ಪತಿಯನ್ನು ಕಳೆದುಕೊಂಡ ನೋವಿನಲ್ಲಿ ಜೀವನ ನಡೆಸೋದು ಸುಲಭವಲ್ಲ. ಆತನ ನೆನಪು ಸದಾ ಕಾಡುತ್ತದೆ. ಆದ್ರೆ ಆತ ಸತ್ತ ಮೇಲೆ ಆತನ ಮೋಸ ಬಯಲಾದ್ರೆ ಪ್ರೀತಿ ಬದಲು ದ್ವೇಷ ಬೆಳೆಯುತ್ತದೆ.
ದಾಂಪತ್ಯ ಎತ್ತಿನ ಬಂಡಿ ಇದ್ದಂತೆ. ಒಂದು ಎತ್ತು ಇಲ್ಲ ಎಂದ್ರೂ ಇಡೀ ಗಾಡಿಯ ಭಾರ ಮತ್ತೊಂದು ಎತ್ತಿನ ಮೇಲೆ ಬರುತ್ತೆ. ಪತಿ – ಪತ್ನಿಯಲ್ಲಿ ಒಬ್ಬರು ಸಾವನ್ನಪ್ಪಿದ್ರೂ ಸಂಸಾರದ ಬಂಡಿ ಸಾಗೋದು ಸ್ವಲ್ಪ ಕಷ್ಟ. ಮಕ್ಕಳ ಜವಾಬ್ದಾರಿ, ಮನೆ ಕೆಲಸ, ಹಣಕಾಸಿನ ವ್ಯವಹಾರ, ನೋವು – ಸಂತೋಷವನ್ನು ಹಂಚಿಕೊಳ್ಳಲು ಸಂಗಾತಿ ಬೇಕು. ಇಬ್ಬರು ಜೊತೆಯಾಗಿ ನಡೆದಾಗ ಜೀವನ ಸುಖಕರವಾಗಿರುತ್ತದೆ. ಅತಿಯಾಗಿ ಪ್ರೀತಿಸುವ ಸಂಗಾತಿ ಸಾವನ್ನಪ್ಪಿದಾಗ ಅದನ್ನು ಅರಗಿಸಿಕೊಳ್ಳೋದು ಕಷ್ಟ. ಎಷ್ಟೇ ವರ್ಷ ಕಳೆದ್ರೂ ಅವರ ಸ್ಥಾನವನ್ನು ಬೇರೊಬ್ಬರು ತುಂಬಲು ಸಾಧ್ಯವಾಗೋದಿಲ್ಲ. ಬಾಳ ಸಂಗಾತಿಯನ್ನು ಕಳೆದುಕೊಂಡ ನೋವು ಹಗಲು – ರಾತ್ರಿ ಎನ್ನದೆ ಅವರನ್ನು ಕಾಡುತ್ತದೆ.
ಎಲ್ಲ ದಾಂಪತ್ಯ (Marriage) ದಲ್ಲಿ ಈ ಪ್ರೀತಿ (Love) ಯ ಬಂಧ ಸದಾ ಇರುತ್ತೆ ಎನ್ನಲು ಸಾಧ್ಯವಿಲ್ಲ. ಬದುಕಿದ್ದಾಗ ಸಂಗಾತಿಯನ್ನು ಅತಿಯಾಗಿ ನಂಬಿದ್ದವರಿಗೆ ಅದೇ ಸಂಗಾತಿ ಸತ್ತ ಮೇಲೆ ಅವರ ಬಣ್ಣ ಬಯಲಾದ್ರೆ ಹಿಂದಿನ ಪ್ರೀತಿ ದ್ವೇಷವಾಗಿ ಬದಲಾಗುತ್ತದೆ. ಪತಿ (Husband) ಕುಡಿತಕ್ಕೆ ಅತಿ ಸಾಲ ಮಾಡಿದ್ದ ಎಂಬುದು ಆತ ಸತ್ತ ಮೇಲೆ ಗೊತ್ತಾದ್ರೆ ಪತ್ನಿ, ಪತಿಯ ಸಾವಿಗಿಂತ ಸಾಲದ ಬಗ್ಗೆ ಹೆಚ್ಚು ಆಲೋಚನೆ ಮಾಡ್ತಾಳೆ. ಅದೇ ಪತಿ ಬದುಕಿದ್ದಾಗ ಮೋಸ ಮಾಡಿದ್ದ ಎಂಬುದು ಗೊತ್ತಾದ್ರೆ, ನಾಲ್ಕೈದು ಮಹಿಳೆಯರ ಜೊತೆ ಸಂಬಂಧ ಹೊಂದಿದ್ದ ಎಂಬುದು ಗೊತ್ತಾದ್ರೆ ಸತ್ತವನ ಮೇಲೆ ಕೋಪ, ಅಸಹ್ಯ ಮೂಡುತ್ತೆ. ಈಗ ಈ ಮಹಿಳೆಯೂ ಅದೇ ಸ್ಥಿತಿಯಲ್ಲಿದ್ದಾಳೆ.
ಸ್ಲೀಪ್ ಡೈವೋರ್ಸ್ ಎಂದ್ರೇನು ಗೊತ್ತಾ? ಸಂಬಂಧ ಸುಧಾರಣೆ ಮಾಡುತ್ತೆ ನಿದ್ರೆಯ ವಿಚ್ಚೇದನ
ಟಿಕ್ ಟಾಕ್ (Tik Tok ) ನ @cherrybombsquad007 ಖಾತೆಯಲ್ಲಿ ಮಹಿಳೆಯೊಬ್ಬಳು ಏಳು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾಳೆ. ದಿವಂಗತ ಪತಿಯ ಇತಿಹಾಸ ಎಂಬ ಶೀರ್ಷಿಕೆ ಹಾಕಿ ಮಹಿಳೆ ಏಳು ವಿಡಿಯೋಗಳನ್ನು ಹಂಚಿಕೊಂಡಿದ್ದಾಳೆ. ಮಹಿಳೆ ಪ್ರಮಾಣೀಕೃತ ನರ್ಸಿಂಗ್ ಸಹಾಯಕಿ. ಆದ್ರೆ ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿರ್ತಾಳೆ. ಆಕೆ ಪತಿ ಸಾವನ್ನಪ್ಪಿ ಮೂರು ವರ್ಷ ಕಳೆದಿದೆ. ಆತನ ಸಾವಿನ ನಂತ್ರ ಮಹಿಳೆ ತನ್ನ ಪತಿಯ ಕಂಪ್ಯೂಟರ್ ಓಪನ್ ಮಾಡಿದ್ದಾಳೆ. ಅಲ್ಲಿದ್ದ ಮೆಸ್ಸೇಜ್ ಆಕೆಯನ್ನು ದಂಗಾಗಿಸಿದೆ. ಪತಿಯನ್ನು ಅತಿಯಾಗಿ ನಂಬಿದ್ದವಳಿಗೆ ಮೋಸವಾಗಿದೆ.
ಮಹಿಳೆಯ ಪತಿ ಮಹಾ ಮೋಸಗಾರ ಎಂಬುದು ಗೊತ್ತಾಗಿದೆ. ಆತ ಅನೇಕ ಮಹಿಳೆಯರ ಜೊತೆ ಅಕ್ರಮ ಸಂಬಂಧ (Illicit Relationship) ಹೊಂದಿದ್ದ. ಮಹಿಳೆಯರಿಗೆ ನಿತ್ಯ ಆತ ಮೆಸ್ಸೇಜ್ ಕಳಿಸ್ತಿದ್ದ. ತನ್ನ ಪತ್ನಿ ಬಗ್ಗೆ ಮಹಿಳೆಯರಿಗೆ ಒಂದೊಂದು ಸುಳ್ಳು ಹೇಳಿದ್ದ. ಪತ್ನಿ ಸಾವನ್ನಪ್ಪಿದ್ದಾಳೆ ಎಂದು ಒಬ್ಬಳಿಗೆ ಹೇಳಿದ್ರೆ, ಇನ್ನೊಬ್ಬಳಿಗೆ ಪತ್ನಿ ಕೋಮಾದಲ್ಲಿದ್ದಾಳೆ ಎಂದಿದ್ದ. ಮತ್ತೊಬ್ಬಳಿಗೆ ತನಗೆ ವಿಚ್ಛೇದನವಾಗಿದೆ (Divorce) ಅಂದ್ರೆ ಇನ್ನೊಬ್ಬ ಮಹಿಳೆಗೆ ತಾನು ಸಿಂಗಲ್ ಪೇರೆಂಟ್ ಎಂದಿದ್ದ. ಒಟ್ಟಿನಲ್ಲಿ ಸುಳ್ಳಿನ ಕಥೆ ಕಟ್ಟಿ ಮಹಿಳೆಯರ ಜೊತೆ ಫ್ಲರ್ಟ್ ಮಾಡ್ತಿದ್ದ.
ಅನೇಕ ಮಹಿಳೆಯರು ಪತಿಯ ಮೆಸ್ಸೇಜ್ ಗೆ ರಿಪ್ಲೇ ಮಾಡಿದ್ದಾರೆ. ತುಂಬಾ ದಿನವಾಯ್ತು, ಭೇಟಿಯಾಗೋಣ ಎಂದು ಮೆಸ್ಸೇಜ್ ಮಾಡಿರುವವರೂ ಇದ್ದಾರೆ. ಮಹಿಳೆ ಪತಿಯ ಕೆಲಸ ನೋಡಿ ದಂಗಾಗಿದ್ದಾಳೆ. ಆಕೆ ಇನ್ನೇನು ಕಂಪ್ಯೂಟರ್ ಬಂದ್ ಮಾಡ್ಬೇಕು ಆಗ ಮತ್ತೊಬ್ಬ ಮಹಿಳೆಯಿಂದ ಮೆಸ್ಸೇಜ್ ಬಂದಿದೆ. ನನಗೆ ನಿನ್ನ ನೆನಪು ಕಾಡ್ತಿದೆ, ಇಂದು ಸಿಗೋಣ ಎಂದು ಸಂದೇಶ ಕಳುಹಿಸಿದ್ದಾಳೆ.
ಲೇಟ್ ಮ್ಯಾರೇಜ್ ಆಗ್ತಿದ್ದೀನಿ ಅನ್ನೋ ಚಿಂತೆ ಬೇಡ, ತಡವಾಗಿ ಮದ್ವೆಯಾದ್ರೆ ಇಷ್ಟೆಲ್ಲಾ ಪ್ರಯೋಜನವಿದೆ
ಮಹಿಳೆ ಪ್ರಕಾರ, ಅನೇಕ ಮಹಿಳೆಯರಿಗೆ ಪತಿ ಸತ್ತ ವಿಷ್ಯ ತಿಳಿದಿಲ್ಲ. ಮಹಿಳೆ ವಿಡಿಯೋ ನೋಡಿದ ಬಳಕೆದಾರರು ಅಚ್ಚರಿಗೊಳಗಾಗಿದ್ದಾರೆ. ಅಲ್ಲದೆ ಮಹಿಳೆಗೆ ಸಾಂತ್ವಾನ ಹೇಳುವ ಕೆಲಸ ಮಾಡುತ್ತಿದ್ದಾರೆ. ಆಕೆ ವಿಡಿಯೋ ವೈರಲ್ ಆಗಿದ್ದು ಎರಡು ಮಿಲಿಯನ್ ಗಿಂತಲೂ ಹೆಚ್ಚು ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ.