು. ಕಿಟ್ಟಯ್ಯನ ಪಾತ್ರವನ್ನು ಹಿರಿಯನಟ ಶಿವರಾಮಣ್ಣ ಅವರು ಮಾಡಬೇಕಿತ್ತು, ಇನ್ನೇನು ಎಲ್ಲಾ ರೆಡಿ ಮಾಡಿಕೊಂಡು ಶೂಟಿಂಗ್ ಹೊರಡಬೇಕೆನ್ನುವಷ್ಟರಲ್ಲಿ ಅವರ ಪರಿಸ್ಥಿತಿ ಹೀಗಾಯಿತು, ಇದು ನಮಗೆ ದೊಡ್ಡ ಆಘಾತ ನೀಡಿತು.

ರಾಘವೇಂದ್ರ ರಾಜ್‌ಕುಮಾರ್‌-ಶ್ರುತಿ ನಟನೆಯ ಹೊಸ ಸಿನಿಮಾ '13'

ಆದರೂ ಸುಧಾರಿಸಿಕೊಂಡು ಆ ಪಾತ್ರವನ್ನು ಯಾರು ತುಂಬಬಹುದು ಎಂದು ಯೋಚಿಸಿದಾಗ ರಮೇಶ್‌ ಭಟ್ ಅವರು ಸೂಕ್ತ ಎನಿಸಿತು. ಅವರನ್ನು ಒಪ್ಪಿಸಿ ಚಿತ್ರೀಕರಣ ನಡೆಸಿದೆವು. ಶಿವಮೊಗ್ಗದ ಹೆಗ್ಗೋಡಿನ ಅನೇಕ ಕಲಾವಿದರು ನಮ್ಮ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕಡಿಮೆ ವೆಚ್ಚದಲ್ಲಿ ಜನರಿಗೆ ಉತ್ತಮ ಸಂದೇಶ ತಲುಪಿಸಬೇಕು ಎನ್ನುವ ಉದ್ದೇಶದಿಂದ ಸರ್ಕಾರಿ ವೃತಿಯಿಂದ ನಿವೃತ್ತನಾದ ಮೇಲೆ ಚಿತ್ರನಿರ್ಮಾಣ ಆರಂಭಿಸಿ, ಈಗ ಐದನೇ ಚಿತ್ರ ಮಾಡಿದ್ದೇನೆ ಎಂದು ಹೇಳಿದರು. ನಿರ್ಮಾಪಕರ ಪುತ್ರರೂ ಆದ ವಿಜಯ್ ನಿಡಸಾಲೆ ಮಾತನಾಡಿ ನಮ್ಮ ಸಂಸ್ಥೆಯ ನಾಲ್ಕೂ ಚಿತ್ರಗಳಿಗೆ ತೆರೆಹಿಂದೆ ಕೆಲಸ ಮಾಡಿದ್ದೆ, ಒಂದಷ್ಟು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿದ್ದೇನೆ. 

ಅಗ್ನಿವರ್ಷ ಭಾವನೆಗಳ ಸಂಘರ್ಷ ಎನ್ನಬಹುದು. ನಮ್ಮ ಸಿನಿಮಾನ ಜನರಿಗೆ ಮುಟ್ಟಿಸಲು ನಿಮ್ಮ ಸಹಕಾರ ಬೇಕು ಎಂದು ಮಾದ್ಯಮದವರಲ್ಲಿ ಕೇಳಿಕೊಂಡರು. ಸಾಹಿತಿ ದೊಡ್ಡರಂಗೇಗೌಡರು ಮಾತನಾಡಿ ಈ ಸಿನಿಮಾದಲ್ಲಿ ನಾನೇನೂ ಕೆಲಸ ಮಾಡಿಲ್ಲ, ಪುಟ್ಟಸ್ವಾಮಯ್ಯ ಅವರು ನನಗೆ ಬಹಳ ಆತ್ಮೀಯರು. ಹಾಗಾಗಿ ಬಂದೆ. ನಿಡಸಾಲೆ ಅವರು ಅದ್ಭುತ ನಟ, ನಿರ್ಮಾಪಕ. ಕಲಾತ್ಮಕ ಚಿತ್ರಗಳನ್ನು ಮಾಡುತ್ತ ಬಂದವರು ಎಂದರು. ಪ್ರವೀಣ್ ಗೋಡ್ಖಂಡಿ ಅವರ ಸಂಗೀತ ಸಂಯೋಜನೆ, ಶಿವಕುಮಾರ್ ಅಂಬ್ಲಿ ಅವರ ಕ್ಯಾಮೆರಾ ವರ್ಕ್ ಈ ಚಿತ್ರಕ್ಕಿದೆ. ಗಾರ್ಗಿ ಕಥೆ, ಸಂಭಾಷಣೆ ಚಿತ್ರಕ್ಕಿದೆ. ನಿರ್ದೇಶಕ ವಿಜಯ್‌, ನಿರ್ಮಾಪಕ ಭಾ ಮ ಹರೀಶ್‌, ನಟ ಕುಮಾರ್‌ ಹಾಜರಿದ್ದರು.

Rishab Shetty: ತುಳುನಾಡ ಸಂಸ್ಕೃತಿಯ 'ಕಾಂತಾರ' ಟೀಸರ್‌ 15 ಲಕ್ಷ ವೀಕ್ಷಣೆ

ನಾಡಗೀತೆ ಆಲ್ಬಂ ರೂಪಿಸಿದ ಮಹೇಂದ್ರ ಮುನ್ನೋತ್‌: ಉದ್ಯಮಿ ಮಹೇಂದ್ರ ಮುನ್ನೋತ್‌ ನಾಡಗೀತೆಯನ್ನು ಆಲ್ಬಂ ರೂಪದಲ್ಲಿ ನಿರ್ಮಿಸಿದ್ದಾರೆ. ಅವರು ರಾಷ್ಟ್ರಕವಿ ಕುವೆಂಪು ರಚನೆಯ ನಾಡಗೀತೆಯ ಆಲ್ಬಂಗೆ ತೆರೆ ಮೇಲೆ ಹೆಜ್ಜೆ ಕೂಡ ಹಾಕಿರುವುದು ವಿಶೇಷ. ಬಿ ಪಿ ಹರಿಹರನ್‌ ಈ ಹಾಡಿನ ನಿರ್ದೇಶನ ಮಾಡಿದ್ದು, ವಿಜಯಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಪವನ್‌ ನೃತ್ಯ ಹಾಗೂ ಕಲಾನಿರ್ದೇಶನ ಮಾಡಿದ್ದಾರೆ. ‘ನಾಡಗೀತೆ ಮೊಟಕುಗೊಳಿಸಿರುವುದು ನೋವುಂಟು ಮಾಡಿತು. ನಾಡಗೀತೆ ಕಡಿತ ಮಾಡಿರುವುದು ಸರಿಯಲ್ಲ ಎಂದು ನನ್ನ ವಿರೋಧ ವ್ಯಕ್ತಪಡಿಸುವ ಸಲುವಾಗಿ ನಾಡಗೀತೆಯ ಪೂರ್ತಿ ಚಿತ್ರೀಕರಣ ಮಾಡಿ ಯೂಟ್ಯೂಬ್‌ಗಳಲ್ಲಿ ಬಿಡುಗಡೆ ಮಾಡುವ ಉದ್ದೇಶದಿಂದ ನಾಡಗೀತೆ ಆಲ್ಬಂ ನಿರ್ಮಿಸಿದ್ದೇನೆ’ ಎಂದು ಮಹೇಂದ್ರ ಮುನ್ನೋತ್‌ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್
ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!