
ಈ ಚಿತ್ರ ಇದೇ ಮಾ.13ಕ್ಕೆ ತೆರೆ ಕಾಣುತ್ತಿದ್ದು, ಸಿನಿಮಾ ಬಿಡುಗಡೆಯ ಜತೆಗೆ ಚಿತ್ರದ ಕುರಿತು ಮಾತನಾಡಲು ಚಿತ್ರತಂಡ ಮಾಧ್ಯಮಗಳ ಮುಂದೆ ಆಗಮಿಸಿತು. ಶುಭಾ ಪೂಜಾ ಹಾಗೂ ರಕ್ಷಾ… ಚಿತ್ರದ ಜೋಡಿ. 1980ರಲ್ಲಿ ನರಗುಂದದಲ್ಲಿ ನಡೆದ ಘಟನೆಯೇ ಈ ಚಿತ್ರಕ್ಕೇ ಪ್ರೇರಣೆ ಆಗಿದ್ದು, ಆ ದಿನಗಳ ಕತೆ ಈಗಲೂ ಪ್ರಸ್ತುತ ಎಂಬುದಕ್ಕೆ ಅದು ರೈತರಿಗೆ ಸಂಬಂಧಿಸಿದ್ದು. ಆ ಕಾರಣಕ್ಕೆ ಇದನ್ನು ಸಿನಿಮಾ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದ ಒಂದು ಪವರ್ಫುಲ್ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬರು ಅವರವರ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಹೊಸ ರೀತಿಯ ಅನುಭವ ನೀಡುವ ಸಿನಿಮಾ ಇದು ಎಂಬುದರಲ್ಲಿ ಎರಡು ಮಾತಿಲ್ಲ. ಈಗಿನ ಜನರೇಷನ್ಗೆ ನರಗುಂದ ವಿಷಯ ಗೊತ್ತಿಲ್ಲ. ಆ ಒಂದು ರೋಚಕ ಕಥನ ತೆರೆ ಮೇಲೆ ಮೂಡಿದರೆ ಹೇಗಿರುತ್ತದೆ ಎನ್ನುವ ಕುತೂಹಲ ಇದ್ದವರು ಈ ಸಿನಿಮಾ ನೋಡಬೇಕು ಎಂಬುದು ನಿರ್ದೇಶ ನಾಗೇಂದ್ರ ಮಾಗಡಿ ಅವರ ಮಾತು.
ನಟಿ ಶುಭಾ ಪೂಂಜಾ ಮೊದಲ ಬಾರಿಗೆ ರೈತ ಮಹಿಳೆಯ ಪಾತ್ರ ಮಾಡಿದ್ದಾರೆ. ಹಳ್ಳಿಯ ಹಿನ್ನೆಲೆಯಲ್ಲಿ ಸಾಗುವ ಕತೆಯಲ್ಲಿ ರೈತ ಹೋರಾಟಗಾರನ ಪತ್ನಿ ಪಾತ್ರ ಮಾಡಿರುವುದಕ್ಕೆ ಖುಷಿ ಇದೆ. ರೆಗ್ಯೂಲರ್ ಸಿನಿಮಾಗಳ ಜತೆಗೆ ಇಂಥ ಅಪರೂಪ ಕತೆ ಇರುವ ಸಿನಿಮಾಗಳಲ್ಲಿ ನಟಿಸುವುದಕ್ಕೆ ಖುಷಿ ಇದೆ. ಈ ರೀತಿಯ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗೆಲ್ಲಬೇಕು. ಉತ್ತರ ಕರ್ನಾಟಕದ ಭಾಗದಲ್ಲಿ ಹಳ್ಳಿಗಳಲ್ಲಿ ಓಡಾಡಿದ್ದು, ಅಲ್ಲೇ ಇದ್ದು ಶೂಟಿಂಗ್ ಮಾಡಿದ್ದು ನನಗೆ ವಿಷೇಶ ಅನುಭವ ನೀಡಿತು ಎಂದು ಶುಭಾ ಪೂಂಜಾ ಹೇಳಿಕೊಂಡರು. ‘ಪುಟ್ಟಗೌರಿ’ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ರಕ್ಷಿತ್ ಅಲಿಯಾಸ್ ರಕ್ಷಾ…, ಮೊದಲ ಬಾರಿಗೆ ಚಿತ್ರದ ನಾಯಕನಾಗಿ ‘ನರಗುಂದ ಬಂಡಾಯ’ ಚಿತ್ರದ ಮೂಲಕ ಬರುತ್ತಿದ್ದಾರೆ. ರೈತರ ಬದುಕಿನ ಚಿತ್ರಣವನ್ನು ಹೇಳುತ್ತಲೇ ಅವರ ಹೋರಾಟದ ಕೆಚ್ಚು ಈಗಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಈ ಸಿನಿಮಾ ಬಂದಿದೆ ಎಂಬುದು ರಕ್ಷಾ… ಅವರ ಅಭಿಪ್ರಾಯ. ಈ ಕಾರಣಕ್ಕೆ ಈ ಚಿತ್ರವನ್ನು ನೋಡಬೇಕು ಎಂಬುದು ಅವರ ಪ್ರೀತಿಯ ಬೇಡಿಕೆ ಕೂಡ ಹೌದು.
ಭವ್ಯ, ನೀನಾಸಂ ಅಶ್ವತ್್ಥ, ಸುನಂದ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಶೇಖರ್ ಯಳುವಿ ಹಾಗೂ ಎಸ್ ಜಿ ಸಿದ್ದೇಶ್ ವಿರಕ್ತಮಠ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಕೇಶವಾದಿತ್ಯ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಆರ್ ಗಿರಿ ಛಾಯಾಗ್ರಾಹಣ, ಯಶೋವರ್ಧನ್ ಸಂಗೀತ ಚಿತ್ರಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.