2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ, ದರ್ಶನ್‌ ಸಿನಿಮಾಗೂ ಅವಾರ್ಡ್!

Published : Jan 22, 2025, 04:59 PM ISTUpdated : Jan 22, 2025, 05:05 PM IST
2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ, ದರ್ಶನ್‌ ಸಿನಿಮಾಗೂ ಅವಾರ್ಡ್!

ಸಾರಾಂಶ

೨೦೧೯ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿವೆ. "ಮೋಹನದಾಸ" ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿದೆ. ಸುದೀಪ್ ("ಪೈಲ್ವಾನ್") ಮತ್ತು ಅನುಪಮಾ ಗೌಡ ("ತ್ರಯಂಬಕಂ") ಕ್ರಮವಾಗಿ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿ ಪಡೆದಿದ್ದಾರೆ. "ಯಜಮಾನ" ಚಿತ್ರದ ಹರಿಕೃಷ್ಣ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ತಬಲಾ ನಾಣಿ ಮತ್ತು ಅನುಷಾ ಕೃಷ್ಣ ಪೋಷಕ ನಟ-ನಟಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

2019ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ನಟಿ, ನಿರ್ದೇಶಕಿ ಹಾಗೂ ನಿರ್ಮಾಪಕಿ ರೂಪಾ ಅಯ್ಯರ್ ಧ್ವನಿ ಎತ್ತಿದ್ದರು. ಇದೀಗ ಒಂದು ವರ್ಷದ, ಅಂದರೆ 2019ರ ಪ್ರಶಸ್ತಿ ಘೋಷಣೆ ಆಗಿದೆ. ಈ ಪ್ರಶಸ್ತಿ ಪಟ್ಟಿಯಲ್ಲಿ ನಟ ದರ್ಶನ್ ನಾಯಕತ್ವದ 'ಯಜಮಾನ' ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದೆ. ಯಜಮಾನ ಚಿತ್ರಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ ಪಡೆದಿದ್ದಾರೆ ಸಂಗೀತ ನಿರ್ದೇಶಕ ವಿ ಹರಿಕೃಷ್ಣ. 

ಇನ್ನು 2019ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಅವಾರ್ಡ್ ಪಡೆದವರ ಲಿಸ್ಟ್ ಹೀಗಿದೆ:-

ಅತ್ಯುತ್ತಮ ಚಿತ್ರ : ಮೋಹನದಾಸ
ಪಿ. ಶೇಷಾದ್ರಿ ನಿರ್ದೇಶನದ ಚಿತ್ರ

ದ್ವಿತಿಯ ಅತ್ಯುತ್ತಮ ಚಿತ್ರ : ಲವ್ ಮಾಕ್ ಟೈಲ್
ಡಾರ್ಲಿಂಗ್ ಕೃಷ್ಣ ನಿರ್ದೇಶನದ ಚಿತ್ರ

ತೃತಿಯ ಅತ್ಯುತ್ತಮ ಚಿತ್ರ :  ಅರ್ಘ್ಯೂಂ
ವೈ ಶ್ರೀನಿವಾಸ್ ನಿರ್ದೇಶನಕ

ಬಿಗ್ ಬಾಸ್ 11 ಸೀಸನ್‌ನಿಂದ ಕಿಚ್ಚ ಸುದೀಪ್ ಗಳಿಸಿದ್ದೆಷ್ಟು? ಇದು ಪೇಮೆಂಟ್ ವಿಷ್ಯ ಗುರೂ!

ಅತ್ಯುತ್ತಮ ನಟ ಪ್ರಶಸ್ತಿ: ನಟ ಕಿಚ್ಚ  ಸುದೀಪ್  
ಪೈಲ್ವಾನ್ ಚಿತ್ರಕ್ಕಾಗಿ

ಅತ್ಯುತ್ತಮ ನಟಿ: 
ಅನುಪಮಾ ಗೌಡ
ತ್ರಯಂಬಕಂ ಸಿನಿಮಾಗಾಗಿ

ಅತ್ಯುತ್ತಮ ಪೋಷಕ ನಟ
ತಬಲಾ ನಾಣಿ (ಕಮೆಸ್ಟ್ರಿ ಆಫ್ ಕರಿಯಪ್ಪ)

ಅತ್ಯುತ್ತಮ ಪೋಷಕ ನಟಿ 
ಅನುಷಾ ಕೃಷ್ಣ (ಬ್ರಾಹ್ಮಿಂ)

ಮಣಿಸರ ಮಾರುತ್ತಿದ್ದ ಸುಂದರಿ ಮೊನಾಲಿಸಾ ಮುಂದಿನ ಭವಿಷ್ಯವೇನು?

2019ರ ಅತ್ಯತ್ತಮ ನಟ ಪ್ರಶಸ್ತಿಯನ್ನು ನಟ ಕಿಚ್ಚ ಸುದೀಪ್ ಅವರು ತಮ್ಮ ಪೈಲ್ವಾನ್ ಚಿತ್ರಕ್ಕಾಗಿ ಪಡೆದುಕೊಂಡಿದ್ದಾರೆ. ಅಚ್ಚರಿ ಎಂಬಂತೆ, ನ ಟಕಿಚ್ಚ ಸುದೀಪ್ ಅಭಿನಯದ 'ಮ್ಯಾಕ್ಸ್' ಚಿತ್ರ ಸೂಪರ್ ಹಿಟ್ ಆದ ಸಮಯದಲ್ಲೇ ನಟ ಸುದೀಪ್ ಅವರಿಗೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ. 2024ರ ಕೊನೆಯ ವಾರದಲ್ಲಿ ಬಿಡುಗಡೆ ಕಂಡು ಜಯಭೇರಿ ಭಾರಿಸಿರುವ ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರವು 2024ರ ಸೂಪರ್ ಹಿಟ್ ಚಿತ್ರ ಎಂಬ ಖ್ಯಾತಿ ಪಡೆದಿದೆ. ಇದೀಗ, 2019ರ ಸಿನಿಮಾ ಪೈಲ್ವಾನ್‌ಗಾಗಿ ನಟ ಸುದೀಪ್ ಅವರು ಪ್ರಶಸ್ತಿ ಪಡೆದಿದ್ದಾರೆ. 

ಇನ್ನು ತ್ರಯಂಬಕಂ ಸಿನಿಮಾಗಾಗಿ ನಟಿ ಅನುಪಮಾ ಗೌಡ ಅವರು 2019ರ ಸಾಲಿನ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ತಮ್ಮ ಮನಮುಟ್ಟುವ ನಿರೂಪಣೆಯಿಂದ ಕರುನಾಡಿನಲ್ಲಿ ತಮ್ಮದೇ ಆದ ಒಂದು ವಿಶೇಷ ಸ್ಥಾನ ಪಡೆದುಕೊಂಡಿದ್ದಾರೆ ನಟಿ ಹಾಗು ನಿರೂಪಕಿ ಅನುಪಮಾ ಗೌಡ. ಇದೀಗ ಸಿನಿಮಾ ನಟನೆಗಾಗಿ ಅವಾರ್ಡ್ ಪಡೆದಿದ್ದು, ತಾವು ನಟಿಸಿದ ಕೆಲವೇ ಸಿನಿಮಾಗಳಲ್ಲಿ ಒಂದಾಗಿರುವ 'ತ್ರಯಂಬಕಂ' ಅವರ ಕೈ ಹಿಡಿದಿದೆ.

ಅಮ್ಮ-ಮಗಳ ವಿಡಿಯೋ ವೈರಲ್, ಸುಧಾರಾಣಿ 'ಜಿಂಗಿ ಚಕ್ಕ' ಕಂಡು ಕರ್ನಾಟಕವೇ ಶಾಕ್! 

ಇನ್ನು ಪ್ರಶಸ್ತಿ ಪಡೆದವರಲ್ಲಿ ಬಹಳಷ್ಟು ಖ್ಯಾತ ನಾಮರು ಇದ್ದಾರೆ, ನಿರ್ದೇಶಕರಾದ ಪಿ ಶೇಷಾದ್ರಿ, ಡಾರ್ಲಿಂಗ್ ಕೃಷ್ಣ ಹಾಗೂ ನಟ ತಬಲಾ ನಾಣಿ ಈ ಲಿಸ್ಟ್‌ನಲ್ಲಿ ಸೇರಿದ್ದಾರೆ. ಒಟ್ಟಿನಲ್ಲಿ, ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿದ್ದರಲ್ಲಿಅಂತೂ ಇಂತೂ ಒಂದು ವರ್ಷದ ಪ್ರಶಸ್ತಿ ಸಿಕ್ಕಂತಾಗಿದೆ, ಮಿಕ್ಕ 5 ವಾರ್ಷಿಕ ಪ್ರಶಸ್ತಿಗಳಿಗಾಗಿ ಚಿತ್ರರಂಗ ಕಾದು ಕುಳಿತಿದೆ ಎನ್ನಬಹುದು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?