
ವಯಸ್ಸು ಹೆಚ್ಚಾಗ್ತಿದ್ದಂತೆ ಒಂಟಿತನ (Loneliness) ಕಾಡಲು ಶುರುವಾಗುತ್ತದೆ. ಮನಸ್ಸು ಸಂಗಾತಿಯನ್ನು ಬಯಸುತ್ತದೆ. ಪ್ರೀತಿ (love) ಚಿಗುರಲು ಮನಸ್ಸು ಮುಖ್ಯವೇ ಹೊರತು ವಯಸ್ಸಲ್ಲ. ಇದಕ್ಕೆ ಅಸ್ಸಾಂನ ಗುವಾಹಟಿ (Guwahati)ಯ ಜೋಡಿ ಉತ್ತಮ ನಿದರ್ಶನ. ವಯಸ್ಸು 65ರ ಗಡಿ ದಾಟಿದ ಮೇಲೆ ಇಬ್ಬರಿಗೂ ಪ್ರೀತಿ ಶುರುವಾಗಿದೆ. ವಿಶೇಷವೆಂದ್ರೆ ವೃದ್ಧಾಶ್ರಮ (old age home)ದಲ್ಲಿ ಪರಸ್ಪರ ಪ್ರೀತಿಗೆ ಬಿದ್ದ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮವರಿಂದ ದೂರವಾಗಿ ವೃದ್ಧಾಶ್ರಮ ಸೇರಿದ್ದವರಿಗೆ ಈಗ ವೃದ್ಧಾಶ್ರಮದಲ್ಲಿಯೇ ದಾಂಪತ್ಯದ ಸವಿ ಸವಿಯುವ ಅವಕಾಶ ಸಿಕ್ಕಿದೆ.
ಈ ಅಪರೂಪದ ಘಟನೆ ನಡೆದಿರೋದು ಗುವಾಹಟಿಯ ಸ್ಮಾರಕ ವೃದ್ಧಾಶ್ರಮದಲ್ಲಿ. ಮದುವೆಯಾದ ಪದ್ಮೇಶ್ವರ ಗೋವಾಲ ಅವರಿಗೆ 71 ವರ್ಷವಾದ್ರೆ ಅವರ ಪತ್ನಿ ಜಯಪ್ರಭಾ ಅವರಿಗೆ 65 ವರ್ಷ. ಕಳೆದ ಒಂದು ವರ್ಷದ ಹಿಂದೆ ಇಬ್ಬರ ಮಧ್ಯೆ ಪ್ರೀತಿ ಶುರುವಾಗಿತ್ತು. ಪದ್ಮೇಶ್ವರ್ ಮನೆಯೊಂದರಲ್ಲಿ ಕೆಲಸಗಾರನಾಗಿದ್ದರು. ಮನೆ ಮಾಲೀಕನ ನಿಧನದ ನಂತ್ರ ಮನೆ ಸೊಸೆ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದಳು. ಜಯಪ್ರಭಾ, ಸಹೋದರನ ನಿಧನದ ನಂತ್ರ ಇಲ್ಲಿಗೆ ಬಂದಿದ್ದರು. ಅವರ ಸೋದರಳಿಯ, ಜಯಪ್ರಭಾ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದ.
ಪೋಷಕರು ಮಕ್ಕಳ ಮುಂದೆ ಎಂದಿಗೂ ಈ 3 ಮಾತುಗಳನ್ನಾಡಬಾರದು!
ಪ್ರೀತಿ ಚಿಗುರಿದ್ದು ಹೇಗೆ? : ಜಯಪ್ರಭಾ, ವೃದ್ಧಾಶ್ರಮಕ್ಕೆ ಬಂದಾಗ ಹಾಡೊಂದು ಕೇಳಿದೆ. ಅದು ಬಿಹು ಹಾಡು. ಸುಂದರ ಧ್ವನಿಗೆ ಜಯಪ್ರಭಾ ಕರಗಿ ಹೋಗಿದ್ದಾರೆ. ಈ ಹಾಡನ್ನು ಹಾಡ್ತಿದ್ದಿದ್ದು ಪದ್ಮೇಶ್ವರ್ ಎಂಬುದು ಜಯಪ್ರಭಾ ಅವರಿಗೆ ಗೊತ್ತಾಗಿದೆ. ಇದೇ ಹಾಡಿನ ಮೂಲಕ ಇಬ್ಬರು ಹತ್ತಿರವಾಗಿದ್ದಾರೆ. ಮೊದಲ ದಿನದಿಂದಲೇ ಇಬ್ಬರ ಮಧ್ಯೆ ವಿಶೇಷ ಬಾಂಡಿಂಗ್ ಬೆಳೆದಿದೆ. ಒಟ್ಟಿಗಿದ್ದಾಗ ಸಂತೋಷವಾಗಿರ್ತಿದ್ದ ಅವರನ್ನು ಆಶ್ರಮದ ಉತ್ಪಲ್ ಹರ್ವವರ್ಧನ್ ಗಮನಿಸಿದ್ದಾರೆ. ಇವರಿಬ್ಬರು ಪ್ರೀತಿ ಮಾಡ್ತಿದ್ದಾರೆ ಎಂಬುದನ್ನು ತಿಳಿದು, ಮದುವೆ ಪ್ರಸ್ತಾಪವನ್ನು ಇಟ್ಟಿದ್ದಾರೆ.
ಗುವಹಾಟಿಯಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ನಡೆಯುತ್ತದೆ. ಹಾಗಿರುವಾಗಿ ಇಷ್ಟು ವಯಸ್ಸಾದ್ಮೇಲೆ ಮದುವೆಯಾಗೋದು ಎಷ್ಟು ಸರಿ ಎಂಬ ಆತಂಕ, ಭಯ ಇವರನ್ನು ಕಾಡಿದೆ. ಆದ್ರೆ ಹರ್ಷವರ್ಧನ್ ಇದನ್ನು ಬಿಡಲಿಲ್ಲ. ಪದ್ಮೇಶ್ವರ್ ಹಾಗೂ ಜಯಪ್ರಭಾರನ್ನು ವೃದ್ಧಾಶ್ರಮಕ್ಕೆ ಬಿಟ್ಟು ಹೋಗಿದ್ದವರ ಜೊತೆ ಮಾತನಾಡಿದ್ದಾರೆ. ಅವರು ಈ ಮದುವೆಗೆ ಒಪಿಗೆ ಸೂಚಿಸಿದ ಮೇಲೆ ಮದುವೆ ನೆರವೇರಿದೆ.
ಗಂಡ ಹೆಂಡತಿಯಾಗಿದ್ರೂ ಈ ಕೆಲಸಗಳನ್ನ ಒಟ್ಟಿಗೆ ಮಾಡಬಾರದಂತೆ
ವೃದ್ಧಾಶ್ರಮದಲ್ಲಿ ಅದ್ಧೂರಿ ಮದುವೆ : ಒಂದು ತಿಂಗಳ ಹಿಂದೆ ಮದುವೆ ಆಚರಣೆ ಶುರುವಾಗಿದೆ. ಪತಿ – ಪತ್ನಿಯಾಗುವವರು ಒಂದೇ ಕಡೆ ಇರಬಾರದು ಎನ್ನುವ ಕಾರಣಕ್ಕೆ ಜಯಪ್ರಭಾ ಅವರನ್ನು ಮಾತೃ ನಿವಾಸ ಎಂಬ ಮತ್ತೊಂದು ವೃದ್ಧಾಶ್ರಮಕ್ಕೆ ಕಳುಹಿಸಲಾಗಿತ್ತು. ಮಾತೃ ನಿವಾಸದಲ್ಲಿ ಮದುವೆ ನಡೆದಿದೆ. ವರ ಪದ್ಮೇಶ್ವರ್, ದಿಬ್ಬಣದ ಜೊತೆ ಮಾತೃ ನಿವಾಸಕ್ಕೆ ಹೋಗಿ ಜಯಪ್ರಭಾ ಮದುವೆಯಾಗಿದ್ದಾರೆ. ನಂತ್ರ ಇಬ್ಬರೂ ತಮ್ಮ ಆಶ್ರಮಕ್ಕೆ ಮರಳಿದ್ದಾರೆ. ಆಶ್ರಮದಲ್ಲಿ ನಡೆದ ಮದುವೆ ಸಮಾರಂಭ ಆಶ್ರಮ ವಾಸಿಗಳಿಗೆ ಖುಷಿ ನೀಡಿದೆ. ಪ್ರತಿಯೊಬ್ಬರೂ ಮದುವೆಯನ್ನು ಎಂಜಾಯ್ ಮಾಡಿದ್ದಾರೆ. ಅರಿಶಿನ, ಮೆಹಂದಿ ಸೇರಿದಂತೆ ಎಲ್ಲ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದಿದೆ. ಮದುವೆಗೆ 4000 ಅತಿಥಿಗಳು ಹಾಜರಿದ್ದರು. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಜಯಪ್ರಭಾ ಮದುವೆಗೆ ಮೇಖೇಲಾ ಸಡೋರ್ ಧರಿಸಿದ್ದರು ಮತ್ತು ಪದ್ಮೇಶ್ವರ್ ಧೋತಿ ಕುರ್ತಾ ಧರಿಸಿದ್ದರು. ಪಾರ್ಲರ್ ಗೆ ಹೋಗಿ ಜಯಪ್ರಭಾ ಮೇಕಪ್ ಮಾಡ್ಕೊಂಡಿದ್ದರು. ಒಂದು ಗಂಟೆಯಲ್ಲಿ ಎಲ್ಲ ಶಾಸ್ತ್ರಗಳು ಮುಗಿದು, ಇಬ್ಬರು ದಂಪತಿಯಾದ್ರು. ಜಯಪ್ರಭಾ ತಮ್ಮ ಪ್ರೀತಿಯ ಪತಿಗೆ ಬಾಬು ಅಂತ ಕರೆದ್ರೆ ಪದ್ಮೇಶ್ವರ್, ಜಯಪ್ರಭಾ ಅವರನ್ನು ಜಾನ್ ಎಂದು ಕರೆಯುತ್ತಾರೆ. ಇಬ್ಬರಿಗೂ ಆಶ್ರಮದಲ್ಲಿ ರೂಮ್ ವ್ಯವಸ್ಥೆ ಮಾಡಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.