ಕಂಗ್ಲಿಷ್ ಮಾತನಾಡೋರ ಮಧ್ಯೆ ಅಣ್ಣಾವ್ರ ಹಾಡನ್ನ ಸ್ಪಷ್ಟವಾಗಿ ಹಾಡಿದ ಪೂಜಾ ಗಾಂಧಿಗೆ ಜೈ ಎಂದ ಕನ್ನಡಿಗರು

Published : Jan 22, 2025, 01:50 PM ISTUpdated : Jan 22, 2025, 02:28 PM IST
ಕಂಗ್ಲಿಷ್ ಮಾತನಾಡೋರ ಮಧ್ಯೆ ಅಣ್ಣಾವ್ರ ಹಾಡನ್ನ ಸ್ಪಷ್ಟವಾಗಿ ಹಾಡಿದ ಪೂಜಾ ಗಾಂಧಿಗೆ ಜೈ ಎಂದ ಕನ್ನಡಿಗರು

ಸಾರಾಂಶ

ಉತ್ತರಪ್ರದೇಶದಲ್ಲಿ ಹುಟ್ಟಿ ಬೆಳೆದ ಪೂಜಾ ಗಾಂಧಿ, ಬಾಲಿವುಡ್ ಮೂಲಕ ಚಿತ್ರರಂಗ ಪ್ರವೇಶಿಸಿ, ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದರು. 40ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿ, ಕನ್ನಡ ಕಲಿತು, ಕನ್ನಡ ಪರ ಹೋರಾಟಗಳಲ್ಲಿ ಭಾಗವಹಿಸುತ್ತಾರೆ. ಇತ್ತೀಚೆಗೆ ರಾಜ್ ಕುಮಾರ್ ಅವರ ಹಾಡನ್ನು ಹಾಡಿ ಮೆಚ್ಚುಗೆ ಗಳಿಸಿದ್ದಾರೆ. ಕನ್ನಡದ ಸ್ಪಷ್ಟ ಉಚ್ಚಾರಣೆಗೆ ಪ್ರಶಂಸೆ ವ್ಯಕ್ತವಾಗಿದೆ.

ಕನ್ನಡದ ಜನಪ್ರಿಯ ನಟಿಯರಲ್ಲಿ ಒಬ್ಬರು ಅಂದ್ರೆ ಮಳೆ ಹುಡುಗಿ ಪೂಜಾ ಗಾಂಧಿ (Pooja Gandhi). ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡಿಗರ ಎದೆಗೆ ಲಗ್ಗೆ ಇಟ್ಟ ಉತ್ತರ ಪ್ರದೇಶದ ಹುಡುಗಿ ಪೂಜಾ ಗಾಂಧಿ. ಹುಟ್ಟಿ ಬೆಳೆದದ್ದೆಲ್ಲಾ ಉತ್ತರ ಪ್ರದೇಶದಲ್ಲಿ, ಕರಿಯರ್ ಆರಂಭಿಸಿದ್ದು ಬಾಲಿವುಡ್ ಸಿನಿಮಾ ಮೂಲಕ. ಕತ್ರೋಂಕಿ ಕಿಲಾಡಿ ಎನ್ನುವ ಹಿಂದಿ ಸಿನಿಮಾ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟ ಪೂಜಾ ಬಳಿಕ ಒಂದಷ್ಟು ಹಿಂದಿ ಸಿನಿಮಾ, ಸೀರಿಯಲ್, ಹಾಗೂ ತಮಿಳು, ತೆಲುಗು, ಮಲಯಾಲಂ ಹಾಗೂ ಬೆಂಗಾಳಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಆದರೆ ಇವರಿಗೆ ಹೆಸರು ತಂದುಕೊಟ್ಟಿದ್ದು ಸ್ಯಾಂಡಲ್ ವುಡ್. 

ಮೃತ್ಯುಂಜಯ ಮಂತ್ರ ಓದೋ ಪೂಜಾ ಗಾಂಧಿ ಕನ್ನಡಕ್ಕೆ ನೆಟ್ಟಿಗರ ಬಹುಪರಾಕ್!

ಮುಂಗಾರು ಮಳೆ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಗೆ (Golden Star Ganesh) ನಾಯಕಿಯಾಗಿ ನಟಿಸುವ ಮೂಲಕ ರಾತ್ರೋ ರಾತ್ರಿ ಸ್ಟಾರ್ ಪಟ್ಟ ಪಡೆದರು. ನಂತರ ಮಿಲನಾ, ದಂಡುಪಾಳ್ಯದಂತಹ ಹಿಟ್ ಸಿನಿಮಾ ಸೇರಿ 45ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡತಿಯೇ ಆಗಿದ್ದಾರೆ ಈ ಬೆಡಗಿ. ಪೂಜಾ ಗಾಂಧಿ ಕೇವಲ ಕನ್ನಡ ಸಿನಿಮಾಗಳಲ್ಲಿ ನಟಿಸುವುದು ಮಾತ್ರ ಅಲ್ಲ, ಕನ್ನಡಿಗರು ತನಗೆ ಕೊಟ್ಟ ಪ್ರೀತಿ ಹಾಗೂ ಕನ್ನಡ ಸಿನಿಮಾದಲ್ಲಿ (Kananda Films)ತನಗೆ ಸಿಕ್ಕ ಮಾನ್ಯತೆಗಾಗಿ, ಕರ್ನಾಟಕದಲ್ಲೇ ಉಳಿದುಕೊಂಡಿರುವ ಪೂಜಾ, ಕನ್ನಡ ತರಗತಿಗೆ ತೆರಳಿ ಕನ್ನಡ ಬರೆಯೋದನ್ನು ಕೂಡ ಕಲಿತರು. ಕನ್ನಡ ಅಕ್ಷರಮಾಲೆಯಿಂದ ಆರಂಭಿಸಿದ ನಟಿ ಈಗ ಕನ್ನಡದ ಸಾಹಿತ್ಯ ಪುಸ್ತಕಗಳನ್ನು ನಿರರ್ಗಳವಾಗಿ ಓದುವಷ್ಟು ಚತುರರಾಗಿದ್ದಾರೆ. ಕನ್ನಡ ಪರ ಹೋರಾಟಗಳಲ್ಲೂ ಪೂಜಾ ಗಾಂಧಿ ಭಾಗವಹಿಸುತ್ತಿರುತ್ತಾರೆ. ಅಷ್ಟೇ ಅಲ್ಲ ಈ ಹಿಂದೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಹೊಸ ತಲೆಮಾರಿನ ಯುವಜನರು ಉದ್ಯೋಗ ಪಡೆಯಲು ಆಧುನಿಕ ಜಗತ್ತು ನಿರೀಕ್ಷಿಸುವ ಕೌಶಲ್ಯಕ್ಕೆ ತಕ್ಕಂತೆ ಹೇಗೆ ತಯಾರು ಮಾಡಬೇಕೆಂಬುದರ ಕುರಿತು ಪೂಜಾಗಾಂಧಿ ಅಧ್ಯಯನ ನಡೆಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವರದಿ ಕೂಡ ಸಲ್ಲಿಸಿದ್ದರು. 

ಮಾತೃಭಾಷೆ ಕನ್ನಡ ಅಲ್ಲ, ಬದುಕಿನ ಭಾಷೆ ಕನ್ನಡ ಅಂದುಕೊಂಡ ಬೇರೆ ಭಾಷೆ ಹಿನ್ನೆಲೆಯ ಸೆಲೆಬ್ರಿಟಿಗಳು ಇವರು!

ಇದೀಗ ಪೂಜಾ ಗಾಂಧಿಯವರ ವಿಡೀಯೋ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಪೂಜಾ ಡಾ. ರಾಜಕುಮಾರ್ (Dr Rajkumar) ಅವರ ಚಲಿಸುವ ಮೋಡಗಳು ಸಿನಿಮಾದ ಜೇನಿನ ಹೊಳೆಯೋ ಹಾಲಿನ ಮಳೆಯೋ ಹಾಡಿನ ಸಾಲುಗಳನ್ನು ತಮ್ಮ ಅಧ್ಬುತವಾದ ಕಂಠಗಳಿಂದ ಶುಶ್ರಾವ್ಯವಾಗಿ ಹಾಡಿದ್ದಾರೆ. ಕವಿ ನುಡಿ ಕೋಗಿಲೆ ಹಾಡಿದ ಹಾಗೆ, ಸವಿ ನುಡಿ ತಣ್ಣನೆ ಗಾಳಿಯ ಹಾಗೆ, ಒಲವಿನ ಮಾತುಗಳಾಡುತಲಿರಲು, ಮಲ್ಲಿಗೆ ಹೂಗಳು ಅರಳಿದ ಹಾಗೆ, ಮಕ್ಕಳು ನುಡಿದರೆ ಸಕ್ಕರೆಯಂತೆ, ಅಕ್ಕರೆ ನುಡಿಗಳು ಮುತ್ತುಗಳಂತೆ, ಪ್ರೀತಿಯ ನೀತಿಯ ಮಾತುಗಳೆಲ್ಲ, ಸುಮಧುರ ಸುಂದರ ನುಡಿಯೊ ಎಂದು ಹಾಡುವ ಮೂಲಕ ಕನ್ನಡಿಗರ ಮನಸ್ಸನ್ನು ಮತ್ತೆ ಗೆದ್ದಿದ್ದಾರೆ. 

ಕನ್ನಡ ಪ್ರಾಧಿಕಾರಕ್ಕೆ ನಟಿ ಪೂಜಾ ಗಾಂಧಿ ವರದಿ: ಕನ್ನಡಿಗರ ಉದ್ಯೋಗಕ್ಕೆ ಹಲವು ಸಲಹೆ

ಇವರ ಹಾಡನ್ನು ಕೇಳಿ ಜನ ಸಂತಸ ವ್ಯಕ್ತಪಡಿಸಿದ್ದು ಆಹಾ! ಕಿವಿ ಇಂಪಾಯಿತು! ಮನ ತಂಪಾಯಿತು.. ಮನಸ್ಸಿದ್ದರೆ ಮಾರ್ಗವೇನು ಹೆದ್ದಾರಿಯೇ ಕಾಣುತ್ತೆ ಅನ್ನೋದಕ್ಕೆ ಇದಕ್ಕಿಂತ ಒಳ್ಳೆ ಉದಾಹರಣೆ ಬೇಕೇ? ಎಂದಿದ್ದಾರೆ, ಮತ್ತೊಬ್ಬರು ಪೂಜಾಗಾಂಧಿ ಕರ್ನಾಟಕದಲ್ಲಿ ಹುಟ್ಟಿದವರಲ್ಲ ಆದರೆ ಇವರ ಕನ್ನಡದ ಸ್ಪಷ್ಟತೆ ನೋಡಿದ್ರೆ ಕರ್ನಾಟಕದಲ್ಲೇ ಹುಟ್ಟಿ ಬೆಳೆದು ಕಂಗ್ಲಿಷ್ ಮಾತಾಡೋ ಅದೆಷ್ಟೋ ಜನ ಕಮಂಗಿಗಳಿಗೆ ನಾಚಿಕೆ ಆಗ್ಬೇಕು ಹಾಗಿದೆ ಎಂದಿದ್ದಾರೆ. ಕನ್ನಡ- ಕರ್ನಾಟಕ ನಮಗೆ ಮಾತೃಭಾಷೆಗಿಂತ ಜಾಸ್ತಿ ಕೊಟ್ಟಾಗ ಅದನ್ನ ಆರಾಧಿಸಬೇಕು ಅನ್ನೋದನ್ನ ಪೂಜಾ ಗಾಂಧಿಯಿಂದ ಕಲಿಬೇಕು ಪ್ರತಿ ಪರರಾಜ್ಯದವರು… ಎಂದು ಸಹ ಹೇಳಿದ್ದಾರೆ ಜನ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ