ನಟ ಅಜಯ್ ರಾವ್ ಜೀವನದಲ್ಲಿ ಬಿರುಕು; ಡಿವೋರ್ಸ್‌ ಸುದ್ದಿಗೆ ಸ್ಪಷ್ಟನೆ ಕೊಟ್ಟ 'ಕೃಷ್ಣ'

Published : Apr 04, 2025, 04:44 PM ISTUpdated : Apr 04, 2025, 04:55 PM IST
ನಟ ಅಜಯ್ ರಾವ್ ಜೀವನದಲ್ಲಿ ಬಿರುಕು; ಡಿವೋರ್ಸ್‌ ಸುದ್ದಿಗೆ ಸ್ಪಷ್ಟನೆ ಕೊಟ್ಟ 'ಕೃಷ್ಣ'

ಸಾರಾಂಶ

ಕೃಷ್ಣ ಅಜಯ್ ರಾವ್ ನಟಿಸಿ ನಿರ್ಮಿಸಿರುವ ಯುದ್ಧಕಾಂಡ ಚಾಪ್ಟರ್ 2 ಬಿಡುಗಡೆಗೆ ಸಿದ್ಧವಾಗಿದೆ. ಕೆವಿಎನ್ ಸಂಸ್ಥೆ ಚಿತ್ರ ಬಿಡುಗಡೆ ಜವಾಬ್ದಾರಿ ವಹಿಸಿಕೊಂಡಿದೆ. ಯಶ್ ಸಹಾಯ ಮಾಡಿದ್ದಾರೆ. ತಾನು ಬಹಳ ಸಾಲ ಮಾಡಿದ್ದು, ಕಲಾವಿದನಾಗಬೇಕೆಂಬ ಆಸೆಯಿಂದ ಬಂದೆ. ದಾಂಪತ್ಯ ಜೀವನದ ಬಗ್ಗೆ ಹಬ್ಬಿರುವ ಗಾಸಿಪ್‌ಗಳಿಗೆ ಅಜಯ್ ಸ್ಪಷ್ಟನೆ ನೀಡಿದ್ದಾರೆ.

ಕೃಷ್ಣ ಅಜಯ್ ರಾವ್ ನಟಿಸಿ, ನಿರ್ಮಾಣ ಮಾಡುತ್ತಿರುವ ಯುದ್ಧಕಾಂಡ ಚಾಪ್ಟರ್ 2 ಚಿತ್ರ ರಿಲೀಸ್‌ಗೆ ಸಜ್ಜಾಗಿದೆ. ಕೆವಿಎಸ್ ಸಂಸ್ಥೆಯವನ್ನು ಬಿಡುಗಡೆ ಮಾಡುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಅಜಯ್ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದಾರೆ, ಅಜಯ್‌ಗೆ ಸಹಾಯ ಮಾಡಿದ್ದು ಯಶ್ ಹಾಗೂ ಡಿವೋರ್ಸ್‌ ಪಡೆಯುತ್ತಿದ್ದಾರೆ ಎನ್ನುವ ಗಾಸಿಪ್‌ಗೆ ಸ್ಪಷ್ಟನೆ ನೀಡಿದ್ದಾರೆ. 

'ಕೆವಿಎನ್ ಸಂಸ್ಥೆಯವರು ಸಿನಿಮಾವನ್ನು ನೋಡಿ ಮೆಚ್ಚಿಗೆಯಿಂದಾನೆ ಬಿಡುಗಡೆ ಮಾಡುವುದಕ್ಕೆ ಹೋರಟಿದ್ದಾರೆ. ಇದೆಲ್ಲ ಒಬ್ಬ ವ್ಯಕ್ತಿಯ ಹೃದಯ ಶ್ರೀಮಂತಿಕೆಯಿಂದಾನೇ ಆಗಿದ್ದು. ಯಾಕಂದ್ರೆ ಅವರು ಅಭಿಮಾನಿಗಳಿಗೆ ಆ ವ್ಯಕ್ತಿಯ ತೂಕವೇನು? ಕಷ್ಟದಲ್ಲಿ ಇದ್ದವರಿಗೆ ಒಳ್ಳೆಯದನ್ನು ಮಾಡುವುದಕ್ಕೆ ನಿಲ್ಲುತ್ತಾರೆ ಅನ್ನೋದು ಗೊತ್ತಾಗಬೇಕಿದೆ. ಅವರು ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರೇ ಕೂಡ ಆ ಸಂಸ್ಥೆಯೊಂದಿಗೆ ಸಿನಿಮಾವನ್ನು ನೋಡಿ ಅಂತ ಮಾತನಾಡಿದ ಮೇಲೆ ಕೆವಿಎನ್‌ ಅವರು ಆ ಸಿನಿಮಾ ನೋಡಿ ತುಂಬಾ ಚೆನ್ನಾಗಿದೆ ಅಂದ್ರು. ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡೋಣ ಅಂತ ಹೇಳಿದ್ದಾರೆ' ಎಂದು ಅಜಯ್ ಮಾತನಾಡಿದ್ದಾರೆ.

ಇದ್ದಕ್ಕಿದ್ದಂತೆ ಸಣ್ಣಗಾದ್ರ ಮೋಹಕತಾರೆ ರಮ್ಯಾ? ನಟಿ ಸಮಂತಾ ಕಾಮೆಂಟ್‌ ನೋಡಿ ಎಲ್ಲರೂ ಶಾಕ್

'ನಾನು ಎಷ್ಟು ಸಾಲ ಮಾಡಿಕೊಂಡಿದ್ದೀನಿ ಅಂತ ಲೆಕ್ಕ ಹಾಕುವುದಕ್ಕೆ ಆಗುವುದಿಲ್ಲ. ಸಿಕ್ಕಾಪಟ್ಟೆ ಸಾಲ ಮಾಡುಕೊಂಡಿದ್ದೇನೆ ಅದು ಮಾತ್ರ ನಿಜ, ನಾನು ಯಾವತ್ತೂ ದುಡ್ಡಿಗೆ ಲೆಕ್ಕ ಹಾಕಿದವನಲ್ಲ. ದುಡ್ಡು ಮಾಡಬೇಕು ಅಂತ ಬಂದವನಲ್ಲ. ಕಲಾವಿದನಾಗಬೇಕು ಅಂತ ಬಂದವನು. ಸಾಲ ಮಾಡಿದ್ದೀನಿ ಅಂತ ಹೇಳ್ತಿರೋದು ಅಷ್ಟು ಸಾಲು ಮಾಡುವ ತಾಕತ್ತು ಇದೆ ಅನ್ನೋದಕ್ಕೆ ಹೇಳಿದ್ದು. ಸಾಲ ಮಾಡಿದ್ದೀನಿ ಅಂತ ಕೊರಗುತ್ತಿಲ್ಲ ಅಷ್ಟು ಸಾಲ ಮಾಡಿದ್ದೀನಿ ಅಂದರೆ ಅಷ್ಟು ಸಂಪಾದನೆ ಮಾಡಿದ್ದೀನಿ ಅಂತಾನೇ ಅರ್ಥ' ಎಂದು ಅಜಯ್ ಹೇಳಿದ್ದಾರೆ.

ಕೋಟಿ ಕೋಟಿ ಹಣ ಇದ್ರೂ ಎಷ್ಟು ಕಡಿಮೆ ಬೆಲೆಯ ಶರ್ಟ್‌ ಧರಿಸಿದ್ದಾರೆ ನೋಡಿ ನಮ್ಮ ಶಿವಣ್ಣ!

'ನಾವು ಚೆನ್ನಾಗಿದ್ದೀವಿ. ನಿಮಗೆ ಜೋತಿಷ್ಯ ಗೊತ್ತಾ ಅಂತ ಕೇಳಿದ್ದಕ್ಕೆ ಹಾಗೆ ಹೇಳಿದೆ. ನಾಣು ಸಿನಿಮಾ ವಿಚಾರವನ್ನು ಹೇಳಿದೆ, ಕಷ್ಣ ಲೀಲಾ ಸಿನಿಮಾ ಮಾಡಿದ್ದು ತುಂಬಾನೇ ಕೆಟ್ಟ ಮುಹೂರ್ತ ಅಂತಾನೂ ಹೇಳಿದ್ದರು ಅದು ಕೋಟಿಗಟ್ಟಲೆ ಸಂಪಾದನೆ ಮಾಡಿದೆ. ಬ್ಲಾಕ್ ಬಸ್ಟರ್ ಸಿನಿಮಾ ಎನಿಸಿಕೊಂಡಿದೆ. ಶಾಸ್ತ್ರದಲ್ಲಿ ಏನೇ ಇರಲಿ ನೀವು ಹೇಗೆ ಬದುಕುತ್ತೀರ. ನಿಮ್ಮ ಶ್ರಮ ಎಷ್ಟಿರುತ್ತೆ ನಿಮ್ಮ ಶ್ರದ್ಧೆ ಎಷ್ಟಿರುತ್ತೆ ಇದಕ್ಕಿಂತ ಮೀರಿದ್ದು ಇರುತ್ತೆ ಅನ್ನೋದನ್ನು ಹೇಳುವುದಕ್ಕೆ ಬಂದೆ. ದಾಂಪತ್ಯ ಜೀವನವೇ ಆಗಿರಲಿ ಸಿನಿಮಾನೇ ಆಗಿರಲಿ ನೀವು ತುಂಬಾನೇ ಇಷ್ಟ ಪಟ್ಟು ಇದ್ದರೆ ಇದ್ಯಾವುದೂ ವರ್ಕ್‌ ಆಗಲ್ಲ. ಇದನ್ನು ಮೀರಿ ದೇವರು ಅನುಗ್ರಹ ಆಶೀರ್ವಾದ ಇರುತ್ತೆ ಅಂತ ಆ ರೀತಿ ಹೇಳಿದ್ದು' ಎಂದಿದ್ದಾರೆ ಅಜಯ್.  

ಗಂಡ್ಮಕ್ಳು ಜಾಕೆಟ್‌ನಲ್ಲಿ ಪೋಸ್‌ ಕೊಟ್ಟ ಚೈತ್ರಾ ಆಚಾರ್; ಇದರ ಸಿಂಪಲ್ ಜಾಕೆಟ್‌ ಬೆಲೆ ಕೇಳಿ ಶಾಕ್ ಆಗ್ಬೇಡಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ