
ಪರಿಚಯವಾಗಿದೆ, ಡೇಟಿಂಗ್ ಹೋಗಿದ್ದಾರೆ. ಅತ್ಯಂತ ದುಬಾರಿ ರೆಸ್ಟೋರೆಂಟ್, ಶಾಪಿಂಗ್ ಹೀಗೆ ಡೇಟಿಂಗ್ ನಡುವೆ ಖರ್ಚು ನಡೆದಿದೆ. ಆದರೆ ಮರುದಿನ , ಡೇಟಿಂಗ್ ಎಂಜಾಯ್ ಮಾಡಿದೆ, ಆದರೆ ರೊಮ್ಯಾಂಟಿಕ್ ಸಂಬಂಧ ಸಾಧ್ಯವಿಲ್ಲ ಎಂದು ಯುವಕನಿಗೆ ಮೆಸೇಜ್ ಕಳುಹಿಸಿದ್ದಾಳೆ. ಇದಕ್ಕೆ ಯುವಕ ಸಿಟ್ಟಿಗೇಳಲಿಲ್ಲ, ಆಕ್ರೋಶ ಹೊರಹಾಕಲಿಲ್ಲ, ಕಾರಣ ಕೇಳಲಿಲ್ಲ. ಬದಲಾಗಿದೆ ಎರಡೇ ಎರಡು ಶಬ್ದದ ರಿಪ್ಲೈ ಕೊಟ್ಟಿದ್ದಾನೆ. ಆತನ ರಿಪ್ಲೈ ನೋಡಿ ಯುವತಿ ಕಂಗಾಲಾಗಿದ್ದಾಳೆ.
ಡೇಟಿಂಗ್ ಬಳಿಕ ಒಕೆ ಆದರೆ ರಿಲೇಶನ್‌ಶಿಪ್ ಹೊಸದೇನಲ್ಲ. ಹೀಗೆ ಪರಿಚಯವಾಗಿದ್ದಾರೆ, ಯುವಕ ಡೇಟಿಂಗ್‌ಗೆ ಕರೆದಿದ್ದಾನೆ. ರಿಲೇಶನ್‌ಶಿಪ್ ಮುಂದುವರಿಸಲು ಬಯಸಿದ ಯುವಕ, ಮದುವೆಗೂ ಪ್ಲಾನ್ ಮಾಡಿಕೊಂಡಿದ್ದ. ಈತನ ಒಂದು ಕರೆಗೆ ಆಕೆ ಒಕೆ ಎಂದಿದ್ದಾಳೆ. ಡೇಟಿಂಗ್‌ಗೆ ಡೇಟ್ ಫಿಕ್ಸ್ ಆಗಿದೆ, ಸಮಯವೂ ನಿಗದಿಯಾಗಿದೆ. ಯುವಕನ ವಯಸ್ಸು 35ರ ಆಸುಪಾಸು. ಮೊದಲ ಭೇಟಿ, ಮೊದಲ ಡೇಟಿಂಗ್ ಹೀಗೆ ಖುಷಿಯಲ್ಲಿ ತೇಲಾಡಿದ್ದಾನೆ.
ಸಂಜೆಯಾಗುತ್ತಿದ್ದಂತೆ ಯುವತಿಯನ್ನು ಭೇಟಿಯಾಗಿದ್ದಾನೆ. ಬಳಿಕ ಪ್ರತಿಷ್ಠಿತ ಮೆಕ್ಲಿನ್ ರೆಸ್ಟೋರೆಂಟ್‌ಗೆ ಕೆರೆದುಕೊಂಡು ಹೋಗಿದ್ದಾನೆ. ಅತ್ಯಂತ ದುಬಾರಿ ಹಾಗೂ ಐಷಾರಾಮಿ ರೆಸ್ಟೋರೆಂಟ್ ಇದಾಗಿದೆ. ಏನು ಬೇಕಾದರು ಆರ್ಡರ್ ಮಾಡು, ಈ ರಾತ್ರಿ ನಿನ್ನದೆ ಎಂದಿದ್ದಾನೆ. ಆಕೆ ಖುಷಿಯಿಂದ ತೇಲಾಡಿದ್ದಾಳೆ. ಒಂದರ ಮೇಲೊಂದರಂತೆ ಆರ್ಡರ್ ಮಾಡಿದ್ದಾಳೆ, ಆಹಾರ ಸವಿದಿದ್ದಾಳೆ. ಜೊತೆಗೆ ಅಲ್ಲೆ ಪಕ್ಕದ ಶಾಪಿಂಗ್ ಮಾಲ್ ತಿರುಗಾಡಿ, ಹರಟೆ ಹೊಡೆದಿದ್ದಾರೆ. ತನ್ನ ಬಾಳ ಸಂಗಾತಿ ಕುರಿತು ಕೆಲ ಕಲ್ಪನೆ, ಮುಂದಿನ ನಿರ್ಧಾರ ಸೇರಿದಂತೆ ಹಲವು ವಿಚಾರಗಳ ಕುರಿತು ಯುವಕ ಹಂಚಿಕೊಂಡಿದ್ದಾನೆ.
ಆತನ ಮಾತುಗಳನ್ನು ಕೇಳಿಸಿಕೊಂಡು ತಡರಾತ್ರಿಯಾಗುತ್ತಿದ್ದಂತೆ ಆಕೆಯನ್ನು ಮನೆಯತ್ತ ಬಿಟ್ಟು ಯುವಕ ತೆರಳಿದ್ದಾನೆ. ಇಬ್ಬರು ಖುಷಿಯಿಂದಲೇ ಮನೆಗೆ ತೆರಳಿದ್ದಾರೆ. ಮರು ದಿನ ಯುವತಿ ಮೆಸೇಜ್ ಕಳುಹಿಸಿದ್ದಾಳೆ. ನಿನ್ನೆ ರಾತ್ರಿ ತುಂಬಾ ಫನ್ ಆಗಿತ್ತು. ಆದರೆ ನಾವಿಬ್ಬರು ಸುದೀರ್ಘ ಸಂಬಂಧಕ್ಕೆ ಹೊಂದಿಕೆಯಾಗುವುದಾಗಿ ಕಾಣಿಸುತ್ತಿಲ್ಲ. ಹೀಗಾಗಿ ನಾವು ಸಮಯ ವ್ಯರ್ಥ ಮಾಡುವುದು ಬೇಡ. ನೀವು ನಿಜಕ್ಕೂ ಗ್ರೇಟ್ , ನಾವಿಬ್ಬರು ಫ್ರೆಂಡ್ಸ್ ಆಗಿ ಇರೋಣ, ರೊಮ್ಯಾಂಟಿಕ್ ಸಂಬಂಧ ಸಾಧ್ಯವಿಲ್ಲ ಎಂದು ಸಂದೇಶ ಕಳುಹಿಸಿದ್ದಾಳೆ.
ಯುವತಿ ಸಂದೇಶಕ್ಕೆ ಆಕ್ರೋಶದಿಂದ ಯಾವ ಮಾತು ಆಡಲಿಲ್ಲ, ಯಾವ ಪ್ರತಿಕಿಯೆ ನೀಡಿಲ್ಲ. ಕಿರುಚಾಡಲಿಲ್ಲ, ಅಸಮಾಧಾನ ಹೊರಹಾಕಲಿಲ್ಲ. ಕಾರಣವನ್ನು ಕೇಳಲಿಲ್ಲ. ಕೇವಲ 1050 ಅಮೆರಿಕನ್ ಡಾಲರ್ ಪಾವತಿ ಮಾಡುವಂತೆ ಸೂಚಿಸಿ ರಿಪ್ಲೈ ನೀಡಿದ್ದಾನೆ. ಕಳೆದ ರಾತ್ರಿ ರೆಸ್ಟೋರೆಂಟ್ ಸೇರಿದಂತೆ ಡೇಟಿಂಗ್‌ಗೆ 1050 ಅಮೆರಿಕನ್ ಡಾಲರ್ ಅಂದರೆ ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 1 ಲಕ್ಷ ರೂಪಾಯಿ ಪಾವತಿಸುವಂತೆ ಸೂಚಿಸಿ ರಿಪ್ಲೈ ಮಾಡಿದ್ದಾನೆ.
ಯುವಕನ ರಿಪ್ಲೈ ನೋಡಿ ಆಕೆ ಕಂಗಾಲಾಗಿದ್ದಾಳೆ. ಇಷ್ಟು ಮೊತ್ತ ಹಿಂದಿರುಗಿಸಬೇಕಾ ಅನ್ನೋ ಆತಂಕ ಎದುರಾಗಿದೆ. ಈ ಘಟನೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಆತನ ಕೂದಲು ಉದುರಿದೆ, ಬಾಲ್ಡ್ ಆಗಿದ್ದಾನೆ ಅನ್ನೋ ಕಾರಣಕ್ಕೆ ಮರುದಿನ ಯುವತಿ ರಿಜೆಕ್ಟ್ ಮಾಡಿದ್ದಾಳೆ. ಯುವಕನ ಕೂದಲು ಉದುರಿದೆ ಅನ್ನೋದು ಮೊದಲ ಭೇಟಿಯಲ್ಲೇ ಗೊತ್ತಾಗಿತ್ತು. ಆದರೂ ರಾತ್ರಿ ಆತನ ಜೊತೆ ರೆಸ್ಟೋರೆಂಟ್‌ಗೆ ತೆರಳಿ ಆತನ ಖರ್ಚಿನಲ್ಲಿ ಆಹಾರ ಸವಿದಿದ್ದಾಳೆ. ಆತನಿಂದ 1 ಲಕ್ಷ ರೂಪಾಯಿ ಖರ್ಚು ಮಾಡಿಸಿ ಕೊನೆಗೆ ನೋ ಎಂದಿದ್ದಾಳೆ. ಹೀಗಾಗಿ ಬೇಡ ಎಂದರೆ ರೆಸ್ಟೋರೆಂಟ್ ಕೂಡ ಕ್ಯಾನ್ಸಲ್ ಮಾಡಬಹುದಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.