
ಸದ್ಯ ನಿರ್ದೇಶಕ ಚೇತನ್ ಕುಮಾರ್ ಅವರು ಡೈಲಾಗ್ ರೀಡಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಮಾಚ್‌ರ್ 17ಕ್ಕೆ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಗೆ ಮಾಡಲು ತಯಾರಿ ಮಾಡಿಕೊಂಡಿದ್ದಾರೆ.
ತಾರಾಮೆರುಗು: ಕಿಶೋರ್ ಪತ್ತಿಕೊಂಡ ನಿರ್ಮಾಣದ, ಶ್ರೀಶ ಕೂದುವಳ್ಳಿ ಕ್ಯಾಮೆರಾ, ಚರಣ್ ರಾಜ್ ಸಂಗೀತದ ಈ ಚಿತ್ರದಲ್ಲಿ ಪುನೀತ್ರಾಜ್ಕುಮಾರ್ ಸೇರಿದಂತೆ 250 ರಿಂದ 300 ಜನ ಕಲಾವಿದರು ಚಿತ್ರದಲ್ಲಿ ಬರುತ್ತಾರೆ.
ಶೂಟಿಂಗ್ ಸ್ಪಾಟ್: ಕಲರ್ಫುಲ್ಲಾಗಿರುವ ಒಂದು ಸೆಟ್ ಹಾಕಲಾಗಿತ್ತು. ರವಿವರ್ಮ ಸಾಹಸ ನಿರ್ದೇಶನದಲ್ಲಿ ಒಂದು ಫೈಟ್ ಚಿತ್ರೀಕರಣ ಮಾಡಲಾಗಿದೆ. ಇದರ ನಡುವೆ ಚಿತ್ರದ ಕೆಲ ಮಾತಿನ ಭಾಗದ ಚಿತ್ರೀಕರಣ ಮಾಡಲಾಗಿದೆ. ಮೇಕಿಂಗ್ ಕಡೆಗೆ ಹೆಚ್ಚು ಗಮನ ಕೊಡಲಾಗುತ್ತಿದೆ. ಯಾಕೆಂದರೆ ಕತೆ ಹೇಗೆ ಹೇಳಿದರೂ ಅದನ್ನು ಹೊಸ ರೀತಿಯ ದೃಶ್ಯಗಳ ಮೂಲಕ ಹೇಳಬೇಕು ಎಂಬುದು ‘ಜೇಮ್ಸ್’ ನಿರ್ದೇಶಕ ಚೇತನ್ ಕುಮಾರ್ ನಂಬಿಕೆ. ಹೀಗಾಗಿ ಚಿತ್ರವನ್ನು ಸಾಕಷ್ಟುಅದ್ದೂರಿಯಾಗಿಯೇ ನಿರ್ಮಾಣ ಮಾಡಲಿದ್ದು, 20ಕ್ಕೂ ಹೆಚ್ಚು ಸೆಟ್ಗಳನ್ನು ಹಾಕ್ವು ಪ್ಲಾನ್ ಚಿತ್ರತಂಡದ್ದು. ಚಿತ್ರದ ನಾಯಕ ಪುನೀತ್ ರಾಜ್ಕುಮಾರ್ ಅವರು ಕಾರ್ಪೋರೇಟ್ ಸ್ಟೈಲ್‌ನ ನ್ಯೂ ಲುಕ್ನಲ್ಲಿ ತೆರೆ ಮೇಲೆ ಬರಲಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ನೋಡಿದವರಿಗೆ ಅಪ್ಪು, ಹೊಸತನ ಗೊತ್ತಾಗಲಿದೆ. ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ, ಉತ್ತರ ಭಾರತದ ಕೆಲವು ವಿಶೇಷವಾದ ಸ್ಥಳಗಳಲ್ಲಿ ಸಿನಿಮಾ ಶೂಟಿಂಗ್ ಮಾಡಿಕೊಳ್ಳಲಿದೆ. ಜತೆಗೆ ವಿದೇಶಿ ತಾಣಗಳಲ್ಲಿ ಹಾಡುಗಳ ಚಿತ್ರೀಕರಣ ಮಾಡುವ ಪ್ಲಾನ್ ನಿರ್ದೇಶಕರದ್ದು.
ಈ ಕೆಲಸಕ್ಕಾಗಿ ಸಂಭಾವನೆಯನ್ನೇ ಪಡೆಯದ ಅಪ್ಪು, ನಿಜಕ್ಕೂ ಗ್ರೇಟ್!
ಪ್ರತಿ ದಿನ 120ಕ್ಕೂ ಹೆಚ್ಚು ತಂತ್ರಜ್ಞರ ತಂಡದೊಂದಿಗೆ ‘ಜೇಮ್ಸ್’ ಚಿತ್ರಕ್ಕೆ ಕೆಲಸ ಮಾಡುತ್ತಿದ್ದೇನೆ. ಯಾವುದೇ ಚಿತ್ರಕ್ಕೆ ಕೆಲಸ ಮಾಡಿದರೂ ಬರವಣಿಗೆಯೇ ನನ್ನ ಮೊದಲ ನಂಬಿಕೆ. ಯಾವ ಹೀರೋಗೆ ಸಿನಿಮಾ ಮಾಡುತ್ತಿದ್ದೇವೆ, ಅವರ ಅಭಿಮಾನಿಗಳು ನಿರೀಕ್ಷೆ, ನಿರ್ಮಾಪಕರ ಗುರಿ, ಚಿತ್ರರಂಗದ ಊಹೆಗಳು, ನಾಯಕ ನಟನ ಹಿಂದಿನ ಕೆರಿಯರ್ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕತೆ ಬರೆಯುವುದು, ಬರೆದ ಕತೆಗೆ ತಕ್ಕಂತೆ ಪಾತ್ರಗಳನ್ನು ರೂಪಿಸುವ ಸವಾಲು ಮುಟ್ಟಿದರೆ ಸಿನಿಮಾ ಅರ್ಧ ಗೆದ್ದಂತೆ. ಚಿತ್ರಮಂದಿರಕ್ಕೆ ಬಂದ ಮೇಲೆ ನಮ್ಮ ಉಳಿದರ್ಧ ಗೆಲುವು ಪ್ರೇಕ್ಷಕರ ಕೈಯಲ್ಲಿರುತ್ತದೆ.- ಚೇತನ್‌ಕುಮಾರ್
ಸಣ್ಣ ವಯಸ್ಸಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಪುನೀತ್ ಮಗಳು ದೃತಿ...
ಯಾವಾಗ ತೆರೆಗೆ ಬರುತ್ತೆ?: ಶೂಟಿಂಗ್ ಈಗ ಆರಂಭವಾಗಿದೆ. ಅಲ್ಲದೆ ‘ಯುವರತ್ನ’ ಬಿಡುಗಡೆಯ ಸಾಲಿನಲ್ಲಿ ‘ಜೇಮ್ಸ್’ಗಿಂತ ಮೊದಲು ಇದೆ. ಹೀಗಾಗಿ ‘ಜೇಮ್ಸ್’ ಸಿನಿಮಾ ಬಿಡುಗಡೆ ದಿನಾಂಕವನ್ನು ಪಕ್ಕಾ ಮಾಡಿಕೊಂಡಿಲ್ಲ. ಎಲ್ಲವೂ ಅಂದುಕೊಂಡಂತೆ ಆದರೆ ಈ ವರ್ಷದ ಕೊನೆಯಲ್ಲಿ ಬರುವ ಸಾಧ್ಯತೆಗಳಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.