ಯಶ್ ನಟನೆಯ ‘ಕೆಜಿಎಫ್ 2’ ಚಿತ್ರವನ್ನು 26 ದಿನಗಳಲ್ಲಿ 5.5 ಕೋಟಿಗೂ ಅಧಿಕ ಜನ ಚಿತ್ರಮಂದಿರದಲ್ಲಿ ವೀಕ್ಷಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಇದು ದಾಖಲೆಯ ವೀಕ್ಷಣೆಯಾಗಿದೆ. ಚಿತ್ರ ಈವರೆಗೆ 1160 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ.
ಕರ್ನಾಟಕದಲ್ಲಿ 70 ಲಕ್ಷ, ತಮಿಳ್ನಾಡಿನ ಸುಮಾರು 70 ಲಕ್ಷ ಜನ, ಆಂಧ್ರಪ್ರದೇಶ, ತೆಲಂಗಾಣದಲ್ಲಿ 85 ಲಕ್ಷ ಜನ, ಕೇರಳದಲ್ಲಿ 45 ಲಕ್ಷ ಮಂದಿ ಈ ಚಿತ್ರ ವೀಕ್ಷಿಸಿದ್ದಾರೆ. ಒಟ್ಟಾರೆ ದಕ್ಷಿಣ ಭಾರತದಲ್ಲಿ 2.70 ಕೋಟಿಗೂ ಹೆಚ್ಚು ಜನ ಈ ಸಿನಿಮಾ ನೋಡಿದ್ದಾರೆ. ಉತ್ತರ ಭಾರತದಲ್ಲಿ 2.35 ಕೋಟಿಗೂ ಅಧಿಕ ಮಂದಿ ‘ಕೆಜಿಎಫ್ 2’ ಚಿತ್ರವನ್ನು ಥಿಯೇಟರ್‌ನಲ್ಲಿ ವೀಕ್ಷಿಸಿದ್ದಾರೆ.
‘ಗದ್ದರ್’ ಹಾಗೂ ‘ಬಾಹುಬಲಿ’ ಬಳಿಕ ಚಿತ್ರಮಂದಿರದಲ್ಲಿ ಅತ್ಯಧಿಕ ಜನ ವೀಕ್ಷಿಸಿದ ಮೂರನೇ ಚಿತ್ರವಾಗಿ ‘ಕೆಜಿಎಫ್ 2’ ಹೊರಹೊಮ್ಮಿದೆ. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಚಿತ್ರವನ್ನು 4.40 ಕೋಟಿ ಜನ ವೀಕ್ಷಿಸಿದ್ದರು. ಟಾಪ್ 1 ಸ್ಥಾನದಲ್ಲಿರುವ ‘ಬಾಹುಬಲಿ 2’ ಚಿತ್ರವನ್ನು ರಾಷ್ಟ್ರಮಟ್ಟದಲ್ಲಿ ಸುಮಾರು 10.80 ಕೋಟಿ, ‘ಗದ್ದರ್’ ಚಿತ್ರವನ್ನು 8 ರಿಂದ 9 ಕೋಟಿ ಜನ ವೀಕ್ಷಿಸಿರಬಹುದು ಎಂದು ಅಂದಾಜಿಸಲಾಗಿದೆ. ಬಾಹುಬಲಿಯ ಮೊದಲ ಭಾಗವನ್ನು 4.90 ಕೋಟಿ ಜನ ನೋಡಿದ್ದರು. ಬಾಲಿವುಡ್ ಚಿತ್ರ ‘ದಂಗಲ್’ ಚಿತ್ರ ರಾಷ್ಟ್ರಮಟ್ಟದಲ್ಲಿ ಮೂರು ಕೋಟಿಗೂ ಅಧಿಕ ವೀಕ್ಷಣೆ ಕಂಡಿತ್ತು. ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.
ಮಕ್ಕಳ ಜೊತೆ ಯಶ್ ವೀಡಿಯೋ ವೈರಲ್
ಮಗಳು ಐರಾ ಹಾಗೂ ಮಗ ಯಥರ್ವ ಜೊತೆಗೆ ಯಶ್ ಹಾಲಿಡೇ ಮೂಡ್‌ನಲ್ಲಿದ್ದಾರೆ. ‘ಎ ವೈಲ್ಡ್ ಸ್ಟಾರ್ಚ್ ಟು ಅವರ್ ವೆಡ್‌ನೆಸ್ ಡೇ’ ಅನ್ನೋ ಹೆಸರಲ್ಲಿ ಮಕ್ಕಳ ಜೊತೆಗೆ ತಮಾಷೆಯಾಗಿ ಕಾಲ ಕಳೆಯುತ್ತಿರುವ ವೀಡಿಯೋವನ್ನು ಟ್ವೀಟ್ ಮಾಡಿದ್ದು, ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ವೀಕ್ಷಣೆಯಾಗಿದೆ. ಯಶ್ ಹುಲಿಯಂತೆ ಪೋಸ್ ಕೊಟ್ಟಾಗ ಯಥರ್ವ ಭಯದಲ್ಲಿ ಓಡಿಹೋಗಿದ್ದನ್ನು ಕಂಡು ಯಶ್, ‘ಓಡ್ದ ಗಣೇಶ’ ಅಂತ ಮಗಳ ಜೊತೆ ನಗುವುದನ್ನು ಫ್ಯಾನ್ಸ್ ನಗುವಿನ ಇಮೋಜಿ ಜೊತೆ ಶೇರ್ ಮಾಡುತ್ತಿದ್ದಾರೆ.
ಯಶ್ ಆ್ಯಕ್ಟಿಂಗ್ ನೋಡಿ ಓಡಿ ಹೋದ ಮಗ; ಓಡಿದ ಗಣೇಶ ಎಂದು ನಕ್ಕಿದ ಅಪ್ಪ-ಮಗಳು- ವಿಡಿಯೋ ವೈರಲ್
ದಕ್ಷಿಣ ಕೊರಿಯಾದಲ್ಲಿ KGF 2 ಬಿಡುಗಡೆ; ಈ ದಾಖಲೆ ಮಾಡಿದ ಕನ್ನಡದ ಮೊದಲ ಸಿನಿಮಾ
ಕೆಜಿಎಫ್-2 ಈಗಾಗಲೇ ಅನೇಕ ದಾಖಲೆಗಳನ್ನು ನಿರ್ಮಾಣ ಮಾಡಿದೆ. ಘಟಾನುಘಟಿ ಸ್ಟಾರ್‌ಗಳ ದಾಖಲೆಗಳನ್ನು ಬ್ರೇಕ್ ಮಾಡಿರುವ ಯಶ್ ಸಿನಿಮಾ ಇದೀಗ ಮತ್ತೊಂದು ದಾಖಲೆ ಬರೆದಿದೆ. ಹೌದು, ದಕ್ಷಿಣ ಕೊರಿಯಾದ ಸಿಯೋಲ್ನಲ್ಲೂ ರಾಕಿ ಭಾಯ್ ಚಿತ್ರ ಪ್ರದರ್ಶನಗೊಂಡಿದೆ. ಈ ಮೂಲಕ ಸೌತ್ ಕೊರಿಯಾದಲ್ಲಿ ಪ್ರದರ್ಶನಗೊಂಡಿರುವ ಮೊದಲ ಕನ್ನಡ ಚಿತ್ರ ಸಿನಿಮಾ ಇದಾಗಿದೆ. ಯಶ್ ನಟನೆಯ ಕೆಜಿಎಫ್-2 ಸಿನಿಮಾ ಪ್ರಪಂಚದಾದ್ಯಂತ ಭಾರಿ ಯಶಸ್ಸನ್ನು ಗಳಿಸಿದೆ. ವಿಶ್ವದ ಅನೇಕ ದೇಶಗಳಲ್ಲಿ ಕೆಜಿಎಫ್-2 ಬಿಡುಗಡೆಯಾಗಿದೆ.
ಇದೀಗ ಮೊದಲ ಬಾರಿಗೆ ಕನ್ನಡದ ಸಿನಿಮಾವೊಂದು ದಕ್ಷಿಣ ಕೊರಿಯಾದಲ್ಲಿ ಬಿಡುಗಡೆಯಾಗುತ್ತಿದೆ. ಈ ಮೂಲಕ ರಾಕಿ ಭಾಯ್ ಮಾರುಕಟ್ಟೆ ಮತ್ತಷ್ಟು ವಿಸ್ತಾರವಾಗುತ್ತಿದೆ. ಅಭಿಮಾನಿ ಬಳಗ ದೊಡ್ಡದಾಡುತ್ತಿದೆ. ಭಾರತ, ನೇಪಾಳ ಮತ್ತು ಬಾಂಗ್ಲದೇಶದಲ್ಲಿ ರಾಕಿ ಭಾಯ್ ನನ್ನು ನೋಡಿ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ. ಎಲ್ಲಾ ದೇಶಗಳಲ್ಲಿಯೂ ಅಭಿಮಾನಿಗಳು ಕೆಜಿಎಫ್-2 ನೋಡಿ ಎಂಜಾಯ್ ಮಾಡುತ್ತಿದ್ದಾರೆ. ರಾಕಿ ಭಾಯ್ ನನ್ನು ಹಾಡಿಹೊಗಳುತ್ತಿದ್ದಾರೆ.