ಚಿತ್ರೀಕರಣ ಹಂತ: ಸದ್ಯಕ್ಕೆ ಒಂದು ಹಂತದ ಚಿತ್ರೀಕರಣ ಮುಗಿಸಿದ್ದಾರೆ. ಮೊದಲ ಹಂತದ ಚಿತ್ರೀಕರಣ ಮುಗಿಸಿ ಹೈದರಾಬಾದ್ ಹಾಗೂ ಬೆಂಗಳೂರಿನ ಮಿನರ್ವ ಮಿಲ್ನಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಯುತ್ತಿದೆ.
35 ದಿನಗಳ ಕಾಲ ನಡೆಯುವ ಈ ಚಿತ್ರೀಕರಣಕ್ಕಾಗಿ ಎರಡು ಕಡೆ ಬೋಟ್ ಸೆಟ್ ಹಾಕಲಾಗಿದೆ. ಒಟ್ಟು 150 ರಿಂದ 170 ದಿನಗಳ ಶೂಟಿಂಗ್ ಪ್ಲಾನ್ ಮಾಡಿಕೊಂಡಿದ್ದಾರೆ. ಮುಂದೆ ವಾರಾಣಸಿ, ಮುಂಬೈ, ಮಂಗಳೂರು, ಪಾಂಡಿಚೇರಿಯಲ್ಲಿ ಏಪ್ರಿಲ್ 28 ರಿಂದ ಶೂಟಿಂಗ್ ಆರಂಭವಾಗಲಿದೆ.
ತಾರಾಮೆರುಗು: ಚಿತ್ರಕ್ಕೆ ಇನ್ನೂ ನಾಯಕಿ ಆಯ್ಕೆ ಆಗಿಲ್ಲ. ಬಾಲಿವುಡ್ನ ಕಬೀರ್‌ಸಿಂಗ್ ದುಹಾನ್, ತೆಲುಗಿನ ಕೋಟಾ ಶ್ರೀನಿವಾಸ್, ಸುಬ್ಬರಾಜು, ಕನ್ನಡದ ನವೀನ್ ಸೇರಿದಂತೆ ಒಟ್ಟು 600ಕ್ಕೂ ಹೆಚ್ಚು ಮಂದಿ ಸೆಟ್ನಲ್ಲಿದ್ದಾರೆ.
ಬಹುಭಾಷೆಯಲ್ಲಿ ಬರುತ್ತಿರುವ ಸಿನಿಮಾ. ಹೀಗಾಗಿ ನಟ ಉಪೇಂದ್ರ ಅವರು ಸಾಕಷ್ಟುಶ್ರಮ ಹಾಕುತ್ತಿದ್ದಾರೆ. 18 ನಿರ್ದೇಶಕರ ತಂಡ, 220 ತಾಂತ್ರಿಕ ತಂಡ. ಸೆಟ್ ಬಾಯ್ಸ್ 40 ಜನ ಹೀಗೆ ದೊಡ್ಡ ಮಟ್ಟದಲ್ಲಿ ಶೂಟಿಂಗ್ ಮಾಡುತ್ತಿರುವ ಚಿತ್ರದ ದೃಶ್ಯಗಳನ್ನು ನೋಡಿದ ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದ ಸಿಇಓ ಸಿವಿ ರಾವ್ ಅವರು ನಿರ್ದೇಶಕ ರಾಜಮೌಳಿ ಅವರ ‘ಅರ್ಆರ್ಆರ್’ ಚಿತ್ರಕ್ಕೆ ಕಂಪೇರ್ ಮಾಡಿದರು. ಹಾಲಿವುಡ್ ಟ್ರೀಟ್ಮೆಂಟ್ ಇದೆ. ಕನ್ನಡ ಚಿತ್ರವೊಂದು ಈ ಮಟ್ಟಿಗೆ ಕ್ವಾಲಿಟಿ ಇರುವುದು ಸೂಪರ್ ಎಂದು ಹೊಗಳಿದ್ದು, ನಮ್ಮ ಚಿತ್ರದ ಯಶಸ್ಸಿನ ಭರವಸೆ ಹೆಚ್ಚಿಸಿತು.- ಆರ್. ಚಂದ್ರು
ಶೂಟಿಂಗ್ ಸ್ಪಾಟ್: ಹೈದರಾಬಾದ್ನಲ್ಲಿ ಬೋಟ್‌ನ ಹೊರಾಂಗಣ(ಟಾಪ್) ಸೆಟ್ ಹಾಕಿದ್ದರೆ, ಬೆಂಗಳೂರಿನ ಮಿನರ್ವ ಮಿಲ್ನಲ್ಲಿ 60 ಲಕ್ಷ ವೆಚ್ಚದಲ್ಲಿ ಬೋಟ್‌ನ ಒಳಾಂಗಣ (ಇಂಟೀರಿಯರ್) ಸೆಟ್ ಹಾಕಲಾಗಿದೆ. ಇದರ ಜತೆಗೆ ಜೈಲು, ಪೊಲೀಸ್ ಸ್ಟೇಷನ್ ಸೇರಿದಂತೆ ಒಟ್ಟು 18 ಸೆಟ್‌ಗಳನ್ನು ಹಾಕಿದ್ದಾರೆ. ಏಪ್ರಿಲ್ 4ರವರೆಗೂ ಚಿತ್ರೀಕರಣ ನಡೆಯಲಿದ್ದು, 50ರ ದಶಕದ ಕಾಲಘಟ್ಟದ ಉಪೇಂದ್ರ ಲುಕ್ಕುಗಳು ಸೆಟ್‌ನ ಹೈಲೈಟ್. ಕಲಾವಿದರ ಕಾಸ್ಟೂ್ಯಮ್, ಚಿತ್ರದಲ್ಲಿ ಬಳಸುವ ವಾಹನಗಳು, ಕತೆಯ ಹಿನ್ನೆಲೆ... ಹೀಗೆ ಎಲ್ಲದಕ್ಕೂ 50 ಕಾಲಘಟ್ಟದ ಫೀಲ್ ಇದೆ. ಈಗ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ದೃಶ್ಯಗಳ ಚಿತ್ರೀಕರಣ. ಹೀಗಾಗಿ ಒಂದೊಂದು ದೃಶ್ಯ ಎರಡು ಸಲ ಶೂಟಿಂಗ್ ಟೇಕ್ ಮಾಡಲಾಗುತ್ತಿದೆ. ಸೆಟ್‌ನಲ್ಲಿ ಯಾರೂ ಮೊಬೈಲ್ ಬಳಸುವಂತಿಲ್ಲ. ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ಶೂಟಿಂಗ್ ಆರಂಭವಾಗುತ್ತದೆ. ಹಳೆಯ ಕಾಲದ ಕಾಸ್ಟೂ್ಯಮ್ನಲ್ಲಿ ಉಪೇಂದ್ರ ಎಂಟ್ರಿ ಆಗುತ್ತಿದಂತೆಯೇ ಚಿತ್ರೀಕರಣ ಸೆಟ್‌ಗೆ ಜೋಶ್ ಬರುತ್ತದೆ.
'ಸಂಗೊಳ್ಳಿ ರಾಯಣ್ಣ' ಆದ್ಮೆಲೇ 'ಕಬ್ಜ' ಚಿತ್ರಕ್ಕೆ ಕೋಟಿ ಬಜೆಟ್ ಸೆಟ್!
ಯಾವಾಗ ತೆರೆಗೆ ಬರುತ್ತೆ?: 80 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ಕಬ್ಜ’ ಇದೇ ವರ್ಷದ ಕೊನೆಯಲ್ಲಿ ತೆರೆಗೆ ಬರಲಿದೆ.