ಪ್ರೆಸ್‌ಮೀಟ್ ಕಾರ್ಯಕ್ರಮಕ್ಕೆ ದುಬಾರಿ ವಾಚ್ ಧರಿಸಿದ ಅಜಯ್ ರಾವ್. ಬೆಲೆ ಕೇಳಿ ಶಾಕ್ ಆದ್ರೂ ನೆಟ್ಟಿಗರು.....
ಎಕ್ಸ್‌ಕ್ಯೂಸ್ ಮೀ ಎಂದುಕೊಂಡು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಅಜಯ್ ರಾವ್ ಇದೀಗ ನಿರ್ಮಾಪಕರಾಗುತ್ತಿದ್ದಾರೆ. ಕೃಷ್ಣನ ಹೆಸರು ಇಟ್ಟುಕೊಂಡು ಯಾವೆಲ್ಲಾ ರೀತಿಯಲ್ಲಿ ಮ್ಯಾಜಿಕ್ ಮಾಡಿಕೊಂಡು ಸೂಪರ್ ಹಿಟ್ ಸಿನಿಮಾ ಕೊಡಬಹುದು ಎಂದು ಅಜಯ್‌ರನ್ನು ನೋಡಿ ಕಲಿಯಬೇಕು. ಕೃಷ್ಣನ್ ಲವ್ ಸ್ಟೋರಿ,ಕೃಷ್ಣನ ಮ್ಯಾರೇಜ್ ಸ್ಟೋರಿ, ಕೃಷ್ಣ ರುಕ್ಕು, ಕೃಷ್ಣ ಲೀಲಾ....ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳು. ಎಷ್ಟು ಯಶಸ್ಸು ಕಂಡರೋ ಅಷ್ಟೇ ಸೋಲು ಕಂಡರು. ಆದರೆ ಈಗ ಕಮ್‌ಬ್ಯಾಕ್ ಮಾಡುವ ಸಮಯ ಬಂದಿದೆ. ಅದುವೇ ಯುದ್ಧಕಾಂಡ ಚಾಪ್ಟರ್ 2 ಚಿತ್ರದ ಮೂಲಕ.
ಹೌದು! ಯುದ್ಧಕಾಂಡ ಚಾಪ್ಟರ್ 2 ಸಿನಿಮಾದಲ್ಲಿ ಲಾಯರ್ ಪಾತ್ರದಲ್ಲಿ ಅಜಯ್ ಕಾಣಿಸಿಕೊಳ್ಳಲಿದ್ದಾರೆ. ನಟನೆ ಹಾಗೂ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಹೆಣ್ಣು ಮಕ್ಕಳ ಮೇಲೆ ನಡೆದಿರುವ ದೌರ್ಜನ್ಯವನ್ನೇ ಹೈಲೈಟ್ ಪಾಯಿಂಟ್ ಆಗಿಟ್ಟುಕೊಂಡು ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ ಎಂಬ ಹಿಂಟ್ ಬಿಟ್ಟುಕೊಟ್ಟಿದ್ದಾರೆ. ಇತ್ತೀಚಿಗೆ ಚಿತ್ರದ ಪ್ರೆಸ್‌ಮೀಟ್ ಹಬ್ಬಿಕೊಂಡಿದ್ದರು. ತಾವೇ ಮುಂದೆ ನಿಂತು ಆಗಮಿಸಿರುವ ಪ್ರತಿಯೊಬ್ಬರನ್ನು ಪ್ರೀತಿಯಿಂದ ಮಾತನಾಡಿಸಿ ಪರಿಚಯ ಮಾಡಿಕೊಟ್ಟರು. ಈ ವೇಳೆ ಅಲ್ಲಿದ್ದವರ ಗಮನ ಸೆಳೆದಿದ್ದು ಅಜಯ್ ಧರಿಸಿದ ದುಬಾರಿ ವಾಚ್ ಮತ್ತು ಗೂಗಲ್‌ನಲ್ಲಿ ತೋರಿಸಿದ ಅದರ ಬೆಲೆ. \
ನನಗೂ ಸಹಾಯ ಬೇಕಿದೆ ನನ್ನ ಪರ ಯಾರೂ ನಿಲ್ಲುತ್ತಿಲ್ಲ; ಬೇಸರ ಹೊರ ಹಾಕಿದ ಸಲ್ಮಾನ್ ಖಾನ್
ಅಜಯ್ ರಾವ್ ಧರಿಸಿದ ಸಿಲ್ವಾರ್ ಆಂಡ್ ಬ್ಯೂ ಕಾಂಬಿನೇಷನ್ ವಾಚ್ Maserati ಬ್ರಾಂಡ್‌ಗೆ ಸೇರಿದ್ದು, ಅದರ ಬೆಲೆ ಸುಮಾರು 18,525 ರೂಪಾಯಿಗಳು ಎಂದು ಗೂಗಲ್‌ನಲ್ಲಿ ತೋರಿಸುತ್ತಿದೆ. ಆನ್‌ಲೈನ್‌ನಲ್ಲಿ ಸದಾ ಡಿಸ್ಕೌಂಟ್ ಇರುವ ಬೆಲೆ ತೋರಿಸುತ್ತದೆ ಆದರೆ ಅಂಗಡಿಗಳಲ್ಲಿ ಇನ್ನೂ ಸ್ವಲ್ಪ ಜಾಸ್ತಿನೇ ಇರುತ್ತದೆ. ಐಷಾರಾಮಿ ವಾಚ್ ಧರಿಸುವ ಮಟ್ಟಕ್ಕೆ ಅಜಯ್ ಬೆಳೆದಿರುವುದು ಖುಷಿ ಎಂದು ಕೆಲವರು ಹೇಳಿದರೆ ಅಯ್ಯೋ ಅಣ್ಣ ನಮ್ಮ ಮನೆಯ ದಿನಸಿ ಬರುತ್ತೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮೊದ ಮೊದಲು ಬೆಂಗಳೂರಿಗೆ ಬಂದಾಗ ಅಜಯ್ ರಾವ್ ಒಂದು ಸಮಯದ ಊಟಕ್ಕೂ ಕಷ್ಟ ಪಟ್ಟಿದ್ದಾರೆ. ಗಾಂಧಿನಗರದಲ್ಲೆಲ್ಲಾ ಅಲೆಯುತ್ತಿದ್ದಂತೆ ಆಗ ತಮ್ಮ ಬಳಿ ಇದ್ದ ಹಣದಲ್ಲಿ ನಿರ್ಮಾಪಕರಿಗೆ ಊಟ ಮತ್ತು ತಿಂಡಿ ಕೊಡಿಸಿದರೆ ತಾವ ಖಾಲಿ ಹೊಟ್ಟೆಯಲ್ಲಿ ಇಲ್ಲವಾದರೆ ಎರಡು ಇಡ್ಲಿ ತಿಂದು ಜೀವನ ಕಳೆಯುತ್ತಿದ್ದರಂತೆ. ಅದೆಷ್ಟೋ ಸಲ ಕಡ್ಲೆ ತಿಂದು ದಿನ ಕಳೆಯುತ್ತಿದ್ದರಂತೆ.
ಬೃಂದಾವನ ಕುಟುಂಬ ಯಾವತ್ತಿಗೂ ಗಟ್ಟಿಯಾಗಿದೆ; ಧಾರಾವಾಹಿಯಿಂದ ಹೊರ ಹಾಕಿದರೂ ಋಣಿಯಾಗಿರುವ ವಿಶ್ವ!