Work Place Culture: ಯಶಸ್ವಿ ಬಾಸ್ ಆಗಬೇಕು ಅಂದ್ರೆ ಈ ರೂಲ್ಸ್ ಫಾಲೋ ಮಾಡಿ

By Suvarna NewsFirst Published Oct 20, 2022, 1:27 PM IST
Highlights

ಉದ್ಯೋಗದ ಸ್ಥಳಗಳೆಂದರೆ ಒತ್ತಡದ ಕುಲುಮೆಗಳು ಎನ್ನುವ ಭಾವನೆ ಇಂದು ಹೆಚ್ಚುತ್ತಿದೆ. ಕಚೇರಿಗಳಲ್ಲಿ ಒತ್ತಡ ಕಡಿಮೆಯಾಗಿ, ಉದ್ಯೋಗಿಗಳು ಸಂತಸದಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿಸಲು ಬಾಸ್‌ ಆದವರು ಸ್ವಲ್ಪ ಶ್ರಮವಹಿಸಬೇಕಾಗುತ್ತದೆ. 

ಉದ್ಯೋಗ ಮಾಡುವುದು ಕೇವಲ ಜೀವನ ನಿರ್ವಹಣೆಗಲ್ಲ. ಕೇವಲ ಹಣಕ್ಕಾಗಿ ಅಲ್ಲ. ಅದು ವ್ಯಕ್ತಿತ್ವಕ್ಕೆ ಮೆರುಗು ನೀಡುವಂತಿರಬೇಕು, ಅಷ್ಟೇ ಅಲ್ಲ, ನಮ್ಮೊಳಗಿನ ಜೀವಂತಿಕೆಯನ್ನು ಸಲಹುವಂತೆಯೂ ಇರಬೇಕು ಎಂದು ಇಂದಿನ ಜನಾಂಗ ಬಯಸುತ್ತದೆ. ಹೀಗಾಗಿ, ಕಚೇರಿಗಳಲ್ಲಿ ಹಳೆಯ ನೀತಿ-ನಿಯಮಗಳನ್ನು ಪಾಲಿಸಿದರೆ ಅದಕ್ಕಿಂತ ಹಿಂಸೆ ಬೇರೊಂದಿಲ್ಲ. ಕೆಲವು ಕಚೇರಿಗಳನ್ನು ನೋಡಿ. ಅಲ್ಲಿ ವೃತ್ತಿ ಸೌಂದರ್ಯ ಇರುವುದೇ ಇಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಅಂತಹ ಕಚೇರಿಗಳು ಒತ್ತಡದ ಕುಲುಮೆಯಂತಿರುತ್ತವೆ. ಅಂತಹ ಕಚೇರಿಗಳಲ್ಲಿ ಕೆಲಸ ಮಾಡಲು ಇಂದು ಯಾರೂ ಸಹ ಬಯಸುವುದಿಲ್ಲ. ಹಳೆಯ ಧೋರಣೆಗಳು, ತೀರ ಕಟ್ಟುನಿಟ್ಟಿನ ನಿಯಮಗಳು ಇಂದಿನ ಕಾಲಕ್ಕೆ ಹೊಂದಾಣಿಕೆ ಆಗುವುದಿಲ್ಲ. ಉದ್ಯೋಗದ ಸ್ಥಳ ಎಂದರೆ ಅಲ್ಲಿನ ಕೆಲಸಗಳಿಗೆ ತಕ್ಕಂತೆ ಕೆಲವು ನಿಯಮಗಳನ್ನು ಪಾಲಿಸಬೇಕು ಎನ್ನುವುದು ಸತ್ಯವಾದರೂ, ಉದ್ಯೋಗಿಗಳು ಖುಷಿಯಾಗಿ ಕೆಲಸ ಮಾಡುವ ವಾತಾವರಣ ಇರಬೇಕು ಎನ್ನುವುದೂ ಅಷ್ಟೇ ಸತ್ಯ. ಹಣವೊಂದೇ ಉದ್ಯೋಗಿಗಳನ್ನು ಖುಷಿಯಿಂದಿಡುವುದು ಸಾಧ್ಯವಿಲ್ಲ. ಕೆಲಸದ ಸ್ಥಳದಲ್ಲಿ ಖುಷಿಯಿಂದ, ನೆಮ್ಮದಿಯಿಂದ ಇರುವ ಉದ್ಯೋಗಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಾರೆ. ಹೀಗಾಗಿ, ಬಾಸ್‌ ಆದವರು ತಮ್ಮ ಉದ್ಯೋಗಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅದರರ್ಥ, ಅವರು ಹೇಳಿದಂತೆ ಕೇಳಿಕೊಂಡಿರಬೇಕು ಎಂದರ್ಥವಲ್ಲ. ಕೆಲಸವೂ ಸರಿಯಾಗಿ ಸಾಗಬೇಕು, ಉದ್ಯೋಗಿಗಳೂ ಖುಷಿಯಿಂದ, ತೃಪ್ತಿಯಿಂದ ಇರಬೇಕು ಎಂದಾದರೆ ಬಾಸ್‌ ಆದವರು ಕೆಲವು ವಿಚಾರಗಳನ್ನು ಅಳವಡಿಸಿಕೊಳ್ಳಬೇಕು.

•    ತಂಡದ ಪ್ರಯತ್ನವನ್ನು (Identify Team Effort) ಗುರುತಿಸಬೇಕು
ಬಾಸ್‌ (Boss) ಆದವರು ಉದ್ಯೋಗಿಗಳ (Employees) ಪ್ರಯತ್ನ, ಪರಿಶ್ರಮವನ್ನು ಗುರುತಿಸಿ ಮೆಚ್ಚುಗೆ ಮಾತುಗಳನ್ನಾಡಬೇಕು. ಇದರಿಂದ ಅವರ ಗೌರವ ಹೆಚ್ಚುತ್ತದೆ. ವೃತ್ತಿಯಲ್ಲಿ ತೃಪ್ತಿ (Professional Satisfaction) ದೊರೆಯುತ್ತದೆ. ತಮ್ಮ ಪರಿಶ್ರಮವನ್ನು ಗುರುತಿಸುವುದನ್ನೇ ಬಹುದೊಡ್ಡ ಬಹುಮಾನವೆಂಬಂತೆ (Reward) ಉದ್ಯೋಗಿಗಳು ಭಾವಿಸುತ್ತಾರೆ. ಎಲ್ಲರೆದುರು ಕೆಲಸವನ್ನು ಗುರುತಿಸಿ ಹೊಗಳುವುದು, ಧನ್ಯವಾದ (Thanks) ಹೇಳುವುದನ್ನು ಮಾಡಬೇಕು. ಏನಾದರೂ ಗದರುವುದಿದ್ದರೆ ಕ್ಯಾಬಿನ್‌ ಗೆ ಕರೆಸಿ ಹೇಳಬೇಕು. ಕೆಲವು ಬಾಸ್‌ ಗಳು ಎಲ್ಲರೆದುರು ತೆಗಳಿ, ಒಬ್ಬರೇ ಇದ್ದಾಗ ಹೊಗಳುತ್ತಾರೆ. ಇದು ಸಮಂಜಸವಲ್ಲ.

Career : ನಿಮಗೂ ಹೀಗನ್ನಿಸಿದ್ರೆ ಜಾಬ್ ಬದಲಿಸಿ

•    ಕೆಲಸದ ಸಮಯದಲ್ಲಿ ಹೊಂದಾಣಿಕೆ (Adjustment in Time)
ಕೆಲಸದ ಸಮಯದಲ್ಲಿ ಅತ್ಯಂತ ಕಟ್ಟುನಿಟ್ಟನ್ನು ಪಾಲಿಸುವುದು ಸರಿಯಲ್ಲ. ಇದರಿಂದ ಉದ್ಯೋಗಿಗಳ ಒತ್ತಡ ಹೆಚ್ಚುತ್ತದೆ. ಸಾಧ್ಯವಿರುವ ಕಡೆಗಳಲ್ಲೆಲ್ಲ ಫ್ಲೆಕ್ಸಿಬಲ್‌ (Flexible) ಸಮಯ ಅಳವಡಿಸಿಕೊಳ್ಳುವುದರಿಂದ ಉದ್ಯೋಗಿಗಳಲ್ಲಿ ತೃಪ್ತಿಯ ಮಟ್ಟ ಹೆಚ್ಚುತ್ತದೆ. ಕೆಲವು ವಲಯಗಳಲ್ಲಿ ಇದು ಸಾಧ್ಯವಿಲ್ಲದ ಮಾತಾಗಬಹುದು. ಆದರೂ, ಮನಸ್ಸು ಮಾಡಿದರೆ ಬಹಳಷ್ಟು ಸೆಕ್ಷನ್‌ ಗಳಲ್ಲಿ ಅಳವಡಿಸಿಕೊಳ್ಳಬಹುದು. ಅಗತ್ಯವಿರುವಾಗ ಮನೆಯಿಂದ ಕೆಲಸದ (Work from Home) ಅವಕಾಶ ನೀಡುವುದು, ಸಮಯದ ಹೊಂದಾಣಿಕೆ ಮಾಡಿಕೊಳ್ಳಲು ಅವಕಾಶ ನೀಡುವುದು ಅಗತ್ಯ. ವೀಕೆಂಡ್‌ ಗಳಲ್ಲಿ ಕಡಿಮೆ ಕೆಲಸ (Low Work Load), ರಜಾ ದಿನಗಳ ಅವಕಾಶ, ರಜೆ (Leave) ಹಾಕುವ ಸೌಲಭ್ಯಗಳನ್ನು ನೀಡಲೇಬೇಕಾಗುತ್ತದೆ. ಏಕೆಂದರೆ, ಉದ್ಯೋಗಿಗಳು ಖಾಸಗಿ ಬದುಕು ಹಾಗೂ ಕೆಲಸವನ್ನು ಮ್ಯಾನೇಜ್‌ ಮಾಡಲು ಸುಲಭವಾದರೆ ಅವರಲ್ಲಿ ಕೃತಜ್ಞತಾ ಭಾವ, ತೃಪ್ತಿ ಮೂಡಿ, ಕೆಲಸದಲ್ಲಿ ದಕ್ಷತೆ ಹೆಚ್ಚುತ್ತದೆ.

•    ಕಾರ್ಯ ಸ್ಥಳದಲ್ಲಿ ಪಾರದರ್ಶಕತೆ (Transparency) 
ಬಾಸ್‌ ಆದವರು ಸಾಧ್ಯವಾದಷ್ಟೂ ಪಾರದರ್ಶಕ ಹಾಗೂ ನ್ಯಾಯೋಚಿತವಾಗಿ ನಡೆದುಕೊಳ್ಳಬೇಕೆಂದು ಉದ್ಯೋಗಿಗಳು ಬಯಸುತ್ತಾರೆ. ಇದರಿಂದ ಅವರಲ್ಲಿ ಒಗ್ಗಟ್ಟಿನ ಮನೋಭಾವ ಹೆಚ್ಚಿಸಬಹುದು. ಹಾಗೂ ಬಾಸ್‌ ಮತ್ತು ಉದ್ಯೋಗಿಗಳ ಬಾಂಧವ್ಯವೂ (Relation) ಚೆನ್ನಾಗಿ ಆಗುತ್ತದೆ. ಸಮಸ್ಯೆ ನಿವಾರಣೆಗೆ ಕೌಶಲವನ್ನು ತಿಳಿಸಿಕೊಡುವುದರಿಂದ ಹಿಡಿದು, ಕಚೇರಿಯ ಬಗ್ಗೆ ಸ್ಪಷ್ಟವಾದ ಜ್ಞಾನ ನೀಡಿದರೆ ಬಾಸ್ ಗ್ರೇಟ್‌ ಎನಿಸಿಕೊಳ್ಳುತ್ತಾರೆ. ಎಲ್ಲವನ್ನೂ ಮುಚ್ಚಿಟ್ಟು, ಪರಸ್ಪರರಲ್ಲಿ ಅಪನಂಬಿಕೆ ಹೆಚ್ಚಿಸಿದರೆ ಉದ್ಯೋಗಿಗಳ ವಿಶ್ವಾಸ (Trust) ಗಳಿಸಲು ಸಾಧ್ಯವಿಲ್ಲ.

Life: ಒಳ್ಳೆ ಮತ್ತು ಕೆಟ್ಟ ಎರಡೂ ರೀತಿಯಲ್ಲಿ ನಮ್ಮನ್ನು ಬದಲಿಸುತ್ತೆ ಸುತ್ತಮುತ್ತಲ ಪರಿಸರ

•    ಟೀಮ್‌ ನಿರ್ಮಾಣ ಚಟುವಟಿಕೆ (Team Building Activity)
ಉದ್ಯೋಗಿಗಳು ಕಚೇರಿಯ ಕೆಲಸದಿಂದಾಚೆಗೂ ಕೆಲವು ಕಾರ್ಯಗಳಲ್ಲಿ ಭಾಗಿಯಾಗುವಂತೆ ಮಾಡುವುದರಿಂದ ಒಡನಾಟ ಉತ್ತಮವಾಗುತ್ತದೆ. ಸಂವಹನ (Communication) ಹಾಗೂ ವಿವಿಧ ಕಾರ್ಯಗಳಲ್ಲಿ ನಿಪುಣತೆ ಹೊಂದಿರುವ ಉದ್ಯೋಗಿಗಳು ವಿವಿಧ ಸಮಸ್ಯೆ ನಿವಾರಣೆಗೂ ಉತ್ತಮವಾಗಿ ಕೆಲಸ ಮಾಡಬಲ್ಲರು.

•    ಕಚೇರಿಯಲ್ಲಿ ಪಾರ್ಟಿ! (Celebration)
ಕಚೇರಿಯ ಉದ್ಯೋಗಿಗಳ ಹುಟ್ಟುಹಬ್ಬ ಸೇರಿದಂತೆ ಯಾವುದಾದರೂ ಸಂದರ್ಭದಲ್ಲಿ ಎಲ್ಲರಿಗೂ ಸಿಹಿ ವಿತರಿಸುವುದು, ಎಲ್ಲರೂ ಒಳಗೊಳ್ಳುವಂತೆ ಮಾಡುವ ಮೂಲಕ ಸಂತಸದ ವಾತಾವರಣ (Happy Environment) ನಿರ್ಮಾಣ ಮಾಡಬಹುದು.

click me!