ಮೊದಲ ರಾತ್ರಿಗೆ ಇನ್ನೇನು ಕೆಲ ಹೊತ್ತು ಮಾತ್ರ ಬಾಕಿ ಉಳಿದಿತ್ತು. ಅಷ್ಟರಲ್ಲಿ ವರನ ಕಿವಿಯಲ್ಲಿ ಮನೆಲ್ಲನೆ ವಧು ಬೇಡಿಕೆ ಇಟ್ಟಿದ್ದಾಳೆ. ಬೇಡಿಕೆ ಕೇಳಿಸಿಕೊಂಡು ಮುಗುಳುನಕ್ಕ ವರ ಪೂರೈಸಲು ಮುಂದಾಗಿದ್ದಾನೆ. ಇದರ ಬೆನ್ನಲ್ಲೇ ಮತ್ತೆರೆಡು ಬೇಡಿಕೆ ಇಟ್ಟಿದ್ದಾಳೆ. ಇಷ್ಟೇ, ವರ ಕಂಗಾಲಾಗಿದ್ದಾನೆ. ಬಳಿಕ ಪೊಲೀಸರು ಎಂಟ್ರಿಕೊಟ್ಟಿದ್ದಾರೆ.
ಲಖನೌ(ಡಿ.22) ಮದುವೆಯಾಗಿ ವಧು-ವರರು ಮನೆಗೆ ಬಂದಿದ್ದಾರೆ. ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇತ್ತ ಭಾರಿ ತಯಾರಿಗಳು ನಡೆಯುತ್ತಿತ್ತು. ಮೊದಲ ರಾತ್ರಿಗೆ ಕೋಣೆ ಸಿಂಗಾರಗೊಂಡಿತ್ತು. ಇದರ ನಡುವೆ ವಧು, ತನ್ನ ಪತಿಯಲ್ಲಿ ಆರಂಭದಲ್ಲಿ ಒಂದು ಬೇಡಿಕೆ ಇದನ್ನು ಪೂರೈಸಲು ವರ ಸಜ್ಜಾಗುತ್ತಿದ್ದಂತೆ ಮತ್ತೆರೆಡು ಬೇಡಿಕೆ ಇಟ್ಟಿದ್ದಾಳೆ. ಒಟ್ಟು ಮೂರು ಬೇಡಿಕೆಯಲ್ಲಿ ಒಂದು ಬೇಡಿಕೆ ಹುಡುಗನನ್ನು ಕಂಗಾಲು ಮಾಡಿದೆ. ಕೆಲವೇ ಹೊತ್ತಲ್ಲಿ ರಂಪಾಟ, ಎರಡು ಕುಟುಂಬಸ್ಥರ ಮಾತುಕತೆ, ಸಂಧಾನ ಶುರುವಾಗಿದೆ. ಆದರೆ ಯಾವುದೇ ಕೈಗೂಡಲಿಲ್ಲ. ಬಳಿಕ ಪೊಲೀಸರು ಎಂಟ್ರಿಕೊಟ್ಟ ಘಟನೆ ಉತ್ತರ ಪ್ರದೇಶ ಬಸ್ತಿಯಲ್ಲಿ ನಡೆದಿದೆ.
ಸಹಾರಾನಪುರದ ಹುಡುಗ, ಲುಧಿಯಾನದ ಹುಡುಗಿಯೊಂದಿಗೆ ಮದುವೆ ನಡೆದಿದೆ. ಕುಟುಬುಂಸ್ಥರು, ಗುರು ಹಿರಿಯರ ಸಮ್ಮುಖದಲ್ಲಿ ಸಂಪ್ರದಾಯಕ ಪ್ರಕಾರ ಮದುವೆ ನಡೆದಿದೆ. ಮದುವೆ ಬಳಿಕ ಅದೇ ದಿನ ರಾತ್ರಿ ವರ ಮನೆಯಲ್ಲಿ ದಿಖಾಯಿ ಸಂಭ್ರಮ. ಬಸ್ತಿ ಜಿಲ್ಲೆಯ ಕೆಲ ಕುಟುಂಬಗಳಲ್ಲಿ ಮೊದಲ ರಾತ್ರಿಯನ್ನು ದಿಖಾಯಿ ಸಂಭ್ರಮವಾಗಿ ಆಚರಿಸಲಾಗುತ್ತದೆ.
undefined
12 ವರ್ಷ ಬಳಿಕ ಪತ್ನಿಯನ್ನು ಬಾಯ್‌ಫ್ರೆಂಡ್‌ಗೆ ಮದುವೆ ಮಾಡಿಸಿದ ಗಂಡ, ಕಾರಣ ಅಫೇರ್ ಅಲ್ಲ!
ಮದುವೆ ಮುಗಿಸಿ ಮನೆಗೆ ಬಂದ ವಧು ವರರಿಗೆ ಖಾದ್ಯಗಳು ಸೇರಿದಂತೆ ಹಲವು ಆಹಾರಗಳನ್ನು ನೀಡಲಾಗಿದೆ. ಕತ್ತಲಾಗುತ್ತಿದ್ದಂತೆ ಸಂಭ್ರಮ ಮನೆ ಮಾಡಿದೆ. ಇತ್ತ ಕುಟುಂಬಸ್ಥರು, ಆಪ್ತರು ಸೇರಿದಂತೆ ಹಲವರು ಮನೆಗೆ ಆಗಮಿಸಿದ್ದಾರೆ. ಎಲ್ಲೆಡೆ ಸಂಭ್ರಮವೋ ಸಂಭ್ರಮ. ಮೊದಲ ರಾತ್ರಿಗೆ ಇನ್ನೇನು ಕೆಲ ಗಂಟೆಗಳು ಮಾತ್ರ ಬಾಕಿ. ಇದರ ನಡುವೆ ವಧು ಆಗಮಿಸಿ ವರನ ಕಿವಿಯಲ್ಲಿ ಮೆಲ್ಲಗೆ ಬೇಡಿಕೆಯೊಂದನ್ನು ಇಟ್ಟಿದ್ದಾಳೆ. ಈಕೆಯ ಮೊದಲ ಬೇಡಿಕೆ, ನನಗೊಂದು ಬಿಯರ್ ಬೇಕು. ಪತ್ನಿ ಮೊದಲ ರಾತ್ರಿ ಬಿಯರ್ ಬೇಡಿಕೆ ಇಟ್ಟಿದ್ದಾಳೆ. ಈಗಿನ ಕಾಲದಲ್ಲಿ ಬಹುತೇಕರು ಬಿಯರ್ ಸೇರಿದಂತೆ ಇತರ ಮದ್ಯ ಸೇವೆ ಸಾಮಾನ್ಯ ಎಂದು ಮನಸ್ಸಿನಲ್ಲೇ ಸಮಾಧಾನ ಪಟ್ಟುಕೊಂಡ ವರ, ಸರಿ ತರುತ್ತೇನೆ ಎಂದಿದ್ದಾನೆ.
ಪತ್ನಿಗೆ ಬಿಯರ್ ತರಲು ಕುಟುಂಬ ಸದಸ್ಯರಿಗೆ ಅಥವಾ ಆಪ್ತರಿಗೆ ಹೇಳಿದರೆ ಪ್ರಶ್ನೆ ಉದ್ಭವವಾಗುತ್ತದೆ. ತಾನು ಬಿಯರ್ ಕುಡಿಯುವುದಿಲ್ಲ, ಮದ್ಯ ಸೇವಿಸುವುದಿಲ್ಲ ಅನ್ನೋದು ಎಲ್ಲರಿಗೂ ತಿಳಿದಿದೆ. ಕುಟುಂಬಸ್ಥರಲ್ಲೂಈ ರೀತಿ ಅಭ್ಯಾಸಗಳಿಲ್ಲ. ಹೀಗಾಗಿ ಒಂದು ಬಿಯರ್ ಯಾರಿಗೆ ಅನ್ನೋ ಪ್ರಶ್ನೆ ಮೂಡಲಿದೆ. ಇದರಿಂದ ಪತ್ನಿಯ ಮಾನ ಹರಾಜಾಗಲಿದೆ. ಪೋಷಕರು, ಕುಟುಂಬಸ್ಥರು ಆತಂಕಗೊಳ್ಳಲಿದ್ದಾರೆ ಎಂದುಕೊಂಡು ತಾನೆ ಖುಜದ್ದಾಗಿ ಹೋಗಿ ಬಿಯರ್ ತರಲು ಮುಂದಾಗಿದ್ದಾನೆ.
ಇನ್ನೇನು ಬಿಯರ್ ತರಲು ಹೊರಡಬೇಕು ಅನ್ನುವಷ್ಟರಲ್ಲಿ ವಧು ಮತ್ತೆರಡು ಬೇಡಿಕೆ ಇಟ್ಟಿದ್ದಾಳೆ. ಬಿಯರ್ ತರುವಾಗ ಸ್ವಲ್ಪ ಗಾಂಜಾ ಹಾಗೂ ಮಟನ್ ತಂದು ಬಿಡಿ ಎಂದಿದ್ದಾಳೆ. ಈ ಮಾತು ಕೇಳುತ್ತಿದ್ದಂತೆ ವರ ಬೆಚ್ಚಿ ಬಿದ್ದಿದ್ದಾನೆ. ಇವೆಲ್ಲಾ ತರಬೇಕೇ? ಮದ್ಯವೇ ನಮ್ಮ ಕುಟುಂಬದಲ್ಲಿ ನಿಷಿದ್ಧವಾಗಿದೆ. ಆದರೆ ಈಕ ಕೇಳುತ್ತಿರುವುದೇನು? ಎಂದು ಆಕ್ರೋಶಗೊಂಡಿದ್ದಾನೆ. ಇವೆಲ್ಲಾ ಸಾಧ್ಯವಿಲ್ಲ ಎಂದಿದ್ದಾಳೆ. ಇದೇ ವಿಚಾರಕ್ಕೆ ಜಗಳ ಶುರುವಾಗಿದೆ.
ಹನಿಮೂನ್ ವಿಚಾರದಲ್ಲಿ ಮಗಳ ಗಂಡನ ಜೊತೆ ತಂದೆಯ ಗಲಾಟೆ, ಬಳಿಕ ನಡೆದಿದ್ದೇ ದುರಂತ!
ಸಣ್ಣ ಮಟ್ಟದಲ್ಲಿದ್ದ ಜಗಳ ದೊಡ್ಡಗಾದಿದೆ. ಎರಡೂ ಕುಟುಂಬಸ್ಥರಿಗೆ ಮಾಹಿತಿ ಗೊತ್ತಾಗಿದೆ. ಜಗಳ ತಾರಕಕ್ಕೇರುವ ಮುನ್ನ ಹುಡುಗಿಯ ಮನೆಯವರು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನ ನಡೆಸಿದ್ದಾರೆ. ಮಗಳು ಸುಮ್ಮನೆ ಜೋಕ್ ಮಾಡಿದ್ದಾಳೆ. ನೀವು ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. ಆದರೆ ಇದು ಜೋಕ್ ಆಗಿರಲಿಲ್ಲ. ವಧು ಮೂರು ಬೇಡಿಕೆ ಪೂರೈಸಲು ಪಟ್ಟು ಹಿಡಿದಿದ್ದಾಳೆ. ಜಗಳದ ಮಾಹಿತಿ ಪೊಲೀಸ್ ಠಾಣೆಗೂ ತಲುಪಿದೆ. ಪೊಲೀಸರು ಆಗಮಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಹುಡುಗ, ಮದುವೆಯಾಗಿರುವ ಹುಡುಗಿ ಮೇಲೆ ಕೆಲ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಈಕೆಯ ಗುಣಲಕ್ಷಣಗಳು ಪುರುಷರ ರೀತಿ ಇದೆ ಎಂದು ಆರೋಪಿಸಿದ್ದಾರೆ. ಇದೀಗ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯ ವಧುವನ್ನು ವಶಕ್ಕೆ ಪಡೆದಿರುವ ಪೊಲೀಸರ ವಿಚಾರಣೆ ನಡೆಸುತ್ತಿದ್ದಾರೆ.