
ಸೆಕ್ಸ್ ಪ್ರತಿಯೊಬ್ಬರ ಜೀವನದಲ್ಲೂ ಅವಶ್ಯಕ. ದಾಂಪತ್ಯ ಜೀವನದಲ್ಲಿ ಸೆಕ್ಸ್ ಪ್ರಮುಖ ಪಾತ್ರವನ್ನು ವಹಿಸುತ್ತದೆ ಅಂದ್ರೆ ತಪ್ಪಾಗಲಾರದು. ಸಂಭೋಗದ ಬಗ್ಗೆ ಪ್ರತಿಯೊಬ್ಬರು ಅವರದೆ ಆದ ಕಲ್ಪನೆ ಹೊಂದಿರುತ್ತಾರೆ. ಅದನ್ನು ತಮ್ಮಿಷ್ಟದಂತೆ ಆನಂದಿಸಲು ಬಯಸ್ತಾರೆ. ಜನರು ಚಿತ್ರಿವಿಚಿತ್ರ ಸೆಕ್ಸ್ ಫ್ಯಾಂಟಸಿ ಹೊಂದಿರುತ್ತಾರೆ. ಬಹುತೇಕ ಮಹಿಳೆಯರು ಸೆಕ್ಸ್ ಬಗ್ಗೆ ತಮ್ಮದೆ ಕಲ್ಪನೆ ಹೊಂದಿರುತ್ತಾರೆ. ಆದ್ರೆ ಅವರು ಅದನ್ನು ಎಂದಿಗೂ ಹೇಳಿಕೊಳ್ಳುವುದಿಲ್ಲ. ಸಂಗಾತಿ ಮುಂದೆ ಇದನ್ನು ಹೇಳಲು ನಾಚಿಕೆಪಟ್ಟುಕೊಳ್ತಾರೆ. ಮಹಿಳೆಯರ ಸೆಕ್ಸ್ ಫ್ಯಾಂಟಸಿ ಅಚ್ಚರಿ ಹುಟ್ಟಿಸುವಂತಿರುತ್ತದೆ. ಸೆಕ್ಸ್ ನಲ್ಲಿ ಮಹಿಳೆಯರಿಗೆ ಆಸಕ್ತಿ ಕಡಿಮೆ ಎನ್ನುವವರು ಅವರ ಪ್ಯಾಂಟಸಿ ಕೇಳಿದ್ರೆ ದಂಗಾಗೋದು ಗ್ಯಾರಂಟಿ. ಇಂದು ನಾವು ಮಹಿಳೆಯರ ಕೆಲ ಸೆಕ್ಸ್ ಫ್ಯಾಂಟಸಿ ಬಗ್ಗೆ ನಿಮಗೆ ಹೇಳ್ತೇವೆ.
ವಿಚಿತ್ರವಾಗಿದೆ ಮಹಿಳೆಯರ ಸೆಕ್ಸ್ ಫ್ಯಾಂಟಸಿ (Sex Fantasies) :
ಇನ್ನೊಬ್ಬ ಹುಡುಗಿ ಜೊತೆ ಪತಿ (Husband) ಸೆಕ್ಸ್ : ಇದನ್ನು ಓದಿದ್ರೆ ನಿಮಗೆ ಅಚ್ಚರಿಯಾಗದೆ ಇರದು. ಪತಿಯನ್ನು ಬೇರೆ ಹುಡುಗಿ ಜೊತೆ ನೋಡೋದೇ ಕಷ್ಟ. ಇನ್ನು ಹಾಸಿಗೆ ಮೇಲೆ ಒಟ್ಟಿಗೆ ನೋಡೋದು ಅಸಾಧ್ಯವಾದ ಮಾತು. ಆದ್ರೆ ಕೆಲ ಮಹಿಳೆಯರು ಇಂಥ ವಿಚಿತ್ರ ಫ್ಯಾಂಟಸಿ ಹೊಂದಿರ್ತಾರೆ. ಪತಿ ಬೇರೊಬ್ಬಳ ಜೊತೆ ಲೈಂಗಿಕ ಸುಖ ಪಡೆಯುವುದನ್ನು ನೋಡಲು ಪತ್ನಿ (Wife)ಯಾದವಳು ಬಯಸ್ತಾಳೆ. ಇಷ್ಟೇ ಅಲ್ಲ ಕೆಲವೊಮ್ಮೆ ಆಕೆ ಕೂಡ ಆತನ ಜೊತೆ ಸಂಬಂಧ ಬೆಳೆಸಲು ಮುಂದಾಗ್ತಾಳೆ. ಇದನ್ನು ಅತಿರೇಕದ ಪ್ಯಾಂಟಸಿ ಎನ್ನಲಾಗುತ್ತದೆ.
ಇಂಥ ಸ್ಥಳದಲ್ಲಿ ಸಂಭೋಗ : ಶಾರೀರಿಕ ಸಂಬಂಧ ಬೆಳೆಸಲು ಕಷ್ಟ ಎನ್ನುವ ಸ್ಥಳದಲ್ಲಿ ಕೆಲ ಮಹಿಳೆಯರು ಸಂಭೋಗ ಸುಖ ಪಡೆಯಲು ಬಯಸ್ತಾರೆ. ಅಂಥ ಸ್ಥಳದಲ್ಲಿ ಸೆಕ್ಸ್ ಕನಸು ಕಾಣುತ್ತಾರೆ. ಲೈಬ್ರರಿ (Library), ಸಾರ್ವಜನಿಕ ಶೌಚಾಲಯ (Toilet), ಪಾರ್ಕ್ (Park) ಹೀಗೆ ಸಾರ್ವಜನಿಕ ಪ್ರದೇಶದಲ್ಲಿ ಸೆಕ್ಸ್ ಬಯಸ್ತಾರೆ. ಅಲ್ಲಿ ಸಿಕ್ಕಿಬಿದ್ದರೆ ಎಂಬ ಥ್ರಿಲ್ ಅವರ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇಂಥ ಸ್ಥಳದಲ್ಲಿ ಸೆಕ್ಸ್ ಅನೇಕ ಮಹಿಳೆಯರಿಗೆ ಇಷ್ಟವಾಗುತ್ತದೆ. ಆದ್ರೆ ಎಲ್ಲರೂ ಆ ಸಾಹಸಕ್ಕೆ ಇಳಿಯುವುದಿಲ್ಲ. ಕೆಲವೇ ಕೆಲವರು ಮಾತ್ರ ತಮ್ಮ ಕನಸು ಈಡೇರಿಸುವ ಪ್ರಯತ್ನ ನಡೆಸ್ತಾರೆ.
ಇಬ್ಬರು ಪುರುಷರ ಜೊತೆ ಸಂಭೋಗ: ಇಬ್ಬರು ಪುರುಷರ ಜೊತೆ ಒಂದೇ ಬಾರಿ, ಒಂದೇ ಸ್ಥಳದಲ್ಲಿ ಸಂಭೋಗ ನಡೆಸಲು ಕೆಲ ಮಹಿಳೆಯರು ಬಯಸ್ತಾರೆ. ಆದ್ರೆ ಅದನ್ನು ಎಂದೂ ಹೇಳುವುದಿಲ್ಲ. ಒಂದೇ ಬಾರಿ ಇಬ್ಬರು ಪುರುಷರ ಜೊತೆ ಸಂಭೋಗ ಬೆಳೆಸುವ ಕಲ್ಪನೆ ಮಾಡಿಕೊಂಡ್ರೆ ಅವರು ಉತ್ತೇಜನಗೊಳ್ತಾರೆ.
ಇದನ್ನೂ ಓದಿ: ಗರ್ಲ್ ಫ್ರೆಂಡ್ ಯಾವಾಗ್ಲೂ ಅಳ್ತಾಳೆ, ಏನ್ ಮಾಡೋದು ಗುರು?
ಕಚೇರಿಯಲ್ಲಿ ಸಂಭೋಗ: ಕೆಲ ಮಹಿಳೆಯರಿಗೆ ಕಚೇರಿಯಲ್ಲಿ ಶಾರೀರಿಕ ಸಂಬಂಧ ಬೆಳೆಸುವ ಇಚ್ಛೆಯಿರುತ್ತದೆ. ಆಫೀಸ್ ಟೇಬಲ್ ಮೇಲೆ ಅಥವಾ ಕಚೇರಿಯ ರಹಸ್ಯ ಸ್ಥಳದಲ್ಲಿ ಶಾರೀರಿಕ ಸಂಬಂಧದ ಮೋಜು ಪಡೆಯಲು ಇಚ್ಛಿಸುತ್ತಾರೆ. ಈ ಕಲ್ಪನೆ ಅವರನ್ನು ಹೆಚ್ಚು ಪ್ರಚೋದಿಸುತ್ತದೆ.
ತನ್ನಿಷ್ಟದಂತೆ ಸೆಕ್ಸ್: ಕೆಲ ಮಹಿಳೆಯರು ಸಂಗಾತಿ ತನ್ನ ನಿರ್ದೇಶನದಂತೆ ಸಂಭೋಗ ಸುಖ ಪಡೆಯಬೇಕೆಂದು ಬಯಸ್ತಾರೆ. ವಿಶೇಷವಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಆತ ತಾನು ಹೇಳಿದಂತೆ ಕೇಳಬೇಕು ಎಂದುಕೊಳ್ತಾರೆ. ಇದು ಬಹುತೇಕ ಮಹಿಳೆಯರಿಗೆ ಸೆಕ್ಸಿ ವಿಷ್ಯವಾಗಿರುತ್ತದೆ. ತಮ್ಮಿಷ್ಟದಂತೆ ಸಂಭೋಗ ಸುಖ ಪಡೆಯುವ ಮೂಲಕ ತಮ್ಮ ಫ್ಯಾಂಟಸಿ ಪೂರೈಸಿಕೊಳ್ಳುವುದು ಈ ಮಹಿಳೆಯರ ಉದ್ದೇಶವಾಗಿರುತ್ತದೆ.
ಇದನ್ನೂ ಓದಿ: ವಾರಪೂರ್ತಿ ಸ್ನಾನ ಮಾಡದವನ ಜೊತೆ ಹೇಗ್ ಮಲಗೋದು? ಏನಪ್ಪ ಉತ್ತರ ಕೊಡೋದು?
ರೋಲ್ ಪ್ಲೇ: ಇದು ಬಹುತೇಕ ಮಹಿಳೆಯರ ಇಷ್ಟದ ಫ್ಯಾಂಟಸಿ ರೋಲ್ ಪ್ಲೇ. ರೋಲ್ ಪ್ಲೇ ಫ್ಯಾಂಟಸಿ ಮಹಿಳೆಯರನ್ನು ರೋಮಾಂಚನಗೊಳಿಸುತ್ತದೆ. ರೋಲ್ ಪ್ಲೇ ಸಮಯದಲ್ಲಿ ಹೆಚ್ಚಿನ ಮಹಿಳೆಯರು ಸಂಗಾತಿಯ ಮೇಲೆ ಪ್ರಾಬಲ್ಯ ಸಾಧಿಸಲು ಮುಂದಾಗ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.