'ರಾಬರ್ಟ್‌' ಆದ್ಮೇಲೆ ಅದ್ಧೂರಿಯಾಗಿ ಬರ್ತಿದೆ 'ಪೊಗರು'!

Suvarna News   | Asianet News
Published : Mar 13, 2020, 03:04 PM ISTUpdated : Mar 20, 2020, 05:23 PM IST
'ರಾಬರ್ಟ್‌' ಆದ್ಮೇಲೆ ಅದ್ಧೂರಿಯಾಗಿ ಬರ್ತಿದೆ 'ಪೊಗರು'!

ಸಾರಾಂಶ

ಚಿತ್ರೀ​ಕ​ರಣ ಹಂತ: ಇಲ್ಲಿ​ಯವ​ರೆಗೂ ಒಟ್ಟು 110 ದಿನ​ಗಳ ಕಾಲ ಚಿತ್ರೀ​ಕ​ರಣ ಮಾಡ​ಲಾ​ಗಿದೆ. ಇನ್ನು ಒಂದೇ ಒಂದು ಹಾಡು ಮಾತ್ರ ಬಾಕಿ ಉಳಿ​ದು​ಕೊಂಡಿದೆ. ಬೆಂಗ​ಳೂರು, ಮೈಸೂರು, ಚನ್ನೈ, ಹೈದ​ರಾ​ಬಾದ್‌, ಬಳ್ಳಾರಿ ಮುಂತಾದ ಕಡೆ ಈಗಾ​ಗಲೇ ಶೂಟಿಂಗ್‌ ಆಗಿದೆ. ಮುಂದಿನ ಒಂದು ಹಾಡಿನ ಚಿತ್ರೀ​ಕ​ರ​ಣಕ್ಕೆ ವಿಶೇ​ಷ​ವಾದ ಲೋಕೇಶ್‌ ಹುಡು​ಕು​ತ್ತಿದ್ದಾರೆ ನಿರ್ದೇ​ಶಕ ನಂದ​ಕಿ​ಶೋ​ರ್‌.

ತಾರಾ​ಮೆ​ರ​ಗು: ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ, ಪವಿತ್ರಾ ಲೋಕೇಶ್‌, ರವಿ​ಶಂಕರ್‌, ಸಂಪತ್‌, ಡಾಲಿ ಧನಂಜಯ್‌, ಕರಿ​ಸುಬ್ಬು, ಕುರಿ ಪ್ರತಾಪ್‌, ರಾಘ​ವೇಂದ್ರ ರಾಜ್‌​ಕು​ಮಾರ್‌, ತಾರಾ, ಗಿರಿಜಾ ಲೋಕೇಶ್‌, ಚಿಕಣ್ಣ, ತಬಲಾ ನಾಣಿ, ಧರ್ಮ ಸೇರಿ​ದಂತೆ 100ಕ್ಕೂ ಹೆಚ್ಚು ಪ್ರಮುಖ ಪಾತ್ರ​ಧಾ​ರಿ​ಗಳು ತೆರೆ ಮೇಲೆ ಬರು​ತ್ತಾರೆ.

ಪೊಗರದಸ್ತಾಗಿದೆ ಧ್ರುವಾ ಸರ್ಜಾ 'ಪೊಗರು' ಡೈಲಾಗ್!

ಶೂಟಿಂಗ್‌ ಸ್ಪಾಟ್‌: ಬಿ ಕೆ ಗಂಗಾ​ಧರ್‌ ನಿರ್ಮಾ​ಣದ ಈ ಚಿತ್ರದ ಪ್ರತಿ ದಿನ ಶೂಟಿಂಗ್‌ ಸ್ಪಾಟ್‌​ನಲ್ಲಿ 700ಕ್ಕೂ ಹೆಚ್ಚು ಜನ ಇರು​ತ್ತಿ​ದ್ದರು. ಒಂದೊಂದು ದಿನ ಒಂದು ಸಾವಿರ ಮಂದಿಯೊಂದಿಗೆ ಶೂಟಿಂಗ್‌ ಮಾಡಿ​ಕೊಂಡ ಹೆಗ್ಗ​ಳಿಕೆ ‘ಪೊಗ​ರು’ ಚಿತ್ರದ್ದು. ವಿಶೇ​ಷ​ವಾಗಿ ನಿರ್ಮಿ​ಸ​ಲಾ​ಗಿ​ದ್ದ ಅಂಜ​ನೇ​ಯನ ಬೃಹತ್‌ ಮೂರ್ತಿ ಚಿತ್ರೀ​ಕ​ರಣ ಸೆಟ್‌ನ ಹೈಲೈಟ್‌.

"

ವಿಶೇಷ ಅಂದರೆ ಅಂತಾ​ರಾ​ಷ್ಟ್ರೀಯ ಮಟ್ಟ​ದಲ್ಲಿ ಹೆಸರು ಮಾಡಿದ ನಾಲ್ಕು ಮಂದಿ ಬಾಡಿ ಬಿಲ್ಡ​ರ್‌​ಗಳು ಈ ಚಿತ್ರ​ದಲ್ಲಿ ನಟಿ​ಸಿ​ರು​ವುದು. ಅಮೆ​ರಿಕ ಕಾಯ್‌ ಗ್ರೀನ್‌, ಪ್ರಾನ್ಸ್‌ ಮಾರ್ಗ​ನ್‌ ಅಸ್ಟೇ, ದಕ್ಷಿಣ ಆಫ್ರಿ​ಕಾ​ದ ಜಾನ್‌ ಲುಕ್ಸ್‌, ಜರ್ಮ​ನಿಯ ಜೋ ಲೀಡ​ನ್‌ ಅವರು ಚಿತ್ರದ ಖಡಕ್‌ ಫೈಟ​ರ್‌​ಗಳು. ಇವ​ರಿಗೆ ತಕ್ಕಂತೆ ಗಣೇಶ್‌ ಹಾಗೂ ಅನಲ್‌ ಅರಸ್‌ ಸಾಹಸ ಸಂಯೋ​ಜನೆ ತುಂಬಾ ರೋಚ​ಕ​ವಾ​ಗಿದೆ.

ಪ್ರತಿ ದಿನ ಶೂಟಿಂಗ್‌ ಸೆಟ್‌​ನಲ್ಲಿ ತುಂಬಾ ಪಾಸಿಟಿವ್‌ ಆಗಿದ್ವಿ. ಅದಕ್ಕೆ ಕಾರಣ ಅಂದು​ಕೊಂಡಂತೆ ಪ್ರತಿ ದಿನ ಬೆಳಗ್ಗೆ ಸರಿ​ಯಾದ ಸಮ​ಯಕ್ಕೆ ಶೂಟಿಂಗ್‌ ಶುರು​ವಾ​ಗು​ತ್ತಿತ್ತು. ಚಿತ್ರದ ಹೆಸರು, ಧ್ರುವ ಸರ್ಜಾ ಅವರ ಲುಕ್‌, ನನ್ನ ನಿರ್ದೇ​ಶನ ತಂಡ​ದ​ಲ್ಲಿದ್ದ 7 ಮಂದಿಯ ಶ್ರಮ ನನಗೆ ಹೆಚ್ಚು ಭರ​ವಸೆ ಮೂಡಿ​ಸಿವೆ.- ನಂದಕಿಶೋರ್‌

ಯಾವಾಗ ತೆರೆಗೆ ಬರು​ತ್ತೆ?: ಏಪ್ರಿಲ್‌ ಕೊನೆಯ ವಾರ ಅಥವಾ ಮೇ ಮೊದಲ ವಾರ​.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆ ಮನೆ ಮಾರಾಯ್ತು, ಈಗ 2ನೇ ಮದುವೆ ಆಲೋಚನೆ ಇದ್ಯಾ?; ಇದ್ದದ್ದನ್ನು ಇದ್ದ ಹಾಗೆ ಹೇಳಿದ Vijay Raghavendra
Dhananjaya Baby: ತಂದೆ ಆಸೆ ಈಡೇರಿತು; ಸಿಂಹದ ಮರಿಯಂಥ ಮಗು ಪಡೆದ ಡಾಲಿ ಧನಂಜಯ; ಧನ್ಯತಾ ಈಗ ತಾಯಿ!