ಹೆಚ್ಚುತ್ತಿದೆ ಪತ್ನಿಯ ಎಕ್ಸ್​ಚೇಂಜ್​ ಟ್ರೆಂಡ್​! ಯಾರ ಕಾರಿನ ಕೀ ಯಾರಿಗೋ, ಇವರ ಹೆಂಡ್ತಿ ಅವರಿಗೆ

Published : Oct 06, 2025, 07:33 PM IST
Husband and Wife

ಸಾರಾಂಶ

ನಟಿ ಕರೀಷ್ಮಾ ಕಪೂರ್ ಅವರ ವಿಚ್ಛೇದನದ ಸಮಯದಲ್ಲಿ ಬೆಳಕಿಗೆ ಬಂದ 'ಪತ್ನಿಯರ ವಿನಿಮಯ' (Wife Swapping) ಟ್ರೆಂಡ್ ಭಾರತದ ಶ್ರೀಮಂತ ವರ್ಗದಲ್ಲಿ ಹೇಗೆ ನಡೆಯುತ್ತದೆ ಎಂಬುದನ್ನು ಈ ಲೇಖನ ವಿವರಿಸುತ್ತದೆ. ಕಾರಿನ ಕೀಲಿಗಳನ್ನು ಬಳಸಿ ಸಂಗಾತಿಗಳನ್ನು ವಿನಿಮಯ ಮಾಡಿಕೊಳ್ಳುವ ಆಘಾತಕಾರಿ ವಿಧಾನ  ಇದು.

ಬಾಲಿವುಡ್​ ನಟಿ ಕರೀಷ್ಮಾ ಕಪೂರ್​ ಅವರು 2016ರಲ್ಲಿ ಸಂಜಯ್ ಕಪೂರ್ ಅವರಿಂದ ಡಿವೋರ್ಸ್​ ಪಡೆಯುವ ಸಂದರ್ಭದಲ್ಲಿ ಒಂದು ಶಬ್ದ ಹೇಳುವ ಮೂಲಕ ಇಡೀ ದೇಶದಲ್ಲಿ ಹಲ್​ಚಲ್​ ಸೃಷ್ಟಿಯಾಗಿತ್ತು. ಅವರು ವಿಚ್ಛೇದನದ ವಿಚಾರಣೆಯ ಸಂದರ್ಭದಲ್ಲಿ ತಮ್ಮ ಪತಿ Wife swapping (ಪತ್ನಿಯ ವಿನಿಮಯ) ಬಯಸುತ್ತಾರೆ. ಆತ ಅವನ ಸ್ನೇಹಿತನ ಜೊತೆಗೆ ಮಲಗುವಂತೆ ಒತ್ತಾಯ ಮಾಡುತ್ತಿದ್ದ ಎಂದು ಹೇಳಿದ್ದರು. ಆ ಸಂದರ್ಭದಲ್ಲಿ Wife swapping ಎನ್ನುವ ಶಬ್ದ ಭಾರಿ ಕೋಲಾಹಲ ಸೃಷ್ಟಿಸಿತ್ತು. ಹಾಗೆಂದು ಈ ಟ್ರೆಂಡ್​ ವಿದೇಶಗಳಲ್ಲಿ ಹೊಸತೇನಲ್ಲ. ಸಂಬಂಧಗಳಿಗೆ ಬೆಲೆಯೇ ಇಲ್ಲದ ಕೆಲವು ದೇಶಗಳಲ್ಲಿ ಇದು ತುಂಬಾ ಕಾಮನ್​ ಆಗಿ ಹಲವು ದಶಕಗಳೇ ಕಳೆದು ಹೋಗಿವೆ. ನಿನ್ನ ಪತ್ನಿ ಒಂದಷ್ಟು ದಿನಗಳವರೆಗೆ ನನಗೆ, ನನ್ನ ಪತ್ನಿ ನಿನಗೆ ಎನ್ನುವ ಮಾತು ಅಲ್ಲೇನೂ ಹೊಸತಲ್ಲ.

ಭಾರತದಲ್ಲಿಯೂ ಶುರುವಾಗಿದೆ ಟ್ರೆಂಡ್​

ಆದರೆ ಭಾರತದಲ್ಲಿಯೂ ಈ ಟ್ರೆಂಡ್ ಶುರುವಾಗಿ ಕೆಲವು ದಶಕಗಳು ಕಳೆದಿವೆ. ಕೆಲವು ದೊಡ್ಡವರು ಎನಿಸಿಕೊಳ್ಳುವ ಬಿಜಿನೆಸ್​​ ಕುಟುಂಬಗಳಲ್ಲಿ ಕೆಲಸ ಕುದುರಿಸಿಕೊಳ್ಳಬೇಕಿದ್ದರೆ, ತನ್ನ ಹೆಂಡತಿಯನ್ನೇ ಆತ ಬೇರೆಯವರ ಜೊತೆ ಕಳುಹಿಸುವುದು ಒಂದೆಡೆಯಾದರೆ, ಅದಕ್ಕಿಂತಲೂ ಭಿನ್ನವಾದದ್ದು ಈ ಪತ್ನಿಯರ ಎಕ್ಸ್​ಚೇಂಜ್​. ವೈ.ಟಿ.ಮಹೇಂದ್ರ ಪಾಡ್​ಕಾಸ್ಟ್​ನಲ್ಲಿ ಈ ಬಗ್ಗೆ ಶಾಕಿಂಗ್​ ವಿಷಯವೊಂದು ರಿವೀಲ್ ಆಗಿದೆ.

ಕಾರಿನ ಕೀಯಲ್ಲಿದೆ ಗುಟ್ಟು

ಅಷ್ಟಕ್ಕೂ ಪತ್ನಿಯರ ಎಕ್ಸ್​ಚೇಂಜ್​ ಮಾಡುವ ವಿಧಾನ ಹೇಗೆ ಅಂದರೆ, ಒಂದು ಕಡೆ ಎಲ್ಲರೂ ತಮ್ಮಕಾರಿನ ಕೀಲಿಯನ್ನು ಹಾಕುತ್ತಾರೆ. ಬೇರೆಯವರ ಪತ್ನಿಯ ಜೊತೆ ಮಲಗಲು ಉತ್ಸುಕರಾಗಿದ್ದವರು ಅಲ್ಲಿಗೆ ಸೇರಿ, ಒಂದು ಕಾರಿನ ಕೀಯನ್ನು ತೆಗೆಯುತ್ತಾರೆ. ಯಾರ ಕಾರಿನ ಕೀಲಿ ಯಾರಿಗೆ ಸಿಗುತ್ತದೆಯೋ ಅವರ ಪತ್ನಿ, ಇವರಿಗೆ ಆ ರಾತ್ರಿ ಸಿಗುತ್ತಾಳೆ. ಇದಕ್ಕೆ ಸ್ವಯಂ ಪ್ರೇರಣೆಯಿಂದ ಬಹಳಷ್ಟು ಮಹಿಳೆಯರು ಹೋಗಲು ರೆಡಿ ಇರುತ್ತಾರೆ. ತಮ್ಮ ಪತಿಯಿಂದ ದೈಹಿಕ ಸುಖ ಸಾಕಾಗುವುದಿಲ್ಲ ಎಂದು ಪರ ಪುರುಷನ ಜೊತೆ ಹೋಗಲು ರೆಡಿ ಇದ್ದರೆ, ಇನ್ನೊಬ್ಬ ಪುರುಷ (ಹೇಳಿ ಕೇಳಿ ಇಂಥವರೆಲ್ಲಾ ಆಗರ್ಭ ಶ್ರೀಮಂತರೇ ಆಗಿರುತ್ತಾರೆ) ಆ ದಿನದ ಮಟ್ಟಿಗಾದರೂ ತನ್ನೆಲ್ಲಾ ಬಯಕೆಗಳನ್ನು ಐಷಾರಾಮಿ ಜೀವನವನ್ನು ನೀಡುತ್ತಾನೆ ಎನ್ನುವ ಆಸೆ.

ಒಪ್ಪದಿದ್ದರೆ ಡಿವೋರ್ಸ್​

ಒಂದು ವೇಳೆ, ಯಾವುದೇ ಪತ್ನಿ ಇದಕ್ಕೆ ಒಪ್ಪದೇ ಹೋದರೆ (ನಟಿ ಕರಿಷ್ಮಾ ಕಪೂರ್​ ಉದಾಹರಣೆ ಅದಕ್ಕೇ ಕೊಟ್ಟಿರುವುದು), ಆಗ ಡಿವೋರ್ಸ್​ ಆಗುವುದು ಸಹಜ. ಇದು ಒಂದು ಕಡೆ ಎಗ್ಗಿಲ್ಲದೇ ನಡೆಯುತ್ತಲೇ ಇದೆ ಎನ್ನುವುದು ಈ ಸಂದರ್ಶನ ನೋಡಿದರೆ ತಿಳಿಯುತ್ತದೆ. ಈ ಸಂದರ್ಶನದಲ್ಲಿ ಹಾಕಿರುವ ಕಮೆಂಟ್​ಗಳ ಬಗ್ಗೆ ನೋಡಿದರೂ ಶಾಕ್​ ಆಗುವುದು ಇದೆ. ತಾವೂ ಏಕೆ ಶ್ರೀಮಂತರ ಮನೆಯಲ್ಲಿ ಹುಟ್ಟಿಲ್ಲ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಸ್ವಲ್ಪ ಮೊದಲು ಹುಟ್ಟಿದ್ದರೆ ಇದನ್ನು ಅನುಭವಿಸಬಹುದಿತ್ತು ಎಂದು ಓಪನ್​ ಆಗಿಯೇ ಕಮೆಂಟ್ಸ್​ ಹಾಕಿದ್ದಾರೆ. ಅಲ್ಲಿಗೆ ದಾಂಪತ್ಯ ಎನ್ನುವ ಸಂಬಂಧ ಎಲ್ಲಿಯವರೆಗೆ ಬಂದಿದೆ ಎನ್ನುವುದು ತಿಳಿದುಬರುತ್ತದೆ.

ಸಾಮಾನ್ಯ ಮನೆಗಳಲ್ಲಿ...

ಅಷ್ಟಕ್ಕೂ ಕೆಲವು ಆಗರ್ಭ ಶ್ರೀಮಂತರ ಮನೆಗಳಲ್ಲಿ ಇಂಥ ಟ್ರೆಂಡ್​ ಇದ್ದರೆ, ಕೆಲವು ಮಿಡ್ಲ್​ ಕ್ಲಾಸ್​ ಜನರ ಮನೆಯಲ್ಲಿಯೂ ಬೇರೆಯದ್ದೇ ರೂಪ ಇರುವುದನ್ನು ನೋಡಬಹುದು. ಪ್ರಿಯಕರನ ಜೊತೆ ಓಡಿ ಹೋದ ಇಷ್ಟು ಮಕ್ಕಳ ಅಮ್ಮ ಎಂದೋ, ಪ್ರೇಯಸಿ ಜೊತೆ ಸೇರಿ ಪತ್ನಿಯನ್ನೇ ಸಾಯಿಸಿದ ಎಂದೋ... ಹೀಗೆ ಏನೇನೋ ಸುದ್ದಿಗಳು ಬರುತ್ತಲೇ ಇವೆ. ಒಟ್ಟಿನಲ್ಲಿ ದಾಂಪತ್ಯ ಜೀವನ ಎನ್ನುವ ಕಲ್ಪನೆ ಎಲ್ಲಿಯವರೆಗೆ ಬಂದು ಮುಟ್ಟುತ್ತದೆಯೋ ಎನ್ನುವ ಆತಂಕ ಕೂಡ ಇದೇ ವೇಳೆ ವ್ಯಕ್ತವಾಗುತ್ತಿದೆ.

ಈ ಲಿಂಕ್​ನಲ್ಲಿದೆ ಪತ್ನಿಯರ ಎಕ್ಸ್​ಚೇಂಜ್​ ವಿವರಣೆ:

https://www.instagram.com/reel/DOGCKj8D__l/?utm_source=ig_web_copy_link

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!