
ನವದೆಹಲಿ (ಮಾ.6): ಬಹುಶಃ ಎಲ್ಲರಿಗೂ ಅಚ್ಚರಿಯಾಗಿರುವ ವಿಚಾರವೇನೆಂದರೆ, ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಕಾರ್ಯಕ್ರಮವೇ ಇಷ್ಟು ಅದ್ದೂರಿಯಾಗಿದ್ದರೆ, ಇನ್ನು ವಿವಾಹದ ಕಾರ್ಯಕ್ರಮಗಳು ಹೇಗಿರಬಹುದು ಎನ್ನುವ ಚರ್ಚೆ ಶುರುವಾಗಿದೆ. ಈ ಕುರಿತಾದ ಉತ್ತರ ಜುಲೈನಲ್ಲಿ ಸಿಗಲಿದೆ. ಈ ನಡುವೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಕಾರ್ಯಕ್ರಮದ ಕೆಲವೊಂದು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಮೂರು ದಿನಗಳ ಅದ್ದೂರಿ ಕಾರ್ಯಕ್ರಮಕ್ಕೆ ಲೆಕ್ಕವಿಲ್ಲದಷ್ಟು ಸೆಲೆಬ್ರಿಟಿಗಳು ಬಂದಿದ್ದರು. ಅವರು ಕೂಡ ವಿವಾಹಪೂರ್ವ ಕಾರ್ಯಕ್ರಮದಲ್ಲಿದ್ದ ವ್ಯವಸ್ಥೆಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ನಡುವೆ ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಬುಧವಾರ ಸಂಜೆಯ ವೇಳೆ ಇನ್ಸ್‌ಟಾಗ್ರಾಮ್‌ನಲ್ಲಿ ಕಾರ್ಯಕ್ರಮದ ಅಪರೂಪದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಶೂಟ್ ಮಾಡಿರುವುದು ಧರ್ಮ 2.0 ಕಂಪನಿ. ಇದು ಕರಣ್ ಜೋಹರ್ ಅವರ ಮಾತೃಸಂಸ್ಥೆಯಾಗಿರುವ ಧರ್ಮ ಪ್ರೊಡಕ್ಷನ್‌ನ ಅಂಗಸಂಸ್ಥೆಯಾಗಿದೆ.
ಎರಡು ನಿಮಿಷಗಳ ವಿಡಿಯೋದಲ್ಲಿ ಅಂಬಾನಿ ಕುಟುಂಬದ ಭಾವನಾತ್ಮಕ ಅಂಶಗಳನ್ನು ಸೂಕ್ತವಾಗಿ ಸೆರೆಹಿಡಿಯಲಾಗಿದೆ. ವಧುವಾಗಲಿರುವ ರಾಧಿಕಾ ಮರ್ಚೆಂಟ್, ವೇದಿಕೆಗೆ ಬರುವ ಹಾದಿಯಲ್ಲಿ ಕರಣ್ ಜೋಹರ್ ನಿರ್ದೇಶನದ ಕಭಿ ಖುಷಿ ಕಭಿ ಗಮ್ ಚಿತ್ರದ 'ದೇಖಾ ತೆನು ಪೆಹಲಿ ಪೆಹಲಿ ಬಾರ್ ವೇ..' (ಶಾವಾ ಶಾವಾ..) ಆಗಮಿಸುತ್ತಾರೆ. ತರುಣ್ ತಹಿಲಿಯಾನಿ ವಿನ್ಯಾಸ ಮಾಡಿದ ಡ್ರೆಸ್‌ನಲ್ಲಿ ಬಹಳ ಆಕರ್ಷಕವಾಗಿ ಕಾಣೂವ ರಾಧಿಕಾ ಅವರ ಕಣ್ಣಾಲಿಗಳ ಈ ವೇಳೆ ತುಂಬಿ ಹೋಗಿದ್ದವು. ಹಿನ್ನಲೆಯಲ್ಲಿ ಈ ಹಾಡು ಬರುವಾಗಲೇ ನಿಧಾನವಾಗಿ ಹೆಜ್ಜೆ ಹಾಕುತ್ತಾ ವೇದಿಕೆ ಕಡೆ ಬರುತ್ತಿದ್ದರೆ, ವೇದಿಕೆಯ ಮೇಲೆ ಅನಂತ್ ಅಂಬಾನಿ ಕಾಯುತ್ತಿರುವುದನ್ನು ಧರ್ಮ 2.0 ಸಂಸ್ಥೆ ಅದ್ಭುತವಾಗಿ ಸೆರೆಹಿಡಿದಿದೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ಕರಣ್ ಜೋಹರ್, ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರಿಗೆ ತುಂಬಿ ಹೃದಯದ ಅಭಿನಂದನೆಗಳು. ಆಚರಣೆಗಳು ಆತ್ಮೀಯತೆ, ಕೌಟುಂಬಿಕ ಬಂಧಗಳು ಮತ್ತು ಅಪಾರ ಪ್ರೀತಿಯಲ್ಲಿ ಆಳವಾಗಿ ಮುಳುಗಿದವು ಮಾತ್ರವಲ್ಲದೆ ನಮ್ಮ ವೈಭವದ ಭಾರತೀಯ ಸಂಪ್ರದಾಯಗಳ ಸುಂದರವಾಗಿ ಪ್ರತಿಧ್ವನಿಸುತ್ತವೆ ... ಮದುವೆಯ ಪೂರ್ವ ಸಂಭ್ರಮಗಳು ಕುಟುಂಬವು ಪ್ರತಿಯೊಬ್ಬರ ಹೃದಯದಲ್ಲಿ ಇರುವ ಪ್ರೀತಿಗೆ ಸಾಕ್ಷಿಯಾಗಿದೆ! ನೀತಾ ಅತ್ತಿಗೆ, ಮುಖೇಶ್ ಅಣ್ಣ, ಅಕಾಶ್, ಶ್ಲೋಕ್ ಆಕಾಶ್, ಇಶಾ ಮತ್ತು ಆನಂದ್ ಪಿರಾಮಲ್‌ಗೆ ನನ್ನ ಪ್ರೀತಿ ನಮನಗಳು. ನನ್ನ ಹೃದಯದಿಂದ ರಾಧಿಕಾ ಹಾಗೂ ಅನಂತ್‌ಗೆ ಪ್ರೀತಿ ಮಾತ್ರವೇ ನೀಡುತ್ತೇನೆ, ಶುಭವಾಗಲಿ! ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಮುಖೇಶ್ ಅಂಬಾನಿ, ನೀತಾ ಅಂಬಾನಿ ಹಾಗೂ ಇಡೀ ಅಂಬಾನಿ ಕುಟುಂಬ ಭಾವಪರವಶವಾಗಿತ್ತು. ಮುಖೇಶ್ ಅಂಬಾನಿ ಅವರಂತೂ ತಮ್ಮ ಕಣ್ಣಿನಿಂದ ಬರುತ್ತಿದ್ದ ನೀರನ್ನು ಒರೆಸಿಕೊಂಡಿದ್ದೂ ಕಾಣಿಸಿತು. ಹಸ್ತಾಕ್ಷರ್ ಕಾರ್ಯಕ್ರಮದ ವೇಳೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರೀತಿಪೂರ್ವಕವಾಗಿ ಅಪ್ಪಿಕೊಂಡರು. ಆ ಬಳಿಕ ಹಿನ್ನಲೆ ಸಂಗೀತದಲ್ಲಿ ಬದಲಾವಣೆಯಾಗಿ, 'ಗೋವಿಂದ್ ಬೋಲೋ ಹರಿ ಗೋಪಾಲ್ ಬೋಲೋ..' ಹಾಡು ಆರಂಭವಾಗುತ್ತದೆ. ಈ ವೇಳೆ ಇಶಾ ಅಂಬಾನಿ ಶ್ಲೋಕ್ ಮೆಹ್ತಾ ಈ ಹಾಡಿಗೆ ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಿದ್ದು ಕಾಣಿಸಿದೆ. ಡಿಸೈನರ್ ತರುಣ್ ತಹಿಲಿಯಾನಿ ಅವರು ಹಂಚಿಕೊಂಡಿರುವ ಮತ್ತೊಂದು ಫೋಟೋದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಒಬ್ಬರನ್ನೊಬ್ಬರು ಅಪ್ಪಿಕೊಂಡಿದ್ದು, ಅನಂತ್ ರಾಧಿಕಾ ಅವರ ಕೆನ್ನೆಗೆ ಚುಂಬಿಸುತ್ತಿದ್ದಾರೆ.
Anant Ambani Wedding: ಸಾಮಾನ್ಯರಿಗೂ ಆತಿಥ್ಯ ನೀಡಿದ ಕುಬೇರ..! ಜಾಮ್‌ನಗರದಲ್ಲಿ 145 ವಿಮಾನಗಳು ಲ್ಯಾಂಡ್..!
ಜಾಮ್‌ನಗರದಲ್ಲಿ ನಡೆದ ಮೂರು ದಿನಗಳ ಕಾರ್ಯಕ್ರಮದಲ್ಲಿ ರಿಹಾನ್ನಾ, ಅರಿಜಿತ್ ಸಿಂಗ್, ದಿಲ್ಜಿತ್ ದೋಸಾಂಜ್, ಉದಿತ್ ನಾರಾಯಣ್, ಶ್ರೇಯಾ ಘೋಷಾಲ್, ಸುಖ್ವಿಂದರ್ ಸಿಂಗ್ ಮತ್ತು ಎಕಾನ್ ಸೇರಿದಂತೆ ಹಲವರು ಕಾರ್ಯಕ್ರಮವನ್ನು ನೀಡಿದರೆ, ಅತಿಥಿಗಳ ಪಟ್ಟಿಯಲ್ಲಿ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ರಜನಿಕಾಂತ್, ಅಮೀರ್ ಖಾನ್, ಶಾರುಖ್ ಖಾನ್, ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ಕಾಜೋಲ್, ಕತ್ರಿನಾ ಕೈಫ್, ಮಾಧುರಿ ದೀಕ್ಷಿತ್, ಮತ್ತು ಅನಿಲ್ ಅವರ ಉಪಸ್ಥಿತಿಯೂ ಇತ್ತು.ಕಪೂರ್ ಕುಟುಂಬದಿಂದ ಜಾನ್ವಿ ಕಪೂರ್, ಸಾರಾ ಅಲಿ ಖಾನ್, ದೀಪಿಯಾ ಪಡುಕೋಣೆ, ರಣವೀರ್ ಸಿಂಗ್, ಕತ್ರಿನಾ ಕೈಫ್, ವಿಕ್ಕಿ ಕೌಶಲ್, ಆಲಿಯಾ ಭಟ್, ರಣಬೀರ್ ಕಪೂರ್, ಸೋನಮ್ ಕಪೂರ್ ಇದ್ದರು.
ರಿಲಯನ್ಸ್ ಕುಟುಂಬದಲ್ಲಿ ಆದ ಒಡಕು ನಮ್ಮ ನಡುವೆ ಆಗೋದಿಲ್ಲ, ಅನಂತ್ ಅಂಬಾನಿ ವಿಶ್ವಾಸ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.