ಮನುಷ್ಯರು ಕಿಸ್‌ ಮಾಡೋಕೆ ಶುರು ಮಾಡಿದ್ದು ಯಾವಾಗ, ಯಾಕೆ?

By Suvarna News  |  First Published Apr 11, 2024, 1:05 PM IST

ಅಧರಂ ಮಧುರಂ ಅಂತ ಅನಿಸುವಂತೆ ಮಾಡುವ, ಮೈ ಜುಮ್ಮೆನಿಸುವ, ಮತ್ತೇರಿಸಿ ಕೊಲ್ಲುವ ಈ ಕಿಸ್‌ ಮಾಡುವುದು, ಚುಂಬಿಸುವುದು, ಮುತ್ತು ಕೊಡುವುದು ಇದು ಹೇಗೆ ಯಾವಾಗಿನಿಂದ ಮನುಷ್ಯರಿಗೆ ರೂಡಿಯಾಗಿತು? ಹೇಗೆ ಯಾವಾಗ ಇದು ಆಳವಾದ ಪ್ರೀತಿಯ ಸಂಕೇತವಾಯಿತು?



ಅಧರಂ ಮಧುರಂ ಅಂತ ಅನಿಸುವಂತೆ ಮಾಡುವ, ಮೈ ಜುಮ್ಮೆನಿಸುವ, ಮತ್ತೇರಿಸಿ ಕೊಲ್ಲುವ ಈ ಕಿಸ್‌ ಮಾಡುವುದು, ಚುಂಬಿಸುವುದು, ಮುತ್ತು ಕೊಡುವುದು ಇದು ಹೇಗೆ ಯಾವಾಗಿನಿಂದ ಮನುಷ್ಯರಿಗೆ ರೂಡಿಯಾಗಿತು? ಹೇಗೆ ಯಾವಾಗ ಇದು ಆಳವಾದ ಪ್ರೀತಿಯ ಸಂಕೇತವಾಯಿತು?

ನಿಮಗೆ ಗೊತ್ತಿರಲಿ, ಪ್ರಪಂಚದಾದ್ಯಂತದ 168 ವಿಭಿನ್ನ ಸಂಸ್ಕೃತಿಗಳಲ್ಲಿ ಅರ್ಧಕ್ಕಿಂತ ಕಡಿಮೆ ಸಮುದಾಯಗಳು ಮಾತ್ರ ತುಟಿಗಳ ಚುಂಬನವನ್ನು ಮಾಡುತ್ತವೆ ಎಂದು ಅಧ್ಯಯನ ಬಹಿರಂಗಪಡಿಸಿದೆ. ಲಾಸ್ ವೇಗಾಸ್‌ನ ನೆವಾಡಾ ವಿಶ್ವವಿದ್ಯಾನಿಲಯದ ಮಾನವಶಾಸ್ತ್ರದ ಪ್ರಾಧ್ಯಾಪಕರಾದ ವಿಲಿಯಂ ಜಾಂಕೋವಿಕ್, ನೂರಕ್ಕೆ ಕೇವಲ 46 ಜನರು ಮಾತ್ರ ತುಟಿಗಳಿಗೆ ಚುಂಬಿಸುವುದನ್ನು ರೋಮ್ಯಾಂಟಿಕ್ ಎಂದು ಪರಿಗಣಿಸುತ್ತಾರೆ ಎನ್ನುತ್ತಾರೆ. ಇದರಲ್ಲಿ ಪೋಷಕರು ಮಕ್ಕಳನ್ನು ಚುಂಬಿಸುವುದು ಅಥವಾ ಶುಭಾಶಯ ಕೋರುವುದನ್ನು ಹೊರತುಪಡಿಸಿದೆ.

Tap to resize

Latest Videos

ಹಿಂದೂಗಳಲ್ಲಿ, ವೇದಗಳಲ್ಲಿಯೇ, ಅಂದರೆ 3500 ವರ್ಷಗಳ ಹಿಂದೆಯೇ ಅಧರ ಚುಂಬನದ ಮಹತ್ವವನ್ನು ವಿವರಿಸಲಾಗಿದೆ. ಚುಂಬನದ ಕಲ್ಪನೆಯು ಮಾನವರಲ್ಲಿ ಯಾವಾಗ ಪ್ರಾರಂಭವಾಯಿತು ಎಂಬುದಕ್ಕೆ ಎರಡು ಸಿದ್ಧಾಂತಗಳಿವೆ. ಮಾನವರು ಮಕ್ಕಳಂತೆ ಚುಂಬಿಸುವ ಸಹಜವಾದ ಬಯಕೆಯನ್ನು ಹೊಂದಿರುತ್ತಾರೆ.

ಮೊದಲನೆಯ ಪ್ರಕಾರ, ಹುಟ್ಟಿದ ಮಗು ತನ್ನ ತುಟಿಗಳಿಂದ ಅಮ್ಮನ ಎದೆಯನ್ನು ಹೀರಿ ಹಾಲು ಪಡೆಯುತ್ತದೆ. ಆದ್ದರಿಂದ ತಾಯಿಯ ಸ್ತನವನ್ನು ಸ್ಪರ್ಶಿಸುವುದು ಮತ್ತು ಚುಂಬಿಸುವುದರ ನಡುವೆ ಆಳವಾದ ಸಂಬಂಧವಿದೆ. ಈ ಭಾವನೆ ಎಲ್ಲರಿಗೂ ಅನುಭವಕ್ಕೆ ಬರುತ್ತದೆ.

ಎರಡನೆಯ ಸಿದ್ಧಾಂತವೆಂದರೆ ಚುಂಬನದ ಪರಿಕಲ್ಪನೆಯು ತಾಯಿಯು ಶಿಶುಗಳಿಗೆ ಆಹಾರವನ್ನು ನೀಡುವುದರಿಂದ ಶುರುವಾಯಿತು. ಆದಿಕಾಲದಲ್ಲಿ ತಾಯಿಯು ಆಹಾರವನ್ನು ಮೊದಲೇ ಅಗಿದು, ಮಗುವಿಗೆ ತನ್ನ ಸ್ವಂತ ಬಾಯಿಯ ಮೂಲಕ ತಿನ್ನಿಸುತ್ತಿದ್ದಳು. ಈಗಲೂ ಹಕ್ಕಿಗಳು ತಮ್ಮ ಮರಿಗಳಿಗೆ ಮಾಡುವುದು ಹೀಗೇ ಅಲ್ಲವೆ? ಇದರಿಂದ ಚುಂಬನ ಹುಟ್ಟಿಕೊಂಡಿರಬಹುದು. ಫೀಡಿಂಗ್‌ ಸಮಯದಲ್ಲಿ ತಾಯಿ ಮತ್ತು ಮಗುವಿನ ನಡುವಿನ ಪ್ರೀತಿ, ವಾತ್ಸಲ್ಯ ಮತ್ತು ವಾತ್ಸಲ್ಯದ ಕರುಳಿನ ಬಂಧವು ಬಲಗೊಳ್ಳುತ್ತದೆ.

ನಮ್ಮ ಪೂರ್ವಜರ ತಾಯಂದಿರು ಆಹಾರವನ್ನು ಮೊದಲೇ ಜಗಿದು ತಮ್ಮ ಮಕ್ಕಳಿಗೆ ಬಾಯಿಯ ಮೂಲಕ ನೀಡುತ್ತಿದ್ದರು. ಮಾನವರ ಹತ್ತಿರದ ಪೂರ್ವಜರೆಂದು ಪರಿಗಣಿಸಲ್ಪಟ್ಟ ಚಿಂಪಾಂಜಿಗಳು ತಮ್ಮ ಮರಿಗಳಿಗೆ ಇದೇ ರೀತಿಯಲ್ಲಿ ಆಹಾರವನ್ನು ನೀಡುತ್ತವೆ. ಇತರ ಜಾತಿಯ ಮಂಗಗಳೂ ಇದಕ್ಕೆ ಹೊರತಾಗಿಲ್ಲ.

ಜನರು ಚುಂಬಿಸಲು ಇಷ್ಟಪಡುವ ಕಾರಣಗಳಲ್ಲಿ ಬಟ್ಟೆ ಕೂಡ ಒಂದು ಎಂದು ಜಾಂಕೋವಿಕ್ ಹೇಳಿಕೊಂಡಿದ್ದಾರೆ. ಪೂರ್ತಿ ಬಟ್ಟೆ ಹಾಕಿಕೊಂಡರೆ ಚುಂಬನದ ಆಸಕ್ತಿ ಹೆಚ್ಚುತ್ತದೆ. ಕಡಿಮೆ ಬಟ್ಟೆಯಲ್ಲಿದ್ದಾಗ ಚುಂಬಿಸುವ ಆಸಕ್ತಿ ಅಷ್ಟಿರುವುದಿಲ್ಲವಂತೆ. ಜಾಂಕೋವಿಕ್ ಅವರು "ಮನುಷ್ಯನು ಚುಂಬನದಿಂದ ಮಾತ್ರವಲ್ಲದೆ ವಿವಿಧ ರೀತಿಯಲ್ಲಿ ತೃಪ್ತಿ ಹೊಂದುತ್ತಾನೆ. ಚುಂಬನದ ಹಿಂದಿನ ಕಾರಣವು ಎಲ್ಲರಿಗೂ ಪ್ರಣಯ ತೃಪ್ತಿಯಾಗಿರುವುದಿಲ್ಲ" ಎನ್ನುತ್ತಾರೆ.

ಲೇಖಕಿ ಶೆರಿಲ್ ಕಿಶ್ನೆಬೌಮ್ ಎಂಬವರು ಹೇಳುವಂತೆ, ತುಟಿಗಳನ್ನು ಚುಂಬಿಸುವ ಸಂಸ್ಕೃತಿಯಿಲ್ಲದ ಜನರು ಇನ್ನೂ ಬೇರೆ ರೀತಿಯಲ್ಲಿ ಲೈಂಗಿಕ ತೃಪ್ತಿಯನ್ನು ಕಂಡುಕೊಳ್ಳುತ್ತಾರೆ. ಚಾರ್ಲ್ಸ್‌ ಡಾರ್ವಿನ್, ಮಲಯ ದ್ವೀಪದ ಚುಂಬನವನ್ನು ವಿವರಿಸುತ್ತಾನೆ: "ಪುರುಷರು ಕುಳಿತಿರುವ ಮಹಿಳೆಯರ ಮೇಲೆ ಬಾಗಿ ಪರಸ್ಪರರ ಪರಿಮಳವನ್ನು ಹೀರಿ ಆನಂದಿಸುತ್ತಾರೆ" ಎನ್ನುತ್ತಾನೆ.

ಗಂಡ ಹೆಂಡ್ತಿ ಸಂಬಂಧ ಚೆನ್ನಾಗಿರಬೇಕಂದ್ರೆ ಈ 6 ವಿಷ್ಯ ನೆನಪಿಡಿ

ಪಪುವಾ ನ್ಯೂ ಗಿನಿಯಾದ ಪೂರ್ವ ಕರಾವಳಿಯಲ್ಲಿರುವ ಟ್ರೋಬ್ರಿಯಾಂಡ್ ದ್ವೀಪದಲ್ಲಿ ಪ್ರೇಮಿಗಳು ಪರಸ್ಪರ ಮುಖಾಮುಖಿಯಾಗಿ ಕುಳಿತು ಚುಂಬಿಸುತ್ತಾರೆ. ಹುಬ್ಬುಗಳ ಮೇಲೆ ಚುಂಬನವು ಸಂಗಾತಿಯನ್ನು ಪ್ರಚೋದಿಸುತ್ತದೆ. ಇದು ಪ್ರಣಯದ ಉನ್ನತ ಹಂತ ಎಂದು ನಮ್ಮಲ್ಲಿ ಹೆಚ್ಚಿನವರು ಭಾವಿಸದಿರಬಹುದು. ಆದರೆ ಅವರಿಗೆ ಅದುವೇ ತುರೀಯದ ಹಂತವಾಗಿದೆ.

ಯಾವುದೇ ರೀತಿಯ ಚುಂಬನದ ನಿಜವಾದ ಭಾವನೆಯನ್ನು ಆನಂದಿಸಲು ಕೋಮಲ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಮಾತ್ರ ಸಾಧ್ಯ. ತುಟಿಗಳ ಮೇಲೆ ಚುಂಬನವು ಮಾನವ ಜನಾಂಗಕ್ಕೆ ವಿಶಿಷ್ಟವಾಗಿದೆ. ಚುಂಬನವು ನಿಜವಾಗಿಯೂ ವಿಕಸನೀಯ. ಪ್ರಾಣಿಗಳು ಚುಂಬಿಸುವುದನ್ನೂ ನಾವು ನೋಡಬಹುದು. ನಮ್ಮ ಸಂಗಾತಿಯ ಮುಖ ನಮ್ಮ ಮುಖಕ್ಕೆ ತುಂಬಾ ಹತ್ತಿರವಾಗಿರಲು ಕಾರಣ ನಾವು ಉತ್ತಮ ಪರಿಮಳವನ್ನು, ಸಂಗಾತಿಯ ತನುಗಂಧವನ್ನು ಬಯಸುತ್ತೇವೆ.

ಪರಿಮಳವು ಅನೇಕ ರೀತಿಯಲ್ಲಿ ಆರೋಗ್ಯಕರ ಹಾಗೂ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ. ಇದು ಆಹಾರ, ಅನಾರೋಗ್ಯ, ಮಾನಸಿಕ ಸ್ಥಿತಿ ಇತ್ಯಾದಿಗಳ ಬಗ್ಗೆ ಹೇಳುತ್ತದೆ. ಪ್ರಾಣಿಗಳು ಮನುಷ್ಯರಿಗಿಂತ ವೇಗವಾಗಿ ವಿವಿಧ ರೀತಿಯ ವಾಸನೆಯನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿವೆ. ಹೀಗಾಗಿ ಅವುಗಳಿಗೆ ಚುಂಬನವೇ ಆಗಬೇಕಿಲ್ಲ. ಆದರೆ ಮನುಷ್ಯನಿಗೆ ಚುಂಬನ ಮುಖ್ಯ. 

ಏಪ್ರಿಲ್ ತಿಂಗಳ ಈ ಒಂಬತ್ತು ದಿನಗಳು.. ಗಂಡ ಹೆಂಡತಿ ದೈಹಿಕವಾಗಿ ಸಂಪರ್ಕ ಮಾಡಬಾರದು..ಮಾಡಿದರೆ?
 

click me!