Kohli – Anushka ಮದುವೆ ಹಿಂದಿನ ರಾತ್ರಿ ನಿದ್ರೆ ಮಾಡಿರ್ಲಿಲ್ಲವಂತೆ!

Published : Oct 04, 2025, 05:49 PM IST
virat anushka wedding

ಸಾರಾಂಶ

Virushka Marriage : ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮದುವೆ ಅತ್ಯಂತ ರಹಸ್ಯವಾಗಿ ಇಟಲಿಯಲ್ಲಿ ನಡೆದಿದೆ. ಮದುವೆ ಹಿಂದಿನ ರಾತ್ರಿ ದೊಡ್ಡ ಸಮಸ್ಯೆ ಕಾಡಿತ್ತು. ಅದೇನು? ಕೊನೆಯಲ್ಲಿ ಆಗಿದ್ದೇನು? ಉತ್ತರ ಇಲ್ಲಿದೆ. 

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ (Virat Kohli) ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ದಾಂಪತ್ಯ ಜೀವನಕ್ಕೆ ಕಾಲಿಟ್ಟು 8 ವರ್ಷವಾಯ್ತು. ಡಿಸೆಂಬರ್ 11, 2017ರಂದು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇಟಲಿಯ ಟಸ್ಕನಿಯಲ್ಲಿ ಸಪ್ತಪದಿ ತುಳಿದಿದ್ದಾರೆ. ಸಾಕಷ್ಟು ಸಿಕ್ರೇಟ್ ಆಗಿ ನಡೆದಿದ್ದ ಅವ್ರ ಮದುವೆಗೆ ಆಪ್ತರು, ಸಂಬಂಧಿಕರನ್ನು ಬಿಟ್ಟು ಯಾರಿಗೂ ಪ್ರವೇಶ ಇರಲಿಲ್ಲ. ಮಾಧ್ಯಮಗಳನ್ನು ಕೂಡ ಮ್ಯಾರೇಜ್ ನಿಂದ ದೂರ ಇಡಲಾಗಿತ್ತು. ಹಾಗಾಗಿ ಫ್ಯಾನ್ಸ್ ಗೆ ಕೊಹ್ಲಿ – ಅನುಷ್ಕಾ ಮದುವೆಯ ಅನೇಕ ವಿಷ್ಯಗಳು ಈಗ್ಲೂ ಗುಟ್ಟಾಗಿಯೇ ಉಳಿದಿವೆ. ಸೋಶಿಯಲ್ ಮೀಡಿಯಾದಲ್ಲಿ ಕೆಲ ಫೋಟೋ, ವಿಡಿಯೋ ಹಂಚಿಕೊಂಡಿದ್ದು ಬಿಟ್ರೆ ಇವರಿಬ್ಬರ ಮದುವೆ ಬಗ್ಗೆ ವಿಶೇಷ ಮಾಹಿತಿ ಫ್ಯಾನ್ಸ್ ಗೆ ಸಿಗ್ಲಿಲ್ಲ. ಈಗ ಕೊಹ್ಲಿ – ಅನುಷ್ಕಾ ಮದುವೆಗೆ ಸಂಬಂಧಿಸಿದಂತೆ ಇಂಟರೆಸ್ಟಿಂಗ್ ವಿಷ್ಯವೊಂದು ಹೊರ ಬಿದ್ದಿದೆ.

ಮದುವೆ ಹಿಂದಿನ ರಾತ್ರಿ ಪೂರ್ತಿ ನಿದ್ರೆ ಮಾಡಿರಲಿಲ್ಲ : 

ವಿರುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇಟಲಿಯಲ್ಲಿ. ಆ ಟೈಂನಲ್ಲಿ ಇಟಲಿಯಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ವೆಡ್ಡಿಂಗ್ ಪ್ಲಾನರ್ ಗೆ ಇದೊಂದು ಸವಾಲಿನ ಸಂಗತಿಯಾಗಿತ್ತು. ಕೊನೆ ಕ್ಷಣದಲ್ಲಿ ಪ್ಲಾನ್ ಬದಲಾಗಿದ್ದರಿಂದ ರಾತ್ರಿ ಪೂರ್ತಿ ನಿದ್ರೆ ಮಾಡ್ಲಿಕ್ಕಾಗ್ಲಿಲ್ಲ. ಈ ವಿಷ್ಯವನ್ನು ವೆಡ್ಡಿಂಗ್ ಶೂಟರ್ ವಿಶಾಲ್ ಪಂಜಾಬಿ ಈಗ ಬಹಿರಂಗಪಡಿಸಿದ್ದಾರೆ.

ದೀಪಿ ಅಪ್ಪಿಕೊಂಡ ರಣಬೀರ್, ಮಾಜಿ ಲವ್ವರ್ಸ್ ವಿಡಿಯೋ ವೈರಲ್

ಗುಟ್ಟಾಗಿತ್ತು ಮದುವೆ : ಅಧುನಿಕಾ ಸಿಂಗ್ ಯುಟ್ಯೂಬ್ ಚಾನೆಲ್ ಗೆ ನೀಡಿದ ಇಂಟರ್ವ್ಯೂನಲ್ಲಿ ಪಾಲ್ಗೊಂಡಿದ್ದ ವಿಶಾಲ್ ಪಂಜಾಬಿಗೆ ಇಟಲಿಯಲ್ಲಿ ಯಾರ ಮದುವೆ ನಡೆಯುತ್ತಿದೆ ಎನ್ನುವ ಮಾಹಿತಿ ಕೂಡ ಇರ್ಲಿಲ್ವಂತೆ. ಅದನ್ನೂ ರಹಸ್ಯವಾಗಿ ಇಡಲಾಗಿತ್ತು. ಅಲ್ಲಿಗೆ ಹೋದ್ಮೇಲೆ ವಿಶಾಲ್ ಪಂಜಾಬಿ ಅವರಿಗೆ ನಡೆಯುತ್ತಿರೋರು ವಿರಾಟ್- ಅನುಷ್ಕಾ ಮದುವೆ ಎಂಬುದು ಗೊತ್ತಾಗಿದೆ. ವಿರಾಟ್ ಹಾಗೂ ಅನುಷ್ಕಾ ತಮ್ಮನ್ನು ಸ್ವಾಗತಿಸಿದ ರೀತಿ ಅಚ್ಚರಿ ಹುಟ್ಟಿಸಿತ್ತು ಎಂದು ವಿಶಾಲ್ ಪಂಜಾಬಿ ಹೇಳಿದ್ದಾರೆ.

ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದ ಜೋಡಿ : 

ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ, ವಿಶಾಲ್ ಪಂಜಾಬಿ ಕೆಲ್ಸವನ್ನು ನೋಡಿರಲಿಲ್ಲ. ಆದ್ರೂ ಅವರ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದರು. ವಿಶಾಲ್ ಪಂಜಾಬಿ ಮುಖ ನೋಡದೆ ಅವರಿಗೆ ವೆಡ್ಡಿಂಗ್ ವಿಡಿಯೋ ಶೂಟಿಂಗ್ ಜವಾಬ್ದಾರಿ ನೀಡಿದ್ದರು. ತುಂಬಾ ಪ್ರೀತಿಯಿಂದ ನನ್ನನ್ನು ಸ್ವಾಗತಿಸಿದ್ರು. ನೀವು ಏನು ಮಾಡ್ಬೇಕೋ ಮಾಡಿ, ನಮಗೆ ಏನೂ ತಿಳಿಯುತ್ತಿಲ್ಲ, ನೀವು ಏನೇ ಮಾಡಿದ್ರೂ ಸರಿಯಾಗಿರೋದನ್ನು ಮಾಡ್ತೀರಾ ಎನ್ನುವ ಭರವಸೆ ನಮಗಿದೆ ಎಂದಿದ್ದರಂತೆ ವಿರುಷ್ಕಾ.

ರಶ್ಮಿಕಾ-ವಿಜಯ್ ಎಂಗೇಜ್‌ಮೆಂಟ್; ಆದ್ರೆ ನಟಿಯ ಹಳೆಯ ಬ್ರೇಕಪ್‌ಗೆ ಕಾರಣ 'ಹಾಗಾಗಿದ್ದು' ಅಲ್ಲವೇ ಅಲ್ಲ!

ವಿರುಷ್ಕಾ ವೆಡ್ಡಿಂಗ್ ಪ್ಲಾನರ್ ಆಗಿದ್ದ ದೇವಿಕಾ ನಾರಾಯಣ್ ಅಂದು ರಾತ್ರಿ ಪೂರ್ತಿ ನಿದ್ರೆ ಮಾಡಿರಲಿಲ್ಲ. ಮಳೆ ಕಾರಣಕ್ಕೆ ಏಕಾಏಕಿ ಮದುವೆ ಸ್ಥಳ ಬದಲಿಸಬೇಕಾಯ್ತು. ಸಿದ್ಧವಾಗಿದ್ದ ಮಂಟಪವನ್ನು ಅವರು ಬೇರೆ ಕಡೆ ಬದಲಿಸಬೇಕಾಯ್ತು. ಈ ಕೆಲ್ಸದಲ್ಲಿ ದೇವಿಕಾ ನಾರಾಯಣ್ ನಿದ್ರೆಗಟ್ಟಿದ್ದರು ಎಂದು ವಿಶಾಲ್ ಪಂಜಾಬಿ ಹೇಳಿದ್ದಾರೆ.

ವಿರುಷ್ಕಾ ಮದುವೆಗೆ ಬಂದಿದ್ದು 40 ಮಂದಿ ಮಾತ್ರ : 

ವಿರುಷ್ಕಾ ಮದುವೆ ಅತ್ಯಂತ ಖಾಸಗಿಯಾಗಿತ್ತು. ಮದುವೆಯಲ್ಲಿ ಹಾಜರಿದ್ದವರು ಕೇವಲ 40 ಮಂದಿ ಮಾತ್ರ. ಇದು ಅತ್ಯಂತ ಶಾಂತ, ಸುಂದರ ಮದುವೆಯಾಗಿತ್ತು. ಅಲ್ಲಿ ಯಾರಿಗೂ ತೊಂದ್ರೆ ಆಗ್ಲಿಲ್ಲ ಎಂದು ವಿಶಾಲ್ ಪಂಜಾಬಿ ಹೇಳಿದ್ದಾರೆ.

ವಿರಾಟ್ – ಅನುಷ್ಕಾ ಲವ್ ಸ್ಟೋರಿ : 

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ 2013ರಲ್ಲಿ ಆಡ್ ಶೂಟ್ ನಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಪ್ರೀತಿಯಲ್ಲಿ ಬಿದ್ದಿದ್ದ ಜೋಡಿ 2017ರವರೆಗೂ ತಮ್ಮ ಸಂಬಂಧವನ್ನು ರಹಸ್ಯವಾಗಿಯೇ ಇಟ್ಟಿದ್ರು.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!
ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!