ಉಸಿರಾಡಲು ಕಷ್ಟಪಡುತ್ತಿದ್ದ ಕೋತಿ ಮರಿಯ ಜೀವ ಉಳಿಸಿದ ತಾಯಿ

By Suvarna NewsFirst Published Jul 29, 2022, 4:32 PM IST
Highlights

ತಾಯಿ ಕೋತಿ ಉಸಿರಾಡಲು ಕಷ್ಟಪಡುತ್ತಿದ್ದ ಮರಿ ಕೋತಿಯೊಂದರ ಜೀವ ಉಳಿಸಿದೆ. ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಪ್ರಾಣಿಗಳು ಕೂಡ ಮನುಷ್ಯರಂತೆ ಸ್ಮಾರ್ಟ್ ಆಗುತ್ತಿವೆ. ಸ್ಮಾರ್ಟ್‌ ಪ್ರಾಣಿಗಳ ಸಾಕಷ್ಟು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಾವು ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ತಾಯಿ ಕೋತಿ ಉಸಿರಾಡಲು ಕಷ್ಟಪಡುತ್ತಿದ್ದ ಮರಿ ಕೋತಿಯೊಂದರ ಜೀವ ಉಳಿಸಿದೆ. ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉಸಿರಾಡಲು ಕಷ್ಟ ಪಡುತ್ತಿದ್ದ ತನ್ನ ಮರಿಯನ್ನು ಎತ್ತಿಕೊಂಡ ಕೋತಿ ಅದರ ಕಿಬ್ಬೊಟ್ಟೆ ಮತ್ತು ಪಕ್ಕೆಲುಬಿನ ಮಧ್ಯೆ ಒತ್ತಿ ಸರಾಗವಾಗಿ ಉಸಿರಾಡಲು ಸಾಧ್ಯವಾಗುವಂತೆ ಮಾಡುತ್ತದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪ್ರಾಣಿಗಳು ಕೂಡ ಎಷ್ಟು ಬುದ್ಧಿವಂತಿಕೆ ಹೊಂದಿವೆ ಎಂಬುದನ್ನು ಸಾಬೀತುಪಡಿಸುತ್ತಿವೆ. 

ಉಸಿರಾಡಲು ಕಷ್ಟಪಡುವವರಿಗೆ Heimlich Maneuver ಎಂದು ಪ್ರಾಥಮಿಕ ಚಿಕಿತ್ಸಾ ವಿಧಾನವನ್ನು ಮಾಡಲಾಗುತ್ತದೆ. ಹೊಕ್ಕುಳ ಮತ್ತು ಪಕ್ಕೆಲುಬಿನ ನಡುವೆ ಉಸಿರಾಟದ ತೊಂದರೆಗೊಳಗಾದ ವ್ಯಕ್ತಿಯ ಹೊಟ್ಟೆಯ ಮೇಲೆ ಹಠಾತ್ ಬಲವಾದ ಒತ್ತಡವನ್ನು ಅನ್ವಯಿಸುವ ಮೂಲಕ ವ್ಯಕ್ತಿಯ ಶ್ವಾಸನಾಳದಿಂದ ಅಡಚಣೆಯನ್ನು ತೆಗೆದು ಹಾಕುವ ಪ್ರಥಮ ಚಿಕಿತ್ಸಾ ವಿಧಾನವಾಗಿದೆ. ಇದನ್ನು ಮನುಷ್ಯರಿಗೆ ಮಾಡಲಾಗುತ್ತದೆ. ಆದರೆ ಪ್ರಾಣಿಗಳಿಗೆ ಹೇಗೆ ಈ ಬುದ್ಧಿವಂತಿಕೆ ತಿಳಿದಿರಲು ಸಾಧ್ಯ ಎಂಬ ಕುತೂಹಲ ನೋಡುಗರಲ್ಲಿ ಮೂಡುತ್ತಿದೆ. 

A mother monkey who saves her baby with the Heimlich Maneuver.... 💕❤️pic.twitter.com/Hv4C6EAxcv

— Figen (@TheFigen)

ವೀಡಿಯೋದಲ್ಲಿ ಕೋತಿಯು ತನ್ನ ಮರಿಯ ಕಿಬ್ಬೊಟ್ಟೆಯನ್ನು ಒತ್ತುತ್ತಿದ್ದು, ಇದರಿಂದಾಗಿ ಗಾಳಿಯ ಕೊಳವೆಯಲ್ಲಿ ಏನದರೂ ಸಿಲುಕಿದ್ದರೆ  ಒತ್ತುವಿಕೆಯಿಂದಾಗುವ ಒತ್ತಡದಿಂದ ಅದು ಮಗುವನ್ನು ಸುಲಭವಾಗಿ ಕೆಳಗಿಳಿಯುತ್ತದೆ ಅಥವಾ ಹೊರಬರುವುದು. ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮಗುವಿನ ಶ್ವಾಸನಾಳದಲ್ಲಿ ಸಿಲುಕಿರುವ ಅಂಶವು ತಾಯಿ ಕೋತಿಯು ಈ ಕಾರ್ಯವಿಧಾನವನ್ನು ನಿರ್ವಹಿಸಿದ ನಂತರ ಹೊರ ಬರುತ್ತದೆ. ಈ ವಿಡಿಯೋ ಅನೇಕರನ್ನು ಅಚ್ಚರಿಗೆ ದೂಡಿದೆ. ಪ್ರಾಣಿಗಳು ಕೂಡ ಇಷ್ಟೊಂದು ಬುದ್ಧಿವಂತಿಕೆ ಪ್ರದರ್ಶಿಸಲು ಹೇಗೆ ಸಾಧ್ಯ ಎಂದು ಜನ ಪ್ರಶ್ನಿಸುತ್ತಿದ್ದಾರೆ. 

ಸುಮ್ಮನಿರಲಾರದೇ ಕೋತಿ ಜೊತೆ ಚೆಲ್ಲಾಟ: ಮುಂದೇನಾಯ್ತು ನೋಡಿ viral video

ಒಟ್ಟಿನಲ್ಲಿ ತಾಯಿಯೆಂಬ ಜೀವ ಅದು ಮನುಷ್ಯರೇ ಆಗಿರಲಿ ಪ್ರಾಣಿಗಳೇ ಆಗಿರಲಿ ತಾಯಿಯೆಂಬ ಜೀವವೊಂದು ತನ್ನ ಮಕ್ಕಳ ರಕ್ಷಣೆಯ ವಿಚಾರ ಬಂದಾಗ ಏನೂ ಮಾಡಲು ಸಿದ್ಧವಿರುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. 


ಕೋತಿಯೊಂದಿಗೆ ಮಗುವಿನ ಆಟ

ಕೋತಿಯೊಂದಿಗೆ ಮಗುವೊಂದು ಆಟವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್‌ ಆಗಿದೆ. ಪ್ರಾಣಿಗಳಾದರೂ ಮನುಷ್ಯರಾದರೂ ತಾಯಿ ಎಂದಿಗೂ ತಾಯಿಯೇ ಎಂಬುದನ್ನು ಈ ವಿಡಿಯೋ ಪುನರುಚ್ಚರಿಸುವಂತಿದೆ. ವಿಡಿಯೋದಲ್ಲಿ ಕಾಣಿಸುವಂತೆ ಪುಟ್ಟ ಬಾಲಕಿಯೊಬ್ಬಳು ಕೋತಿಗಳ ಗುಂಪಿಗೆ ಆಹಾರ ಹಾಕುತ್ತಾಳೆ. ಜೊತೆಗೆ ತನ್ನ ಮರಿಯನ್ನು ಎತ್ತಿಕೊಂಡಿರುವ ತಾಯಿ ಕೋತಿಯ ಕೈಯಿಂದ ಕೋತಿ ಮರಿಯನ್ನು ಸೆಳೆದುಕೊಳ್ಳಲು ಪ್ರಯತ್ನಿಸುತ್ತಾಳೆ. ಆದರೆ ತಾಯಿ ಮರಿಯನ್ನು ಅಕೆಗೆ ನೀಡಲು ಇಷ್ಟಪಡುವುದಿಲ್ಲ. 

4 ತಿಂಗಳ ಮಗುವನ್ನು ಕಟ್ಟಡದಿಂದ ಕೆಳಗೆಸೆದು ಕೊಂದ ಕೋತಿ

ಆದರೆ ಇತ್ತ ಅಪರೂಪಕ್ಕೆ ಸಿಗುವ ಅಹಾರವನ್ನು ಕಳೆದುಕೊಳ್ಳಲು ಕೋತಿಗೂ ಇಷ್ಟವಿಲ್ಲ. ಹೀಗಾಗಿ ಅನಿವಾರ್ಯವಾಗಿ ಸ್ವಲ್ಪ ಹೊತ್ತು ಬಾಲಕಿಯ ಕೈಗೆ ತನ್ನ ಮರಿಯನ್ನು ನೀಡುವ ಕೋತಿ ಸ್ವಲ್ಪ ಹೊತ್ತಿನಲ್ಲೇ ತನ್ನ ಮಗುವನ್ನು ಕೊಡು ಎಂದು ಕೇಳುತ್ತದೆ. ಆದರೆ ಬಾಲಕಿ ಕೋತಿ ಮರಿಯನ್ನು ಎದೆಗೊತ್ತಿಕೊಂಡು ಮುದ್ದಾಡುತ್ತಿದ್ದು, ಸ್ವಲ್ಪ ಕಾಲ ತಾಯಿ ಕೋತಿಗೆ ಆಟವಾಡಿಸುತ್ತಾಳೆ.  ಮಗುವಿಗಾಗಿ ಬಾಲಕಿ ಹಿಂದೆ ಮುಂದೆ ಸುತ್ತಾಡುವ ಕೋತಿ ಕೆಲ ಕಾಲ ನೋಡಿ ಬಾಲಕಿಯ ಹೆಗಲಿಗೆ ನಿಧಾನವಾಗಿ ತನ್ನ ಎರಡು ಕೈಗಳನ್ನು ಇಟ್ಟು ತನ್ನ ಮರಿಯನ್ನು ಬಾಲಕಿ ಕೈಯಿಂದ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾಳೆ. 

ಕಲ್ಚರ್ ಆಫ್ ರಾಜಸ್ತಾನ ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವಿಡಿಯೋ ಪೋಸ್ಟ್ ಆಗಿದೆ.   ಐದು ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಆದರೆ ಅನೇಕರು ಈ ವಿಡಿಯೋಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಮ್ಮಲ್ಲಿಗೆ ನಾನು ಬಂದು ಒತ್ತಾಯಪೂರ್ವಕವಾಗಿ ನಿಮ್ಮ ಮಗುವನ್ನು ನಿಮ್ಮಿಂದ ಕಸಿದುಕೊಂಡರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಒಬ್ಬರು ಬಳಕೆದಾರರು ಪ್ರಶ್ನಿಸಿದ್ದಾರೆ. 
 

click me!