ಮಕ್ಕಳು ತುಂಬಾ ಸೂಕ್ಷ್ಮ ಸ್ವಭಾವದವರಾಗಿರ್ತಾರೆ. ಅವರನ್ನು ಹ್ಯಾಂಡಲ್ ಮಾಡೋದು ಕಷ್ಟ. ಪಾಲಕರು ಹೇಳೋ ಮಾತುಗಳು ಅವರ ಮನಸ್ಸಿಗೆ ಘಾಸಿ ಮಾಡುವ ಸಾಧ್ಯತೆಯಿರುತ್ತದೆ. ಹಾಗಾಗಿ ಮಕ್ಕಳ ಮುಂದೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು.
ಮಕ್ಕಳ ಭವಿಷ್ಯ ಪಾಲಕರ ಮುಂದಿರುವ ದೊಡ್ಡ ಸವಾಲು. ಮಕ್ಕಳಿಗೆ ಒಳ್ಳೆಯ ಜೀವನ ನೀಡಬೇಕು ಎನ್ನುವ ಕಾರಣಕ್ಕೆ ಬಾಲ್ಯದಲ್ಲಿಯೇ ಮಕ್ಕಳನ್ನು ತಿದ್ದಲು ಶುರು ಮಾಡ್ತಾರೆ. ಆದ್ರೆ ಪಾಲಕರ ಈ ಪ್ರೀತಿ, ಕಾಳಜಿ ಮಕ್ಕಳಿಗೆ ಅರ್ಥವಾಗುವುದಿಲ್ಲ. ಅನೇಕ ಬಾರಿ ಪಾಲಕರು ಕೋಪದಲ್ಲಿ ಆಡಿದ ಮಾತು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಇದ್ರಿಂದ ಮಕ್ಕಳ ವರ್ತನೆ ಬದಲಾಗುತ್ತದೆ. ಅವರ ಆಲೋಚನೆ ಮೇಲೆ ಇದು ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಮಕ್ಕಳ ಭವಿಷ್ಯ ಪಾಲಕರ ಮಾತಿನಿಂದ ಹಾಳಾಗಿದ್ದಿದೆ. ಹಾಗಾಗಿ ಪಾಲಕರಾದವರು ಮಕ್ಕಳಿಗೆ ನೋವು ನೀಡದ ರೀತಿಯಲ್ಲಿ ಅವರನ್ನು ತಿದ್ದುವ ಪ್ರಯತ್ನ ನಡೆಸಬೇಕು. ಮಕ್ಕಳಿಗೆ ತಿಳಿಯದಂತೆ ಅವರ ಜೀವನದಲ್ಲಿ ಶಿಸ್ತು ತರುವ ಪ್ರಯತ್ನ ಮಾಡ್ಬೇಕು. ಮಕ್ಕಳು ಶಿಸ್ತಿನಿಂದ ಇರಬೇಕು ಎಂದು ನೀವೂ ಬಯಸುವುದಾದ್ರೆ ಅವರು ನಗ್ತಾ ನಗ್ತಾ ಪಾಲನೆ ಮಾಡಬೇಕು ಎಂದಾದ್ರೆ ಈ ಟ್ರಿಕ್ಸ್ ಫಾಲೋ ಮಾಡಿ.
ಕಷ್ಟ ಅನ್ನೋದು ನನಗೂ ಗೊತ್ತು: ಮಕ್ಕಳಿಗೆ (Children) ಯಾವುದು ಸರಿ ಹಾಗೂ ಯಾವುದು ತಪ್ಪು ಎಂಬುದನ್ನು ಪಾಲಕರು ಹೇಳಬೇಕಾಗುತ್ತದೆ. ಅದ್ರ ಜೊತೆ ಮಕ್ಕಳ ಸ್ಥಾನದಲ್ಲಿ ನಿಂತು ನೀವು ಅವರ ಪರಿಸ್ಥಿತಿಯನ್ನು ಅರಿಯಬೇಕು. ಆಗ ಅವರ ಸಮಸ್ಯೆ ಬಗೆಹರಿಸುವುದು ಸುಲಭ. ಹಾಗೆ ಮಾಡು, ಹೀಗೆ ಮಾಡು ಎಂದು ಆದೇಶ ನೀಡಿದಾಗ ಮಕ್ಕಳಿಗೆ ಪಾಲಕರು ತಮ್ಮ ಕಷ್ಟ ಅರ್ಥ ಮಾಡಿಕೊಳ್ತಿಲ್ಲ ಎಂಬ ನೋವು ಕಾಡುತ್ತದೆ. ನಿಮ್ಮ ಕಷ್ಟ ನನಗೆ ಅರ್ಥವಾಗುತ್ತದೆ. ಆದ್ರೆ ಕಷ್ಟವೆಂದು ಕುಳಿತುಕೊಳ್ಳುವ ಬದಲು ಕಷ್ಟವನ್ನು ಜಾಣ್ಮೆಯಿಂದ ಎದುರಿಸುವ ಮಾರ್ಗ ಹುಡುಕಬೇಕು ಎಂದು ಮಕ್ಕಳಿಗೆ ಹೇಳಿದಾಗ ಅವರಿಗೆ ಯಾವುದೂ ಕಷ್ಟವೆನ್ನಿಸುವುದಿಲ್ಲ.
ತಪ್ಪನ್ನು ಹೀಗೆ ತಿದ್ದಿ: ತಪ್ಪು ಮಾಡುವುದು ಸಹಜ. ಪ್ರತಿಯೊಬ್ಬರೂ ತಪ್ಪು ಮಾಡ್ತಾರೆ. ದೊಡ್ಡವರಾದ್ಮೇಲೂ ನಾವು ಸಾಕಷ್ಟು ತಪ್ಪು (Wrong) ಗಳನ್ನು ಮಾಡ್ತೇವೆ. ಮಕ್ಕಳು ಮಾಡಿದ ತಪ್ಪಿಗೆ ಪದೇ ಪದೇ ಅವರನ್ನು ಬೈಯ್ಯುತ್ತಿದ್ದರೆ ಅವರ ಆತ್ಮವಿಶ್ವಾಸ (Confidence) ಕ್ಕೆ ಧಕ್ಕೆಯಾಗುತ್ತದೆ. ತಪ್ಪು ಮಾಡುವುದು ಸಹಜ, ಆದ್ರೆ ಒಂದೇ ತಪ್ಪನ್ನು ಪದೇ ಪದೇ ಮಾಡಬಾರದು. ತಪ್ಪನ್ನು ತಿದ್ದಿ ನಡೆಯಬೇಕು, ತಪ್ಪಿನಿಂದ ಹೊಸ ವಿಷ್ಯ ಕಲಿಯಬೇಕು ಎಂಬುದನ್ನು ಮಕ್ಕಳಿಗೆ ಪಾಲಕರು ಹೇಳಬೇಕು. ಆಗ ಮಕ್ಕಳು ಜಾಗರೂಕರಾಗ್ತಾರೆ. ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಅಣಿಯಾಗ್ತಾರೆ.
Parenting Tips: ಮಗುವಿನ ಗ್ರಹಿಕೆ ಬಲಗೊಳಿಸಲು ಹೀಗೆ ಮಾಡಿ
ನಕಾರಾತ್ಮಕ ಮಾತು ಬೇಡ : ಪಾಲಕರು ಕೋಪ (Anger) ಗೊಂಡಾಗ ಮಾತಿನ ಮೇಲೆ ಹಿಡಿತವಿರುವುದಿಲ್ಲ. ಮಕ್ಕಳನ್ನು ಒಂದೇ ಸಮನೆ ನಿಂದಿಸಲು ಶುರು ಮಾಡ್ತಾರೆ. ನೀನು ಮಾತನಾಡಿದ್ದು ನನಗೆ ಅರ್ಥವಾಗಿಲ್ಲ, ನಿನ್ನಿಂದ ನನಗೆ ತೊಂದರೆಯಾಗ್ತಿದೆ, ಬಾಯಿ ಮುಚ್ಚು, ಅಳೋದನ್ನು ನಿಲ್ಲಿಸು, ಸುಮ್ಮನೆ ನಾನು ಹೇಳಿದ್ದು ಮಾಡು, ಹೀಗೆ ಪಾಲಕರು ಒಂದೊಂದೇ ಬೆಂಕಿ ಕಿಡಿ ಹೊರಗೆ ಹಾಕ್ತಾರೆ. ಇದು ಮಕ್ಕಳ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಇದ್ರ ಬದಲು ತಾಳ್ಮೆಯಿಂದ ಮಕ್ಕಳ ಮಾತನ್ನು ಪಾಲಕರು ಕೇಳಬೇಕು. ಅವರು ಮಾತನಾಡುವಾಗ ಸಂಪೂರ್ಣ ಗಮನ ಅವರ ಮಾತಿನ ಮೇಲಿರಬೇಕು. ಅವರ ಮಾತಿಗೆ ನೀವು ಪ್ರತಿಕ್ರಿಯೆ ನೀಡ್ತಾ ಹೋದ್ರೆ ಅವರು ನಿಮ್ಮ ಮಾತಿಗೆ ಗೌರವ ನೀಡಲು ಶುರು ಮಾಡ್ತಾರೆ.
ಈ ಸಂಕೇತಗಳು ನೀವು ಮತ್ತೆ EX ಬಳಿ ಹೋದ್ರೆ ತಪ್ಪೇನಿಲ್ಲ ಅನ್ನತ್ತೆ…
ಒಂದಾಗಿ ಪರಿಹಾರ ಕಂಡ್ಕೊಳ್ಳಿ : ಮಕ್ಕಳ ಕೆಟ್ಟದಾಗಿ ವರ್ತಿಸಿದಾಗ ಅವ್ರನ್ನು ಹೀಯಾಳಿಸಬಾರದು. ಅವರ ಮೇಲೆ ಕೂಗಾಡಬಾರದು. ಬದಲಿಗೆ ಅವರ ಜೊತೆ ಮಾತನಾಡಬೇಕು. ಅವರನ್ನು ನೀವು ಬೆಂಬಲಿಸಿದಾಗ ಅವರು ಯಾವುದೇ ಸಮಸ್ಯೆಯಿದ್ರೂ ನಿಮ್ಮ ಬಳಿ ಹೇಳಿಕೊಳ್ತಾರೆ. ಮಕ್ಕಳನ್ನು ಸ್ನೇಹಿತ (Friend) ರಂತೆ ನೋಡಿದಾಗ ಮಾತ್ರ ಪಾಲಕರ ಕೆಲಸ ಸುಲಭವಾಗುತ್ತದೆ.