ನಟ ರಿಷಬ್ ಶೆಟ್ಟಿಯವರು ಆರನೇ ಕ್ಲಾಸ್ನಲ್ಲಿ ಇರುವಾಗ ಮಾಡಿರುವ ಯಕ್ಷಗಾನ ಪ್ರದರ್ಶನವೊಂದರ ಯಕ್ಷಗಾನ ವೇಷವೊಂದರ ಅಪರೂಪದ ಫೋಟೋ ವೈರಲ್ ಆಗಿದೆ.
ಕಾಂತಾರ ಸಿನಿಮಾ ಕರ್ನಾಟಕ, ಭಾರತ ಮಾತ್ರವಲ್ಲದೇ ಇದೀಗ ಅಂತರರಾಷ್ಟ್ರೀಯ ಮನ್ನಣೆಯನ್ನೂ ಗಳಿಸಿದೆ. ಕಾಂತಾರಾ ಪ್ರೀಕ್ವಲ್ ಯಾವಾಗ ಬರುತ್ತದೆ ಎಂದು ಫ್ಯಾನ್ಸ್ ಕಾತರದಿಂದ ಕಾಯುತ್ತಿರುವ ನಡುವೆಯೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಯೂ ಕಾಂತಾರಾ ಮನ್ನಣೆ ಗಳಿಸಿದೆ. ಅತ್ಯಂತ ಕಡಿಮೆ ಬಜೆಟ್‌ನಲ್ಲಿ ತಯಾರಾಗುವ ಚಿತ್ರ ಕೂಡ ಅಂತರರಾಷ್ಟ್ರೀಯ ಮಟ್ಟವನ್ನು ತಲುಪಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ರಿಷಬ್ ಶೆಟ್ಟಿ ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಕಾಂತಾರ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲ ಹಿಂದಿ, ತೆಲುಗ, ತಮಿಳು, ಮಲಯಾಳಂ ಭಾಷೆಗಳಲೂ ತೆರೆ ಕಂಡು ಅದ್ಭುತ ಯಶಸ್ಸು ಕಂಡಿದೆ. ಪರಭಾಷಿಕರು ಕನ್ನಡದ ಸಿನಿಮಾ ನೋಡುವ ದೃಷ್ಟಿಯೇ ಬೇರೆ ಮಾಡಿದ ಶ್ರೇಯಸ್ಸು ಕೂಡ ಇವರದ್ದು. ‘ಕಾಂತಾರ’ದಲ್ಲಿ ತಮ್ಮ ಅದ್ಭುತ ನಟನೆಯಿಂದ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ಕನ್ನಡದವರಿಗೆ ಮಾತ್ರ ಪರಿಚಯವಿದ್ದ ರಿಷಬ್ ಅವರು, ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.
ಇದೀಗ ರಿಷಬ್ ಅವರ ಹಳೆಯ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸೌಂಡ್ ಮಾಡುತ್ತಿದೆ. ಅದು ಆರನೇ ಕ್ಲಾಸ್ನಲ್ಲಿ ಇರುವಾಗಿನ ಯಕ್ಷಗಾನ ವೇಷ. ರಿಷಬ್ ಅವರಿಗೆ 6ನೇ ಕ್ಲಾಸ್ ನಲ್ಲಿ ಇರುವಾಗಲೇ ಯಕ್ಷಗಾನದ ಬಗ್ಗೆ ಅಪಾರ ಆಸಕ್ತಿ ಇತ್ತು. ಆ ಸಮಯದಲ್ಲಿ ಅವರು ಯಕ್ಷಗಾನದ ಪ್ರದರ್ಶನಗಳನ್ನು ನೀಡಿದ್ದು ಅದರ ಫೋಟೋ ಈಗ ವೈರಲ್ ಆಗಿದೆ. ಹಿಂದೊಮ್ಮೆ ಈ ಕುರಿತು ರಿಷಬ್ ಅವರು ಖುದ್ದು ಹೇಳಿದ್ದುಂಟು. ನಾನು 6ನೇ ಕ್ಲಾಸ್ ನಲ್ಲಿ ಓದುತ್ತಿದ್ದಾಗಲೇ ಕಲಾವಿದನಾಗಿ ನನ್ನ ಪಯಣ ಆರಂಭವಾಯಿತು. ಅಂದಿನಿಂದಲೇ ನನ್ನ ಪ್ರದೇಶದ ಜನಪದ ಕಥೆಗಳನ್ನು ಜನರ ಮುಂದೆ ತರುವುದು ನನ್ನ ಕನಸಾಗಿತ್ತು ಎಂದಿದ್ದರು.
ಅಮ್ಮನಾಗ್ತಿರೋ ನಟಿ ದೀಪಿಕಾ ಪಡುಕೋಣೆ ಇನ್ನೊಂದು ಗುಡ್ ನ್ಯೂಸ್: ಆಸ್ಕರ್ರಿಂದ ವಿಶೇಷ ಮನ್ನಣೆ
ಇನ್ನು ರಿಷಬ್ ಶೆಟ್ಟಿ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, ಇವರು 2010ರಲ್ಲಿ 'ನಮ್ ಏರಿಯಾದಲ್ಲಿ ಒಂದಿನ' ಎಂಬ ಸಿನಿಮಾದಲ್ಲಿ ಚಿತ್ರ ಪಾತ್ರದ ಮೂಲಕ ಪದಾರ್ಪಣೆ ಮಾಡಿದರು. ಅನೀಶ್ ಹಾಗೂ ರಕ್ಷಿತ್ ಶೆಟ್ಟಿ ಈ ಚಿತ್ರದಲ್ಲಿ ಅಭಿನಯಿಸಿದ್ದರು,. ಈ ವೇಳೆ ರಿಷಬ್ ಅವರಿಗೆ ರಕ್ಷಿತ್ ಪರಿಚಯವಾಗಿತ್ತು. ನಂತರ ರಕ್ಷಿತ್ ಶೆಟ್ಟಿ ಅಭಿನಯದ ತುಘಲಕ್ ಸಿನಿಮಾದಲ್ಲೂ ರಿಷಬ್ ಚಿಕ್ಕ ಪಾತ್ರ ಮಾಡಿದ್ದರು. ಈ ಸಂದರ್ಭದಲ್ಲಿ ಇಬ್ಬರ ಸ್ನೇಹವಾಯಿತು. ಬಳಿಕ ಲೂಸಿಯಾ ಸಿನಿಮಾದಲ್ಲಿ ಸಣ್ಣ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದರು ರಿಷಬ್. 2014ರಲ್ಲಿ ರಕ್ಷಿತ್ ಶೆಟ್ಟಿ ನಿರ್ದೇಶನದ 'ಉಳಿದವರು ಕಂಡಂತೆ' ಚಿತ್ರದಲ್ಲಿ ರಿಷಬ್ ಶೆಟ್ಟಿ ರಘು ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 2016ರಲ್ಲಿ ನಿರ್ದೇಶನಾ ಕ್ಷೇತ್ರಕ್ಕೆ ಕಾಲಿಟ್ಟ ರಿಷಬ್ `ರಿಕ್ಕಿ' ಚಿತ್ರ ನಿರ್ದೇಶಿಸಿದರು. 2016ರಲ್ಲಿಯೇ ಇವರ 'ಕಿರಿಕ್ ಪಾರ್ಟಿ' ಬ್ಲಾಕ್ಬಸ್ಟರ್ ಎಂದು ಸಾಬೀತಾಯಿತು. ಬಳಿಕ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾ ನಿರ್ದೇಶಿಸಿದರು. ಇದು 66ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಮಕ್ಕಳ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆಯಿತು. 2019ರಲ್ಲಿ 'ಬಾಲ್ ಬಾಟಮ್' ಹಾಗೂ 2021ರಲ್ಲಿ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಅಭಿನಯಿಸಿದರು. ಬಳಿಕ ಬಂದ ಕಾಂತಾರ ಇವರ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿತು.
ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮುನ್ನ ಮುನ್ನ ರಿಷಬ್ ಅವರು, ಕಾಲೇಜು ದಿನಗಳಲ್ಲಿ ಓದುವ ಜೊತೆಗೆ ಹಲವು ಕಾಯಕಗಳಲ್ಲಿಯೂ ತೊಡಗಿಸಿಕೊಂಡವರು. ನಟನಾಗುವ ಮೊದಲು ರಿಷಬ್ ಶೆಟ್ಟಿ ನೀರಿನ ಬಾಟಲಿಗಳನ್ನು ಮಾರಾಟ ಮಾಡಿದರು. ಹೋಟೆಲ್ಗಳಲ್ಲಿ ಕೆಲಸ ಮಾಡಿದ್ದಾರೆ. ಇಷ್ಟೆಲ್ಲಾ ಶ್ರಮ ಪಟ್ಟು ಈಗ ಮೇಲಕ್ಕೆ ಬಂದಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ವಿಷ್ಣು, ರಾಮನ ಅಂಶವೇ ಪ್ರಧಾನಿ ನರೇಂದ್ರ ಮೋದಿ: ನಟಿ ಕಂಗನಾ ಹೇಳಿಕೆ ಭಾರಿ ವೈರಲ್