ಮೊದಲ ದಿನವೇ ‘ಕೆಜಿಎಫ್‌-2’ 250 ಕೋಟಿ ಗಳಿಕೆ?

Published : Apr 11, 2022, 07:26 AM IST
ಮೊದಲ ದಿನವೇ ‘ಕೆಜಿಎಫ್‌-2’ 250 ಕೋಟಿ ಗಳಿಕೆ?

ಸಾರಾಂಶ

*   ವಿಶ್ವಾದ್ಯಂತ 7500 ಸ್ಕ್ರೀನ್‌ಗಳಲ್ಲಿ ಬಿಡುಗಡೆ *  ಬಿಡುಗಡೆ ದಿನದ ಗಳಿಕೆಯಲ್ಲಿ ‘ಆರ್‌ಆರ್‌ಆರ್‌’ ದಾಖಲೆ ಭಗ್ನ ಸಂಭವ *  ಭಾರತದಲ್ಲಿ ಪ್ರದರ್ಶನ ಸಂಖ್ಯೆ- 5500+  

ಬೆಂಗಳೂರು(ಏ.11): ‘ರಾಕಿಂಗ್‌ ಸ್ಟಾರ್‌’ ಯಶ್‌(Yash) ನಟನೆಯ, ಪ್ರಶಾಂತ್‌ ನೀಲ್‌ ನಿರ್ದೇಶನದ, ವಿಜಯ್‌ ಕಿರಗಂದೂರು ನಿರ್ಮಾಣದ ‘ಕೆಜಿಎಫ್‌ 2’ ಚಿತ್ರವು ಪ್ರದರ್ಶನ ಸಂಖ್ಯೆಯಲ್ಲಿ ಹಾಗೂ ಗಳಿಕೆಯಲ್ಲಿ ದಾಖಲೆ ಸೃಷ್ಟಿಸಲು ವೇದಿಕೆ ಸಜ್ಜಾಗಿದೆ. ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ‘ಕೆಜಿಎಫ್‌ 2’(KGF 2) ವಿಶ್ವಾದ್ಯಂತ ಸುಮಾರು 7500 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣಲಿದೆ. ಭಾರತದಲ್ಲಿಯೇ(India) 5500 ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನವಾಗಲಿದೆ. ಆಂಧ್ರಪ್ರದೇಶ, ತೆಲಂಗಾಣ ಹೊರತಾಗಿ ದೇಶದ ಎಲ್ಲಾ ಕಡೆ ಟಿಕೆಟ್‌ ಬುಕಿಂಗ್‌ ಶುರುವಾಗಿದ್ದು, ದಾಖಲೆ ಮಟ್ಟದ ಬುಕಿಂಗ್‌ ಆಗಿದೆ. ಮೊದಲ ದಿನವೇ ‘ಕೆಜಿಎಫ್‌ 2’ ಅಂದಾಜು 250 ಕೋಟಿ ರು. ಗಳಿಸುವ ಸಾಧ್ಯತೆ ಇದೆ.
ಕನ್ನಡ(Kannada) ಸಿನಿಮಾವೊಂದು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪ್ರದರ್ಶನ ಕಾಣುತ್ತಿರುವುದು ಇದೇ ಮೊದಲು. ಅಲ್ಲದೇ ಗಳಿಕೆಯಲ್ಲೂ ದಾಖಲೆ ಬರೆಯುವ ಕನ್ನಡ ಸಿನಿಮಾ ‘ಕೆಜಿಎಫ್‌ 2’ ಆಗುವ ಸಾಧ್ಯತೆ ಇದೆ. ವಿಶ್ವಾದ್ಯಂತ

‘ಕೆಜಿಎಫ್‌ 2’ ಟಿಕೆಟ್‌ ಬುಕ್‌ ಆಗುತ್ತಿರುವ ವೇಗ ನೋಡಿದರೆ ಮೊದಲ ದಿನದ ಗಳಿಕೆಯಲ್ಲಿ ‘ಆರ್‌ಆರ್‌ಆರ್‌’ ಸಿನಿಮಾವನ್ನು ಮೀರಿಸುವ ಸಾಧ್ಯತೆ ನಿಚ್ಚಳವಾಗಿದೆ. ಅಮೆರಿಕದಲ್ಲಿ ಏ.13ರಂದೇ ಪ್ರೀಮಿಯರ್‌ ಶೋ ಇರಲಿದೆ. ಅಮೆರಿಕ ಒಂದರಲ್ಲೇ 1000ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಕೆಜಿಎಫ್‌ ಬಿಡುಗಡೆಯಾಗುತ್ತಿದೆ. ವಿದೇಶಗಳಲ್ಲಿ ತೆಲುಗು ಪ್ರದರ್ಶನಗಳ ಸಂಖ್ಯೆ ಹೆಚ್ಚಿದೆ.

KGF Chapter 2: ರಾಕಿ ಭಾಯ್ ಸಿನಿಮಾ ಹಿಂದಿರೋ ಸೀಕ್ರೆಟ್ ಸೂಪರ್ ಸ್ಟಾರ್ಸ್ ಯಾರು ಗೊತ್ತಾ?

ಯುರೋಪಿನ ಬಹುತೇಕ ಕಡೆಗಳಲ್ಲಿ ಕೆಜಿಎಫ್‌ ಪ್ರದರ್ಶನಗೊಳ್ಳುತ್ತಿದೆ. ಕೆಲವು ದೇಶಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಮೆರಿಕ, ಬ್ರಿಟನ್‌, ಗ್ರೀಸ್‌, ಆಸ್ಪ್ರೇಲಿಯಾ, ನ್ಯೂಜಿಲೆಂಡ್‌, ಪಪುವಾ ಗಿನಿಯಾ, ಸಿಂಗಾಪುರ, ಜೋರ್ಡನ್‌, ಫಿಲಿಪ್ಪೀನ್ಸ್‌, ಇಸ್ರೇಲ್‌ ಸೇರಿ ಹಲವಾರು ದೇಶಗಳಲ್ಲಿ ಯಶ್‌ ತಮ್ಮ ಹವಾ ಸೃಷ್ಟಿಸಲಿದ್ದಾರೆ. ಮುಂಬೈ ಸೇರಿದಂತೆ ಉತ್ತರ ಭಾರತದಲ್ಲಿ ಕೆಜಿಎಫ್‌ 2 ಚಿತ್ರಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಎಲ್ಲಾ ಕಡೆಗಳಲ್ಲಿ ಜನರು ಟಿಕೆಟ್‌ ಬುಕ್‌ ಮಾಡುತ್ತಿದ್ದಾರೆ. ಮುಂಬೈ ಮತ್ತು ಪುಣೆಯಲ್ಲಿ ಬೆಳಿಗ್ಗೆ 6 ಗಂಟೆಗೆ ಪ್ರದರ್ಶನ ಶುರುವಾಗಲಿದೆ. ಅಡ್ವಾನ್ಸ್‌ ಬುಕಿಂಗ್‌ನಲ್ಲಿ ‘ಆರ್‌ಆರ್‌ಆರ್‌’ ಅನ್ನು ಈಗಾಗಲೇ ಹಿಂದಿಕ್ಕಿದೆ ಎಂಬ ಲೆಕ್ಕಾಚಾರ ಶುರುವಾಗಿದೆ. ಆ ಲೆಕ್ಕಾಚಾರದ ಪ್ರಕಾರ ಹಿಂದಿಯಲ್ಲಿ ‘ಕೆಜಿಎಫ್‌ 2’ 50 ಕೋಟಿ ರು.ಗೂ ಹೆಚ್ಚು ಗಳಿಕೆ ಮಾಡಲಿದೆ.

ತಮಿಳುನಾಡಿನಲ್ಲಿ(Tamil Nadu) ಬೀಸ್ಟ್‌ ಸಿನಿಮಾ ರಿಲೀಸ್‌ ಆಗುತ್ತಿದ್ದಾಗ್ಯೂ ಕೆಜಿಎಫ್‌ 2ಗೆ ಬೇಡಿಕೆ ಕಡಿಮೆಯಾಗಿಲ್ಲ. ಅತಿ ಹೆಚ್ಚು ಜನ ಈಗಾಗಲೇ ಟಿಕೆಟ್‌ ಬುಕ್‌ ಮಾಡಿದ್ದಾರೆ. ಬೇರೆ ಕಡೆಗಳಿಗೆ ಹೋಲಿಸಿದರೆ ತಮಿಳುನಾಡಲ್ಲಿ ಟಿಕೆಟ್‌ ದರ ಕಡಿಮೆ ಇದೆ. ಆಂಧ್ರಪ್ರದೇಶ, ತೆಲಂಗಾಣದಲ್ಲಿ(Telangana) ಬುಕಿಂಗ್‌ ಇನ್ನೂ ಶುರುವಾಗಿಲ್ಲ. ತೆಲುಗು ಭಾಷಿಕರಲ್ಲಿ ಅತಿ ಹೆಚ್ಚು ಕ್ರೇಜ್‌ ಇರುವುದರಿಂದ ತೆಲುಗು(Telugu) ಭಾಷೆಯಲ್ಲಿ ಕೆಜಿಎಫ್‌ 2 ಅದ್ಧೂರಿ ಕಲೆಕ್ಷನ್‌ ಮಾಡುವುದು ನಿಶ್ಚಿತ.

ಕರ್ನಾಟಕದಲ್ಲಿ(KarnatakaO) ಏ.10ರಂದು ಟಿಕೆಟ್‌ ಬುಕಿಂಗ್‌ ಶುರುವಾಗಿದ್ದು, ಕೆಲವೇ ನಿಮಿಷಗಳಲ್ಲಿ ಬಹುತೇಕ ಪ್ರದರ್ಶನಗಳು ಹೌಸ್‌ಫುಲ್‌ ಆಗಿವೆ. ಕರ್ನಾಟಕದಲ್ಲಿ ಸುಮಾರು 550 ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣಲಿದ್ದು, ಅನೇಕ ಥಿಯೇಟರ್‌ಗಳು ಬುಕಿಂಗ್‌ ಶುರು ಮಾಡಿಕೊಂಡಿವೆ. ಬೆಂಗಳೂರಿನ ಅನೇಕ ಥಿಯೇಟರ್‌ಗಳಲ್ಲಿ ರಾತ್ರಿ 1 ಗಂಟೆಗೆ ಪ್ರದರ್ಶನ ಶುರುವಾಗಲಿದ್ದು, ಆ ಪ್ರದರ್ಶನಗಳ ಎಲ್ಲಾ ಟಿಕೆಟ್‌ಗಳನ್ನೂ ಅಭಿಮಾನಿಗಳೇ ಖರೀದಿಸಿದ್ದಾರೆ. ಉಳಿದಂತೆ ಕೆಲವು ಕಡೆ ಮುಂಜಾವು 3 ಗಂಟೆ, 4 ಗಂಟೆಗೆ ಶೋ ಇರಲಿದೆ. 1100 ಸೀಟಿಗಳಿರುವ ಬೆಂಗಳೂರಿನ ಊರ್ವಶಿ ಥಿಯೇಟರ್‌ನ ಮೊದಲ ಪ್ರದರ್ಶನದ ಟಿಕೆಟ್‌ಗಳು ಕ್ಷಣ ಮಾತ್ರದಲ್ಲೇ ಖಾಲಿಯಾಗಿವೆ. ಆ ಪ್ರದರ್ಶನಕ್ಕೆ ಕ್ರಮವಾಗಿ 600 ರು., 700 ರು., 800 ರು. ಟಿಕೆಟ್‌ ದರ ಇದೆ. ಒಟ್ಟಾರೆ ಆ ಪ್ರದರ್ಶನದ ಸಂಗ್ರಹ 7 ಲಕ್ಷ ರು. ದಾಟಲಿದೆ. ಆ ಥಿಯೇಟರ್‌ನಲ್ಲಿ ಮೊದಲ 5 ಪ್ರದರ್ಶನ ಇದೆ. ಕೆಲವು ಕಡೆ ಸಿಂಗಲ್‌ ಸ್ಕ್ರೀನ್‌ಗಳಲ್ಲೇ ಏಳು, ಎಂಟು ಪ್ರದರ್ಶನ ನಿಗದಿಯಾಗಿರುವುದೂ ಇದೆ.

ಧರ್ಮಸ್ಥಳ, ಕುಕ್ಕೆಗೆ ನಟ ಯಶ್ ಭೇಟಿ: ಕೆಜಿಎಫ್ ರಿಲೀಸ್‌ಗೂ ಮುನ್ನ ಟೆಂಪಲ್ ರನ್!

ಎಲ್ಲಾ ಕಡೆಗಳಲ್ಲೂ ಮೊದಲ ದಿನದ ಪ್ರದರ್ಶನಕ್ಕೆ ಟಿಕೆಟ್‌ ದರ ಏರಿಸಲಾಗಿದೆ. ಮುಂಬೈಯಲ್ಲಿ ಗರಿಷ್ಠ ಟಿಕೆಟ್‌ ದರ 1500 ರು., ದೆಹಲಿ ಮತ್ತು ಬೆಂಗಳೂರಿನಲ್ಲಿ ಗರಿಷ್ಠ ಟಿಕೆಟ್‌ ದರ 2000 ರು. ನಿಗದಿಯಾಗಿದೆ. ಈ ಎಲ್ಲಾ ಬೆಳವಣಿಗೆಯ ಪ್ರಕಾರ ಕೆಜಿಎಫ್‌ 2 ಇತಿಹಾಸ ಸೃಷ್ಟಿಸುವುದು ನಿಶ್ಚಿತವಾಗಿದೆ.

ವಿಶ್ವಾದ್ಯಂತ ಪ್ರದರ್ಶನ ಸಂಖ್ಯೆ- 7500+
ಭಾರತದಲ್ಲಿ ಪ್ರದರ್ಶನ ಸಂಖ್ಯೆ- 5500+
ಗರಿಷ್ಠ ಟಿಕೆಟ್‌ ದರ- ಬೆಂಗಳೂರು, ದೆಹಲಿ- .2000, ಮುಂಬೈ- .1500
ಅಮೆರಿಕದಲ್ಲಿ ಪ್ರದರ್ಶನ ಸಂಖ್ಯೆ- 1000+
ಮೊದಲ ದಿನದ ಗಳಿಕೆ ನಿರೀಕ್ಷೆ- .250 ಕೋಟಿ+
ಮೊದಲ ದಿನ ಮೊದಲ ಪ್ರದರ್ಶನ- ರಾತ್ರಿ 1 ಗಂಟೆ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ