ಎಂಥಾ ಕಾಲ ಬಂತು ನೋಡೀಪ್ಪಾ..ಕೆಲ ದಿನಗಳ ಹಿಂದಷ್ಟೇ ಮಹಿಳೆ (Women)ಯೊಬ್ಬಳು ತನ್ನ ಹೊಸ ಪತಿ (Husband)ಗೆ ಮಗು ಕೊಡೋದಕ್ಕೆ ತನ್ನ ಮಗ (Son)ನ ಜತೆಯೇ ಮಲಗಿದ ಸ್ಟೋರಿ ಹೇಳಿದ್ವಿ. ಇವ್ಳು ಅಂಥೋಳೆ ನೀನು ಬೇಡ, ಅವ್ನು ಬೇಡ. ಮಗನೇ ನನ್ ಗಂಡ ಅಂತ ಮಗನನ್ನೇ ಮದ್ವೆ (Marriage)ಯಾಗಿದ್ದಾಳೆ.
ಇವತ್ತಿನ ಸಮಾಜ (Society)ದಲ್ಲಿ ಅನೈತಿಕತೆ ಎಂಬುದು ಅಚ್ಚರಿಪಡುವ ವಿಷಯವಾಗಿ ಉಳಿದಿಲ್ಲ. ಎಲ್ಲರೂ ಇದನ್ನು ಸಾಮಾನ್ಯವಾಗಿ ಕಾಣುತ್ತಿದ್ದಾರೆ. ಮೊದಲ್ಲೆಲ್ಲಾ ಸಂಬಂಧ (Relatioship)ಗಳಿಗೆ ಅತಿ ಹೆಚ್ಚು ಮೌಲ್ಯವಿತ್ತು. ಆದರೆ ಇವತ್ತಿನ ದಿನಗಳಲ್ಲಿ ಯಾವ ಸಂಬಂಧವೂ ನಿಜವಾದ ಅರ್ಥವನ್ನು ಉಳಿಸಿಕೊಂಡಿಲ್ಲ. ತಾಯಿ, ಮಗ, ಸ್ನೇಹಿತ, ಗಂಡ ಎಲ್ಲಾ ಸಂಬಂಧಗಲ್ಲೂ ಸುಲಭವಾಗಿ ಮೋಸ ನಡೆಯುತ್ತದೆ. ಗಂಡನ ತಮ್ಮನನ್ನೇ ಮದುವೆಯಾಗುವುದು, ಮಾವನ ಜತೆ ಓಡಿಹೋಗುವುದು, ಶಿಕ್ಷಕನ ಜತೆ ವಿದ್ಯಾರ್ಥಿಯ ಸರಸ. ಹೀಗೆ ಎಂಥಾ ಘಟನೆಗಳು ಬೇಕಾದ್ರೂ ಇವತ್ತಿನ ಕಾಲದಲ್ಲಿ ನಡೆಯುತ್ತವೆ.
ಅಜ್ಜಿ ಮೊಮ್ಮಗನನ್ನೇ ಮದುವೆಯಾಗೋದು, ಮಾವ ಸೊಸೆಯನ್ನೇ ಮದುವೆಯಾಗೋದು ಯಾವುದೂ ಈಗ ಶಾಕಿಂಗ್ ನ್ಯೂಸ್ ಆಗಿ ಉಳಿದಿಲ್ಲ. ಇಲ್ಲಾಗಿರೋದು ಅದ್ರ ಒಂದು ನೆಕ್ಟ್ಟ್ ಲೆವೆಲ್. ಇಲ್ಲಿ ಸೋಷಿಯಲ್ ಮೀಡಿಯಾ ಇನ್‌ಫ್ಲುನಿಯೆನ್ಸರ್ ಆಗಿರೋ ಮಹಿಳೆ (Women)ಯೊಬ್ಬಳು ತನ್ನ ಮಗ (Son)ನನ್ನೇ ಮದುವೆಯಾಗಿದ್ದಾಳೆ. ಅರೆ ಏನು ಅಂತ ಗಾಬರಿಯಾಗ್ಬೇಡಿ. ನಾವ್ ಹೇಳ್ತಿರೋದು ನಿಜಾನೇ.
ಹೊಸ ಪತಿ ಮಗು ಬೇಕು ಎಂದಿದ್ದಕ್ಕೆ ಮಗನನ್ನೇ ಮಂಚಕ್ಕೆ ಕರೆದ್ಲು..!
ಸಾಮಾಜಿಕ ಮಾಧ್ಯಮದ ಪ್ರಭಾವಿ ಅರ್ಥಾತ್ ಸೋಷಿಯಲ್ ಇನ್‌ಫ್ಲುಯೆನ್ಸರ್ ಆಗಿರೋ 35 ವರ್ಷದ ಮಹಿಳೆ, 20 ವರ್ಷದ ತನ್ನ ಮಲಮಗನನ್ನು ವಿವಾಹವಾಗಿದ್ದಾಳೆ. 20 ವರ್ಷದ ಹುಡುಗ ತನ್ನ 45 ವರ್ಷ ವಯಸ್ಸಿನ ತಂದೆಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಈತನನ್ನು ಈ ಮಹಿಳೆ ವಿವಾಹವಾಗಿದ್ದಾಳೆ. ಇದು ನಡೆದಿರೋದು ಇವತ್ತು ನಿನ್ನೆಯಲ್ಲ. ವರ್ಷಗಳ ಹಿಂದೆ. ಇಷ್ಟಕ್ಕೂ ಮಹಿಳೆಗೆ ಗಂಡನನ್ನು ಬಿಟ್ಟು ಮಗನ ಮೇಲೆಯೇ ಪ್ರೀತಿ ಮೂಡಿದ್ಯಾಕೆ ? ಈ ಪ್ರಶ್ನೆ ನಿಮ್ಮಲ್ಲೂ ಮೂಡಿರ್ಬೊದಲ್ಲಾ..ಇಂಟ್ರೆಸ್ಟಿಂಗ್ ವಿಚಾರ ನಾವ್ ಹೇಳ್ತಿವಿ.
ರಷ್ಯಾದ ಕ್ರಾಸ್ನೋಡರ್ ಕ್ರೈ ಮೂಲದ ಮರೀನಾ ಬಾಲ್ಮಾಶೆವಾ ತೂಕ ಇಳಿಸುವಿಕೆಯ ಬಗ್ಗೆ ವೀಡಿಯೋ ಮಾಡಿ ಫೇಮಸ್ ಆಗಿದ್ದರು. ತಮ್ಮ ಮಾಜಿ ಪತಿ ಅಲೆಕ್ಸಿ ಮತ್ತು ಅವರ ಮಗನೊಂದಿಗೆ 10 ವರ್ಷಗಳಿಗೂ ಹೆಚ್ಚು ಕಾಲ ವಾಸಿಸುತ್ತಿದ್ದರು. ಒಂದು ದಶಕದ ಸುದೀರ್ಘ ಮದುವೆಯ ನಂತರ, ಮರೀನಾ ಮತ್ತು ಅಲೆಕ್ಸಿ ಬೇರೆಯಾಗಲು ನಿರ್ಧರಿಸಿದರು. ವಿಚ್ಛೇದನದ ನಂತರ, ಮರೀನಾ ತನ್ನ 20 ವರ್ಷದ ಮಲಮಗ ವ್ಲಾಡಿಮಿರ್ 'ವೋಯಾ' ಶಾವಿರಿನ್‌ನಲ್ಲಿ ಪ್ರೀತಿಯನ್ನು ಕಂಡುಕೊಂಡರು.
ಗಂಡನ ಅಸಡ್ಡೆಯ ವರ್ತನೆ, ಅಸಮಾಧಾನದಿಂದ ರೋಸಿ ಹೋದ ಮಹಿಳೆಗೆ ಕೇರಿಂಗ್ ಸ್ವಭಾವದ ಮಗನೇ ಹೆಚ್ಚು ಇಷ್ಟವಾದ. ಮಗನೇ ನನಗೆ ಉತ್ತಮ ಸಂಗಾತಿಯಾಗಬಲ್ಲ ಎಂದು ನಿರ್ಧರಿಸಿದಳು. ತಾಯಿ ಹಾಗೂ ಮಗ ಇಬ್ಬರೂ ಪರಸ್ಪರ ಪ್ರೀತಿಯನ್ನು ವ್ಯಕ್ತಪಡಿಸಿ, ದಂಪತಿಗಳು 2020ರ ಮದುವೆಯಾಗಲು ಯೋಜನೆ ರೂಪಿಸಿದರು. ರಿಜಿಸ್ಟರ್ ಆಫೀಸ್‌ನಲ್ಲಿಸ ಸರಳವಾಗಿ ವಿವಾಹವಾದರು. ನೂತನ ದಂಪತಿ ಮದುವೆಯ ಕಾನೂನು ದಾಖಲೆಗಳಿಗೆ ಸಹಿ ಹಾಕುವ ವೀಡಿಯೊಗೆ ಸಾವಿರಾರು ಲೈಕ್‌ಗಳು ಮತ್ತು ವೀಕ್ಷಣೆಗಳು ಬಂದಿದ್ದವು.
Relationship Problems : ಶಂಕ್ರಣ್ಣ–ಮೇಘನಾ ನೀವಾಗ್ಬಾರದೆಂದ್ರೆ ಇದನ್ನೋದಿ
ನೋಂದಾವಣೆ ಕಚೇರಿಯ ನಂತರ, ನಾವು ವಿಶಿಷ್ಟವಾದ ಮದುವೆಯ ಉಡುಪನ್ನು ಧರಿಸಿದ್ದೇವೆ ಮತ್ತು ಹಲವಾರು ಅತಿಥಿಗಳೊಂದಿಗೆ ಸ್ಥಳೀಯ ರೆಸ್ಟೋರೆಂಟ್‌ನಲ್ಲಿ ಉತ್ತಮ ಸ್ವಾಗತವನ್ನು ಆನಂದಿಸಿದೆವು ಎಂದು ಮಾರಿಯಾ ಹೇಳಿದರು. ತಾಯಿ ಮಗ ಸಂಬಂಧ ಗಂಡ-ಹೆಂಡತಿ ಸಂಬಂಧವಾಗಿ ಬದಲಾಗಿರುವುದು ನಮ್ಮಲ್ಲಿ ಯಾವುದೇ ಪರಿಣಾಮ ಬೀರಿಲ್ಲ ಎಂದು ಮರೀನಾ ಹೇಳಿದ್ದಾರೆ. ಅದೇನೆ ಇರ್ಲಿ ಈ ವಿಚಾರ ತಿಳ್ದೋರು ಮಾತ್ರ ಈ ಕಣ್ಣಲ್ಲಿ ಇನ್ನೇನೇನೋ ನೋಡ್ಬೇಕಪ್ಪಾ ಅಂತಿದ್ದಾರೆ.