
ಪ್ರಶ್ನೆ: ನನ್ನ ವಯಸ್ಸು ನಲುವತ್ತು. ಪತ್ನಿಯ ವಯಸ್ಸು ಮೂವತ್ತೈದು. ನಾವಿಬ್ಬರೂ ಸೆಕ್ಸ್‌ನಲ್ಲಿ ಚುರುಕಾಗಿದ್ದೇವೆ. ವಾರಕ್ಕೆರಡು ಬಾರಿಯಾದರೂ ಮಿಲನ ನಡೆಸುತ್ತೇವೆ. ಸಾಕಷ್ಟು ತೃಪ್ತಿಯೂ ಇದೆ. ಇತ್ತೀಚೆಗೆ ನನ್ನ ಗೆಳೆಯನೊಬ್ಬನನ್ನು ನನ್ನ ಪತ್ನಿಗೆ ಪರಿಚಯಿಸಿದೆ. ಆತ ಸದೃಢಕಾಯ, ನನಗಿಂತಲೂ ಸುಂದರ ಎನ್ನಬಹುದು. ಅಂದಿನಿಂದ ಬಳಿಕ ಆತ ನಮ್ಮ ಮನೆಗೆ ಬಂದರೆ ನನ್ನ ಹೆಂಡತಿ ಆತನನ್ನೇ ಎವೆಯಿಕ್ಕದೆ ನೋಡುತ್ತಾಳೆ. ಅವನೊಂದಿಗೆ ಮಾತನಾಡುವುದು ಆಕೆಗೆ ತುಂಬಾ ಸಂತೋಷ ಕೊಡುತ್ತದೆ ಅಂತ ನನಗೆ ಗೊತ್ತಾಗಿದೆ. ಅವನು ಬಂದು ಹೋದ ದಿನ ಆಕೆ ತುಂಬ ಚುರುಕಾಗಿ, ಹೆಚ್ಚು ಉದ್ರೇಕದಿಂದ ನನ್ನೊಂದಿಗೆ ಸೆಕ್ಸ್ ನಡೆಸುತ್ತಾಳೆ. ಅವನ ನಂಬರ್ ಸೇವ್ ಮಾಡಿಕೊಂಡು, ಅವರಿಬ್ಬರೂ ಮೆಸೇಜ್ ವಿನಿಮಯ ಮಾಡಿಕೊಳ್ಳುತ್ತಾರೆ ಅಂತಲೂ ನನಗೆ ಗೊತ್ತಾಗಿದೆ. ಆಕೆಗೆ ಅವನ ಜೊತೆ ಸೆಕ್ಸ್ ನಡೆಸಬೇಕು ಅನಿಸ್ತಿರಬಹುದಾ? ನನ್ನ ಜೊತೆಗೆ ಸೆಕ್ಸ್ ಬೋರಾಗಿರಬಹುದಾ? ಇದರಿಂದ ಆಕೆಯನ್ನು ಹೊರಗೆ ತರಿಸುವುದು ಹೇಗೆ?
ಉತ್ತರ: ನೀವು ಇಲ್ಲದ ಸಮಸ್ಯೆಯನ್ನು ಕಲ್ಪಿಸಿಕೊಳ್ಳುತ್ತಿದ್ದೀರಿ ಎಂದು ನನಗೆ ಅನಿಸುತ್ತಿದೆ. ಕೆಲವೊಮ್ಮೆ ಇಂಥ ಸನ್ನಿವೇಶಗಳನ್ನು ಹೆಚ್ಚು ಹೆಚ್ಚಾಗಿ ಕೆದಕುತ್ತ ಹೋದಂತೆ ಅದು ಆಳವಾಗುತ್ತ ಹೋಗುತ್ತದೆ. ಆದ್ದರಿಂದ ಕೆಲವನ್ನು ಅದರಷ್ಟಕ್ಕೇ ಬಿಟ್ಟುಬಿಡಬೇಕು. ಈಗ ನಿಮ್ಮ ಪತ್ನಿಯ ನಡವಳಿಕೆಯ ಸಾಧ್ಯತೆಗಳನ್ನು ನೋಡೋಣ.
ನಿಮ್ಮ ಗೆಳೆಯನನ್ನು ಹೆಚ್ಚು ಪ್ರೀತಿಯಿಂದ ಎಂಬಂತೆ ನೋಡುತ್ತಾಳೆ ಎಂದಿದ್ದೀರಿ. ಗಮನ ಸೆಳೆಯುವ ಹಾಗೆ ಇರುವವರನ್ನು ಹೆಚ್ಚು ವಿವರವಾಗಿ ನೋಡುವುದು ಮಹಿಳೆಯರ ಕ್ರಮ. ಅದರಲ್ಲೇನೂ ತಪ್ಪಿಲ್ಲ. ಒಂದು ವೇಳೆ ಆಕೆ ನಿಮ್ಮ ಗೆಳೆಯನತ್ತ ಲೈಂಗಿಕವಾಗಿಯೇ ಆಕರ್ಷಿತವಾದರು ಎಂದಿಟ್ಟುಕೊಳ್ಳಿ. ಅದು ಒಂದು ಹಂತದವರೆಗೂ ಓಕೆ. ಯಾವಾಗ ಎಂದರೆ ನಿಮ್ಮ ದಾಂಪತ್ಯಕ್ಕೆ ಆಕೆ ಮೋಸ ಮಾಡುವುದಿಲ್ಲ ಎಂಬುದು ನಿಮಗೆ ಖಚಿತ ಆಗಿರುವವರೆಗೆ ನೀವು ತಲೆ ಕೆಡಿಸಿಕೊಳ್ಳಬೇಕಿಲ್ಲ. ಸೆಕ್ಸ್ ವೇಳೆ ಕೆಲವು ಫ್ಯಾಂಟಸಿ ಕಲ್ಪಿಸಿಕೊಳ್ಳುವುದು ಸ್ತ್ರೀ ಪುರುಷರಲ್ಲಿ ಇದ್ದದ್ದೇ. ಹೆಚ್ಚಿನ ಪುರುಷರು ಹೆಂಡತಿಯ ಜೊತೆಗೆ ಸೆಕ್ಸ್‌ನ ಸಂದರ್ಭದಲ್ಲಿ ತಮ್ಮ ಇಷ್ಟದ ಸಿನಿಮಾ ನಟಿಯರನ್ನೋ, ತಮ್ಮ ಸುಂದರಿಯರಾದ ಸಹೋದ್ಯೋಗಿಗಳನ್ನೋ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತಿರುತ್ತಾರೆ. ಅದರಿಂದ ತೃಪ್ತಿ ಪಡೆಯುತ್ತಿರುತ್ತಾರೆ. ಹಸ್ತಮೈಥುನ ಸಂದರ್ಭದಲ್ಲಂತೂ ಹೀಗೆ ಕಲ್ಪಿಸಿಕೊಳ್ಳದೆ ಸುಖ ಪಡೆಯುವುದೇ ಅಸಾಧ್ಯ. ನೀವು ಮಾಡಿಲ್ಲವೇ? ಆದ್ದರಿಂದ ಅದೇನೂ ತಪ್ಪಲ್ಲ.
#Feelfree: ಪತ್ನಿ ಗೆಳತಿ ಜೊತೆಗೆ ಸರಸ ನಡೀತು, ಮುಂದೇನು ಕತೆ?
ಇನ್ನು ಆಕೆ ಗೆಳೆಯನಿಗೆ ಮೆಸೇಜ್ ಮಾಡುವ ವಿಷಯ. ಈ ಮೆಸೇಜ್‌ಗಳು ಹಾಯ್, ಗುಡ್ ಮಾರ್ನಿಂಗ್, ಗುಡೀವ್ನಿಂಗ್ ಹಂತದಲ್ಲಿದ್ದರೆ ತೊಂದರೆಯೇನಿಲ್ಲ. ಅದಕ್ಕಿಂತ ಮುಂದುವರಿದರೆ ಮಾತ್ರ ನೀವು ಎಚ್ಚರಿಕೆ ವಹಿಸಬೇಕಾದ್ದು ಅಗತ್ಯ. ಆದರೆ ಅದರರ್ಥ ನೀವು ನಿಮ್ಮ ಹೆಂಡತಿಯನ್ನು ಆರೋಪಿಸುವುದು, ದೂಷಿಸುವುದು ಮಾಡಬೇಕೆಂದಲ್ಲ. ಅದರಿಂದ ಪ್ರಯೋಜನವಿಲ್ಲ. ಬದಲಾಗಿ, ನೀವು ನಿಮ್ಮ ದಾಂಪತ್ಯದಲ್ಲಿ ಇನ್ನಷ್ಟು ಕ್ರಿಯಾಶೀಲರಾಗಬೇಕು. ನೀವು ನಿಮ್ಮ ಪತ್ನಿಯನ್ನು ತುಂಬಾ ಪ್ರೀತಿಸುತ್ತಿದ್ದೀರಿ ಎಂಬುದನ್ನು ಆಕೆಗೆ ಮನದಟ್ಟು ಮಾಡಿಕೊಡಬೇಕು. ಇಂಥ ಗಂಡನನ್ನು ಬಿಟ್ಟು ಇನ್ನೊಬ್ಬನ ಸಾಂಗತ್ಯ ಬಯಸುವುದು ತಪ್ಪು ಎಂದು ಅವರಿಗೆ ಅರಿವಾಗಬೇಕು.
ಪುರುಷತ್ವ ಕಡಿಮೆಯಾಗೋಕೆ ಪೋರ್ನ್ ಕಾರಣಾನಾ?
ಲೈಂಗಿಕವಾಗಿ ಹೆಚ್ಚು ಕ್ರಿಯಾಶೀಲರಾಗಿ, ಅಡ್ವೆಂಚರಸ್ ಆಗಿರಿ. ಪತ್ನಿಗೆ ಆಕೆ ಅರಿಯದ, ನೀವು ಅರಿಯದ ಹೊಸ ಲೋಕದ ದರ್ಶನ ಮಾಡಿಸಿ. ಹೊಸ ಭಂಗಿಗಳನ್ನು ಅನ್ವೇಷಿಸಿ. ಹೊಸ ಜಾಗಗಳನ್ನು ಹುಡುಕಿ. ಮಿಲನದಲ್ಲಿ ಹೊಸ ಕ್ರಮಗಳನ್ನು, ಹೊಸ ಬಗೆಯ ಫೋರ್‌ಪ್ಲೇಗಳನ್ನು ಅಳವಡಿಸಿಕೊಳ್ಳಿ. ಇದೆಲ್ಲದರಿಂದ ನಿಮ್ಮ ಸೆಕ್ಷುಯಲ್ ಲೈಫು ಮತ್ತು ಮ್ಯಾರೀಡ್ ಲೈಫು ಹಸನಾಗುತ್ತದೆ.
ನಿಮ್ಮ ಸುತ್ತ ಪ್ರೇತಾತ್ಮಗಳಿವೆಯಾ? ತಿಳಿಯೋದು ಹೇಗೆ?...
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.