ಅನುಕೂಲಕ್ಕಾಗಿ ಮಾತ್ರ ಹುಡುಗಿ ನಿಮ್ಮೊಂದಿಗೆ ಸ್ನೇಹ ಬೆಳ್ಸಿದ್ದಾಳಾ?

By Suvarna News  |  First Published Jun 19, 2022, 4:02 PM IST

ಹುಡುಗರ ಪ್ರೀತಿ, ಸ್ನೇಹವನ್ನು ಅನೇಕ ಹುಡುಗಿಯರು ದುರ್ಬಳಕೆ ಮಾಡಿಕೊಳ್ಳಬಹುದು. ಅದೆಷ್ಟೋ ಹುಡುಗರು ಸ್ನೇಹಿತೆ ಕೈಕೊಟ್ಟ ಬಳಿಕ ಪರಿತಪಿಸುತ್ತಾರೆ. ಮೊದಲೇ ಸ್ವಲ್ಪ ಕಾಳಜಿ ವಹಿಸಿದರೆ ಆಕೆ ತನ್ನ ಅಗತ್ಯಕ್ಕೋಸ್ಕರ ಸ್ನೇಹ ಮಾಡಿದ್ದಾಳೆಯೇ ಅಥವಾ ನಿಜಕ್ಕೂ ಪ್ರೀತಿ-ಕಾಳಜಿ ಹೊಂದಿದ್ದಾಳೆಯೇ ಎನ್ನುವುದನ್ನು ಅರಿತುಕೊಳ್ಳಬಹುದು.
 


“ಹುಡುಗೀರು (GirlS) ಕೇವಲ ಸುತ್ತಾಡಲು, ಶಾಪಿಂಗ್ ಮಾಡಿಸಲು ಯಾರಾದರೊಬ್ಬರು ಬೇಕು ಎಂದು ಪ್ರೀತಿಯ (Love) ನಾಟಕವಾಡುತ್ತಾರೆ. ಯಾರು ಅವರಿಗಾಗಿ ಖರ್ಚು (Pay) ಮಾಡುತ್ತಾರೋ ಅವರೊಂದಿಗೆ ಹೆಚ್ಚು ಸಮಯ ಸ್ನೇಹ ಮಾಡುತ್ತಾರೆ...’ ಇತ್ಯಾದಿ ಆರೋಪಗಳು ಹುಡುಗಿಯರ ಮೇಲಿವೆ. ಇವು ಸಂಪೂರ್ಣವಾಗಿ ಸುಳ್ಳೇನೂ ಅಲ್ಲ. ಹೀಗಾಗಿ, ಇಲ್ಲಿ ಹುಡುಗರು (Boys) ಸಹ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಹುಡುಗಿಯರು ನಿಜಕ್ಕೂ ಅವರನ್ನು ಇಷ್ಟಪಡುತ್ತಾರೋ ಅಥವಾ ತಮ್ಮ ಅನುಕೂಲಕ್ಕೆ ತಕ್ಕಂತೆ ಅವರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೋ ಎನ್ನುವ ಕುರಿತು ಸ್ವಲ್ಪವಾದರೂ ಯೋಚಿಸಬೇಕು. ಕೆಲವು ವರ್ತನೆಗಳು ಹುಡುಗಿಯರ ಮನೋಭಾವನೆಗಳನ್ನು ಸೂಚಿಸುತ್ತವೆ. ಅವುಗಳನ್ನು ಗಮನಿಸಬೇಕು. 

•    ಬೇರೊಂದು ಸ್ನೇಹ (Friendship) ಸಹಿಸುವುದಿಲ್ಲ
ನಿಮ್ಮ ಗರ್ಲ್ ಫ್ರೆಂಡ್ ನಿಮ್ಮನ್ನು ನಿಜಕ್ಕೂ ಇಷ್ಟಪಡುತ್ತಿದ್ದರೆ ಇನ್ನೊಬ್ಬರ ಜತೆಗೆ ನೀವು ಹೆಚ್ಚು ಮೂವ್ (Move) ಆಗುವುದನ್ನು ಸಹಿಸುವುದಿಲ್ಲ. ನಿಮ್ಮ ಬಗ್ಗೆ ಪೊಸೆಸಿವ್ ನೆಸ್ (Possessiveness) ಹೊಂದಿರುತ್ತಾಳೆ. ಹಾಗೆಯೇ ಯಾರಾದರೂ ನಿಮ್ಮ ಬಳಿ ಹೆಚ್ಚು ಸಲಿಗೆಯಿಂದ ಇದ್ದರೂ ಅವಳಿಗೆ ಹೊಟ್ಟೆಕಿಚ್ಚಾಗಬಹುದು. ಅದಕ್ಕಾಗಿ ಕೋಪಿಸಿಕೊಳ್ಳಬಹುದು. ನೀವು ಇನ್ನೊಬ್ಬರ ಜತೆಗೆ ಸ್ನೇಹದಿಂದ ಇರುವುದನ್ನು ಕಂಡರೂ ಸುಮ್ಮನಿದ್ದರೆ ಆಕೆಗೆ ನಿಮ್ಮ ಅಗತ್ಯವಿಲ್ಲ, ಕೇವಲ ತಮ್ಮ ಅನುಕೂಲಕ್ಕಾಗಿ ನಿಮ್ಮನ್ನು ಬಳಕೆ ಮಾಡಿಕೊಳ್ಳುತ್ತಿದ್ದಾಳೆ ಎಂದರ್ಥ.

Tap to resize

Latest Videos

ಈ 5 ರಾಶಿಗಳು ಸಂಬಂಧ ಹಾಳು ಮಾಡಿಕೊಳ್ಳೋದು ಹೆಚ್ಚು!

•    ಶಾಪಿಂಗ್ (Shopping) ಮುಗ್ಯೋದೇ ಇಲ್ಲ
ಗರ್ಲ್ ಫ್ರೆಂಡ್ ಗಾಗಿ ನೀವು ಸಿಕ್ಕಾಪಟ್ಟೆ ಖರ್ಚು ಮಾಡುತ್ತಿದ್ದರೆ ಒಮ್ಮೆಯಾದರೂ ಆಕೆ ನಿಮಗಾಗಿ ಏನಾದರೂ ವೆಚ್ಚ ಮಾಡುತ್ತಿದ್ದಾಳಾ ಎಂದು ಯೋಚಿಸಿ. ಪದೇ ಪದೆ ಶಾಪಿಂಗ್ ಹೋಗುವುದು, ನೀವೇ ಆಕೆಗಾಗಿ ಖರ್ಚು ಮಾಡುವುದು, ಸಿನಿಮಾ, ಮಾಲ್ (Mall) ಸುತ್ತಾಟಗಳೆಲ್ಲವೂ ನಿಮ್ಮದೇ ವೆಚ್ಚದಲ್ಲಾಗುತ್ತಿದೆಯೇ ಪ್ರಶ್ನಿಸಿಕೊಳ್ಳಿ. ನಿಮ್ಮ ಬಗ್ಗೆ ಪ್ರೀತಿ ಇದ್ದರೆ ಆಕೆಯೂ ನಿಮಗಾಗಿ ಒಂದಲ್ಲ ಒಂದು ರೀತಿಯಲ್ಲಿ ವೆಚ್ಚ ಮಾಡಲು ಮುಂದಾಗುತ್ತಾಳೆ. ಪ್ರೀತಿಯ ಭಾವನೆ (Feeling) ಇದ್ದರೆ ತಮ್ಮಲ್ಲಿರುವುದನ್ನು ಹಂಚಿಕೊಳ್ಳಲು ಹುಡುಗಿಯರು ಬೇಸರ ಮಾಡಿಕೊಳ್ಳುವುದಿಲ್ಲ. 

•    ಸದಾ ತಮ್ಮದೇ ಧೋರಣೆ 
ನಿಮ್ಮ ಸ್ನೇಹಿತೆ ಸದಾಕಾಲ ತನ್ನದೇ ಇಷ್ಟಾನಿಷ್ಟಗಳಿಗೆ ಆದ್ಯತೆ ನೀಡುತ್ತಿದ್ದರೆ ಆಕೆ ನಿಮ್ಮನ್ನು ಭಾವನಾತ್ಮಕವಾಗಿ ಕಟ್ಟಿಹಾಕಲು ಯತ್ನಿಸುತ್ತಿರಬಹುದು. ಆಕೆಯನ್ನು ನೀವು ಪ್ರೀತಿಸುತ್ತಿದ್ದೀರಿ ಎನ್ನುವುದನ್ನು ಅರಿತು ಭಾವನಾತ್ಮಕವಾಗಿ ಬ್ಲಾಕ್ ಮೇಲ್ (Blackmail) ತಂತ್ರ ಅನುಸರಿಸಬಹುದು. ನಿಮ್ಮ ನಡುವೆ ವಾದವಾದರೆ ನಿಮ್ಮನ್ನು ಗೆಲ್ಲಲು ಯಾವ ರೀತಿಯಿಂದಲಾದರೂ ಪ್ರಯತ್ನಿಸಬಹುದು. 

ಅಪ್ಪ ಹಿಟ್ಲರ್ ಅಲ್ಲ, ಹೀರೋ!

•    ಪದೇ ಪದೆ ನಿಮ್ಮ ಪ್ಲಾನ್ ಕ್ಯಾನ್ಸಲ್ ಮಾಡುವುದು
ಎಲ್ಲೋ ದೇವಸ್ಥಾನಕ್ಕೆ ಹೋಗಬೇಕೆಂದುಕೊಂಡಿದ್ದೀರಿ, ನಿಮ್ಮ ಹುಡುಗಿ ಕೈಕೊಡುತ್ತಾಳೆ. ಏನೋ ಮಾಡಬೇಕೆಂದುಕೊಂಡಿರುವಾಗಲೂ ಅಷ್ಟೆ. ಶಾಪಿಂಗ್, ಮಾಲ್ ಗಳನ್ನು ಹೊರತುಪಡಿಸಿ ಬೇರೆ ಕಡೆಗಿನ ನಿಮ್ಮ ಭೇಟಿಯ ಯೋಜನೆಗಳನ್ನು ಪದೇ ಪದೆ ಕ್ಯಾನ್ಸಲ್ ಮಾಡುತ್ತಿದ್ದರೆ ಆಕೆಗೆ ನಿಮ್ಮ ಬಗ್ಗೆ ಆಸಕ್ತಿ ಇಲ್ಲ ಎಂದೇ ತಿಳಿದುಕೊಳ್ಳಬಹುದು. ಕೆಲವೊಮ್ಮೆ ಅನಿವಾರ್ಯತೆಯೂ ಇರಬಹುದು, ಸರಿಯಾಗಿ ವಿಚಾರ ಮಾಡಿಕೊಳ್ಳುವುದು ಉತ್ತಮ.

•    ನಿಮ್ಮ ಬಗ್ಗೆ ಕಾಳಜಿ (Care) ಇಲ್ಲದಿರುವುದು
ಸಾಮಾನ್ಯವಾಗಿ ತನ್ನ ಹುಡುಗನ ಬಗ್ಗೆ ಪ್ರೀತಿ, ಕಾಳಜಿ ಹೊಂದಿದ್ದರೆ ನಿಮ್ಮ ಸುತ್ತಮುತ್ತಲು ಏನಾಗುತ್ತಿದೆ, ನಿಮ್ಮ ಚಟುವಟಿಕೆ, ನಿಮ್ಮ ಸ್ನೇಹಿತರು, ಬಂಧು-ಬಳಗ ಇತ್ಯಾದಿ ಮಾಹಿತಿ ತಿಳಿಯಲು ಮುಂದಾಗುತ್ತಾರೆ. ಹಾಗೆಯೇ ತಮ್ಮ ಬಗ್ಗೆಯೂ ತಿಳಿಸುತ್ತಾರೆ. ಆದರೆ, ನಿಮ್ಮ ಬಗ್ಗೆ ಹೆಚ್ಚು ಆಸಕ್ತಿ ತೋರದಿದ್ದರೆ ಅದು ನಿಜವಾಗಿಯೂ ಕೆಂಪು ಸಿಗ್ನಲ್ಲೇ (Signal). 

•    ಲೈಂಗಿಕತೆಯ ಮೂಲಕ ಚೌಕಾಸಿ (Bargain) ವ್ಯವಹಾರ
ಒಂದೊಮ್ಮೆ ನೀವು ಸ್ನೇಹಿತೆಯೊಂದಿಗೆ ಲೈಂಗಿಕತೆಗೆ ಮುಂದಾದರೆ ಸಿಕ್ಕಿಕೊಳ್ಳುತ್ತೀರಿ. ಏಕೆಂದರೆ, ಕೆಲವು ಹುಡುಗಿಯರು ಇದನ್ನೇ ಮುಂದಿಟ್ಟುಕೊಂಡು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗುತ್ತಾರೆ. ಮತ್ತು ತಪ್ಪೆಲ್ಲ ನಿಮ್ಮೊಬ್ಬರದೇ ಎನ್ನುವ ರೀತಿಯಲ್ಲಿ ಬಿಂಬಿಸಿ ನಿಮ್ಮಲ್ಲಿ ಅಪರಾಧಿ ಪ್ರಜ್ಞೆ ಮೂಡಿಸಲೂ ಯತ್ನಿಸಬಹುದು. 

click me!