ಕೆಲವರು ಪ್ರಾಮಾಣಿಕವಾಗಿ ದುಡಿದು ಗಳಿಸುವ ಆಸೆ ಹೊಂದಿರುತ್ತಾರೆ. ಮತ್ತೆ ಕೆಲವರು ಕಡಿಮೆ ಸಮಯದಲ್ಲಿ ಶ್ರೀಮಂತರಾಗಲು ಅಡ್ಡ ಮಾರ್ಗ ಹುಡುಕ್ತಾರೆ. ಸರ್ವಸ್ವವನ್ನೇ ಮಾರಿಕೊಂಡ್ರೂ ಅವರಿಗೆ ಚಿಂತೆ ಕಾಡೋದಿಲ್ಲ. ಹಣ, ಹುದ್ದೆ ಮಾತ್ರ ಮುಖ್ಯವಾಗುತ್ತದೆ.
ವೃತ್ತಿ ಒಂದು ಸವಾಲು. ಅದ್ರಲ್ಲೂ ಕಾರ್ಪೊರೇಟ್ ಸಂಸ್ಕೃತಿಯಲ್ಲಿ ನಾನಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಉನ್ನತ ಹುದ್ದೆಗೆ ಏರುವುದು ಇಲ್ಲಿ ಸುಲಭದ ಮಾತಲ್ಲ. ಒತ್ತಡ, ಆಮಿಷಗಳಿಗೆ ಬಲಿಯಾಗಬೇಕಾಗುತ್ತದೆ . ಅಲ್ಪಾವಧಿಯಲ್ಲಿ ಹಣ ಗಳಿಸುವ ಆಸೆ ಹೊಂದಿರುವ ಜನರು ಈ ಆಮಿಷಕ್ಕೆ ಬಲಿಯಾಗ್ತಾರೆ. ಕೆಲಸ, ಉನ್ನತ ಹುದ್ದೆಗಾಗಿ ತನ್ನ ಜೀವನ ಶೈಲಿಯನ್ನೇ ಬದಲಿಸಿಕೊಂಡಿದ್ದಾಳೆ ಈ ಮಹಿಳೆ. ನಾಲ್ಕು ವರ್ಷದಲ್ಲಿ ಕಲ್ಪನೆ ಕೂಡ ಮಾಡಲು ಸಾಧ್ಯವಾಗದಷ್ಟು ಮುಂದೆ ಹೋಗಿರುವ ಈ ಮಹಿಳೆಯೊಳಗೆ ಗುಟ್ಟೊಂದು ಅಡಗಿದೆ.
ಆಕೆ 25ನೇ ವಯಸ್ಸಿನಲ್ಲಿಯೇ ಜಾಹೀರಾತು (Advertisement) ಏಜೆನ್ಸಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳಂತೆ. ಒಳ್ಳೆಯ ಕೆಲಸಗಾರ್ತಿಯಾಗಿದ್ದ ಮಹಿಳೆ ಬಹಳ ಕಡಿಮೆ ಸಮಯದಲ್ಲಿ ಕಂಪನಿ (Company) ಯ ಅತ್ಯಂತ ಜನಪ್ರಿಯ ವ್ಯಕ್ತಿಗಳ ಪಟ್ಟಿ ಸೇರಿದ್ದಳಂತೆ. ಮೂರು ವರ್ಷಗಳಲ್ಲಿಯೇ ಆಕಾಶ ಮುಟ್ಟುವಷ್ಟು ಸಾಧನೆ ಮಾಡಿರುವ ಮಹಿಳೆಯ ವೈಯಕ್ತಿಕ ಜೀವನ ಚೆನ್ನಾಗಿಲ್ಲ.
ನನ್ನ ವರ್ತನೆ ತುಂಬಾ ವಿಚಿತ್ರವಾಗಿದೆ. ನನ್ನ ಜೊತೆ ಯಾವುದೇ ವ್ಯಕ್ತಿ ಒಂದು ಗಂಟೆಗಿಂತ ಹೆಚ್ಚು ಕಾಲ ಇರಲು ಸಾಧ್ಯವೇ ಇಲ್ಲ. ಇದ್ರಲ್ಲಿ ನನ್ನ ತಪ್ಪೇನು ಎಂಬುದು ನನಗೆ ತಿಳಿದಿದೆ. ಹಾಗಾಗಿ ನನಗೆ ಏನು ಬೇಕು ಎಂಬುದನ್ನು ನಾನು ಫೋಕಸ್ ಮಾಡಿದ್ದೇನೆ. ನನಗೆ ಬೇಕಾಗಿದ್ದನ್ನು ನಾನು ಪಡೆಯುತ್ತಿದ್ದೇನೆ ಎನ್ನುತ್ತಾಳೆ ಮಹಿಳೆ.
ದೃಢಸಂಕಲ್ಪ ಮತ್ತು ಕಠಿಣ ಪರಿಶ್ರಮದಿಂದಾಗಿ ನಾನು ಸಾಧಿಸಿ ತೋರಿಸಿದ್ದೇನೆ. ನಾಲ್ಕು ವರ್ಷದಲ್ಲಿ ಕಂಪನಿಯ ಯೋಗ್ಯ ಸ್ಥಾನದಲ್ಲಿ ನಾನು ಕುಳಿತಿದ್ದೇನೆ. ಆದ್ರೆ ನನ್ನ ಹಿಂದೆ ಸಾಕಷ್ಟು ಮಾತುಗಳು ಕೇಳಿ ಬರ್ತಿವೆ. ನಾನು ಈ ಕೆಲಸಕ್ಕೆ ಯೋಗ್ಯವಲ್ಲ ಎಂದು ಅನೇಕರು ಹೇಳ್ತಿದ್ದಾರೆ. ನನ್ನ ಹಾಗೂ ಸಿಇಒ ಮಧ್ಯೆ ಸಂಬಂಧವಿದೆ. ಇದೇ ಕಾರಣಕ್ಕೆ ನನಗೆ ಪ್ರಮೋಷನ್ ಸಿಗ್ತಿದೆ ಎಂದು ಅನೇಕರು ಮಾತನಾಡ್ತಿದ್ದಾರೆ. ಈ ಎಲ್ಲ ವಿಷ್ಯಗಳು ನನ್ನ ಕಿವಿಗೆ ಬಿದ್ದಿವೆ. ಆದ್ರೆ ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಾಳೆ ಈ ಮಹಿಳೆ.
ನನ್ನ ಸಾಧನೆ (Achievement ) ಗೆ ನನ್ನ ಶ್ರಮದ ಜೊತೆ ಸಿಇಒ ಜೊತೆಗಿರುವ ಸಂಬಂಧವೂ ಕಾರಣವಾಗಿದೆ. ಇದೇ ಕಾರಣಕ್ಕೆ ನನಗೆ ಬಡ್ತಿ ಸಿಕ್ಕಿದೆ. ನಾನು, ಸಿಇಒ ಜೊತೆ ವಿವಾಹೇತರ ಸಂಬಂಧ ಹೊಂದಿದ್ದರೂ ನನಗೆ ಅದ್ರ ಬಗ್ಗೆ ಪಶ್ಚಾತಾಪವಿಲ್ಲ ಎನ್ನುತ್ತಾಳೆ ಮಹಿಳೆ.
Bedroom Secrets: ನನ್ನ ಒಳ ಉಡುಪು ಪತಿ ಧರಿಸ್ತಾನೆ.. ಏನ್ ಮಾಡೋದು?
ಕಂಪನಿಯಲ್ಲಿ ಕೆಲಸ ಶುರು ಮಾಡುವ ಮೊದಲೇ ಆಕೆಗೆ ಸಾವನ್ ಪರಿಚಯವಾಗಿತ್ತಂತೆ. ಬಾರ್ ನಲ್ಲಿ ಇಬ್ಬರು ಮೊದಲ ಬಾರಿ ಭೇಟಿಯಾಗಿದ್ದರಂತೆ. ಇಬ್ಬರು ಒನ್ ನೈಟ್ ಪ್ಲಾನ್ ಮಾಡಿದ್ದರಂತೆ. ಆದ್ರೆ ಪ್ರತಿ ದಿನ ರಾತ್ರಿ ಸೇರಲು ಶುರು ಮಾಡಿದ್ದರಂತೆ. ಆತನ ಜೊತೆ ಯಾವುದೇ ಸಂಬಂಧ ನನಗೆ ಇಷ್ಟವಿರಲಿಲ್ಲ. ಆತನ ಜೊತೆ ಬೆರೆಯಲು ಮಾತ್ರ ನಾನು ಬಯಸಿದ್ದೆ ಎನ್ನುತ್ತಾಳೆ ಮಹಿಳೆ. ಡೇಟಿಂಗ್ ಪ್ರಾರಂಭಿಸಿದ ಕೆಲ ದಿನಗಳ ನಂತ್ರ ಆತನಿಗೆ ಮದುವೆಯಾಗಿ ಎಂಬ ಸಂಗತಿ ತಿಳಿಯಿತು. ಮತ್ತೆ ರಾತ್ರಿ ಕಳೆಯುವ ಮನಸ್ಸಾಗಲಿಲ್ಲ. ಹಾಗಾಗಿ ಆತನಿಂದ ದೂರಸರಿದಿದ್ದೆ. ಆದ್ರೆ ಕಂಪನಿಯಲ್ಲಿ ಮತ್ತೆ ಆತನನ್ನು ನೋಡಿ ಶಾಕ್ ಆದೆ ಎನ್ನುತ್ತಾಳೆ ಮಹಿಳೆ.
Relationship Tips: ಅರೇಂಜ್ಡ್ ಮ್ಯಾರೇಜ್ ಅಂತಾ ಬೇಜಾರು ಬೇಡ, ಅದರಲ್ಲೂ ಸೊಗಸಿದೆ
ನನ್ನ ಕಂಪನಿ ಸಿಇಒ ಸಾವನ್ ಎಂಬುದು ಗೊತ್ತಾದಾಗ ಗೊಂದಲಕ್ಕೀಡಾಗಿದ್ದೆ. ಪದೇ ಪದೇ ಮೀಟಿಂಗ್, ಟ್ರಿಪ್ ಕಾರಣಕ್ಕೆ ಇಬ್ಬರೂ ಮತ್ತೆ ಒಟ್ಟಿಗೆ ಸಮಯ ಕಳೆಯಬೇಕಾಯ್ತು. ಅಂದಿನಿಂದ ಮತ್ತೆ ಇಬ್ಬರೂ ಹತ್ತಿರವಾದ್ವಿ. ಕಳೆದ ಒಂದು ವರ್ಷದಿಂದ ಮತ್ತೆ ಆತನ ದೈಹಿಕ ಸಂಬಂಧ (Physical Relationship) ಬೆಳೆಸುತ್ತಿದ್ದೇನೆ. ನಾನು ಆತನ ಪ್ರೇಯಸಿ ಎಂಬುದನ್ನು ಧೈರ್ಯವಾಗಿ ಹೇಳಬಲ್ಲೆ ಎನ್ನತ್ತಾಳೆ ಮಹಿಳೆ. ನನ್ನ ಬಾಸ್ ಗೆ ನಾನು ತೃಪ್ತಿ ನೀಡ್ತಿದ್ದೇನೆ. ಅದರಿಂದ ಪ್ರಯೋಜನ ಪಡೆಯುತ್ತಿದ್ದೇನೆ. ಅದ್ರಲ್ಲಿ ತಪ್ಪೇನಿದೆ ಎಂದು ಮಹಿಳೆ ಪ್ರಶ್ನೆ ಮಾಡ್ತಿದ್ದಾಳೆ.