ಹೆಂಡ್ತಿ, ಗಂಡನ ಜೊತೆ ಸೆಕ್ಸ್‌ ನಿರಾಕರಿಸುವುದು ಕ್ರೌರ್ಯ, ಪತಿ ಡಿವೋರ್ಸ್‌ ಕೊಡ್ಬೋದು; ಹೈಕೋರ್ಟ್ ತೀರ್ಪು

By Suvarna News  |  First Published Jan 12, 2024, 11:40 AM IST

ಪತ್ನಿ ತನ್ನ ಪತಿಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ನಿರಾಕರಿಸುವುದು. ಅಥವಾ ವಿವಾಹವನ್ನು ಪೂರ್ಣಗೊಳಿಸಲು ಒಪ್ಪದಿರುವುದು ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ.


ಮಧ್ಯಪ್ರದೇಶ: ಪತ್ನಿ ತನ್ನ ಪತಿಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ನಿರಾಕರಿಸುವುದು. ಅಥವಾ ವಿವಾಹವನ್ನು ಪೂರ್ಣಗೊಳಿಸಲು ಒಪ್ಪದಿರುವುದು ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ. ಹಿಂದೂ ವಿವಾಹ ಕಾಯಿದೆಯಡಿ ಪತ್ನಿಯೂ ಲೈಂಗಿಕವಾಗಿ ಸಹಕರಿಸದಿದ್ದರೆ ಇದು ವಿಚ್ಛೇದನವನ್ನು ಪಡೆಯಲು ಪತಿಗೆ ಮಾನ್ಯವಾದ ಆಧಾರವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.

ನ್ಯಾಯಮೂರ್ತಿಗಳಾದ ಶೀಲ್ ನಾಗು ಮತ್ತು ವಿನಯ್ ಸರಾಫ್ ಅವರ ವಿಭಾಗೀಯ ಪೀಠವು ನವೆಂಬರ್ 2014ರ ತೀರ್ಪಿನ ಮೂಲಕ ಭೋಪಾಲ್‌ನ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿತು., ಲೈಂಗಿಕತೆಯನ್ನು ನಿರಾಕರಿಸುವ ಮೂಲಕ ತನ್ನ ಹೆಂಡತಿ ಮಾನಸಿಕ ಕ್ರೌರ್ಯಕ್ಕೆ ಒಳಗಾಗುವಂತೆ ಮಾಡುತ್ತಿದ್ದಾಳೆ ಎಂದು ವ್ಯಕ್ತಿಯೊಬ್ಬ ದೂರು ಸಲ್ಲಿಸಿದ್ದ. ಇದಕ್ಕೆ ಪ್ರತಿಯಾಗಿ, ಯಾವುದೇ ಮಾನ್ಯ ಕಾರಣವಿಲ್ಲದೆ ದೀರ್ಘಕಾಲದವರೆಗೆ ಸಂಭೋಗ ಮಾಡದಿರುವುದು ಕ್ರೌರ್ಯಕ್ಕೆ ಸಮಾನ ಎಂದು ಸ್ಪಷ್ಟಪಡಿಸಿತು.

Tap to resize

Latest Videos

ಡಿವೋರ್ಸ್ ಬಗ್ಗೆ ಯೋಚಿಸ್ತಿದೀರಾ? ಒಮ್ಮೆ ರವಿಶಂಕರ್ ಗುರೂಜಿಯ ಈ ಮಾತುಗಳನ್ನು ಕೇಳಿ..

ಲೈಂಗಿಕ ಸಂಬಂಧಕ್ಕೆ ಆಸಕ್ತಿ ತೋರದೆ ಇರುವುದು ಮಾನಸಿಕ ಹಿಂಸೆ ಎಂದ ಹೈಕೋರ್ಟ್‌
'ಯಾವುದೇ ದೈಹಿಕ ಅಸಾಮರ್ಥ್ಯ ಅಥವಾ ಸರಿಯಾದ ಕಾರಣವಿಲ್ಲದೆ ಗಣನೀಯ ಅವಧಿಯವರೆಗೆ ಲೈಂಗಿಕ ಸಂಭೋಗವನ್ನು ಹೊಂದಲು ಆಸಕ್ತಿ ತೋರದೇ ಇರುವುದು ಮಾನಸಿಕ ಕ್ರೌರ್ಯಕ್ಕೆ ಕಾರಣವಾಗಬಹುದು' ಎಂದು ನ್ಯಾಯಾಲಯ ಹೇಳಿದೆ.

ಜುಲೈ 12, 2006ರ ಮದುವೆಯ ದಿನಾಂಕದಿಂದ ಜುಲೈ 28, 2006ರಂದು ಪತಿ ಭಾರತವನ್ನು ತೊರೆಯುವವರೆಗೆ ಹೆಂಡತಿಯು ಗಂಡನೊಂದಿಗೆ ಸಂಬಂಧವನ್ನು ಹೊಂದಲು ನಿರಾಕರಿಸಿದಳು. ಲೈಂಗಿಕ ಸಂಭೋಗವನ್ನು ನಿರಾಕರಿಸುವ ಹೆಂಡತಿಯ ಏಕಪಕ್ಷೀಯ ನಿರ್ಧಾರದಿಂದಾಗಿ ಮದುವೆಯನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಪತಿ ಅಳಲು ತೋಡಿಕೊಂಡಿದ್ದಾನೆ. 

ದಾಂಪತ್ಯದಲ್ಲಿ ಎಲ್ಲವೂ ಬದಲಾಗಿದೆ, ಏನೂ ಸರಿ ಮಾಡಲಾಗುತ್ತಿಲ್ಲವೆಂದರೆ ಡಿವೋರ್ಸ್ ಬೆಸ್ಟ್ ದಾರಿ

ಮದುವೆಯ ನಂತರ ಗಂಡ ಕಡಿಮೆ ಅವಧಿಗೆ ಭಾರತದಲ್ಲಿ ಇರುತ್ತಾನೆ. ನಂತರ ಭಾರತವನ್ನು ತೊರೆಯುತ್ತಾನೆ ಎಂಬುದು ಪತ್ನಿಗೂ ತಿಳಿದಿತ್ತು. ಈ ಅವಧಿಯಲ್ಲಿ, ಸಂಬಂಧವನ್ನು ಪೂರ್ಣಗೊಳಿಸುವ ಭರವಸೆ ಹೊಂದಿದ್ದರು. ಆದರೆ ಅದನ್ನು ಪತ್ನಿ ನಿರಾಕರಿಸಿದರು ಮತ್ತು ಖಂಡಿತವಾಗಿಯೂ ಈ ಕೃತ್ಯವು ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿದೆ. ಎಂದು ನ್ಯಾಯಾಲಯ ಹೇಳಿದೆ.

click me!