3 ಅಡಿ ವ್ಯಕ್ತಿ ಕೈ ಹಿಡಿದ 5 ಅಡಿ ಮಹಿಳೆಗೆ ನಾಲ್ಕು ಮಕ್ಕಳು…. ಇವೆಲ್ಲ ಹೇಗೆ ಸಾಧ್ಯ ಎನ್ನುತ್ತಿದ್ದಾರೆ ನೆಟ್ಟಿಗರು..

Published : Apr 10, 2024, 03:15 PM IST
3 ಅಡಿ ವ್ಯಕ್ತಿ ಕೈ ಹಿಡಿದ 5 ಅಡಿ ಮಹಿಳೆಗೆ ನಾಲ್ಕು ಮಕ್ಕಳು…. ಇವೆಲ್ಲ ಹೇಗೆ ಸಾಧ್ಯ ಎನ್ನುತ್ತಿದ್ದಾರೆ ನೆಟ್ಟಿಗರು..

ಸಾರಾಂಶ

ಅತಿ ಹೆಚ್ಚು ಎತ್ತರದ ಅಂತರ ಹೊಂದಿರುವ ದಂಪತಿ ಇದೀಗ ಇಂಟರ್ನೆಟ್ ಜಗತ್ತಿನಲ್ಲಿ ಸದ್ದು ಮಾಡುತ್ತಿದ್ದಾರೆ. ಗಿನ್ನಿಸ್ ದಾಖಲೆ ಬರೆದಿರುವ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರೀತಿಗೆ ಎತ್ತರ ಮುಖ್ಯವಲ್ಲ ಎಂಬುದನ್ನು ಇವರು ಸಾಭೀತುಪಡಿಸಿದ್ದಾರೆ.   

ವಿಶ್ವದಲ್ಲಿ ಕೆಲ ದಂಪತಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗ್ತಿರುತ್ತಾರೆ. ಕೆಲ ದಂಪತಿ ವಯಸ್ಸಿನ ಅಂತರಕ್ಕೆ ಚರ್ಚೆಯಾದ್ರೆ ಮತ್ತೆ ಕೆಲ ದಂಪತಿ ತೂಕ, ಎತ್ತರದ ವಿಷ್ಯಕ್ಕೆ ಗಮನ ಸೆಳೆಯುತ್ತಾರೆ. ಈಗ ವಿಶ್ವದಲ್ಲೇ ಅತಿ ಹೆಚ್ಚಿನ ಎತ್ತರದ ವ್ಯತ್ಯಾಸ ಹೊಂದಿರುವ ದಂಪತಿ ಹುಬ್ಬೇರಿಸುವಂತೆ ಮಾಡಿದ್ದಾರೆ. ಮದುವೆಯಾಗುವ ಮುನ್ನ ಬಣ್ಣ, ಎತ್ತರ ಸೇರಿದಂತೆ ಬಾಹ್ಯ ಸೌಂದರ್ಯ ನೋಡುವ ಜನರಿಗೇನು ಕಮ್ಮಿ ಇಲ್ಲ. ನನಗೆ ಹೊಂದಿಕೆಯಾಗಲ್ಲ ಎನ್ನುವ ಕಾರಣಕ್ಕೆ ಅನೇಕ ಹುಡುಗಿ / ಹುಡುಗನನ್ನು ರಿಜೆಕ್ಟ್ ಮಾಡ್ತಾರೆ. ಮತ್ತೆ ಕೆಲವರು  ಬಾಹ್ಯ ಸೌಂದರ್ಯಕ್ಕಿಂತ ಕೈ ಹಿಡಿಯಲಿರುವ ಸಂಗಾತಿ ಮನಸ್ಸನ್ನು ನೋಡ್ತಾರೆ. ಮನಸ್ಸು ಶುದ್ಧವಾಗಿದ್ದರೆ, ಭರವಸೆ ವ್ಯಕ್ತಿ, ನನಗೆ ಯೋಗ್ಯ ವ್ಯಕ್ತಿ ಎನ್ನಿಸಿದಲ್ಲಿ ಅವರ ಕೈ ಹಿಡಿಯಲು ಹಿಂದೆ ಮುಂದೆ ನೋಡೋದಿಲ್ಲ. ಈಗ ನಾವು ಹೇಳ್ತಿರುವ ದಂಪತಿ ಕೂಡ ದೇಹ ಸೌಂದರ್ಯವನ್ನು ಪರಿಗಣಿಸಿಲ್ಲ. ಪರಸ್ಪರ ಪ್ರೀತಿ, ಗೌರವ, ವಿಶ್ವಾಸಕ್ಕೆ ಬೆಲೆ ಕೊಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮಿಬ್ಬರ ಮಧ್ಯೆ ಇರುವ ಪ್ರೀತಿಯನ್ನು ಎಲ್ಲರ ಮುಂದೆ ತೋರ್ಪಡಿಸಿದ್ದಾರೆ ಕೂಡ. 

ಈ ದಂಪತಿ ಅಮೆರಿಕ (America) ದಲ್ಲಿ ನೆಲೆಸಿದ್ದಾರೆ. ಪತ್ನಿ ಹೆಸರು ಜೆಸ್ಸಿಕಾ ಬರ್ನ್ಸ್ ಮೆಕ್‌ಡೊನೆಲ್. ವಯಸ್ಸು 40 ವರ್ಷ. ಗಂಡನ ಹೆಸರು ಲ್ಯಾರಿ ಮೆಕ್‌ಡೊನೆಲ್. ವಯಸ್ಸು 42 ವರ್ಷ. ಜಸ್ಸಿಕಾ 5 ಅಡಿ 10 ಇಂಚು ಎತ್ತರ (height) ಹೊಂದಿದ್ದಾಳೆ. ಇನ್ನು ಲ್ಯಾರಿ ಮೆಕ್ ಡೊನೆಲ್ ಮೂರು ಅಡಿ ಎತ್ತರವನ್ನು ಹೊಂದಿದ್ದಾನೆ. ಲ್ಯಾರಿ ಡಿಸ್ಟ್ರೋಫಿಕ್ ಡ್ವಾರ್ಫಿಸಂನಿಂದ ಬಳಲುತ್ತಿದ್ದಾನೆ.

ಮದ್ವೆಗೂ ಮೊದಲು ಜೊತೆಯಾಗಿ ಜೀವಿಸಿ: ಯುವ ಸಮೂಹಕ್ಕೆ ನಟಿ ಜೀನತ್ ಸಲಹೆ

ದಂಪತಿ (Couple) ಕೆಲ ದಿನಗಳ ಹಿಂದೆ ಲಂಡನ್ ನಲ್ಲಿ ಟಿವಿ ಶೋ, ಲೋ ಶೋ ಡೀ ರೆಕಾರ್ಡ್ ನಲ್ಲಿ ( Lo Show Dei Record)ನಲ್ಲಿ ಕಾಣಿಸಿಕೊಂಡಿದ್ದರು. ಅವರ ವೀಡಿಯೊವನ್ನು ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಹಂಚಿಕೊಳ್ಳಲಾಗಿದೆ.

ಪತ್ನಿಗಿಂತ ಪತಿ ಎತ್ತರವಾಗಿರಬೇಕು ಎಂಬುದು ನಮ್ಮವರ ನಂಬಿಕೆ. ಈ ನಂಬಿಕೆ ಸುಳ್ಳು ಎಂಬುದನ್ನು ಜೆಸ್ಸಿಕಾ ಮತ್ತು ಲ್ಯಾರಿ ಅಲ್ಲಗಳೆದಿದ್ದಾರೆ. ಜೆಸ್ಸಿಕಾ ಹಾಗೂ ಲ್ಯಾರಿ ಸ್ನೇಹಿತರ ಒಂದು ಗುಂಪಿತು. ಅವರು ಒಂದೇ ಕಡೆ ವಾಸವಾಗಿದ್ದರು. ಇಬ್ಬರು ಬಾಲ್ಯದಲ್ಲಿ ಅಪರೂಪಕ್ಕೆ ಭೇಟಿಯಾಗ್ತಿದ್ದರು. ಲ್ಯಾರಿ ಮೊಬಿಲಿಟಿ ಸ್ಕೂಟರ್ ಅನ್ನು ಬಳಸುತ್ತದೆ. ಅವನ ಮನೆ ಜೆಸ್ಸಿಕಾಳ ಮನೆಗೆ ಬಹಳ ಹತ್ತಿರದಲ್ಲಿತ್ತು. ದೊಡ್ಡವನಾದ್ಮೇಲೆ ಲ್ಯಾರಿ ಆಗಾಗ ಜೆಸ್ಸಿಕಾ ಭೇಟಿಯಾಗಲು ಹೋಗುತ್ತಿದ್ದ. ಆದ್ರೆ ಆಸಮಯದಲ್ಲಿ ಜೆಸ್ಸಿಕಾಗೆ ಒಬ್ಬ ಬಾಯ್ ಫ್ರೆಂಡ್ ಇದ್ದ. ಜನರು ಲ್ಯಾರಿ ಹಾಗೂ ಜೆಸ್ಸಿಕಾ ಜೋಡಿಯನ್ನು ಮೆಚ್ಚಿಕೊಂಡಿದ್ದರು. ಇಬ್ಬರು ಒಳ್ಳೆ ಸ್ನೇಹಿತರಾಗಿದ್ದರು. ಆದ್ರೆ ಜೆಸ್ಸಿಕಾ ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ್ಮೇಲೆ ಲ್ಯಾರಿಯನ್ನು ನೋಡುವ ದೃಷ್ಟಿ ಬದಲಾಗಿತ್ತು. ಆಕೆ ಲ್ಯಾರಿಯನ್ನು ಪ್ರೀತಿಸಲು ಶುರು ಮಾಡಿದ್ದರು. ಇದು ಲ್ಯಾರಿಗೆ ಖುಷಿ ನೀಡಿತ್ತು.

ಇಬ್ಬರೂ 2006ರಲ್ಲಿ ಡೇಟಿಂಗ್ ಶುರು ಮಾಡಿದ್ದರು. ನಂತ್ರ ಮದುವೆ ಆದ್ರು. ಈಗ ಇಬ್ಬರಿಗೆ ನಾಲ್ಕು ಮಕ್ಕಳಿದ್ದಾರೆ. ಮಕ್ಕಳ ವಯಸ್ಸು 16, 15, 13 ಮತ್ತು ಒಂದು ವರ್ಷ.  ಜೆಸ್ಸಿಕಾ ಮತ್ತು ಲ್ಯಾರಿ ಮನಸ್ಸಿಗೆ ಪ್ರಾಮುಖ್ಯತೆ ನೀಡಿದ್ದಾರೆಯೇ ಹೊರತು ಸೌಂದರ್ಯ, ಎತ್ತರಕ್ಕಲ್ಲ. 

ವಿಪರೀತ ಹಣ್ಣು ತಿನ್ನೋ ಮಲ ಮಗಳು.. ಬಜೆಟ್ ಮ್ಯಾನೇಜ್ ಕಷ್ಟವೆಂದು ಮಲ ತಾಯಿ ಧೋರಣೆ

Guinnessworldrecords ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇವರಿಬ್ಬರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ಅನೇಕ ಬಳಕೆದಾರರು ಜೋಡಿಗೆ ಶುಭಕೋರಿದ್ದಾರೆ. ಪ್ರೀತಿ ಅಂದ್ರೆ ಹೀಗಿರಬೇಕು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.  ಮತ್ತೆ ಕೆಲವರು ಇವರ ಸಂಸಾರದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಮಕ್ಕಳೆಲ್ಲ ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೇರ್ ಟೇಕರ್ ನಂಬಿದ ಅಪ್ಪ ಮಗಳಿಗೆ ಆಗಬಾರದು ಆಗೋಯ್ತು: ನಂಬೋದು ಯಾರನ್ನು?
ಯುವತಿಯ ಡಾರ್ಕ್‌ ಸಿಕ್ರೇಟ್ ಕೇಳಿ ಸ್ವತಃ ಶಾಕ್ ಆದ ಯೂಟ್ಯೂಬರ್: ಥೂ ಇಂಥಾ ಜನನ್ನೂ ಇರ್ತಾರಾ?