4 ತಿಂಗಳು ಹಿಂದೆ ನಡೆದ ಮದ್ವೆ, ಪತಿ ವೀರ್ಯ ತೆಗೆಯಲು ಹೆಂಡತಿಯ ಗಲಾಟೆ!

Published : Dec 23, 2024, 03:35 PM ISTUpdated : Dec 23, 2024, 03:39 PM IST
4 ತಿಂಗಳು ಹಿಂದೆ ನಡೆದ ಮದ್ವೆ, ಪತಿ ವೀರ್ಯ ತೆಗೆಯಲು ಹೆಂಡತಿಯ ಗಲಾಟೆ!

ಸಾರಾಂಶ

ಪತಿಯ ಮರಣದ ಬಳಿಕ ಪತ್ನಿ, ಮೃತದೇಹದಿಂದ ವೀರ್ಯ ತೆಗೆದು ಫ್ರೀಜ್ ಮಾಡುವಂತೆ ಮಧ್ಯಪ್ರದೇಶದ ಆಸ್ಪತ್ರೆಯಲ್ಲಿ ಒತ್ತಾಯಿಸಿದ್ದಾರೆ. 24 ಗಂಟೆಗಳ ನಂತರ ವೀರ್ಯ ಸಂಗ್ರಹ ಸಾಧ್ಯವಿಲ್ಲ, ವ್ಯವಸ್ಥೆಯೂ ಇಲ್ಲ ಎಂದು ವೈದ್ಯರು ನಿರಾಕರಿಸಿದ್ದಾರೆ. ಮನವೊಲಿಸಿದ ಬಳಿಕ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡಿದ್ದಾಳೆ ಮಹಿಳೆ. ಘಟನೆ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ ನಡೆದಿದೆ.

ವೀರ್ಯವನ್ನು ಫ್ರೀಜ್ (Sperm freeze) ಮಾಡಿ ನಂತ್ರ ಗರ್ಭಧಾರಣೆ (pregnancy)ಗೆ ಅದನ್ನು ಬಳಸಿಕೊಂಡ ಅನೇಕ ಉದಾಹರಣೆಗಳು ನಮ್ಮಲ್ಲಿವೆ. ಈಗಿನ ದಿನಗಳಲ್ಲಿ ವೀರ್ಯ ಫ್ರೀಜ್, ಎಗ್ ಫ್ರೀಜ್ ಘಟನೆಗಳು ಸಾಮಾನ್ಯ ಎನ್ನುವಂತಾಗಿವೆ. ಆದ್ರೆ ಇದಕ್ಕೆ ಕೆಲವೊಂದು ನಿಯಮಗಳಿವೆ. ಅವುಗಳನ್ನು ಪಾಲಿಸಿದ್ರೆ ಮಾತ್ರ ಮುಂದೆ ಮಗು ಜನಿಸಲು ಸಾಧ್ಯ. ಮಧ್ಯಪ್ರದೇಶದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಮದುವೆಯಾಗಿ ನಾಲ್ಕು ತಿಂಗಳಲ್ಲೇ ಮಹಿಳೆಯೊಬ್ಬಳು ತನ್ನ ಪತಿಯನ್ನು ಕಳೆದುಕೊಂಡಿದ್ದಾಳೆ. ಆಸ್ಪತ್ರೆ (Hospital)ಯಲ್ಲಿದ್ದ ಶವದಿಂದ ವೀರ್ಯ ತೆಗೆದು ಫ್ರೀಜ್ ಮಾಡುವಂತೆ ವೈದ್ಯರಿಗೆ ಒತ್ತಾಯಿಸಿದ್ದಾಳೆ. ವ್ಯಕ್ತಿ ಸತ್ತು ಆಗ್ಲೇ 24 ಗಂಟೆಯಾಗಿರುವ ಕಾರಣ ಇದನ್ನು ವೈದ್ಯರು ನಿರಾಕರಿಸಿದ್ದಾರೆ. ಆದ್ರೆ ನೋವಿನಲ್ಲಿದ್ದ ಮಹಿಳೆ ರಂಪ ಮಾಡಿದ್ದಾಳೆ. ಕೊನೆಗೂ ಆಕೆ ಮನವೊಲಿಸಿದ ವೈದ್ಯರು, ಪ್ರಕರಣವನ್ನು ಶಾಂತಗೊಳಿಸಿದ್ದಾರೆ.

ಘಟನೆ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ ನಡೆದಿದೆ. ಸಿಧಿ ಜಿಲ್ಲೆಯ ಚುರ್ಹತ್ ನಿವಾಸಿ ಜಿತೇಂದ್ರ ಸಿಂಗ್ ಗಹರ್ವಾರ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಶವ ರವಾನೆ ಮಾಡಿದ್ದರು. ಘಟನೆ ನಡೆದ ಸಮಯದಲ್ಲಿ  ಜಿತೇಂದ್ರ ಸಿಂಗ್ ಪತ್ನಿ ಅಲ್ಲಿರಲಿಲ್ಲ. ಆಕೆಗೆ ಮಾಹಿತಿ ನೀಡದ ಸಂದರ್ಭದಲ್ಲಿ, ಮರಣೋತ್ತರ ಪರೀಕ್ಷೆಗೆ ಕಾಯುವಂತೆ ಆಕೆ ಸೂಚಿಸಿದ್ದಳು. ಆಕೆ ಬರುವವರೆಗೂ ಶವವನ್ನು ಆಸ್ಪತ್ರೆಯಲ್ಲಿ ಇಡಲಾಗಿತ್ತು. ಮರುದಿನ ಬೆಳಿಗ್ಗೆ ಪತ್ನಿ ಆಸ್ಪತ್ರೆಗೆ ಬಂದಿದ್ದಾಳೆ. ಈ ಸಮಯದಲ್ಲಿ ಪತಿಯ ಸ್ಪರ್ಮ್ ಫ್ರೀಜ್ ಮಾಡುವಂತೆ ಕೇಳಿದ್ದಾಳೆ. ಪತಿಯ ಮಗುವಿನ ಜೊತೆ ಇಡೀ ಜೀವನ ಕಳೆಯುತ್ತೇನೆ, ಸ್ಪರ್ಮ್ ನೀಡಿ ಎಂದಿದ್ದಾಳೆ. ಮಹಿಳೆ ಈ ಬೇಡಿಕೆ ಕೇಳಿ ವೈದ್ಯರು ದಂಗಾಗಿದ್ದಾರೆ. ಜಿತೇಂದ್ರ ಸಾವನ್ನಪ್ಪಿ 24 ಗಂಟೆಯಾಗಿರುವ ಕಾರಣ ಸ್ಪರ್ಮ್ ಫ್ರೀಜ್ ಸಾಧ್ಯವಿಲ್ಲ. ಹಾಗೆಯೇ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಅದಕ್ಕೆ ಸಂಬಂಧಿಸಿದ ಯಾವುದೇ ವ್ಯವಸ್ಥೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದ್ರೆ ಇದನ್ನು ಒಪ್ಪಿಕೊಳ್ಳಲು ಜಿತೇಂದ್ರ ಸಿಂಗ್ ಪತ್ನಿ ಸಿದ್ಧವಿರಲಿಲ್ಲ. ವೈದ್ಯರು ಹಾಗೂ ಪೊಲೀಸರ ನಿರಂತರ ಮನವೊಲಿಕೆ ನಂತ್ರ ಆಕೆ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಹೃದಯ ಸಮಸ್ಯೆಗೆ ಒತ್ತಡವೇ ಶತ್ರು, ರಕ್ಷಣೆ ಹೇಗೆ ಅಂತ ಹೇಳ್ತಾರೆ ಸುಷ್ಮಿತಾ ಸೇನ್ ಡಾಕ್ಟರ್

ಮೃತ ವ್ಯಕ್ತಿಯ ವೀರ್ಯದ ಬಗ್ಗೆ ಸಂಶೋಧನೆ ಏನು ಹೇಳುತ್ತದೆ? :   ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್ ನಲ್ಲಿ ಪ್ರಕಟಿಸಲಾದ ಅಧ್ಯಯನದ ವರದಿ ಪ್ರಕಾರ, ವ್ಯಕ್ತಿಯ ಮರಣದ ನಂತರ, ಅವರ ವೀರ್ಯವನ್ನು ವೀರ್ಯ ಬ್ಯಾಂಕ್‌ನಲ್ಲಿ ಠೇವಣಿ ಮಾಡಬಹುದು. ಆದ್ರೆ ಇದಕ್ಕೆ ಆಪ್ತರ ಒಪ್ಪಿಗೆ ಅಗತ್ಯ.  ವಿಜ್ಞಾನಿಗಳ ತಂಡ ವ್ಯಕ್ತಿಯ ಮರಣದ 48 ಗಂಟೆಗಳ ನಂತರ, ಅವನ ವೀರ್ಯವನ್ನು ಗರ್ಭಾವಸ್ಥೆಯಲ್ಲಿ ಬಳಸಬಹುದು ಮತ್ತು ಅದರಿಂದ ಆರೋಗ್ಯಕರ ಮಕ್ಕಳು ಜನಿಸಬಹುದು ಎನ್ನುತ್ತದೆ. ಮರಣದ 48 ಗಂಟೆಗಳ ಒಳಗೆ, ವೀರ್ಯವನ್ನು ಮೃತ ದೇಹದಿಂದ ಹೊರತೆಗೆಯಬೇಕು. ಶಸ್ತ್ರಚಿಕಿತ್ಸೆಯ ಸಹಾಯದಿಂದ ಮೃತ ದೇಹದಿಂದ ವೀರ್ಯವನ್ನು ತೆಗೆದುಹಾಕಲಾಗುತ್ತದೆ. ನಂತರ ಅದನ್ನು ಫ್ರಿಜ್ ಮಾಡಲಾಗುತ್ತದೆ. 

4 ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕ್ ಮಹಿಳೆ ಸೀಮಾ ಮತ್ತೆ ಗರ್ಭಿಣಿ, ಸಂತೋಷ ಹಂಚಿಕೊಂಡ

ಸಾವಿನ ನಂತರ ಪುರುಷರಿಂದ ತೆಗೆದ ವೀರ್ಯಾಣು ದಾನಕ್ಕೂ ಅವಕಾಶ ನೀಡಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವೀರ್ಯಾಣು ದಾನವನ್ನು ಅಂಗಾಂಗ ದಾನದಂತೆ ಪರಿಗಣಿಸಿದರೆ ಅದರಲ್ಲಿ ತಪ್ಪೇನೂ ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಮೃತ ದೇಹದಿಂದ ವೀರ್ಯವನ್ನು ಎಷ್ಟು ಗಂಟೆಯ ಮೊದಲು ತೆಗೆಯಬೇಕು ಎಂಬ ಬಗ್ಗೆ ಗೊಂದಲವಿದೆ. ಹಾಗೆಯೇ ಇದಕ್ಕೆ ಕುಟುಂಬಸ್ಥರ ಒಪ್ಪಿಗೆ ಅಗತ್ಯ. ಗರ್ಭಧಾರಣೆಗೆ ಪತ್ನಿ ಈ ವೀರ್ಯವನ್ನು ಬಳಸಿಕೊಳ್ತಾರಾ ಎಂಬುದನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಹಾಗೆಯೇ ತಕ್ಷಣ ಅದನ್ನು ಫ್ರೀಜ್ ಮಾಡುವ ವ್ಯವಸ್ಥೆ ಆಸ್ಪತ್ರೆಯಲ್ಲಿರಬೇಕಾಗುತ್ತದೆ.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವ್ಯಕ್ತಿಯ ಸ್ವಭಾವ ಅರ್ಥ ಮಾಡಿಕೊಳ್ಳಲು ಸುಲಭ ಮಾರ್ಗ ಹೇಳಿಕೊಟ್ಟ ಚಾಣಕ್ಯರು
ಅತ್ತೆ ಮನೆಯವರು ಒರಟಾಗಿ ವರ್ತಿಸಿದರು ಎಂದು ಗಂಡನ ಮನೆಗೆ ಬಂದ 20 ನಿಮಿಷದಲ್ಲಿ ಮದುವೆ ಮುರಿದ ಯುವತಿ