Dhruva Sarja: ಸ್ಯಾಂಡಲ್‌ವುಡ್‌ನ ಟ್ರೆಂಡ್ ಮಾಸ್ಟರ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ!

Published : Apr 11, 2022, 06:19 PM IST
Dhruva Sarja: ಸ್ಯಾಂಡಲ್‌ವುಡ್‌ನ ಟ್ರೆಂಡ್ ಮಾಸ್ಟರ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ!

ಸಾರಾಂಶ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ರಾಮನ ಮೇಲೆ ವಿಶೇಷ ಭಕ್ತಿ. ಯಾಕಂದ್ರೆ ಧ್ರುವ ಆಂಜನೇಯನ ಅಪ್ಪಟ ಭಕ್ತ. ಆಂಜನೇಯ ರಾಮನ ಪರಮ ಭಕ್ತ. ಹೀಗಾಗಿ ರಾಮ ನವಮಿ ಹಬ್ಬದ ದಿನವೇ ಮಾರ್ಟಿನ್ ಸಿನಿಮಾ ಬಿಡುಗಡೆ ದಿನಾಂಕವನ್ನ ಅನೌನ್ಸ್ ಮಾಡಿದ್ದಾರೆ. 

ಧ್ರುವ ಸರ್ಜಾ (Dhruva Sarja).. ದಿಸ್ ಈಸ್ ನಾಟ್ ಜಸ್ಟ್ ಎ ನೇಮ್.. ಹಿ ಈಸ್ ಟ್ರೆಂಡ್ ಸೆಟ್ಟರ್. ಮಾಸ್‌ಗೆ ಮಾಸ್ಟರ್ ಸ್ಯಾಂಡಲ್‌ವುಡ್ (Sandalwood) ಕರಾಬು ಹುಡುಗ. ಕಾರಾಬು ಅಟಿಟ್ಯೂಡು, ಮೈ ತುಂಬಾ ಪೊಗರು. ಹ್ಯೂಜ್ ಫ್ಯಾನ್ ಫಾಲೋಯಿಂಗೂ ಇರೋ ಕನ್ನಡ ಬಣ್ಣದ ಜಗತ್ತಿನ ಯುತ್ಸ್ ಐಕಾನ್ ಧ್ರುವ ಸರ್ಜಾ. ಸ್ಯಾಂಡಲ್‌ವುಡ್‌ನ ನೆಕ್ಸ್ಟ್ ಲೆವೆಲ್ ಮಾಸ್ ಹೀರೋ ಅಂತಲೇ ಕರೆಸಿಕೊಳ್ಳುತ್ತಿರೋ ಧ್ರುವ ಈಗ ತನ್ನ ದೊಡ್ಡ ಅಭಿಮಾನಿ ಬಳಗಕ್ಕೆ ಬಿಗ್ ಬಿಗ್ ಸರ್ಪ್ರೈಸ್ ಒಂದನ್ನ ಕೊಟ್ಟಿದ್ದಾರೆ. ಅದೇ ದೇಶಾಂತ್ಯಂತ ಶುರುವಾಗುತ್ತಿರೋ ಮಾರ್ಟಿನ್ (Martin) ಹಬ್ಬದ ಸರ್ಪ್ರೈಸ್.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರನ್ನ ಬೆಳ್ಳಿತೆರೆ ಮೇಲೆ ಕಣ್ತುಂಬಿಕೊಳ್ಳೋಕೆ ಹ್ಯೂಜ್ ಫ್ಯಾನ್ಸ್ ಕಾಯ್ತಿದ್ದಾರೆ. ಪೊಗರು ನಂತರ ಮಾರ್ಟಿನ್ ಆಗಿರೋ ಧ್ರುವ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಅಬ್ಬರಿಸುತ್ತಿದ್ದಾರೆ. ಚಿರತೆ ಬಂದ್ರೆ ವೇಗ ಇರುತ್ತೆ, ಹುಲಿ ಬಂದ್ರೆ ಗಾಂಭೀರ್ಯ ಇರುತ್ತೆ. ಸಿಂಹ ಬಂದ್ರೆ ಘರ್ಜನೆ ಇರುತ್ತೆ ಅನ್ನೋ ಧ್ರುವನ ಡೈಲಾಗ್‌ನ ಹಾಗೆ, ಈಗ ಮಾರ್ಟಿನ್ ಸಿನಿಮಾ ಮೂಲಕ ವೇಗವಾಗಿ ಗಾಂಭೀರ್ಯದಿಂದ ಘರ್ಜನೆ ಮಾಡೋದಕ್ಕೆ ಡೇಟ್ ಫಿಕ್ಸ್ ಮಾಡಿದ್ದಾರೆ ಧ್ರುವ. ಏಪ್ರಿಲ್ 10ರಂದು ರಾಮನವಮಿ ಹಬ್ಬ ಆಗಿದ್ರಿಂದ ಧ್ರುವ ಸರ್ಜಾರ ಮಾಸ್ ಮಸಾಲ ಮಾರ್ಟಿನ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. 

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ರಾಮನ ಮೇಲೆ ವಿಶೇಷ ಭಕ್ತಿ. ಯಾಕಂದ್ರೆ ಧ್ರುವ ಆಂಜನೇಯನ ಅಪ್ಪಟ ಭಕ್ತ. ಆಂಜನೇಯ ರಾಮನ ಪರಮ ಭಕ್ತ. ಹೀಗಾಗಿ ರಾಮ ನವಮಿ ಹಬ್ಬದ ದಿನವೇ ಮಾರ್ಟಿನ್ ಸಿನಿಮಾ ಬಿಡುಗಡೆ ದಿನಾಂಕವನ್ನ ಅನೌನ್ಸ್ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗ್ತಿರೋ ಮಾರ್ಟಿನ್ ಸಿನಿಮಾ ಸೆಪ್ಟೆಂಬರ್ 30ಕ್ಕೆ ದೇಶಾದ್ಯಂತ ಐದು ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಪೊಗರು ಸಿನಿಮಾ ಬಂದಾಗ ಸೌತ್ ಸಿನಿ ಜಗತ್ತಲ್ಲಿ ಘರ್ಜಿಸಿದ್ಧ ಈ ಅದ್ಧೂರಿ ಹುಡುಗ ಈಗ ಮಾರ್ಟಿನ್ ಮೂಲಕ ಮಾಸ್ ಆಡಿಯನ್ಸ್ ಅನ್ನ ಕಣ್ಮನ ಸೆಳೆಯಲಿದ್ದಾರೆ.

ಪ್ರಮೋದ್‌ ನಟನೆಯ ಬಾಂಡ್‌ ರವಿ ಮುಹೂರ್ತ; ಶುಭ ಹಾರೈಸಿದ ಧ್ರುವ ಸರ್ಜಾ, ವಿನೋದ್‌ ಪ್ರಭಾಕರ್‌

ಮಾರ್ಟಿನ್ ಸಿನಿಮಾದ ಬಗ್ಗೆ ಇಂದು ದೇಶಾದ್ಯಂತ ಸುದ್ದಿಯಾಗ್ತಿದೆ. ಅದಕ್ಕೆ ಕಾರಣ ಧ್ರುವ ಸರ್ಜಾ ಬಣ್ಣದ ಜಗತ್ತಲ್ಲಿ ನಡೆದು ಬಂದ ಹಾದಿ. ಹೀಗಾಗಿ ಮಾರ್ಟಿನ್ ಬಗ್ಗೆ ಮತ್ತಷ್ಟು ತಿಳಿದುಕೊಳ್ಳೋ ಮೊದಲು ಬಹದ್ದೂರ್ ಗಂಡು ಧ್ರುವ ಬೆಳ್ಳಿತೆರೆಯಲ್ಲಿ ಬಿಗ್ ಸ್ಟಾರ್ ಆಗಿ ಮೋಲ್ಡ್ ಆಗಿದ್ದು ಹೇಗೆ ಅಂತ ಒಮ್ಮೆ ಮೆಲುಕು ಹಾಕಲೇ ಬೇಕು. ಯಾಕಂದ್ರೆ ಅದೇ ಒಂದು ಇಂಟ್ರೆಸ್ಟಿಂಗ್ ಕತೆ. ಜೂನ್ 15 ಬಂದರೆ ಆಕ್ಷನ್ ಪ್ರಿನ್ಸ್ ಬೆಳ್ಳಿ ತೆರೆಗೆ ಬಂದು ಹತ್ತು ವರ್ಷ ಕಂಪ್ಲೀಟ್ ಆಗುತ್ತೆ. ಅಂದು ಅದ್ಧೂರಿ ಸಿನಿಮಾದಲ್ಲಿ ಒಬ್ಬ ಚಲವಾಧಿ ಲವರ್ ಬಾಯ್ ಆಗಿ ಕಾಣಿಸಿಕೊಂಡು ಜನ ಮನ ಗೆದ್ದಿದ್ದ ನಮ್ಮೂರ ಹುಡುಗ ಧ್ರುವ, ಕಳೆದ 10 ವರ್ಷದಿಂದ ನಟಿಸಿದ್ದು ಐದೇ ಸಿನಿಮಾ. ಆ ಐದು ಸಿನಿಮಾಗಳಲ್ಲಿ ಮಾರ್ಟಿನ್ ಕೂಡ ಒಂದು. ಆ ಐದೂ ಸಿನಿಮಾಗಳು ದಾಖಲೆ ಪುಟದಲ್ಲಿ ಅಚ್ಚೊತ್ತಿವೆ.

ಬಣ್ಣದ ಜಗತ್ತಲ್ಲಿ ಬಿಗ್ ಸ್ಟಾರ್ ಆಗಬೇಕಂದ್ರೆ ಏನೆಲ್ಲಾ ಸರ್ಕಸ್ ಮಾಡಬೇಕು ಅನ್ನೋದು ನಿಮ್ಗೆಲ್ಲಾ ಗೊತ್ತೇ ಇದೆ. ಆದರೆ ಆಕ್ಷನ್ ಪ್ರಿನ್ಸ್ ಹಾಗಲ್ಲ. ತನ್ನ ಮೊದಲ ಸಿನಿಮಾದಲ್ಲೇ ಇಡೀ ಸ್ಯಾಂಡಲ್‌ವುಡ್ ದಿಗ್ಗಜ ನಟರು ತಿರುಗಿ ನೋಡುವಂತೆ ಮಾಡಿದರು. ಅಂಬಾರಿ ಹತ್ತಿ ಗೆದ್ದಿದ್ದ ನಿರ್ದೇಶಕ ಎ.ಪಿ ಅರ್ಜುನ್ ಧ್ರುವ ಸರ್ಜಾರ ಮೊದಲ ಚಿತ್ರಕ್ಕೆ ಸೂಪರ್ ಡೂಪರ್ ಲವ್ ಸ್ಟೋರಿ ರೆಡಿ ಮಾಡಿದರು. 2012ರಲ್ಲಿ ಬಂದ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಯಾವ್ ಮಟ್ಟಕ್ಕೆ ಅಂದ್ರೆ 315 ದಿನ ಈ ಸಿನಿಮಾ ಪ್ರದರ್ಶನ ಕಂಡಿತ್ತು. ಈ ಸಿನಿಮಾದಿಂದ ಧ್ರುವ ಆಕ್ಷನ್ ಪ್ರಿನ್ಸ್ ಅಂತ ಹೆಸರು ಪಡೆದ್ರು. ನಾಲ್ಕು ಕೋಟಿಯಲ್ಲಿ ನಿರ್ಮಾಣ ಆಗಿದ್ದ ಈ ಸಿನಿಮಾ ಅಂದು 16.4 ಕೋಟಿ ಕಲೆಕ್ಷನ್ ಮಾಡಿತ್ತು. ಅಂದೆ ಇವತ್ತಿನ ಮಟ್ಟಿಗೆ 30 ಕೋಟಿ ಅಂತ ಅಂದಾಜಿಸಬಹುದು.

ಅದ್ಧೂರಿ ಸಿನಿಮಾ ಹಿಟ್ ಆಗುತ್ತಿದ್ದಂತೆ, ಎರಡು ವರ್ಷ ಗ್ಯಾಪ್‌ನ ನಂತರ ಬಂದ ಧ್ರುವನ ಎರಡನೇ ಸಿನಿಮಾ ಬಹದ್ದೂರ್. ನಿರ್ದೇಶಕ ಚೇತನ್ ಕುಮಾರ್ ಸಾರಥ್ಯದಲ್ಲಿ ಬಂದ ಈ ಬಹದ್ದೂರ್ ಸಿನಿಮಾ ಧ್ರುವನಿಗೆ ಬಹದ್ದೂರ್ ಹುಡುಗ ಅಂತಲೇ ಬಿರುದ್ದು ತಂದು ಕೊಡ್ತು. ಬರೋಬ್ಬರಿ 170 ದಿನ ಪ್ರದರ್ಶನ ಕಂಡು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಅನ್ನೋ ಹೆಗ್ಗಳಿಕೆ ಪಡೆಯಿತು. ಅದ್ಧೂರಿ ಸಿನಿಮಾದಲ್ಲಿ ಧ್ರುವ-ರಾಧಿಕಾ ಪಂಡಿತ್ ಜೊಡಿ ಸೂಪರ್ ಹಿಟ್ ಆಗಿತ್ತು. ಅದೇ ಪೇರ್ ಬಹದ್ದೂರ್ ಸಿನಿಮಾದಲ್ಲೂ ಮತ್ತೆ ಜೊತೆಯಾಗಿ ಮತ್ತೊಮ್ಮೆ ಹಿಟ್ ಪೇರ್ ಎನಿಸಿಕೊಂಡರು. ಧ್ರುವ ರಾಧಿಕಾ ಕಾಂಬಿನೇಷನ್ ಅನ್ನ ಕನ್ನಡಿಗರು ಇಂದಿಗೂ ಕೊಂಡಾಡುತ್ತಿದ್ದಾರೆ. 

Dhruva Sarja: ಕಾಶ್ಮೀರದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ 'ಮಾರ್ಟಿನ್' ಚಿತ್ರದ ಶೂಟಿಂಗ್

ಅದ್ಧೂರಿ, ಬಹದ್ಧೂರ್ ದೊಡ್ಡ ಸಕ್ಸಸ್ ಬಳಿಕೆ ಆಕ್ಷನ್ ಪ್ರಿನ್ಸ್ ಗೆ ಎದುರಾಗಿದ್ದ ದೊಡ್ಡ ಚಾಲೆಂಜ್ ಅಂದರೆ ಹ್ಯಾಟ್ರಿಕ್ ಹಿಟ್ ಸಿನಿಮಾ ಕೊಡೋದು. ಹೀಗಾಗಿ ಅದ್ಧೂರಿ ಹುಡುಗ ತನ್ನ ಮೂರನೇ ಸಿನಿಮಾದಲ್ಲಿ ಭರ್ಜರಿಯಾಗಿ ಬೆಳ್ಳಿತೆರೆ ಮೇಲೆ ಬಂದರು. ನಿರ್ದೇಶಕ ಚೇತನ್ ಜೊತೆ ಮತ್ತೊಮ್ಮೆ ಜೊತೆಯಾದ ಧ್ರುವ ಭರ್ಜರಿ ಸಿನಿಮಾದಲ್ಲಿ ಮತ್ತೊಮ್ಮೆ ಬಿಗ್ ಹಿಟ್ ಕೊಟ್ಟರು. ಭರ್ಜರಿ ಸಿನಿಮಾ 135 ದಿನ ಪ್ರದರ್ಶನ ಕಾಣ್ತು. ಈ ಮೂಲಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಳಿಕ ಒಟ್ಟೊಟ್ಟಿಗೆ ಮೂರು ಬಿಗ್ ಹಿಟ್ ಸಿನಿಮಾ ಕೊಟ್ಟ ಕನ್ನಡದ ಎರಡನೇ ನಾಯಕ ಅನ್ನೋ ಹೆಗ್ಗಳಿಕೆ ಪಡಿದ್ರು ಧ್ರುವ.

 ಅದ್ಧೂರಿ, ಬಹದ್ದೂರ್, ಭರ್ಜರಿ ಮೂಲಕ ಬ್ಯಾಕ್ ಟು ಬ್ಯಾಕ್ ಮೂರು ಬಿಗ್ ಹಿಟ್ ಕೊಟ್ಟ ಧ್ರುವ ಸರ್ಜಾ ಸ್ಯಾಂಡಲ್‌ವುಡ್‌ನ ಟಾಪ್ ಸ್ಟಾರ್ ಲೀಸ್ಟ್ ಸೇರಿಬಿಟ್ರು. ಮೂರು ಸಿನಿಮಾಗಳು ಹಿಟ್ ಆದ್ಮೇಲೆ ಧ್ರುವ ಸರ್ಜಾ ಸಿನಿಮಾ ಮಾರ್ಕೇಟ್ ದೊಡ್ಡದಾಗಿ ಬೆಳೆಯಿತು. ಧ್ರುವನಿಗೆ ಬೇಡಿಕೆ ಹೆಚ್ಚಾಯ್ತು. ಆಕ್ಷನ್ ಪ್ರಿನ್ಸ್ ಸಿನಿಮಾಗಳಿಗೆ ಬಂಡವಾಳ ಹೂಡಲು, ಸಿನಿಮಾಗಳ ವಿತರಣೆ ಮಾಡೋದಕ್ಕೆ ನಿರ್ಮಾಪಕರು, ವಿತರಕರ ಧ್ರುವನ ಹಿಂದೆ ಬೀಳೋಕೆ ಶುರುಮಾಡಿದ್ರು. ಈ ರೈಟ್ ಟೈಂನಲ್ಲಿ ಬಂದ ಸಿನಿಮಾವೇ ಪೊಗರು. ದೊಡ್ಡ ಕ್ಯಾನ್ವಸ್‌ನ ಈ ಚಿತ್ರ ಸೌತ್ ಸಿನಿ ಜಗತ್ತಿನಲ್ಲೇ ಸೆನ್ಸೇಷನ್ ಸೃಷ್ಟಿಸಿ ಬಿಡ್ತು. 65 ದಿನ ಪ್ರದರ್ಶನ ಕಂಡ ಪೊಗರು ಸಿನಿಮಾ ಕೋವಿಡ್ ಕಾರಣಕ್ಕೆ ಪ್ರದರ್ಶನವನ್ನ ನಿಲ್ಲಿಸಿತು. ಆದರೆ ಎಲ್ಲರ ಲೆಕ್ಕಾಚಾರದಂತೆ ಪೊಗರು ಮೂವಿ 50 ಕೋಟಿ ಕ್ಲಬ್ ಸೇರಿದೆ. ಈಗ ಆ ಎಲ್ಲಾ ದೊಡ್ಡ ಸಕ್ಸಸ್ ಅನ್ನೂ ಮೀರಿ ನಿಲ್ಲೋಕೆ ಧ್ರುವ ಮಾರ್ಟಿನ್ ಆಗಿ ಬರ್ತಿದ್ದಾರೆ.

ಧ್ರುವ ಸರ್ಜಾ ಅಭಿನಯಕ್ಕೆ, ಧ್ರುವ ಹೊಡೆಯೋ ಡೈಲಾಗ್, ಡಾನ್ಸ್ ಅನ್ನ ನೋಡಿಯೇ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಧ್ರುವ ಸರ್ಜಾ ಯಾವ್ದೇ ಅಭಿನಯ ಶಾಲೆಗೆ ಹೋಗಿಲ್ಲ. ಡಾನ್ಸ್ ಕಲಿಲಿಲ್ಲ. ದೊಡ್ಡ ಸಿನಿಮಾ ಬ್ಯಾಕ್ಗ್ರೌಂಡ್ ಇರೋ ಕುಟುಂಬದಿಂದ ಬಂದಿದ್ದ ಧ್ರುವ ಬೀದಿ ಬದಿ ನಾಟಕ ಮಾಡಿಕೊಂಡು ನಟನೆ ಕಲಿತವರು. ಇಂದು ನ್ಯಾಷನಲ್ ಪ್ರಿನ್ಸ್ ಆಗಿದ್ದಾರೆ.

ಧ್ರುವ ಸರ್ಜಾ ಬೆಂಗಳೂರಿನಾದ್ಯಂತ 30 ಬೀದಿ ನಾಟಕ ಮಾಡಿದ್ದಾರೆ. ಆದರೆ ಒಬ್ರು ಇಬ್ಬರು ಇದ್ರೆ ನಾಟಕ ಮಾಡುತ್ತಿರಲಿಲ್ಲ. ಧ್ರುವನೇ ಹೋಗಿ ಬನ್ನಿ ಬನ್ನಿ ಅಂತ ಕರೆದು 25 ಜನರನ್ನ ನಿಲ್ಲಿಸಿಕೊಂಡು ನಾಟಕ ಮಾಡುತ್ತಿದ್ದರು. ಧ್ರುವಗೆ ಅಭಿನಯದಲ್ಲಿ ಫಸ್ಟ್ ಟೈಂ ಸಂಭಾವನೆ ಸಿಕ್ಕಿದ್ದು ಬೀದಿ ನಾಟಕದಲ್ಲಿ. ಬೀದಿ ನಾಟಕದಲ್ಲಿ ಅಭಿನಯಿಸಿ 600 ರೂಪಾಯಿ ಸಂಭಾವನೆ ಪಡೆದ್ರು. ಆ 600 ರೂಪಾಯಿಯನ್ನ ಧ್ರುವ ಅವರ ತಾಯಿ ಅಮ್ಮಾಜಿ ಇನ್ನೂ ಹಾಗೆ ಇಟ್ಟಿದ್ದಾರಂತೆ..

ಹೊಸ ವರ್ಷ ಪಾರ್ಟಿ ಮಾಡೋಲ್ಲ, ನನ್ನ ಲೈಫಲ್ಲಿ ಅದೊಂದು ಮಿಸ್ಸಿಂಗ್: Dhruva Sarja

ಧ್ರುವ ಸರ್ಜಾ ಅದ್ಧೂರಿ ಸಿನಿಮಾ ಮಾಡೋಕು ಮೊದಲು ಮೊದಲು 14 ಭಾರಿ ಆಡಿಷನ್ ಕೊಟ್ಟಿದ್ರು. ಆದ್ರೆ ಅದ್ಧೂರಿ ಚಿತ್ರಕ್ಕಾಗಿ 15ನೇ ಭಾರಿ ಆಡಿಷನ್ ಅಟೆಂಡ್ ಮಾಡಿದ್ದ ಧ್ರುವ ಕೊನೆಗೆ ಆ ಚಿತ್ರಕ್ಕೆ ಸೆಲೆಕ್ಟ್ ಆದರು. ಹಾಗಂತ ಅದ್ದೂರಿ ಸಿನಿಮಾ ಅಷ್ಟು ಸಲೀಸಾಗಿ ನಿರ್ಮಾಣ ಆಗಿಲ್ಲ. ಈ ಚಿತ್ರ ಸೆಟ್ಟೇರಿದಾಗ 5 ಜನ ನಿರ್ಮಾಪಕರು ಬಂಡವಾಳ ಹೂಡೋಕೆ ಮುಂದೆ ಬಂದು ಹಿಂದೆ ಸರಿದರು. ಕೊನೆಗೆ ಕೀರ್ತಿ ಸ್ವಾಮಿ ಶಂಕರ್ ರೆಡ್ಡಿ ಗಟ್ಟಿಯಾಗಿ ನಿಂತು ಈ ಸಿನಿಮಾವನ್ನ ದಡ ಸೇರಿಸಿದರು. ಅದ್ಧೂರಿ ಸಿನಿಮಾ ದೊಡ್ಡ ಸಕ್ಸಸ್ ಆದಮೇಲೂ ಧ್ರುವಾಗೆ ಅದೇ ಕಷ್ಟ ಎದುರಾಯ್ತು. ಬಹದ್ದೂರ್ ಸಿನಿಮಾ ನಿರ್ಮಾಣ ಮಾಡುತ್ತೇವೆ ಅಂತ 15 ಜನ ನಿರ್ಮಾಪಕರು ಬಂದರು. ಆದರೆ ಕೊನೆಗೆ ಆ ನಿರ್ಮಾಪಕರೂ ಈ ಬಹದ್ದೂರ್ ಚಿತ್ರದಿಂದ ಹಿಂದೆ ಸರಿದರು. ಆದರೆ ನಿರ್ಮಾಪಕ ಆರ್ ಶ್ರೀನಿವಾಸ್ ಈ ಚಿತ್ರದ ನಿರ್ಮಾಣ ಜವಾಬ್ಧಾರಿ ಹೊತ್ತುಕೊಂಡು ಸಿನಿಮಾ ಸಕ್ಸಸ್ ಆಗುವಂತೆ ನೋಡಿಕೊಂಡರು.

ಸಿನಿಮಾ ಡೆಸ್ಕ್, ಏಷ್ಯಾನೆಟ್ ಸುವರ್ಣ ನ್ಯೂಸ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ